ಕ್ರಿಕೆಟ್ ಜಗತ್ತಿನಲ್ಲಿ ಸಚಿನ್ ದೇವರು, ಧೋನಿ ರಾಜ: ಈ ರೀತಿ ಹೇಳಿದ್ಯಾರು ಗೊತ್ತಾ..?

news18
Updated:October 4, 2018, 11:16 AM IST
ಕ್ರಿಕೆಟ್ ಜಗತ್ತಿನಲ್ಲಿ ಸಚಿನ್ ದೇವರು, ಧೋನಿ ರಾಜ: ಈ ರೀತಿ ಹೇಳಿದ್ಯಾರು ಗೊತ್ತಾ..?
news18
Updated: October 4, 2018, 11:16 AM IST
ನ್ಯೂಸ್ 18 ಕನ್ನಡ

ಒಬ್ಬ ದಿಗ್ಗಜ ಬ್ಯಾಟ್ಸ್​ಮನ್​ ಅನ್ನು ಔಟ್ ಮಾಡುವುದು ಎಂದರೆ ಅದು ಸುಲಭದ ಮಾತಲ್ಲ. ಇದು ಒಬ್ಬ ಬೌಲರ್​​ನ ಕನಸಾಗಿದ್ದರು ಅಚ್ಚರಿಯಲ್ಲ. ಅದರಂತೆ ನನ್ನ ಕ್ರಿಕೆಟ್ ಜೀವನದಲ್ಲಿ ಸಚಿನ್ ತೆಂಡೂಲ್ಕರ್ ಅಥವಾ ಎಂ. ಎಸ್ ಧೋನಿ ಅವರ ವಿಕೆಟ್ ಕಬಳಿಸಬೇಕು ಎಂಬುದು ಕನಸಾಗಿತ್ತು ಎಂದು ಹಾಂಕಾಂಗ್​​​ ತಂಡದ ಯುವ ಬೌಲರ್ ಎಹಸಾನ್ ಖಾನ್ ಹೇಳಿದ್ದಾರೆ.

ಕ್ರಿಕೆಟ್ ಜಗತ್ತಿನಲ್ಲಿ ಸಚಿನ್ ತೆಂಡೂಲ್ಕರ್ ದೇವರಾದರೆ, ಮಹೇಂದ್ರ ಸಿಂಗ್ ಧೋನಿ ಅವರು ರಾಜ ಎಂದಿರುವ ಎಹಸನ್, ಸಚಿನ್ ಅಥವಾ ಧೋನಿ ಅವರ ವಿಕೆಟ್ ಪಡೆಯಬೇಕು ಎಂಬುದು ನನ್ನ ಕನಸಾಗಿತ್ತು ಎಂದಿದ್ದಾರೆ. ಸಚಿನ್ ಅವರ ವಿಕೆಟ್ ಪಡೆಯಲ್ಲಂತೂ ಆಗಿಲ್ಲ. ಆದರೆ ಏಷ್ಯಾ ಕಪ್​​ನಲ್ಲಿ ಲೆಜೆಂಡ್ ಧೋನಿ ಅವರನ್ನು ಔಟ್ ಮಾಡುವ ಮೂಲಕ ನನ್ನ ಕನಸು ನನಸಾಗಿದೆ. ಅದಕ್ಕಾಗಿಯೆ ವಿಕೆಟ್ ಪಡೆದ ಕೂಡಲೇ ನೆಚ್ಚಿನ ಆಟಗಾರನಿಗೆ ತಲೆಬಾಗಿ ಗೌರವ ಸೂಚಿಸಿದೆ ಎಂದು ಎಹಸಾನ್ ಹೇಳಿದ್ದಾರೆ.ಇನ್ನು ನನ್ನ ಕ್ರಿಕೆಟ್ ಲೈಫ್ ಬಗ್ಗೆ ಪುಸ್ತಕ ಬರೆಯಲಿದ್ದು, ಇದರಲ್ಲಿ ಧೋನಿ ಬಗ್ಗೆ ವಿಶೇಷವಾಗಿ ತಿಳಿಸುತ್ತೇನೆ ಎಂದಿದ್ದಾರೆ.
First published:October 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...