• Home
  • »
  • News
  • »
  • sports
  • »
  • Womens T20 World Cup: ಮಹಿಳಾ ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟ, ಮತ್ತೆ ಭಾರತ-ಪಾಕ್​ ಮುಖಾಮುಖಿ

Womens T20 World Cup: ಮಹಿಳಾ ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟ, ಮತ್ತೆ ಭಾರತ-ಪಾಕ್​ ಮುಖಾಮುಖಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Womens T20 World Cup: ಮುಂದಿನ ವರ್ಷ (2023) ಐಸಿಸಿ ಮಹಿಳಾ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಫೆಬ್ರವರಿ ತಿಂಗಳಲ್ಲಿ ನಡೆಯಲಿದೆ. ಈ ಟೂರ್ನಿಯ ಆತಿಥ್ಯವನ್ನು ದಕ್ಷಿಣ ಆಫ್ರಿಕಾಕ್ಕೆ ನೀಡಲಾಗಿದೆ. 

  • Share this:

ಪುರುಷರ ಟಿ20 ಕ್ರಿಕೆಟ್ ವಿಶ್ವಕಪ್ ಮುಗಿದ ಕೆಲವೇ ತಿಂಗಳುಗಳ ನಂತರ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಮಹಿಳಾ ಟಿ20 ವಿಶ್ವಕಪ್ ಅನ್ನು ಆಯೋಜಿಸಲು ನಿರ್ಧರಿಸಿದೆ. ಮುಂದಿನ ವರ್ಷ (2023) ಐಸಿಸಿ ಮಹಿಳಾ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಫೆಬ್ರವರಿ ತಿಂಗಳಲ್ಲಿ ನಡೆಯಲಿದೆ. ಈ ಟೂರ್ನಿಯ ಆತಿಥ್ಯವನ್ನು ದಕ್ಷಿಣ ಆಫ್ರಿಕಾಕ್ಕೆ ನೀಡಲಾಗಿದೆ. ಇತ್ತೀಚೆಗೆ ಐಸಿಸಿ ಈ ಟೂರ್ನಿಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ವೇಳಾಪಟ್ಟಿಯ ಪ್ರಕಾರ, ಭಾರತೀಯ ಮಹಿಳಾ ತಂಡದ ಮೊದಲ ಪಂದ್ಯವು ಫೆಬ್ರವರಿ 12, 2023 ರಂದು ಸಾಂಪ್ರದಾಯಿಕ ಪೈಪೋಟಿಯಾದ ಪಾಕಿಸ್ತಾನದ ವಿರುದ್ಧ ನಡೆಯಲಿದೆ.


ಮುಂದಿನ ವರ್ಷದ ಮಹಿಳಾ ಟಿ20 ವಿಶ್ವಕಪ್, ಪಂದ್ಯಾವಳಿಯ ಎಂಟನೇ ಆವೃತ್ತಿ, ಫೆಬ್ರವರಿ 10 ರಿಂದ ಫೆಬ್ರವರಿ 26 ರವರೆಗೆ ನಡೆಯಲಿದೆ. ಜತೆಗೆ ಅಗತ್ಯ ಬಿದ್ದರೆ ಫೆಬ್ರವರಿ 27ನ್ನು ಫೈನಲ್‌ಗೆ ದಿನವನ್ನಾಗಿ ಕಾಯ್ದಿರಿಸಲಾಗಿದೆ. ಮಹಿಳಾ ಟಿ20 ವಿಶ್ವಕಪ್‌ಗೆ 10 ತಂಡಗಳನ್ನು ನಿರ್ಧರಿಸಲಾಗಿದೆ. ಈ 10 ತಂಡಗಳನ್ನು 'ಗುಂಪು 1' ಮತ್ತು 'ಗುಂಪು 2' ಎಂದು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಗುಂಪು 1 ರಲ್ಲಿವೆ. ಇಂಗ್ಲೆಂಡ್, ಭಾರತ, ವೆಸ್ಟ್ ಇಂಡೀಸ್, ಪಾಕಿಸ್ತಾನ ಮತ್ತು ಐರ್ಲೆಂಡ್ ತಂಡಗಳು ಗುಂಪು 2 ರಲ್ಲಿವೆ.


ಮಹಿಳಾ ಟಿ20 ವಿಶ್ವಕಪ್ ವೇಳಾಪಟ್ಟಿ:


ಫೆಬ್ರವರಿ 10 - ದಕ್ಷಿಣ ಆಫ್ರಿಕಾ ವಿರುದ್ಧ ಶ್ರೀಲಂಕಾ, ಕೇಪ್ ಟೌನ್
ಫೆಬ್ರವರಿ 11 - ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್, ಪಾರ್ಲಿ
ಫೆಬ್ರವರಿ 11 - ಆಸ್ಟ್ರೇಲಿಯಾ ವಿರುದ್ಧ ನ್ಯೂಜಿಲೆಂಡ್, ಪಾರ್ಲಿ
ಫೆಬ್ರವರಿ 12 - ಭಾರತ ವಿರುದ್ಧ ಪಾಕಿಸ್ತಾನ, ಕೇಪ್ ಟೌನ್
ಫೆಬ್ರವರಿ 12 - ಬಾಂಗ್ಲಾದೇಶ ವಿರುದ್ಧ ಶ್ರೀಲಂಕಾ, ಕೇಪ್ ಟೌನ್
ಫೆಬ್ರವರಿ 13 - ಐರ್ಲೆಂಡ್ ವಿರುದ್ಧ ಇಂಗ್ಲೆಂಡ್, ಪಾರ್ಲಿ
ಫೆಬ್ರವರಿ 13 - ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಜಿಲೆಂಡ್, ಪಾರ್ಲಿ
ಫೆಬ್ರವರಿ 14 - ಆಸ್ಟ್ರೇಲಿಯಾ ವಿರುದ್ಧ ಬಾಂಗ್ಲಾದೇಶ, ಗೆಬಾರಾ
ಫೆಬ್ರವರಿ 15 - ವೆಸ್ಟ್ ಇಂಡೀಸ್ ವಿರುದ್ಧ ಭಾರತ, ಕೇಪ್ ಟೌನ್
ಫೆಬ್ರವರಿ 15 - ಪಾಕಿಸ್ತಾನ ವಿರುದ್ಧ ಐರ್ಲೆಂಡ್, ಕೇಪ್ ಟೌನ್
ಫೆಬ್ರವರಿ 16 - ಶ್ರೀಲಂಕಾ ವಿರುದ್ಧ ಆಸ್ಟ್ರೇಲಿಯಾ, ಗೆಬಾರಾ
ಫೆಬ್ರವರಿ 17 - ನ್ಯೂಜಿಲೆಂಡ್ ವಿರುದ್ಧ ಬಾಂಗ್ಲಾದೇಶ, ಕೇಪ್ ಟೌನ್ಫೆಬ್ರವರಿ 17 - ವೆಸ್ಟ್ ಇಂಡೀಸ್ ವಿರುದ್ಧ ಐರ್ಲೆಂಡ್, ಕೇಪ್ ಟೌನ್
ಫೆಬ್ರವರಿ 18 - ಇಂಗ್ಲೆಂಡ್ ವಿರುದ್ಧ ಭಾರತ, ಗೆಬಾರಾ
ಫೆಬ್ರವರಿ 18 - ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾ
ಫೆಬ್ರವರಿ 19 - ಪಾಕಿಸ್ತಾನ ವಿರುದ್ಧ ವೆಸ್ಟ್ ಇಂಡೀಸ್, ಪಾರ್ಲಿ
ಫೆಬ್ರವರಿ 19 - ನ್ಯೂಜಿಲೆಂಡ್ ವಿರುದ್ಧ ಶ್ರೀಲಂಕಾ, ಪಾರ್ಲಿ
ಫೆಬ್ರವರಿ 20 - ಐರ್ಲೆಂಡ್ ವಿರುದ್ಧ ಭಾರತ
ಫೆಬ್ರವರಿ 21 - ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ, ಕೇಪ್ ಟೌನ್
ಫೆಬ್ರವರಿ 21 - ದಕ್ಷಿಣ ಆಫ್ರಿಕಾ ವಿರುದ್ಧ ಬಾಂಗ್ಲಾದೇಶ, ಕೇಪ್ ಟೌನ್
23 ಫೆಬ್ರವರಿ - ಸೆಮಿಫೈನಲ್ 1, ಕೇಪ್ ಟೌನ್
24 ಫೆಬ್ರವರಿ - ಮೀಸಲು ದಿನ, ಕೇಪ್ ಟೌನ್
24 ಫೆಬ್ರವರಿ - ಸೆಮಿ-ಫೈನಲ್ 2, ಕೇಪ್ ಟೌನ್
25 ಫೆಬ್ರವರಿ ಮೀಸಲು ದಿನ, ಕೇಪ್ ಟೌನ್
26 ಫೆಬ್ರವರಿ ಫೈನಲ್, ಕೇಪ್ ಟೌನ್


ಇದನ್ನೂ ಓದಿ: IND vs SA: ಭಾರತ-ಆಫ್ರಿಕಾ ಕೊನೆಯ ಟಿ20 ಪಂದ್ಯ, ಟೀಂ ಇಂಡಿಯಾದ ಇಬ್ಬರು ಸ್ಟಾರ್​ ಪ್ಲೇಯರ್ಸ್​ಗಳಿಗೆ ವಿಶ್ರಾಂತಿ


ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಇದುವರೆಗೆ ಒಮ್ಮೆ ಮಾತ್ರ ಫೈನಲ್ ತಲುಪಿದೆ. 2020 ರಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ ಭಾರತವನ್ನು 85 ರನ್‌ಗಳಿಂದ ಸೋಲಿಸಿತು. ಈ ಬಾರಿ ಪ್ರಚಂಡ ಫಾರ್ಮ್‌ನಲ್ಲಿರುವ ಟೀಂ ಇಂಡಿಯಾಗೆ ಟಿ20 ವಿಶ್ವಕಪ್ ಗೆಲ್ಲುವ ಅವಕಾಶವಿದೆ.

Published by:shrikrishna bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು