2019 ವಿಶ್ವಕಪ್​ಗೆ ಐಸಿಸಿಯಿಂದ ಭರ್ಜರಿ ತಯಾರಿ; ಪ್ರಮೋಷನ್ ಸಾಂಗ್ ರಿಲೀಸ್

news18
Updated:August 9, 2018, 4:25 PM IST
2019 ವಿಶ್ವಕಪ್​ಗೆ ಐಸಿಸಿಯಿಂದ ಭರ್ಜರಿ ತಯಾರಿ; ಪ್ರಮೋಷನ್ ಸಾಂಗ್ ರಿಲೀಸ್
news18
Updated: August 9, 2018, 4:25 PM IST
ನ್ಯೂಸ್ 18 ಕನ್ನಡ

2019 ಮೇ 30ರಿಂದ ಆರಂಭಗೊಳ್ಳಲಿರುವ ಪ್ರತಿಷ್ಠಿತ ಐಸಿಸಿ ಏಕದಿನ ವಿಶ್ವಕಪ್​​​ ಆತಿಥ್ಯಕ್ಕೆ ಇಂಗ್ಲೆಂಡ್ ಸರ್ವಸನ್ನದ್ದವಾಗುತ್ತಿದೆ. ಇದರ ಜೊತೆಗೆ ಐಸಿಸಿ ಕೂಡ ವಿಶ್ವಕಪ್​​ನ ತಯಾರಿ ನಡೆಸುತ್ತಿದೆ. ಇದೀಗ ಕ್ರಿಕೆಟ್​ ವಿಶ್ವಕಪ್ ಜಾತ್ರೆಗಾಗಿ ಐಸಿಸಿ ವಿಶೇಷ ಪ್ರಮೋಷನ್​ ವಿಡಿಯೋ ತಯಾರಿಸಿದ್ದು, ಅದನ್ನ ತನ್ನ ಅಧಿಕೃತ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿದೆ.

ಐಸಿಸಿ ಬಿಡುಗಡೆಮಾಡಿರುವ ಈ ವಿಶೇಷ ಹಾಡಿನಲ್ಲಿ ಇಂಗ್ಲೆಂಡ್​​ನ ಮಾಜಿ ಕ್ರಿಕೆಟಿಗ ಆಲ್​ರೌಂಡರ್​ ಫ್ಲಿಂಟಾಫ್​ ಕಾಣಿಸಿಕೊಂಡಿದ್ದಾರೆ. ಜೊತೆಗೆ ಕ್ರಿಕೆಟ್​ ಅಭಿಮಾನಿಗಳನ್ನು ಬಳಸಿಕೊಂಡು ಈ ಪ್ರೊಮೊ ತಯಾರು ಮಾಡಲಾಗಿದೆ. ಫ್ಲಿಂಟಾಪ್​ ಜತೆಗೆ ಈ ವಿಡಿಯೋದಲ್ಲಿ ಮಾಜಿ ಕ್ರಿಕೆಟಿಗರಾದ ಕುಮಾರ ಸಂಗಕ್ಕಾರ, ಮಹಿಳಾ ಕ್ರಿಕೆಟ್ ಪಟು ಚಾರ್ಲೊಟ್ ಎಡ್ವರ್ಡ್ಸ್ ಕಾಣಿಸಿಕೊಂಡಿದ್ದಾರೆ. 10  ರಾಷ್ಟ್ರಗಳು ಈ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದು, ಈಗಾಗಲೇ ತಯಾರಿ ಹಂತದಲ್ಲಿವೆ.

 


First published:August 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ