‘ಲಕ್ಷಣ್​​​ಗೂ ಶರ್ಟ್​​ ತೆಗೆಯುವಂತೆ ಹೇಳಿದ್ದೆ’: ಲಾರ್ಡ್ಸ್​​ನಲ್ಲಿ ಜೆರ್ಸಿ ಬಿಚ್ಚಿದ ಘಟನೆ ನೆನೆದ ಗಂಗೂಲಿ

news18
Updated:July 28, 2018, 3:10 PM IST
‘ಲಕ್ಷಣ್​​​ಗೂ ಶರ್ಟ್​​ ತೆಗೆಯುವಂತೆ ಹೇಳಿದ್ದೆ’: ಲಾರ್ಡ್ಸ್​​ನಲ್ಲಿ ಜೆರ್ಸಿ ಬಿಚ್ಚಿದ ಘಟನೆ ನೆನೆದ ಗಂಗೂಲಿ
news18
Updated: July 28, 2018, 3:10 PM IST
ನ್ಯೂಸ್ 18 ಕನ್ನಡ

ಇತ್ತೀಚೆಗಷ್ಟೇ ಅಪ್​ಲೋಡ್​ ಆಗಿರುವ ಯ್ಯೂಟ್ಯೂಬ್​​ನ ಖಾಸಗಿ ಕಾರ್ಯಕ್ರಮ ಬ್ರೇಕ್​ಫಾಸ್ಟ್ ವಿತ್​ ಚಾಂಪಿಯನ್​​ನಲ್ಲಿ ತನ್ನ ನಾಯಕತ್ವದಲ್ಲಿ ಕಳೆದ ಅಮೋಘ ಘಟನೆಗಳ ಕುರಿತು ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಮೆಲುಕು ಹಾಕಿದ್ದಾರೆ.

2002ರಲ್ಲಿ ಲಾರ್ಡ್ಸ್​​ ಅಂಗಳದಲ್ಲಿ ಟೀಮ್ ಇಂಡಿಯಾ ಸಾಧಿಸಿದ ಐತಿಹಾಸಿಕ ಗೆಲುವಿನ ಕುರಿತು ಗಂಗೂಲಿ  ಮಾತನಾಡಿದ್ದು, ಭಾರತ ನ್ಯಾಟ್​ವೆಸ್ಟ್ ಫೈನಲ್​​ನಲ್ಲಿ ಗೆಲುವು ಸಾಧಿಸುತ್ತಿದ್ದಂತೆ ದಾದಾ ಲಾರ್ಡ್ಸ್​ ಬಾಲ್ಕನಿಯಲ್ಲಿ ಶರ್ಟ್​ ಬಿಚ್ಚಿ ತಿರುಗಿಸಿದ್ದನ್ನು ನೆನಪಿಸಿಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧ ಗೆಲ್ಲುತ್ತಿದ್ದಂತೆ ಗಂಗೂಲಿ ಅವರು​ ಶರ್ಟ್​ ಬಿಚ್ಚಿ ಸಂಭ್ರಮಿಸುವುದನ್ನು ಮೊದಲೇ ಅಂದುಕೊಂಡಿರಲಿಲ್ಲವಂತೆ. ಆ ಕ್ಷಣದಲ್ಲಿ ನನಗೆ ಅನ್ನಿಸಿದ್ದನ್ನು ನಾನು ಮಾಡಿದೇ ಎಂದಿದ್ದಾರೆ ಗಂಗೂಲಿ. ಇನ್ನು ಗಂಗೂಲಿ ಶರ್ಟ್​ ತೆಗೆಯಲು ಹೋದಾಗ ಪಕ್ಕದಲ್ಲೇ ಇದ್ದ ವಿವಿಎಸ್ ಲಕ್ಷ್ಮಣ್​ ಶರ್ಟ್​ ತೆಗೆಯಬೇಡ ಎಂದು ಎರಡು ಬಾರಿ ತಡೆದಿದ್ದರಂತೆ. ಆದರೆ ದಾದಾ ಸಂಭ್ರಮಕ್ಕೆ ಯಾವುದೇ ಅಡೆ ತಡೆ ಇರಲಿಲ್ಲ, ಅಲ್ಲದೆ ಲಕ್ಷಣ್​ಗೂ ಶರ್ಟ್​​ ತೆಗೆಯುವಂತೆ ಸೂಚಿಸಿದ್ದೆ. ಈ ಹಿಂದೆ ಫಿಂಟ್ಲಾಫ್​ ಭಾರತದಲ್ಲಿ ಪಂದ್ಯ ಗೆದ್ದಾಗ ಮುಂಬೈನ ವಾಂಖೆಡೆ ಅಂಗಳದಲ್ಲಿ ಶರ್ಟ್​ ಬಿಚ್ಚಿ ಸಂಭ್ರಮಿಸಿದ್ದರು, ನಾನ್ಯಾಕೆ ಲಾರ್ಡ್ಸ್​​ನಲ್ಲಿ ಈ ರೀತಿ ಸಂಭ್ರಮಿಸಿಬಾರದು ಎಂದು ಶರ್ಟ್​ ತೆರೆದು ಕುಣಿದು ಬಿಟ್ಟೆ ಎಂದಿದ್ದಾರೆ. ಇನ್ನು ನಂತರದ ದಿನಗಳಲ್ಲಿ ಈ ಘಟನೆ ಕುರಿತು  ಸ್ವತಃ ಗಂಗೂಲಿಗೆ ಮುಜುಗರಕ್ಕೆ ಈಡಾದರಂತೆ. ಈ ಪಂದ್ಯದ ವಿಡಿಯೋಗಳನ್ನು ನೋಡಿದ ನನ್ನ ಮಗಳು ಬಟ್ಟೆ​ ಬಿಚ್ಚಿ ಯಾಕೆ ಸಂಭ್ರಮಿಸಿದ್ದೆ.? ಕ್ರಿಕೆಟ್​ನಲ್ಲಿ ಇದರ ಅವಶ್ಯಕತೆ ಇತ್ತಾ ಎಂದು ಒಮ್ಮೆ ಕೇಳಿದ್ದುಂಟು. ಅದು ನಾನು ಮಾಡಿದ ತಪ್ಪು ಎಂದು ಆಕೆಗೆ ಉತ್ತರಿಸಿದ್ದೆ. ಆದರೆ ಈ ರೀತಿಯಾಗಿ ವಿಭಿನ್ನವಾದ ಅನುಭವಗಳಿದ್ದರೆಯೇ ನಿಜವಾದ ಜೀವನ ಅಂತಾರೆ ಗಂಗೂಲಿ.

ಇಷ್ಟಲ್ಲದೆ ಧೋನಿ ಅವರನ್ನು 3ನೇ ಆರ್ಡರ್​​​ ಬ್ಯಾಟಿಂಗ್​ ಬಡ್ತಿ ನೀಡಿದ್ದು, ಸೆಹ್ವಾಗ್​​ನಲ್ಲಿದ್ದ ಆರಂಭಿಕ ಆಟಗಾರನ ಕಲೆಯನ್ನು ಹೊರತೆಗೆದಿದ್ದು ನಿಜಕ್ಕೂ ಖುಷಿ ಕೊಟ್ಟಿತು ಎಂದಿದ್ದಾರೆ ಗಂಗೂಲಿ. ಒಟ್ಟಿನಲ್ಲಿ ಗಂಗೂಲಿ ಅವರ ನಾಯಕತ್ವದಲ್ಲಿ ಟೀಮ್ ಇಂಡಿಯಾಕ್ಕೆ ಅನೇಕ ಯುವ ಪ್ರತಿಭೆಗಳ ಅನ್ವೇಷಣೆಯಾಗಿದ್ದಂತು ಮರೆಯುವ ಹಾಗಿಲ್ಲ.
First published:July 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ