• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • ICC W T20 World Cup 2023: 10 ತಂಡಗಳು, 23 ಪಂದ್ಯಗಳು, 17 ದಿನಗಳು; ಮಹಿಳಾ ಟಿ20 ವಿಶ್ವಕಪ್​ನ ಸಂಪೂರ್ಣ ವೇಳಾಪಟ್ಟಿ

ICC W T20 World Cup 2023: 10 ತಂಡಗಳು, 23 ಪಂದ್ಯಗಳು, 17 ದಿನಗಳು; ಮಹಿಳಾ ಟಿ20 ವಿಶ್ವಕಪ್​ನ ಸಂಪೂರ್ಣ ವೇಳಾಪಟ್ಟಿ

ICC Womens T20 World Cup 2023

ICC Womens T20 World Cup 2023

ICC WWC 2023: ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನ ಎಂಟನೇ ಆವೃತ್ತಿಯು ಫೆಬ್ರವರಿ 10 ರಿಂದ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದೆ. ಈ ಮಹತ್ವದ ಮೆಗಾ ಟೂರ್ನಿಯ ಭಾರತ ತಂಡದ ಸಂಪೂರ್ಣ ವೇಳಾಪಟ್ಟಿ ಈ ರೀತಿ ಇದೆ.

  • Share this:

ಐಸಿಸಿ ಮಹಿಳಾ ಟಿ20 ವಿಶ್ವಕಪ್ (ICC WWC) ಫೆಬ್ರವರಿ 10 ರಿಂದ ದಕ್ಷಿಣ ಆಫ್ರಿಕಾದಲ್ಲಿ (South Africa) ಆರಂಭವಾಗಲಿದೆ. ಈ ಪ್ರತಿಷ್ಠಿತ ಟೂರ್ನಿಯಲ್ಲಿ ವಿಶ್ವದ ಅಗ್ರ 10 ತಂಡಗಳು ಭಾಗವಹಿಸಲಿವೆ. 17 ದಿನಗಳ ಕಾಲ ನಡೆಯುವ ಕ್ರಿಕೆಟ್​ನ ಈ ಮೆಗಾ ಟೂರ್ನಿಯಲ್ಲಿ 23 ಪಂದ್ಯಗಳು ನಡೆಯಲಿವೆ. ಹಿಂದಿನ ಸೋಲಿನ ದುಃಖ ಮರೆತು ಐಸಿಸಿಯ ಮೆಗಾ ಟೂರ್ನಿಗೆ ಭಾರತ ಮಹಿಳಾ ಕ್ರಿಕೆಟ್ (Womens Team India) ತಂಡ ಎಂಟ್ರಿ ಕೊಡುತ್ತಿದೆ. 2020ರಲ್ಲಿ ಈ ಟೂರ್ನಿಯ ಫೈನಲ್‌ನಲ್ಲಿ ಭಾರತವನ್ನು ಸೋಲಿಸುವ ಮೂಲಕ ಆಸ್ಟ್ರೇಲಿಯಾ ಮೊದಲ ಬಾರಿಗೆ ಪ್ರಶಸ್ತಿ ಗೆಲ್ಲುವ ಕನಸನ್ನು ಮುರಿದಿತ್ತು. ಇಂತಹ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾ ಈ ಬಾರಿ ಚಾಂಪಿಯನ್ ಆಗುವ ನಿರೀಕ್ಷೆಯಲ್ಲಿ ಕಣಕ್ಕಿಳಿಯಲಿದೆ.


ICC ಮಹಿಳಾ T20 ವಿಶ್ವಕಪ್ 2023:


ಗುಂಪು 1: ಆಸ್ಟ್ರೇಲಿಯಾ, ಬಾಂಗ್ಲಾದೇಶ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ
ಗುಂಪು 2: ಇಂಗ್ಲೆಂಡ್, ಭಾರತ, ಐರ್ಲೆಂಡ್, ಪಾಕಿಸ್ತಾನ, ವೆಸ್ಟ್ ಇಂಡೀಸ್


T20 ವಿಶ್ವಕಪ್ 2023 ವೇಳಾಪಟ್ಟಿ:


10 ಫೆಬ್ರವರಿ - ದಕ್ಷಿಣ ಆಫ್ರಿಕಾ ವಿರುದ್ಧ ಶ್ರೀಲಂಕಾ (ಕೇಪ್ ಟೌನ್)
11 ಫೆಬ್ರವರಿ - ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್ (ಪಾರ್ಲ್)
11 ಫೆಬ್ರವರಿ - ಆಸ್ಟ್ರೇಲಿಯಾ ವಿರುದ್ಧ ನ್ಯೂಜಿಲೆಂಡ್ (ಪಾರ್ಲ್)
12 ಫೆಬ್ರವರಿ - ಭಾರತ vs ಪಾಕಿಸ್ತಾನ (ಕೇಪ್ ಟೌನ್)
12 ಫೆಬ್ರವರಿ - ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ (ಕೇಪ್ ಟೌನ್)
13 ಫೆಬ್ರವರಿ - ಐರ್ಲೆಂಡ್ ವಿರುದ್ಧ ಇಂಗ್ಲೆಂಡ್ (ಪಾರ್ಲ್)
13 ಫೆಬ್ರವರಿ - ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಜಿಲೆಂಡ್ (ಪಾರ್ಲ್)
14 ಫೆಬ್ರವರಿ - ಆಸ್ಟ್ರೇಲಿಯಾ ವಿರುದ್ಧ ಬಾಂಗ್ಲಾದೇಶ (ಗ್ಕೆಬರ್ಹಾ)
15 ಫೆಬ್ರವರಿ - ವೆಸ್ಟ್ ಇಂಡೀಸ್ ವಿರುದ್ಧ ಭಾರತ (ಕೇಪ್ ಟೌನ್)
15 ಫೆಬ್ರವರಿ - ಪಾಕಿಸ್ತಾನ ವಿರುದ್ಧ ಐರ್ಲೆಂಡ್ (ಕೇಪ್ ಟೌನ್)
16 ಫೆಬ್ರವರಿ - ಶ್ರೀಲಂಕಾ ವಿರುದ್ಧ ಆಸ್ಟ್ರೇಲಿಯಾ (ಗ್ಕೆಬರ್ಹಾ)



17 ಫೆಬ್ರವರಿ - ನ್ಯೂಜಿಲೆಂಡ್ ವಿರುದ್ಧ ಬಾಂಗ್ಲಾದೇಶ (ಕೇಪ್ ಟೌನ್)
17 ಫೆಬ್ರವರಿ - ವೆಸ್ಟ್ ಇಂಡೀಸ್ ವಿರುದ್ಧ ಐರ್ಲೆಂಡ್ (ಕೇಪ್ ಟೌನ್)
18 ಫೆಬ್ರವರಿ - ಇಂಗ್ಲೆಂಡ್ ವಿರುದ್ಧ ಭಾರತ (ಗ್ಕೆಬರ್ಹಾ)
18 ಫೆಬ್ರವರಿ - ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾ (ಗ್ಕೆಬರ್ಹಾ)
19 ಫೆಬ್ರವರಿ - ಪಾಕಿಸ್ತಾನ ವಿರುದ್ಧ ವೆಸ್ಟ್ ಇಂಡೀಸ್ (ಪಾರ್ಲ್)
19 ಫೆಬ್ರವರಿ - ನ್ಯೂಜಿಲೆಂಡ್ ವಿರುದ್ಧ ಶ್ರೀಲಂಕಾ (ಪಾರ್ಲ್)
20 ಫೆಬ್ರವರಿ - ಐರ್ಲೆಂಡ್ ವಿರುದ್ಧ ಭಾರತ (ಗ್ಕೆಬರ್ಹಾ)
21 ಫೆಬ್ರವರಿ - ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ (ಕೇಪ್ ಟೌನ್)
21 ಫೆಬ್ರವರಿ - ದಕ್ಷಿಣ ಆಫ್ರಿಕಾ ವಿರುದ್ಧ ಬಾಂಗ್ಲಾದೇಶ (ಕೇಪ್ ಟೌನ್)
23 ಫೆಬ್ರವರಿ - ಸೆಮಿ-ಫೈನಲ್ 1 (ಕೇಪ್ ಟೌನ್)
24 ಫೆಬ್ರವರಿ - ಸೆಮಿ-ಫೈನಲ್ 2 (ಕೇಪ್ ಟೌನ್)
26 ಫೆಬ್ರವರಿ - ಫೈನಲ್ (ಕೇಪ್ ಟೌನ್)


ಇದನ್ನೂ ಓದಿ: T20 World Cup: ಟಿ20 ವಿಶ್ವಕಪ್​ 2024ಕ್ಕೆ ಟೀಂ ಇಂಡಿಯಾ ರೆಡಿ, ಈ 5 ಆಟಗಾರರು ಕಣಕ್ಕಿಳಿಯೋದು ಫಿಕ್ಸ್


ಟಿ20 ವಿಶ್ವಕಪ್‌ನಲ್ಲಿ ಭಾರತದ ಪ್ರದರ್ಶನ:


ಭಾರತ ತಂಡ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಒಮ್ಮೆ ಫೈನಲ್‌ಗೆ ತಲುಪಿದೆ. ಟೀಂ ಇಂಡಿಯಾ 2009, 2010 ಮತ್ತು 2018ರಲ್ಲಿ ಸೆಮಿಫೈನಲ್‌ನಲ್ಲಿ ಸೋಲನ್ನು ಎದುರಿಸಿತ್ತು. ಆದರೆ 2012, 2014 ಮತ್ತು 2016 ರಲ್ಲಿ ಭಾರತ ತಂಡವು ಗುಂಪು ಸುತ್ತಿನಲ್ಲೇ ಹೊರಬಿದ್ದಿತ್ತು. ಆಸ್ಟ್ರೇಲಿಯಾ ಅತಿ ಹೆಚ್ಚು 5 ಬಾರಿ ಟ್ರೋಫಿ ವಶಪಡಿಸಿಕೊಂಡಿದೆ.




ಟಿ20 ವಿಶ್ವಕಪ್​ಗೆ ಮಹಿಳಾ ಭಾರತ ತಂಡ:


ಹರ್ಮನ್‌ಪ್ರೀತ್ ಕೌರ್ (ಸಿ), ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ, ರಿಚಾ ಘೋಷ್, ಜೆಮಿಮಾ ರಾಡ್ರಿಗಸ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ದೇವಿಕಾ ವೈದ್ಯ, ರಾಧಾ ಯಾದವ್, ರೇಣುಕಾ ಠಾಕೂರ್, ಅಂಜಲಿ ಸರ್ವಾಣಿ, ಪೂಜಾ ವಸ್ತ್ರಾಕರ್, ರಾಜೇಶ್ವರಿ ಗಾಯಕ್ವಾಡೆ.

Published by:shrikrishna bhat
First published: