• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • T20 World Cup 2023: ಸೋತ ಬಳಿಕ ಮೈದಾನದಲ್ಲಿಯೇ ಚಿಕ್ಕ ಮಗುವಿನಂತೆ ಕಣ್ಣೀರಿಟ್ಟ ಟೀಂ ಇಂಡಿಯಾ ನಾಯಕಿ, ವಿಡಿಯೋ ವೈರಲ್

T20 World Cup 2023: ಸೋತ ಬಳಿಕ ಮೈದಾನದಲ್ಲಿಯೇ ಚಿಕ್ಕ ಮಗುವಿನಂತೆ ಕಣ್ಣೀರಿಟ್ಟ ಟೀಂ ಇಂಡಿಯಾ ನಾಯಕಿ, ವಿಡಿಯೋ ವೈರಲ್

ಹರ್ಮನ್‌ಪ್ರೀತ್ ಕೌರ್

ಹರ್ಮನ್‌ಪ್ರೀತ್ ಕೌರ್

IND vs AUS Match: ಮತ್ತೊಮ್ಮೆ ಭಾರತ ಮಹಿಳಾ ಕ್ರಿಕೆಟ್ ತಂಡ ವಿಶ್ವಕಪ್‌ನಿಂದ ಬರಿಗೈಯಲ್ಲಿ ಮರಳಲಿದೆ. ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋಲನ್ನಪ್ಪಿದೆ.

  • Share this:

ಭಾರತ ಮಹಿಳಾ ಕ್ರಿಕೆಟ್ ತಂಡ ವಿಶ್ವಕಪ್‌ನಿಂದ (T20 World Cup 2023) ಬರಿಗೈಯಲ್ಲಿ ಮರಳಲಿದೆ. ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ (IND vs AUS) ಸೋಲನ್ನಪ್ಪಿದೆ. ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ (Harmanpreet Kaur) ಅನಾರೋಗ್ಯದ ನಡುವೆಯೂ ಸೆಮಿಫೈನಲ್ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಬಾರಿಸಿದರು. ಆದರೆ, ರನೌಟ್ ಆದ ಕಾರಣ ಭಾರತ ಗೆಲ್ಲಲು ಸಾಧ್ಯವಾಗಲಿಲ್ಲ. ಈ ಸೋಲಿನ ನೋವನ್ನು ಮರೆಮಾಚಲು ಅವರು ಸಾಕಷ್ಟು ಪ್ರಯತ್ನಿಸಿದರು. ಅದಕ್ಕಾಗಿಯೇ ಪಂದ್ಯದ ನಂತರ ಮಾತನಾಡುವ ವೇಳೆ ಕಪ್ಪು ಕನ್ನಡಕವನ್ನು ಧರಿಸಿ ಬಂದಿದ್ದರು. ಆದರೆ, ಅವರು ಮಾಜಿ ನಾಯಕಿ ಅಂಜುಮ್ ಚೋಪ್ರಾ (Anjum Chopra) ಅವರನ್ನು ಭೇಟಿಯಾದಾಗ, ತಮ್ಮ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗದೇ ಅವರನ್ನು ತಬ್ಬಿಕೊಂಡು ಕಣ್ಣೀರಿಟ್ಟಿದ್ದಾರೆ. ಆ ಸಮಯದಲ್ಲಿ ಹರ್ಲೀನ್ ಡಿಯೋಲ್ (Harleen Deol) ಕೂಡ ನಾಯಕಿಗೆ ಸಾಂತ್ವನ ಹೇಳಿದ್ದಾರೆ.


ಕಣ್ಣೀರಿಟ್ಟ ಹರ್ಮನ್​:


ಹರ್ಮನ್‌ಪ್ರೀತ್ ಕೌರ್ ಮತ್ತು ಅಂಜುಮ್ ಚೋಪ್ರಾಗೆ ಸಂಬಂಧಿಸಿದ ಭಾವನಾತ್ಮಕ ವಿಡಿಯೋವನ್ನು ಐಸಿಸಿ ತನ್ನ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ. ಅಂಜುಮ್ ಚೋಪ್ರಾ ಅವರನ್ನು ಭೇಟಿಯಾದ ತಕ್ಷಣ ಹರ್ಮನ್‌ಪ್ರೀತ್ ತನ್ನ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಕೌರ್ ಅವರನ್ನು ತಬ್ಬಿಕೊಂಡು ಚಿಕ್ಕ ಮಗುವಿನಂತೆಯೇ ಕಣ್ಣೀರಿಟ್ಟಿದ್ದಾರೆ. ಮತ್ತೊಂದೆಡೆ, ಟಿ 20 ವಿಶ್ವಕಪ್‌ನಲ್ಲಿ ಕಾಮೆಂಟರಿಗಾಗಿ ತಲುಪಿದ ಭಾರತದ ಮಾಜಿ ನಾಯಕಿ ಅಂಜುಮ್ ಕೂಡ ಹರ್ಮನ್‌ಪ್ರೀತ್‌ ಅವರಿಗೆ ಸಮಾಧಾನ ಮಾಡಿದರು.

View this post on Instagram


A post shared by ICC (@icc)

ಈ ವಿಡಿಯೋದಲ್ಲಿ ಅಂಜುಮ್ ಚೋಪ್ರಾ ಕೂಡ ತನ್ನ ಕಣ್ಣೀರನ್ನು ತಡೆದುಕೊಳ್ಳಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ಹರ್ಮನ್‌ಪ್ರೀತ್ ಕೌರ್ ಬಗ್ಗೆ ಕೇಳಿದಾಗ, ಭಾರತ ತಂಡ ಹಲವು ಬಾರಿ ಸೆಮಿಫೈನಲ್ ತಲುಪಿ ಸೋತಿದೆ. ಅವರ ಈ ರೀತಿಯ ಬ್ಯಾಟಿಂಗ್ ಅನ್ನು ನಾನು ಮೊದಲ ಬಾರಿಗೆ ನೋಡಿದ್ದೇನೆ. ಹರ್ಮನ್‌ಪ್ರೀತ್ ತನ್ನ ಗಾಯ ಮತ್ತು ಆರೋಗ್ಯದೊಂದಿಗೆ ಹೋರಾಡುತ್ತಿರುವಾಗ ಹೇಗೆ ಕ್ರಿಕೆಟ್ ಆಡಿದ್ದಾರೆ ಎಂಬುದನ್ನು ನಾನು ಈ ಹಿಂದೆ ನೋಡಿದ್ದೇನೆ ಎಂದಿದ್ದಾರೆ.


ಇದನ್ನೂ ಓದಿ: Virat Kohli: ಕನಸಿನ ಮನೆ ಖರೀದಿಸಿದ ವಿರಾಟ್ ಕೊಹ್ಲಿ, ಬೆಲೆ ಎಷ್ಟು ಗೊತ್ತೇ? ಫೋಟೋಸ್​ ನೋಡಿದ್ರೆ ಫಿದಾ ಆಗ್ತೀರಾ!


ಹರ್ಮನ್‌ಪ್ರೀತ್ ಹಿಂದೆ ಸರಿಯುವ ಆಟಗಾರ್ತಿಯಲ್ಲ:


ಇನ್ನು, ಹರ್ಮನ್​ ಕುರಿತು ಮಾಜಿ ನಾಯಕಿ ಅಂಜುಮ್ ಮಾತನಾಡಿದ್ದು, ‘ಬಹುಶಃ ಹರ್ಮನ್‌ಪ್ರೀತ್ ಕೌರ್ ಕೂಡ ಆಡುವುದಿಲ್ಲ ಎಂದು ಎಲ್ಲರೂ ಭಾವಿಸಿದ್ದರು. ಅವರ ಆರೋಗ್ಯ ಕೆಟ್ಟಿತ್ತು. ಆದರೆ ಅವರು ಸೆಮೀಸ್​ ಆದ ಕಾರಣ ಮೈದಾನಕ್ಕಿಳಿದರು. ಮೊದಲ 20 ಓವರ್‌ಗಳನ್ನು ಫೀಲ್ಡಿಂಗ್ ಮಾಡುವುದು. ಆ ಬಳಿಕ ಅರ್ಧಶತಕ ಕೂಡ ಬಾರಿಸುವುದು ಅಷ್ಟು ಸುಲಭದ ಮಾತಲ್ಲ. ಕೊನೆಯವರೆಗೂ ಭಾರತದ ಭರವಸೆಯನ್ನು ಜೀವಂತವಾಗಿ ಉಳಿಸಿಕೊಂಡಿದ್ದರು. ಅವರಿಗೆ ಜೆಮಿಮಾ ರಾಡ್ರಿಗಸ್ ಬೆಂಬಲವೂ ಸಿಕ್ಕಿತು. ಈ ಪಂದ್ಯದಲ್ಲಿ ಭಾರತ 5 ರನ್‌ಗಳಿಂದ ಸೋತಿದೆ. ಆಹೀಗಾಗಿ ಅವಳ ಹೃದಯದಲ್ಲಿ ಏನಾಗುತ್ತಿದೆ ಎಂದು ನಾನು ಅರ್ಥಮಾಡಿಕೊಳ್ಳಬಲ್ಲೆ. ಇದು ಇಬ್ಬರು ಆಟಗಾರರ ನಡುವಿನ ವಿಶೇಷ ಕ್ಷಣ‘ ಎಂದು ಹೇಳಿದ್ದಾರೆ.
ಪಂದ್ಯದ ಬಳಿಕ ಭಾವುಕರಾದ ಹರ್ಮನ್​:


ಹೌದು, ಪಂದ್ಯದ ಬಳಿಕ ಮಾತನಾಡುವಾಗ ಭಾವುಕರಾದ ಟೀಂ ಇಂಡಿಯಾ ನಾಯಕಿ ಹರ್ಮನ್​ ಪ್ರೀತ್ ಕೌರ್​, ನನ್ನ ಕಣ್ಣಲ್ಲಿ ನೀರು ಬರುವುದನ್ನು ದೇಶ ನೋಡುವುದು ಬೇಡ ಎಂದು ಕನ್ನಡಕ ಹಾಕಿಕೊಂಡು ಇಲ್ಲಿಗೆ ಬಂದಿದ್ದೇನೆ. ಆದರೆ ನಾವು ಆಟವನ್ನು ಸುಧಾರಿಸುತ್ತೇವೆ ಮತ್ತು ದೇಶಕ್ಕೆ ಮತ್ತೊಮ್ಮೆ ಈ ರೀತಿಯ ನಿರಾಸೆಗೆ ಅವಕಾಶ ನೀಡುವುದಿಲ್ಲ ಎಂದು ನಾನು ಭರವಸೆ ನೀಡುತ್ತೇನೆ ಎಂದು ಹರ್ಮನ್‌ಪ್ರೀತ್ ಹೇಳಿದ್ದಾರೆ.

Published by:shrikrishna bhat
First published: