ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್​ಶಿಪ್​​: ಫೈನಲ್​​ಗೆ ಲಗ್ಗೆಯಿಟ್ಟ ಪಿ.ವಿ ಸಿಂಧು

news18
Updated:August 4, 2018, 10:49 PM IST
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್​ಶಿಪ್​​: ಫೈನಲ್​​ಗೆ ಲಗ್ಗೆಯಿಟ್ಟ ಪಿ.ವಿ ಸಿಂಧು
news18
Updated: August 4, 2018, 10:49 PM IST
ನ್ಯೂಸ್ 18 ಕನ್ನಡ

ನನ್​​ಜಿಂಗ್​​ (ಆ. 04): ಚೀನಾದಲ್ಲಿ ನಡೆಯುತ್ತಿರುವ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್​ಶಿಪ್​ನಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಪಿ.ವಿ. ಸಿಂಧು ಅವರು ಫೈನಲ್​​ಗೆ ಲಗ್ಗೆ ಇಟ್ಟಿದ್ದಾರೆ.

ಮಹಿಳಾ ಸಿಂಗಲ್ಸ್​​ ಸೆಮಿಫೈನಲ್​ ಪಂದ್ಯದಲ್ಲಿ ಜಪಾನ್​ನ ಅಕಾನೆ ಯಮಗುಚಿ ವಿರುದ್ಧ 21-16, 24-22 ನೇರ ಸೆಟ್​ಗಳಿಂದ ಗೆಲ್ಲುವ ಮೂಲಕ ಸಿಂಧು ಫೈನಲ್​ಗೆ ಪ್ರವೇಶ ಪಡೆದಿದ್ದಾರೆ. ದ್ವಿತೀಯ ಗೇಮ್​​ನಲ್ಲಿ 11-19 ರಿಂದ ಹಿನ್ನಡೆಯಲ್ಲಿದ್ದ ಸಿಂಧು ಅವರು ಅಂತಿಮವಾಗಿ 24-22 ರಿಂದ ಗೆಲುವು ಕಂಡರು. ಮೊದಲ ಸೆಟ್ಟನ್ನು ಕೊಂಚ ಸುಲಭವಾಗಿ ಬಿಟ್ಟುಕೊಟ್ಟರು ಬಳಿಕ ದ್ವಿತೀಯ ಸೆಟ್​​ನಲ್ಲಿ ತೀವ್ರ ಪೈಪೋಟಿ ನೀಡುವ ಮೂಲಕ ತಾನು ವಿಶ್ವ ಶ್ರೇಷ್ಠ ಆಟಗಾರ್ತಿ ಎಂಬುದನ್ನು ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ.

ಸಿಂಧು ಅವರು ಫೈನಲ್​ನಲ್ಲಿ ಸ್ಪೇನ್​ನ ಆಟಗಾರ್ತಿ ಕರೋಲಿನಾ ಮರಿನ್ ವಿರುದ್ಧ ಸೆಣಸಾಟ ನಡೆಸಲಿದ್ದಾರೆ.
First published:August 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ