ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿ (Virat Kohli) ಭಾರತೀಯ ಕ್ರಿಕೆಟ್‌ನ ಇಬ್ಬರು ಸ್ಟಾರ್ ಕ್ರಿಕೆಟಿಗರು. ಕೊಹ್ಲಿ ಮತ್ತು ಧೋನಿ (MS Dhoni) ನಡುವಿನ ಸಂಬಂಧದ ಕುರಿತು ಆಗ್ಗಾಗ್ಗೆ ರ್ಚೆಗಳು ಆಗುತ್ತಿರುತ್ತದೆ. ಐಪಿಎಲ್ 2023ರ (IPL 2023) ಮೊದಲು ಮಹೇಂದ್ರ ಸಿಂಗ್ ಧೋನಿ ಜೊತೆಗಿನ ಸಂಬಂಧದ ಬಗ್ಗೆ ಮತ್ತೊಮ್ಮೆ ವಿರಾಟ್ ಕೊಹ್ಲಿ ಮಾತನಾಡಿದ್ದಾರೆ. ತಮ್ಮ ಕೆಟ್ಟ ಸಮಯದಲ್ಲಿ ಧೋನಿ ಹೇಗೆ ಸಹಾಯ ಮಾಡಿದರು ಎಂದು ಕೊಹ್ಲಿ ಹೇಳಿದ್ದಾರೆ. ಕೊಹ್ಲಿ ತಮ್ಮ ಐಪಿಎಲ್ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ (RCB) ಪಾಡ್‌ಕ್ಯಾಸ್ಟ್‌ನ ಸೀಸನ್ 2ರ ಮೊದಲ ಸಂಚಿಕೆಯಲ್ಲಿ ಧೋನಿಯೊಂದಿಗಿನ ತಮ್ಮ ಸಂಬಂಧದ ಸಂಪೂರ್ಣ ಕಥೆಯನ್ನು ವಿವರಿಸಿದ್ದಾರೆ.
ಧೋನಿ ಕುರಿತು ಮಾತನಾಡಿದ ಕೊಹ್ಲಿ:
ವಿರಾಟ್ ಕೊಹ್ಲಿ ಆರ್‌ಸಿಬಿ ಪಾಡ್‌ಕ್ಯಾಸ್ಟ್‌ನಲ್ಲಿ ಇತ್ತೀಚೆಗೆ ನನ್ನ ವೃತ್ತಿಜೀವನದಲ್ಲಿ ಅನೇಕ ವಿಭಿನ್ನ ಹಂತಗಳನ್ನು ನೋಡಿದೆ ಎಂದು ಹೇಳಿದರು. ಬ್ಯಾಟ್‌ನಿಂದ ರನ್‌ಗಳು ಬರುತ್ತಿರಲಿಲ್ಲ. ಆದರೆ, ನಾನೀಗ ಆ ಹಂತದಿಂದ ಹೊರಗಿದ್ದೇನೆ. ಅದರಿಂದ ಹೊರಬರಲು ಇಬ್ಬರು ನನ್ನೊಂದಿಗೆ ನಿಂತಿದ್ದರು. ಎಂದು ಹೇಳಿಕೊಂಡಿದ್ದಾರೆ. ನನ್ನ ಸಂಕಷ್ಟಸ ಸಮಯದಲ್ಲಿ ನನ್ನ ದೊಡ್ಡ ಶಕ್ತಿಯಾಗಿರುವ ಪತ್ನಿ ಅನುಷ್ಕಾ ಶರ್ಮಾ ಹೊರತುಪಡಿಸಿ, ನನ್ನ ಬಾಲ್ಯದ ಕೋಚ್, ಕುಟುಂಬ ಮತ್ತು ಮಹೇಂದ್ರ ಸಿಂಗ್ ಧೋನಿ ಮಾತ್ರ ಜೊತೆಗಿದ್ದರು. ಅವರು ನನ್ನನ್ನು ಸಂಪರ್ಕಿಸಿ ಪ್ರೋತ್ಸಾಹಿಸಿದರು.
The MahiRat bond is trending! 🥹❤
ICYMI: Watch @imVkohli talk about his equation with @msdhoni in the full episode of #RCBPodcast on our Instagram and YouTube channels, the link is in the bio.#PlayBold pic.twitter.com/TFJ4OeKjRB
— Royal Challengers Bangalore (@RCBTweets) February 25, 2023
ಧೋನಿ ಭಾಯ್ ಅವರನ್ನು ಸಂಪರ್ಕಿಸುವುದು ಕಷ್ಟ. ನೀವು ಸಾಮಾನ್ಯ ದಿನಗಳಲ್ಲಿ ಕರೆ ಮಾಡಿದರೆ, ಅವರು ನಿಮ್ಮ ಕರೆಯನ್ನು ಸ್ವೀಕರಿಸದಿರುವ ಸಾಧ್ಯತೆ 99% ಇರುತ್ತದೆ. ಏಕೆಂದರೆ ಅವರು ತನ್ನ ಫೋನ್ ಅನ್ನು ನೋಡುವುದಿಲ್ಲ. ಹಾಗಾಗಿ ಅವರು ನನ್ನನ್ನು ಸಂಪರ್ಕಿಸಿದ್ದು ಕೇವಲ ಎರಡು ಬಾರಿ. ಇದು ನನಗೆ ತುಂಬಾ ವಿಶೇಷವಾಗಿತ್ತು. ಧೋನಿ ನನಗೆ ಸಂದೇಶ ಕಳುಹಿಸಿದರು ಮತ್ತು ನೀವು ಯಾವಾಗ ಬಲಶಾಲಿಯಾಗಿರುತ್ತೀಯ ಎಂದು ನನಗೆ ಹೇಳಿದರು. ಆ ಸಮಯದಲ್ಲಿ ಧೋನಿ ನನಗೆ ದಾರಿ ತೋರಿಸುವ ವ್ಯಕ್ತಿಯಂತೆ ಕಂಡಿದ್ದರು ಎಂದು ಹೇಳಿದ್ದಾರೆ.
ಇದನ್ನೂ ಓದಿ: IND vs AUS: ದ್ರಾವಿಡ್ ನಿರ್ಧಾರದ ಮೇಲೆ ನಿಂತಿದೆ ಈ ಇಬ್ಬರ ಕ್ರಿಕೆಟ್ ವೃತ್ತಿಜೀವನ! ಯಾರು ಇನ್? ಯಾರು ಔಟ್?
ಭಾರತದ ಮಾಜಿ ನಾಯಕ ಧೋನಿ ಜೊತೆಗಿನ ಸಂಬಂಧದ ಬಗ್ಗೆ ಸುದೀರ್ಘವಾಗಿ ಮಾತನಾಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ನಾನು ಅನುಭವಿಸಿದ್ದನ್ನು ಧೋನಿ ಈ ಹಿಂದೆಯೇ ಅನುಭವಿಸಿದ್ದರು. ಈ ಕಾರಣಕ್ಕಾಗಿ, ಧೋನಿ ನನ್ನ ಮಾನಸಿಕ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು. ನಾನು ಏನು ಅನುಭವಿಸುತ್ತಿದ್ದೇನೆ ಮತ್ತು ನನ್ನ ಒಳಗಿನಿಂದ ನಾನು ಹೇಗೆ ಭಾವಿಸುತ್ತೇನೆ ಎಂದು ತಿಳಿಯಲು ಸಾಧ್ಯವಾಯಿತು ಎಂದು ಹೇಳಿಕೊಂಡಿದ್ದಾರೆ.
ಧೋನಿ ಸಲಹೆ ನೀಡುತ್ತಿದ್ದರು:
ನಾನು ನಾಯಕನಾದಾಗ ಎಂಎಸ್ ಧೋನಿಯಿಂದ ಸಲಹೆ ಪಡೆಯುತ್ತಿದ್ದೆ ಎಂದು ಕೊಹ್ಲಿ ಹೇಳಿದ್ದಾರೆ. ಅವರೂ ನನಗೆ ಸಹಾಯ ಮಾಡುತ್ತಿದ್ದರು. ಅವರಿಗೆ ನನ್ನ ಮೇಲೆ ಸಂಪೂರ್ಣ ನಂಬಿಕೆ ಇತ್ತು. ವಿರಾಟ್ ಕೊಹ್ಲಿ ಭಾರತೀಯ ಟೆಸ್ಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಾಯಕ ಎಂಬುದು ಎಲ್ಲರಿಗೂ ತಿಳಿದಿದೆ. ನಾಯಕನಾಗಿ ಅವರಿಗಿಂತ ಹೆಚ್ಚಿನ ಟೆಸ್ಟ್‌ಗಳನ್ನು ಯಾವ ಭಾರತೀಯನೂ ಗೆದ್ದಿಲ್ಲ. ನಾಯಕನಾಗಿ ಮೊದಲ ಟೆಸ್ಟ್‌ನಲ್ಲೇ ಕೊಹ್ಲಿ ಶತಕ ಸಿಡಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ