ಐಸಿಸಿ ಮಹಿಳಾ ಟಿ20 ವಿಶ್ವಕಪ್ (W T20 World Cup 2023) ಫೆಬ್ರವರಿ 10 ರಿಂದ ಆರಂಭವಾಗಿದೆ. ಈ ವರ್ಷ ಈ ಟೂರ್ನಿಯನ್ನು ದಕ್ಷಿಣ ಆಫ್ರಿಕಾದಲ್ಲಿ (South Africa) ಆಯೋಜಿಸಲಾಗಿದ್ದು, ಇಂದು ಭಾರತದ ಮೊದಲ ಪಂದ್ಯ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ (IND vs PAK) ತಂಡದ ವಿರುದ್ಧ ನಡೆಯಲಿದೆ. ಇಡೀ ವಿಶ್ವವೇ ಕ್ರಿಕೆಟ್ ಮೈದಾನದಲ್ಲಿ ಈ ಅಮೋಘ ಪಂದ್ಯವನ್ನು ವೀಕ್ಷಿಸಲು ಕಾತುರವಾಗಿದೆ. ಈ ಮೂಲಕ ಐಸಿಸಿ ಟೂರ್ನಿಯಲ್ಲಿ ಮತ್ತೊಮ್ಮೆ ಪಾಕಿಸ್ತಾನವನ್ನು ಸೋಲಿಸುವ ಅವಕಾಶ ಭಾರತಕ್ಕಿದೆ. ಮಹಿಳಾ ಟಿ20 ವಿಶ್ವಕಪ್ ಫೆಬ್ರವರಿ 10 ರಿಂದ ಫೆಬ್ರವರಿ 26ರ ವರೆಗೆ ನಡೆಯಲಿದೆ.
ಹೇಗಿರಲಿದೆ ಐಸಿಸಿ ಮಹಿಳಾ ವಿಶ್ವಕಪ್?:
ಈ ವರ್ಷ, 10 ತಂಡಗಳು ವಿಶ್ವಕಪ್‌ನಲ್ಲಿ ಭಾಗವಹಿಸುತ್ತಿದ್ದು, ಅವುಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಬಿ ಗುಂಪಿನಲ್ಲಿ ಇಂಗ್ಲೆಂಡ್, ಐರ್ಲೆಂಡ್, ವೆಸ್ಟ್ ಇಂಡೀಸ್ ಜೊತೆಗೆ ಭಾರತ ಮತ್ತು ಪಾಕಿಸ್ತಾನ ತಂಡಗಳಿವೆ. ಇಂದು ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳು ಈ ವರ್ಷದ ಟಿ20 ವಿಶ್ವಕಪ್‌ನಲ್ಲಿ ತಮ್ಮ ಮೊದಲ ಪಂದ್ಯವನ್ನು ಆಡಲಿವೆ. ಉಭಯ ತಂಡಗಳು ಗೆಲುವಿನೊಂದಿಗೆ ಟೂರ್ನಿ ಆರಂಭಿಸಲು ಪ್ರಯತ್ನಿಸುತ್ತಿದ್ದು, ಉಭಯ ತಂಡಗಳ ನಡುವಿನ ಈ ಹೋರಾಟ ಇನ್ನಷ್ಟು ರೋಚಕವಾಗಿರಲಿದೆ.
ಪಂದ್ಯದ ವಿವರ:
ಇಂದು ಭಾರತ ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡಗಳು ಗುಂಪು ಹಂತದ ಪಂದ್ಯವನ್ನು ಆಡಲಿವೆ. ಈ ಪಂದ್ಯ ದಕ್ಷಿಣ ಆಫ್ರಿಕಾದ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಪಂದ್ಯ ಸಂಜೆ 6:30ಕ್ಕೆ ಆರಂಭವಾಗಲಿದ್ದು, ಅರ್ಧ ಗಂಟೆ ಮೊದಲು ಟಾಸ್ ನಡೆಯಲಿದೆ. ಭಾರತದಲ್ಲಿ ಮಹಿಳಾ T20 ವಿಶ್ವಕಪ್ 2023ನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಇದರೊಂದಿಗೆ ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ಈ ಪಂದ್ಯವನ್ನು ಲೈವ್ ಆಗಿ ವೀಕ್ಷಿಸಬಹುದು.
ಇದನ್ನೂ ಓದಿ: Ravindra Jadeja: ಬಾಲ್ ಟ್ಯಾಂಪರಿಂಗ್ ವಿವಾದದ ಬೆನ್ನಲ್ಲೇ ಜಡೇಜಾಗೆ ಐಸಿಸಿಯಿಂದ ಬಿಗ್ ಶಾಕ್!
ಭಾರತ-ಪಾಕ್ ಹೆಡ್ ಟು ಹೆಡ್:
ಪಾಕಿಸ್ತಾನ ವಿರುದ್ಧ ಭಾರತ 10 ಟಿ20 ಪಂದ್ಯಗಳನ್ನು ಗೆದ್ದಿದೆ. ಭಾರತ ಮತ್ತು ಪಾಕಿಸ್ತಾನ ನಡುವೆ ಇದುವರೆಗೆ 13 ಟಿ20 ಅಂತಾರಾಷ್ಟ್ರೀಯ ಪಂದ್ಯಗಳು ನಡೆದಿವೆ. ಈ ಅವಧಿಯಲ್ಲಿ ಭಾರತ 10 ಪಂದ್ಯಗಳನ್ನು ಗೆದ್ದಿದ್ದರೆ, ಪಾಕಿಸ್ತಾನ 3 ಪಂದ್ಯಗಳನ್ನು ಗೆದ್ದಿದೆ. ಟಿ20 ವಿಶ್ವಕಪ್‌ನಲ್ಲಿ ಉಭಯ ತಂಡಗಳು 6 ಬಾರಿ ಮುಖಾಮುಖಿಯಾಗಿದ್ದು, ಭಾರತ 4 ಪಂದ್ಯಗಳನ್ನು ಗೆದ್ದಿದ್ದರೆ, ಪಾಕಿಸ್ತಾನ 2 ಪಂದ್ಯಗಳನ್ನು ಗೆದ್ದಿದೆ.
ಸ್ಟಾರ್ ಆಟಗಾರ್ತಿ ಔಟ್:
ಇನ್ನು, ಇಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯದಿಂದ ಭಾರತ ಮಹಿಳಾ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂದನಾ ಹೊರಗುಳಿಯಲಿದ್ದಾರೆ. ಫೆಬ್ರವರಿ 6 ರಂದು ಮಹಿಳಾ ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಅಭ್ಯಾಸ ಪಂದ್ಯ ನಡೆದಿತ್ತು. ಈ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುವಾಗ ಸ್ಮೃತಿ ಮಂಧಾನ ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಹೀಗಾಗಿ ಅವರು ಈ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ಅಧಿಕೃತವಾಗಿ ತಿಳಿಸಿದೆ.
ಭಾರತ- ಪಾಕ್ ಸಂಭಾವ್ಯ ಪ್ಲೇಯಿಂಗ್ 11:
ಭಾರತ ಸಂಭಾವ್ಯ ಪ್ಲೇಯಿಂಗ್ 11: ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಹರ್ಲೀನ್ ಡಿಯೋಲ್, ಹರ್ಮನ್ಪ್ರೀತ್ ಕೌರ್, ರಿಚಾ ಘೋಷ್, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ರಾಜೇಶ್ವರಿ ಗಾಯಕ್ವಾಡ್, ರೇಣುಕಾ ಸಿಂಗ್, ಶಿಖಾ ಪಾಂಡೆ ಮತ್ತು ರಾಧಾ ಯಾದವ್
ಪಾಕಿಸ್ತಾನ ಸಂಭಾವ್ಯ ಪ್ಲೇಯಿಂಗ್ 11: ಸಿದ್ರಾ ಅಮೀನ್, ಮುನೀಬಾ ಅಲಿ, ನಿದಾ ದಾರ್, ಆಯೇಶಾ ನಸೀಮ್, ಸದಾಫ್ ಶಮಾಸ್, ಆಲಿಯಾ ರಿಯಾಜ್, ಸಿದ್ರಾ ನವಾಜ್, ಜವೇರಿಯಾ ಖಾನ್, ಬಿಸ್ಮಾ ಮರೂಫ್, ಐಮನ್ ಅನ್ವರ್ ಮತ್ತು ನಶ್ರಾ ಸಂಧು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ