'ಟೆಸ್ಟ್​​ಗೆ ಆಫರ್ ಬಂದರೆ ಆರಂಭಿಕನಾಗಿ ಕಣಕ್ಕಿಳಿಯಲು ಸಿದ್ಧ': ರೋಹಿತ್ ಶರ್ಮಾ

news18
Updated:August 17, 2018, 6:32 PM IST
'ಟೆಸ್ಟ್​​ಗೆ ಆಫರ್ ಬಂದರೆ ಆರಂಭಿಕನಾಗಿ ಕಣಕ್ಕಿಳಿಯಲು ಸಿದ್ಧ': ರೋಹಿತ್ ಶರ್ಮಾ
news18
Updated: August 17, 2018, 6:32 PM IST
ನ್ಯೂಸ್ 18 ಕನ್ನಡ

ಮುಂಬೈ: ಭಾರತ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಅವರು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ದೂರ ಉಳಿದಿದ್ದಾರೆ. ಆದರೆ ಸದ್ಯ ಇಂಗ್ಲೆಂಡ್​ನಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದು, ಒಂದು ವೇಳೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಪಂದ್ಯಕ್ಕೆ ಆಫರ್ ಬಂದರೆ ನಾನು ಸಿದ್ದನಿದ್ದೇನೆ ಎಂದು ಹೇಳಿದ್ದಾರೆ.

ಅಂತರಾಷ್ಟ್ರೀಯ ಕ್ರಿಕೆಟ್​​ನಿಂದ ವಿರೇಂದ್ರ ಸೆಹ್ವಾಗ್ ನಿವೃತ್ತಿ ಪಡೆದ ನಂತರ ಟೀಂ ಇಂಡಿಯಾಕ್ಕೆ ಟೆಸ್ಟ್​ ಪಂದ್ಯದಲ್ಲಿ ಆರಂಭಿಕ ಆಟಗಾರರ ಕೊರತೆ ಎದ್ದುಕಾಣುತ್ತಿದೆ. ಅದು ಸದ್ಯ ಆಂಗ್ಲರ ನಾಡಲ್ಲೂ ಮುಂದುವರೆದಿದ್ದು, ಧವನ್, ಮುರಳಿ ವಿಜಯ್ ಅಥವಾ ಕೆ. ಎಲ್. ರಾಹುಲ್ ಆಗಲಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗೆ ಮುಂದಿನ ಟೆಸ್ಟ್​​ಗಾದರು ರೋಹಿತ್ ಶರ್ಮಾ ಅವರನ್ನು ಆಯ್ಕೆ ಮಾಡಿದರೆ ಉತ್ತಮ ಎಂಬ ಮಾತುಗಳು ಕೇಳಿ ಬಂದಿದ್ದವು.

ಏಕದಿನ ಹಾಗೂ ಟಿ-20 ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ತೋರಿದ್ದ ರೋಹಿತ್ ಶರ್ಮಾ ಅವರನ್ನು ಇಂಗ್ಲೆಂಡ್ ಟೆಸ್ಟ್​ ಸರಣಿಯಿಂದ ಹೊರಗಿಡಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೋಹಿತ್, ನನಗೆ ಟೆಸ್ಟ್​​ ಸರಣಿಯಲ್ಲಿ ಆಡುವ ಆಫರ್ ಇದುವರೆಗೆ ಬಂದಿಲ್ಲ. ಎಲ್ಲಾದರು ಅಂಥಹ ಆಫರ್ ಬಂದರೆ ನಾನು ಸದಾ ಸಿದ್ಧ. ಏಕದಿನ ಕ್ರಿಕೆಟ್​​ನಲ್ಲಿ ಆರಂಭಿಕ ಬ್ಯಾಟ್ಸ್​ಮನ್​​ ಆಗಿ ಕಣಕ್ಕಿಳಿಯುತ್ತೇನೆ ಎಂದು ನಾನು ಭಾವಿಸಿರಲಿಲ್ಲ. ಆದರೆ ಆ ಜವಾಬ್ದಾರಿ ನನಗೆ ಸಿಕ್ಕಾಗ ಚೆನ್ನಾಗೆ ನಿಭಾಯಿಸಿದ್ದೇನೆ. ಟೆಸ್ಟ್​​ ಕ್ರಿಕೆಟ್​​ನಲ್ಲೂ ಆರಂಭಿಕನಾಗಿ ಕಣಕ್ಕಿಳಿಯಲು ನಾನು ತಯಾರಾಗಿದ್ದೇನೆ. ಅದಕ್ಕೆ ಬೇಕಾದ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇನೆ ಎಂದು ಹಿಟ್​​ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಹೇಳಿದ್ದಾರೆ.

ಇನ್ನು ನಮ್ಮ ತಂಡ ಮೊದಲ ಎರಡು ಪಂದ್ಯ ಸೋತಿದೆ ಆದರು ಕಮ್​ಬ್ಯಾಕ್ ಮಾಡುವ ಸಾಮರ್ಥ್ಯವಿದೆ. ಈ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಎರಡು ಟೆಸ್ಟ್ ಪಂದ್ಯ ಸೋತಿದ್ದೆವು. ಬಳಿಕ ಉಳಿದ ಪಂದ್ಯದಲ್ಲಿ ಗೆದ್ದು ಟೆಸ್ಟ್​ ಸರಣಿಯನ್ನು ನಮ್ಮದಾಗಿಸಿದ್ದೆವು. ಇಂಗ್ಲೆಂಡ್ ವಿರುದ್ಧ ಇನ್ನು 3 ಟೆಸ್ಟ್ ಪಂದ್ಯ ಬಾಕಿ ಉಳಿದಿದೆ. ನಮಗೆ ಕಮ್​ಬ್ಯಾಕ್ ಮಾಡಲು ಇನ್ನೂ ಅವಕಾಶವಿದೆ ಎಂದು ಹೇಳಿದ್ದಾರೆ.
First published:August 17, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626