• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • ICC World Test Championship 2023: ಆಸೀಸ್​ ಅಲ್ಲ, ಇಂಗ್ಲೆಂಡ್​ಗೆ ಹೆದರಿದ ಟೀಂ ಇಂಡಿಯಾ; 85 ವರ್ಷದಲ್ಲಿ ಗೆದ್ದದ್ದು ಕೇವಲ 2 ಪಂದ್ಯ!

ICC World Test Championship 2023: ಆಸೀಸ್​ ಅಲ್ಲ, ಇಂಗ್ಲೆಂಡ್​ಗೆ ಹೆದರಿದ ಟೀಂ ಇಂಡಿಯಾ; 85 ವರ್ಷದಲ್ಲಿ ಗೆದ್ದದ್ದು ಕೇವಲ 2 ಪಂದ್ಯ!

WTC 2023

WTC 2023

WTC 2023 Final: ಭಾರತ ಅಂತಿಮವಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ತಲುಪಿದೆ. ಟೆಸ್ಟ್ ಮಾದರಿಯ ಅತಿದೊಡ್ಡ ಪಂದ್ಯದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾವನ್ನು ಎದುರಿಸಲಿದೆ.

  • Share this:

ಎಲ್ಲಾ ಅಡೆತಡೆಗಳ ನಡುವೆ ಭಾರತ ತಂಡ ಅಂತಿಮವಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ (WTC 2023 Final) ತಲುಪಿದೆ. ಟೆಸ್ಟ್ ಮಾದರಿಯ ಅತಿದೊಡ್ಡ ಪಂದ್ಯದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾವನ್ನು (IND vs AUS) ಎದುರಿಸಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯ ಜೂನ್ 7 ರಿಂದ 11ರ ವರೆಗೆ ಇಂಗ್ಲೆಂಡ್‌ನ ಓವಲ್ (The Oval) ಮೈದಾನದಲ್ಲಿ ನಡೆಯಲಿದೆ. ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಭಾರತ 2-1 ಅಂತರದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದೆ, ಆದರೆ ಇಂಗ್ಲೆಂಡ್‌ನಲ್ಲಿ ಕಾಂಗರೂಗಳನ್ನು ಸೋಲಿಸುವುದು ಸುಲಭವಲ್ಲ. ಓವಲ್ ಮೈದಾನದಲ್ಲಿ ಭಾರತದ ದಾಖಲೆ ನೋಡಿದರೆ ಭಯ ಮತ್ತಷ್ಟು ಹೆಚ್ಚುತ್ತದೆ.


ರೋಹಿತ್​ ಚಿಂತೆ ಹೆಚ್ಚಿಸಿದ ಪಿಚ್:


ವೇಗದ ಮತ್ತು ಸ್ವಿಂಗ್ ಬೌಲರ್‌ಗಳಿಗೆ ಸಹಾಯಕವಾಗಿರುವ ಓವಲ್ ಪಿಚ್‌ನಲ್ಲಿ ಭಾರತದ ಈವರೆಗಿನ ದಾಖಲೆ ರೋಹಿತ್ ಶರ್ಮಾ ಅವರ ಚಿಂತೆಯನ್ನು ಹೆಚ್ಚಿಸಬಹುದು. 1936ರಿಂದ 2021ರ ವರೆಗೆ ಇಂಗ್ಲೆಂಡ್‌ನ ಈ ಮೈದಾನದಲ್ಲಿ ಟೀಂ ಇಂಡಿಯಾ ಒಟ್ಟು 14 ಪಂದ್ಯಗಳನ್ನು ಆಡಿದೆ. ಇದರಲ್ಲಿ 5 ಪಂದ್ಯಗಳಲ್ಲಿ ಸೋಲು ಅನುಭವಿಸಬೇಕಾಯಿತು. ಓವಲ್‌ನಲ್ಲಿ 85 ವರ್ಷಗಳಲ್ಲಿ ಭಾರತ ಕೇವಲ 2 ಪಂದ್ಯಗಳನ್ನು ಗೆಲ್ಲಲು ಸಾಧ್ಯವಾಗಿದೆ. ಉಳಿದ 7 ಪಂದ್ಯಗಳು ಡ್ರಾ ಗೊಂಡಿವೆ. ಈ ಮೈದಾನದಲ್ಲಿ ಭಾರತ ಒಟ್ಟು 24 ಇನ್ನಿಂಗ್ಸ್‌ಗಳನ್ನು ಆಡಿದ್ದು, ಇಲ್ಲಿ ಗರಿಷ್ಠ ಸ್ಕೋರ್ 664 ಮತ್ತು ಕಡಿಮೆ ಸ್ಕೋರ್ 94 ರನ್ ಆಗಿದೆ.


ಕಳೆದ ಪಂದ್ಯದಲ್ಲಿ ಗೆಲುವು:


ಓವಲ್‌ನಲ್ಲಿ ನಡೆದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿನ ಅದೃಷ್ಟ ಒಲಿದು ಬಂದಿರುವುದು ಸಮಾಧಾನದ ಸಂಗತಿ. ಸೆಪ್ಟೆಂಬರ್ 2021 ರಲ್ಲಿ ನಡೆದ ಈ ಪಂದ್ಯದಲ್ಲಿ ಭಾರತವು ಆತಿಥೇಯ ಇಂಗ್ಲೆಂಡ್ ಅನ್ನು 157 ರನ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ತಂಡದ ಹಾಲಿ ನಾಯಕ ರೋಹಿತ್ ಶರ್ಮಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಆಗ ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸುತ್ತಿದ್ದರು.


ಇದನ್ನೂ ಓದಿ: WTC 2023: ಡಬ್ಲ್ಯುಟಿಸಿ ಫೈನಲ್‌ನಿಂದ ಜಡೇಜಾ - ಅಕ್ಷರ್​ ಔಟ್​! ಟೀಂ ಇಂಡಿಯಾ ಪ್ಲೇಯಿಂಗ್​ 11 ಹೇಗಿದೆ ನೋಡಿ


ನ್ಯೂಜಿಲೆಂಡ್ ಇಂಗ್ಲೆಂಡ್‌ನಲ್ಲಿಯೇ ಗೆಲುವು:


ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2021ರ ಫೈನಲ್ ಪಂದ್ಯವೂ ಇಂಗ್ಲೆಂಡ್‌ನಲ್ಲಿ ನಡೆದಿತ್ತು. ಸೌತಾಂಪ್ಟನ್ ಮೈದಾನದಲ್ಲಿ ಭಾರತ ನ್ಯೂಜಿಲೆಂಡ್ ತಂಡವನ್ನು ಎದುರಿಸಿತು. 6 ದಿನಗಳ ಕಾಲ ನಡೆದ ಪಂದ್ಯದಲ್ಲಿ ಕಿವೀಸ್ ತಂಡ ಭಾರತವನ್ನು 8 ವಿಕೆಟ್‌ಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತು. ವೇಗಿಗಳಾದ ಟಿಮ್ ಸೌಥಿ, ಕೈಲ್ ಜೇಮಿಸನ್ ಮತ್ತು ಟ್ರೆಂಟ್ ಬೌಲ್ಟ್ ಅವರ ಮುಂದೆ ಟೀಂ ಇಂಡಿಯಾದ ಬ್ಯಾಟ್ಸ್‌ಮನ್‌ಗಳು ಮೊದಲ ಇನ್ನಿಂಗ್ಸ್‌ನಲ್ಲಿ 217 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 170 ರನ್ ಗಳಿಸಲು ಶಕ್ತರಾದರು. ಪಂದ್ಯದಲ್ಲಿ ಒಟ್ಟು 7 ವಿಕೆಟ್ ಕಬಳಿಸಿದ ಕೈಲ್ ಜಾಮಿಸನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.


WTC ಅಲ್ಲಿ ಟೀಂ ಇಂಡಿಯಾ ದಾಖಲೆ:


ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯ ಲಂಡನ್‌ನಲ್ಲಿ ಜೂನ್ 7 ರಿಂದ ಜೂನ್ 11ರ ವರೆಗೆ ನಡೆಯಲಿದೆ. ಭಾರತದ ಬಗ್ಗೆ ನೋಡುವುದಾದರೆ, ಅದು ತನ್ನ 18 ಪಂದ್ಯಗಳಲ್ಲಿ 10 ಅನ್ನು ಗೆದ್ದಿದೆ. ಚಾಂಪಿಯನ್‌ಶಿಪ್‌ನ ಸಂಪೂರ್ಣ ಋತುವಿನಲ್ಲಿ ಭಾರತಕ್ಕಿಂತ ಹೆಚ್ಚಿನ ಪಂದ್ಯಗಳನ್ನು ಯಾವುದೇ ತಂಡ ಗೆದ್ದಿಲ್ಲ. ಆಸ್ಟ್ರೇಲಿಯಾ ಭಾರತಕ್ಕಿಂತ ಒಂದು ಪಂದ್ಯವನ್ನು ಕಡಿಮೆ ಗೆದ್ದಿದೆ. ಆದಾಗ್ಯೂ, ಭಾರತಕ್ಕಿಂತ 2 ಪಂದ್ಯಗಳನ್ನು ಕಡಿಮೆ ಸೋತ ಕಾರಣ ಅವರು ಪಾಯಿಂಟ್ ಪಟ್ಟಿಯಲ್ಲಿ ನಂಬರ್-1 ಆಗಿ ಉಳಿದಿದ್ದಾರೆ.
ಜೂನ್ 7 ರಂದು ನಡೆಯಲಿರುವ WTC ಫೈನಲ್ ಬಗ್ಗೆ ಮಾತನಾಡುತ್ತಾ, ಈ ಪಂದ್ಯ ಇಂಗ್ಲೆಂಡ್‌ನಲ್ಲಿ ನಡೆಯಲಿದೆ. ಐಸಿಸಿ ಟೂರ್ನಿಯ ಇತಿಹಾಸದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗುತ್ತಿರುವುದು ಇದು ಎರಡನೇ ಬಾರಿ. ಇದಕ್ಕೂ ಮೊದಲು 2003ರಲ್ಲಿ ಒಮ್ಮೆ ಮಾತ್ರ ಎರಡೂ ತಂಡಗಳು ಐಸಿಸಿ ಟೂರ್ನಿಯ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು.

Published by:shrikrishna bhat
First published: