ಕೊಹ್ಲಿಯನ್ನು ಪಕ್ಕಕ್ಕಿಟ್ಟರೆ ಟೀಂ ಇಂಡಿಯಾ ಬಲ ಶೇ. 50ರಷ್ಟು ಮಾತ್ರ; ಪಾಕ್ ಕ್ರಿಕೆಟಿಗ

news18
Updated:August 15, 2018, 7:32 PM IST
ಕೊಹ್ಲಿಯನ್ನು ಪಕ್ಕಕ್ಕಿಟ್ಟರೆ ಟೀಂ ಇಂಡಿಯಾ ಬಲ ಶೇ. 50ರಷ್ಟು ಮಾತ್ರ; ಪಾಕ್ ಕ್ರಿಕೆಟಿಗ
news18
Updated: August 15, 2018, 7:32 PM IST
ನ್ಯೂಸ್ 18 ಕನ್ನಡ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನು ಭಾರತ ತಂಡ ಹೆಚ್ಚಾಗಿ ಕೊಹ್ಲಿ ಅವರನ್ನೇ ಅವಲಂಬಿಸಿದೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರ ಇಮಾಮ್ ಉಲ್ ಹಕ್ ಹೇಳಿದ್ದಾರೆ. ಭಾರತ ಒಂದು ಬಲಿಷ್ಠ ತಂಡ, ಅದಕ್ಕೆ ಕಾರಣ ವಿರಾಟ್ ಕೊಹ್ಲಿ. ಕೊಹ್ಲಿಯನ್ನು ಪಕ್ಕಕ್ಕಿಟ್ಟರೆ ಟೀಂ ಇಂಡಿಯಾದ ಬಲ ಶೇ. 50 ರಷ್ಟು ಕುಗ್ಗುತ್ತದೆ ಎಂದಿದ್ದಾರೆ. ಜೊತೆಗೆ ಮುಂಬರುವ ಏಷ್ಯಾಕಪ್ ಕ್ರಿಕೆಟ್​​ನಲ್ಲಿ ಭಾರತ ತಂಡದ ಎದುರು ಆಡುವುದೇ ನನ್ನ ಕನಸು ಎಂದು ಇಮಾಮ್ ಹೇಳಿದ್ದಾರೆ.

ಕರಾಚಿಯಲ್ಲಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತಮಾಡಿದ ಅವರು, ಭಾರತದ ವಿರುದ್ಧ ಆಡುವುದು ನನ್ನ ಕನಸು, ಈ ಸಮಯ ಯಾವಾಗ ಬರುತ್ತೆ ಎಂಬ ಬಗ್ಗೆಯೇ ಆಲೋಚನೆ ಮಾಡುತ್ತಿರುತ್ತೇನೆ. ನಾನು ನನ್ನ ಕ್ರಿಕೆಟ್ ಜೀವನ ಆರಂಭಿಸಿದ ಮೇಲೆ ಭಾರತದ ವಿರುದ್ಧ ಒಂದು ಪಂದ್ಯವನ್ನೂ ಆಡಿಲ್ಲ. ಹೀಗಾಗಿ ಮುಂಬರುವ ಏಷ್ಯಾಕಪ್ ನಲ್ಲಿ ಭಾರತ ತಂಡದೊಂದಿಗೆ ಪಂದ್ಯ ಎದುರು ನೋಡುತ್ತಿದ್ದೇವೆ ಎಂದಿದ್ದಾರೆ.

First published:August 15, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...