ಕೊನೆಯ ಟೆಸ್ಟ್​​ಗೆ ಕನ್ನಡಿಗನಿಗೆ ಕೊಕ್: ಜ್ಯೂನಿಯರ್ ಸಚಿನ್​ಗೆ ಚಾನ್ಸ್​..?

Vinay Bhat | news18
Updated:September 6, 2018, 6:36 PM IST
ಕೊನೆಯ ಟೆಸ್ಟ್​​ಗೆ ಕನ್ನಡಿಗನಿಗೆ ಕೊಕ್: ಜ್ಯೂನಿಯರ್ ಸಚಿನ್​ಗೆ ಚಾನ್ಸ್​..?
Vinay Bhat | news18
Updated: September 6, 2018, 6:36 PM IST
ನ್ಯೂಸ್ 18 ಕನ್ನಡ

ಭಾರತ ಕ್ರಿಕೆಟ್ ಲೋಕದಲ್ಲಿ ಜ್ಯೂನಿಯರ್ ಸಚಿನ್ ಎಂದೇ ಕರೆಸಿಕೊಳ್ಳುತ್ತಿರುವ ಪೃಥ್ವಿ ಷಾ ಅವರಿಗೆ ಸುವರ್ಣಾವಕಾಶ ಸಿಗುವ ಸಮಯ ಹತ್ತಿರ ಬಂದಿದೆ. ಈಗಾಗಲೇ ದೇಶೀಯ ಟೂರ್ನಿ ಹಾಗೂ ಐಪಿಎಲ್​ನಂತಹ ಟೂರ್ನಮೆಂಟ್​ಗಳಲ್ಲಿ ತನ್ನ ವಯಸ್ಸಿಗೂ ಮೀರಿ ಭರ್ಜರಿ ಪ್ರದರ್ಶನ ತೋರಿರುವ ಈ ಯುವ ಆಟಗಾರ ಸದ್ಯದಲ್ಲಿ ವಿರಾಟ್ ಕೊಹ್ಲಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕೆ ಬಲವಾದ ಕಾರಣವೂ ಸಿಕ್ಕಿದೆ.

ಇಂಗ್ಲೆಂಡ್ ಪ್ರವಾಸದ ಕೊನೆಯ ಹಂತ ತಲುಪಿರುವ ಟೀಂ ಇಂಡಿಯಾ ಎಷ್ಟೇ ಪ್ರಯತ್ನಪಟ್ಟರೂ ಟೆಸ್ಟ್ ಸರಣಿಯನ್ನು ಗೆಲ್ಲುವುದುಬಿಡಿ ಸರಣಿ ಸಮಬಲ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಕಬ್ಬಿಣದ ಕಡಲೆಯಂತಾಗಿರುವ ಇಂಗ್ಲೆಂಡ್ ಟೆಸ್ಟ್ ಸರಣಿ ಗೆಲುವು ವಿರಾಟ್ ಕೊಹ್ಲಿ ನಾಯಕತ್ವದಲ್ಲೂ ಹಾಗೆಯೇ ಮುಂದುವರಿದಿದೆ. ಈಗಾಗಲೇ ಆಂಗ್ಲರೆದುರು ಭಾರತ ಸರಣಿಯನ್ನ 3-1ರಿಂದ ಕಳೆದುಕೊಂಡಿದೆ.

ಸದ್ಯ ಟೀಂ ಇಂಡಿಯಾ ಮುಂದಿರುವುದು 5ನೇ ಟೆಸ್ಟ್ ಪಂದ್ಯವನ್ನು ಗೆಲ್ಲೋದಷ್ಟೇ ಗುರಿ. ಹೀಗಾಗಿ ಯಾವುದೇ ಪ್ರಯೋಗಕ್ಕೂ ನಾಯಕ ಕೊಹ್ಲಿ ಮುಂದಾಗಬಹುದು. ಅದರಲ್ಲೂ ಪ್ರಮುಖವಾಗಿ ಸರಣಿಯಲ್ಲಿ ಫಾರ್ಮ್ ವೈಫಲ್ಯ ಅನುಭವಿಸಿರುವ ಆರಂಭಿಕರ ಮೇಲೆ ವಿರಾಟ್ ಕಣ್ಣಿದೆ. ಪ್ರಮುಖವಾಗಿ ಕೊಟ್ಟ ಅವಕಾಶಗಳನ್ನು ಕೈ ಚೆಲ್ಲಿದ ಕೆ.ಎಲ್ ರಾಹುಲ್ ಆಡುವ 11ರಲ್ಲಿ ಸ್ಥಾನ ಕಳೆದುಕೊಳ್ಳುವುದು ಬಹುತೇಕ ಪಕ್ಕಾ ಎನ್ನಲಾಗುತ್ತಿದೆ. ಉಳಿದಿರುವ ಕೊನೆಯ ಟೆಸ್ಟ್​ನಲ್ಲಿ ಕೆ.ಎಲ್ ರಾಹುಲ್ ಬದಲು ಯುವ ಆಟಗಾರ ಮುಂಬೈನ ಪೃಥ್ವಿ ಷಾಗೆ ಸ್ಥಾನ ನೀಡಬೇಕೆಂಬ ಕೂಗು ಜೋರಾಗಿ ಕೇಳಿ ಬರುತ್ತಿದೆ. ಇದಕ್ಕೆ ರಾಹುಲ್ ವೈಫಲ್ಯ ಮತ್ತಷ್ಟು ಪುಷ್ಠಿ ನೀಡಿದೆ. 4ನೇ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ ರಾಹುಲ್ 19 ಹಾಗೂ 2ನೇ ಇನ್ನಿಂಗ್ಸ್​ನಲ್ಲಿ ಸೊನ್ನೆ ಸುತ್ತಿದ್ದರು. ಇಷ್ಟಲ್ಲದೆ 8 ಇನ್ನಿಂಗ್ಸ್​ಗಳಲ್ಲಿ ರಾಹುಲ್ ಕಲೆ ಹಾಕಿದ್ದು ಕೇವಲ 113 ರನ್.

ಹೀಗೆ ಪಂದ್ಯದಿಂದ ಪಂದ್ಯಕ್ಕೆ ಮಂಕಾದ ರಾಹುಲ್ ತಮ್ಮ ಸ್ಥಾನಕ್ಕೆ ವಾತೇ ಕುತ್ತನ್ನ ತಂದುಕೊಂಡಿದ್ದಾರೆ. ಪರಿಣಾಮ  ಅವಕಾಶವನ್ನು ಎದುರು ನೋಡುತ್ತಿರುವ ಜ್ಯೂನಿಯರ್ ಸಚಿನ್ ಖ್ಯಾತಿಯ ಪೃಥ್ವಿ ಷಾ ಔಪಚಾರಿಕ ಟೆಸ್ಟ್​ನಲ್ಲಿ ಟೀಂ ಇಂಡಿಯಾವನ್ನು ಪ್ರತಿನಿಧಿಸಿ ಉತ್ತಮ ಪ್ರದರ್ಶನ ನೀಡಬಹುದೆಂದು ನಿರೀಕ್ಷಿಸಲಾಗುತ್ತಿದೆ.
First published:September 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...