ಫಿಫಾ ವಿಶ್ವಕಪ್​​ನಲ್ಲಿಂದು ಮೂರು ಪಂದ್ಯ: ಗೆಲ್ಲಲೇ ಬೇಕಾದ ಒತ್ತಡದಲ್ಲಿ ಈಜಿಪ್ಟ್ ತಂಡ

news18
Updated:June 19, 2018, 3:41 PM IST
ಫಿಫಾ ವಿಶ್ವಕಪ್​​ನಲ್ಲಿಂದು ಮೂರು ಪಂದ್ಯ: ಗೆಲ್ಲಲೇ ಬೇಕಾದ ಒತ್ತಡದಲ್ಲಿ ಈಜಿಪ್ಟ್ ತಂಡ
news18
Updated: June 19, 2018, 3:41 PM IST
ನ್ಯೂಸ್ 18 ಕನ್ನಡ

ಫಿಫಾ ವಿಶ್ವಕಪ್ 2018ರಲ್ಲಿ ಇಂದು ಒಟ್ಟು ಮೂರು ಪಂದ್ಯಗಳು ನಡೆಯಲಿದ್ದು ಮೊದಲ ಪಂದ್ಯದಲ್ಲಿ 6ನೇ ಬಾರಿ ವಿಶ್ವಕಪ್​ನಲ್ಲಿ ಆಡುತ್ತಿರುವ ಜಪಾನ್ ತಂಡ ಕೊಲಂಬಿಯಾ ವಿರುದ್ಧ ಗೆಲುವಿಗಾಗಿ ಸೆಣೆಸಾಟ ನಡೆಸಲಿದೆ.

ವಿಶ್ವಕಪ್ ಆರಂಭಕ್ಕೆ ಎರಡು ದಿನ ಬಾಕಿ ಇರುವಾಗಲೇ ಜಪಾನ್, ತಂಡದ ಕೋಚ್ ಅವರನ್ನು ಕೆಳಗಿಳಿಸಿದರೂ ತಮ್ಮ ಶಕ್ತಿ ಕುಂದಲಿಲ್ಲ ಎಂಬುದು ಇಂದಿನ ಪಂದ್ಯದಲ್ಲಿ ಸಾಭೀತು ಪಡಿಸಬೇಕಿದೆ. ಇತ್ತ ಈ ಹಿಂದೆ ಕ್ವಾರ್ಟರ್​​ ಫೈನಲ್ ​ಗೇರಿದ್ದ ಕೊಲಂಬಿಯಾ ತಂಡ ಈ ವರೆಗೆ ಜಪಾನ್ ವಿರುದ್ಧ ಅಜೇಯ ಸಾಧನೆಯನ್ನು ಸಾಧಿಸಿದೆ. ಅಲ್ಲದೆ ಅರ್ಹತಾ ಸುತ್ತಿನಲ್ಲಿ ಬಲಿಷ್ಠ ಫ್ರಾನ್ಸ್ ವಿರುದ್ಧ ಗೆದ್ದುಕೊಂಡಿತ್ತು. ಜೊತೆಗೆ ಆಸ್ಟ್ರೇಲಿಯಾ ಹಾಗೂ ಜಪಾನ್ ವಿರುದ್ಧ ಡ್ರಾ ಸಾಧಿಸಿ ಎದುರಾಳಿಗೆ ಕಂಟಕವಾಗಿ ಪರಿಣಮಿಸಿದೆ. ಜಪಾನ್ ತಂಡದಲ್ಲಿ ಮಾಕೊಟೊ ಹಸೆಬೆ, ಇಜಿ ಕವಾಶಿಮಾ, ಹಿರೊಕಿ ಸಕಾಯಿ ಎಂಬ ಸ್ಟಾರ್ ಆಟಗಾರರಿದ್ದರೆ, ಕೊಲಂಬಿಯಾದಲ್ಲಿ ಜೇಮ್ಸ್ ರೋಡ್ರಿಗಸ್, ಡೇವಿಡ್ ಒಪ್ಪಿನಾ, ಸ್ಯಾಂಟಿಯಾಗೊ ಅರೈಸ್ ಎಂಬ ಪ್ರಮುಖ ಆಟಗಾರರು ತಂಡದಲ್ಲಿದ್ದಾರೆ.

ಎರಡನೇ ಪಂದ್ಯದಲ್ಲಿ ಬಲಿಷ್ಠ ಪೋಲೆಂಡ್ ಹಾಗೂ ಸೆನೆಗಲ್ ತಂಡ ಮುಖಾಮುಖಿ ಆಗಲಿದ್ದು ಸಾಕಷ್ಟು ಕುತೂಹಲ ಕೆರಳಿಸಿದೆ. ಪೋಲೆಂಡ್​ನ ಸ್ಟಾರ್ ಆಟಗಾರ ಲ್ಯೂವಂಡೊಸ್ಕಿ ಅದ್ಭುತ ಫಾರ್ಮ್​ನಲ್ಲಿದ್ದು ಬಂಡೇಸ್​​ಲೀಗ್​ನಲ್ಲಿ 29 ಗೋಲು ಸಿಡಿಸಿ ಸಾಧನೆ ಮಾಡಿದ್ದರು. ಪೋಲೆಂಡ್ ಗೆಲ್ಲುವ ಪೆವರಿಟ್ ತಂಡವಾಗಿದ್ದು, ಇತ್ತ ಸೆನೆಗಲ್ ತಂಡ ಕೂಡ ಇಂದಿನ ಪಂದ್ಯ ಗೆದ್ದು ಶುಭಾರಂಭ ಮಾಡುವ ಕಾತುರದಲ್ಲಿದೆ. ಸಾಡಿಯೋ ಮೇನ್, ಕೀತಾಬಾಲ್ಡ್​​, ಚೀಕೌ ಕುಯೆಟ್ ಎಂಬ ಸ್ಟಾರ್ ಆಟಗಾರರು ಸೆನೆಗಲ್ ತಂಡದಲ್ಲಿದ್ದು 2002ರಲ್ಲಿ ನಡೆದ ಮೊದಲ ವಿಶ್ವಕಪ್ ಟೂರ್ನಿಯಲ್ಲಿ ಬಲಿಷ್ಠ ಫ್ರಾನ್ಸ್ ತಂಡವನ್ನು ಮೊದಲ ಪಂದ್ಯದಲ್ಲಿಯೇ ಸೋಲಿಸಿ ಅಚ್ಚರಿ ಮೂಡಿಸಿತ್ತು.

ಇನ್ನು ಸೇಂಟ್​​ ಪೀಟರ್ಸ್​​​ಬರ್ಗ್​​ನಲ್ಲಿ ನಡೆಯಲಿರುವ ಮೂರನೇ ಪಂದ್ಯದಲ್ಲಿ ಈಜಿಪ್ಟ್ ಹಾಗೂ ರಷ್ಯಾ ತಂಡಗಳು ಗೆಲುವಿಗಾಗಿ ಹೋರಾಟ ನಡೆಸಲಿದೆ. ತನ್ನ ಮೊದಲ ಪಂದ್ಯದಲ್ಲಿ ಉರುಗ್ವೆ ವಿರುದ್ಧ 0-1 ಗೋಲಿನ ಸೋಲನುಭವಿಸಿರುವ ಈಜಿಪ್ಟ್​ ನಾಕೌಟ್ ಆಸೆಯನ್ನು ಜೀವಂತವಾಗಿರಿಸಲು ಇಂದಿನ ಪಂದ್ಯ ಗೆಲ್ಲಲೇ ಬೇಕಾಗಿದೆ. ಈಜಿಪ್ಟ್​ ಪಾಲಿನ ಬಲ ಎನಿಸಿಕೊಂಡಿರುವ ಸಲಾಹ್ ಅವರು ಕಳೆದ ಪಂದ್ಯದಲ್ಲಿ ಕಣಕ್ಕಿಳಿಯಲಿಲ್ಲ. ಆದರೆ ಶನಿವಾರದಿಂದಲೇ ಕಠಿಣ ಅಭ್ಯಾಸದಲ್ಲಿ ತೊಡಗಿರುವ ಸಲಾಹ್ ಅವರು ಇಂದಿನ ಪಂದ್ಯದಲ್ಲಿ ಆಡುವ ಸಾಧ್ಯತೆ ಇದ್ದು ಈಜಿಪ್ಟ್ ಪಾಳಯದಲ್ಲಿ ಸಂತಸ ತಂದಿದೆ. ಇತ್ತ ಈಗಾಗಲೇ ಗೆಲುವಿನೊಂದಿಗೆ ಶುಭಾರಂಭ ಮಾಡಿರುವ ರಷ್ಯಾ ತಂಡದಲ್ಲಿ ಡೆನಿಸ್ ಚೆರಿಶೇವ್, ಯೂರಿ ಗಾಜಿನ್ಸಕೈ, ಆರ್ಟಿ ಜ್ಯೂಬಾ, ಅಲೆಕ್ಸಾಂಡರ್ ಗೊಲೊವಿನ್ ನಂತರ ಸ್ಟಾರ್ ಆಟಗಾರರಿದ್ದಾರೆ. ಕಳೆದ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ 5-0 ಅಂತರದ ಜಯ ಸಾಧಿಸಿದ್ದು ಇಂದು ಕೂಡ ಅದೇ ಲಯದಲ್ಲಿ ಆಡುವ ಆತ್ಮ ವಿಶ್ವಾಸದಲ್ಲಿದೆ ರಷ್ಯಾ ತಂಡ.
First published:June 19, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...