ಕ್ರಿಕೆಟ್ ವಲಯದಲ್ಲಿ ಸಂಚಲನ ಮೂಡಿಸಿದೆ ಧೋನಿ ಬಗ್ಗೆ ಐಸಿಸಿ ಮಾಡಿದ ಆ ಒಂದು ಟ್ವೀಟ್

ನ್ಯೂಜಿಲೆಂಡ್ ವಿರುದ್ಧದ 5ನೇ ಏಕದಿನ ಪಂದ್ಯದಲ್ಲಿ ಧೋನಿ ಮಾಡಿರುವ ಆ ಒಂದು ರನೌಟ್ ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅಲ್ಲದೆ ಧೋನಿಯ ಈ ಚುರುಕು ತನಕ್ಕೆ ಕ್ರಿಕೆಟ್ ಜಗತ್ತೆ ಮೆಚ್ಚುಗೆ ವ್ಯಕ್ತಪಡಿಸಿದೆ.

Vinay Bhat | news18
Updated:February 4, 2019, 5:12 PM IST
ಕ್ರಿಕೆಟ್ ವಲಯದಲ್ಲಿ ಸಂಚಲನ ಮೂಡಿಸಿದೆ ಧೋನಿ ಬಗ್ಗೆ ಐಸಿಸಿ ಮಾಡಿದ ಆ ಒಂದು ಟ್ವೀಟ್
ನ್ಯೂಜಿಲೆಂಡ್ ವಿರುದ್ಧದ 5ನೇ ಏಕದಿನ ಪಂದ್ಯದಲ್ಲಿ ಧೋನಿ ಮಾಡಿರುವ ಆ ಒಂದು ರನೌಟ್ ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅಲ್ಲದೆ ಧೋನಿಯ ಈ ಚುರುಕು ತನಕ್ಕೆ ಕ್ರಿಕೆಟ್ ಜಗತ್ತೆ ಮೆಚ್ಚುಗೆ ವ್ಯಕ್ತಪಡಿಸಿದೆ.
  • News18
  • Last Updated: February 4, 2019, 5:12 PM IST
  • Share this:
ಮಹೇಂದ್ರ ಸಿಂಗ್ ಧೋನಿ ಅವರ ಚಾಣಾಕ್ಷತೆ ಬಗ್ಗೆ ಇಡೀ ಕ್ರಿಕೆಟ್ ವಲಯಕ್ಕೆ ತಿಳಿದಿದೆ. ಮಿಂಚಿನ ವೇಗದಲ್ಲಿ ಅವರು ಮಾಡುದ ಸ್ಟಂಪಿಂಗ್, ಕ್ಷಣಾರ್ಧದಲ್ಲಿ ಹಿಡಿಯುವ ಕ್ಯಾಚ್​​, ವಿಶಿಷ್ಠ ರೀತಿಯ ರನೌಟ್​ಗೆ ಕ್ರಿಕೆಟ್ ದಿಗ್ಗಜರೆ ತಲೆತಗ್ಗಿಸಿ ಪೆವಿಲಿಯನ್ ಹಾದಿ ಹಿಡಿದ್ದಾರೆ.

ಸದ್ಯ ನ್ಯೂಜಿಲೆಂಡ್ ವಿರುದ್ಧದ 5ನೇ ಏಕದಿನ ಪಂದ್ಯದಲ್ಲಿ ಧೋನಿ ಮಾಡಿರುವ ಆ ಒಂದು ರನೌಟ್ ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅಲ್ಲದೆ ಧೋನಿಯ ಈ ಚುರುಕು ತನಕ್ಕೆ ಕ್ರಿಕೆಟ್ ಜಗತ್ತೆ ಮೆಚ್ಚುಗೆ ವ್ಯಕ್ತಪಡಿಸಿದೆ.

ಅಂತೆಯೆ ಸದ್ಯ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಕೂಡ ನ್ಯೂಜಿಲೆಂಡ್ ವಿರುದ್ದ ಧೋನಿ ಮಾಡಿರುವ ರನೌಟ್ ವಿಡಿಯೋವನ್ನು ಹಂಚಿಕೊಂಡಿದ್ದು 'ಧೋನಿ ಸ್ಟಂಪ್​​​​ ಹಿಂದೆ ಇದ್ದಾಗ ಕ್ರೀಸ್​ ಬಿಟ್ಟು ಕದಲಬೇಡಿ' ಎಂದು ಬರೆದುಕೊಂಡಿದೆ.

 


 ಇದನ್ನೂ ಓದಿ: 'ವಿಶ್ವ ಕ್ಯಾನ್ಸರ್ ದಿನ'ದಂದು ಕ್ಯಾನ್ಸರ್​​​ ಅನ್ನೇ ಗೆದ್ದು ಬಂದ ಯುವರಾಜ್ ಸಿಂಗ್ ಹೇಳಿದ್ದೇನು?

ಐಸಿಸಿ ಮಾಡಿರುವ ಈ ಟ್ವೀಟ್ ಈಗ ಸಖತ್ ವೈರಲ್ ಆಗುತ್ತಿದ್ದು, ಕ್ರಿಕೆಟ್ ವಲಯದಲ್ಲೇ ಸಂಚಲನ ಮೂಡಿದೆ.

5ನೇ ಪಂದ್ಯದಲ್ಲಿ ಭಾರತ ನೀಡಿದ್ದ 253 ರನ್ ಟಾರ್ಗೆಟ್​ ಅನ್ನು ಬೆನ್ನತ್ತಿದ್ದ ಕಿವೀಸ್ ಆಟಗಾರರು ಒಂದು ಹಂತದಲ್ಲಿ ಉತ್ತಮ ಸ್ಥಿತಿಯಲ್ಲಿತ್ತು. 150 ರನ್​ಗಳಿಗೆ 6 ವಿಕೆಟ್​ ಕಳೆದುಕೊಂಡರೂ, ನಂತರ ತಂಡಕ್ಕೆ ಆಲ್​ರೌಂಡರ್​ ಜೇಮ್ಸ್ ನೀಶಮ್ ಆಸರೆಯಾಗಿದ್ದರು. ಹೊಡಿ ಬಡಿ ಆಟದ ಮೂಲಕ ತಂಡಕ್ಕೆ ರನ್​​ಗಳ ಸುರಿಮಳೆ ಸುರಿಸಿದ್ದರು. 32 ಎಸೆತಗಳಲ್ಲಿ 44 ರನ್​ಗಳನ್ನು ನೀಶಮ್ ಸಿಡಿಸಿದ್ದರು. ಇನ್ನೇನು ಪಂದ್ಯವನ್ನು ನ್ಯೂಜಿಲ್ಯಾಂಡ್​ ತನ್ನ ತೆಕ್ಕೆಗೆ ತೆಗೆದುಕೊಳ್ಳಲಿದೆ ಎನ್ನುವಷ್ಟರಲ್ಲಿ ಧೋನಿ ತಮ್ಮ ಕೈ ಚಳಕ ತೋರಿಸಿದ್ದರು.

ಇದನ್ನೂ ಓದಿ: 347 ನಿಮಿಷ ಕ್ರೀಸ್​​​ನಲ್ಲಿದ್ದು 215 ಎಸೆತಗಳಲ್ಲಿ ಗಳಿಸಿದ್ದು ಕೇವಲ 50 ರನ್: ಕ್ರಿಕೆಟ್​ನಲ್ಲಿ ಹೀಗೊಂದು ದಾಖಲೆಕೇದರ್​ ಜಾಧವ್​ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಮನವಿಗೆ ಭಾರತದ ಆಟಗಾರರು ಸಲ್ಲಿಸಿದ್ದರು. ಇದೇವೇಳೆ ನೀಶಮ್ ಚಲನವಲನಗಳನ್ನು ಗಮನಿಸುತ್ತಾ ಅಪೀಲ್ ಮಾಡಿದ್ದ ಧೋನಿ, ನೀಶಮ್​ ಕ್ರೀಸ್​ನಿಂದ ರನ್​ಗಾಗಿ ಇಳಿಯುತ್ತಿದ್ದಂತೆ ಚೆಂಡನ್ನು ವಿಕೆಟ್​ ಎಸೆದು ರನೌಟ್ ಮಾಡಿದ್ದರು. ಧೋನಿಯ ಈ ಚಾಣಾಕ್ಷ ನಡೆಯಿಂದ ನೀಶಮ್​ ಪೆವಿಲಿಯನ್​ನತ್ತ ಹೆಜ್ಜೆ ಹಾಕಿದರು.

 

First published:February 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading