ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಮಹಿಳೆಯರ ಟಿ20 ವಿಶ್ವಕಪ್ 2023 (Womens T20 World Cup) ಫೈನಲ್ ತಲುಪಿದೆ. ಇಂದು ಕೇಪ್ ಟೌನ್ ಮೈದಾನದಲ್ಲಿ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾವನ್ನು (AUS vs SA) ಎದುರಿಸಲಿದೆ. ಸೂಪರ್ ಫಾರ್ಮ್‌ನಲ್ಲಿರುವ ಆಸ್ಟ್ರೇಲಿಯಾ ಒಂದೇ ಒಂದು ಪಂದ್ಯವನ್ನು ಸೋಲದೆ ಫೈನಲ್ ತಲುಪಿದೆ. ಲೀಗ್ ಹಂತದಲ್ಲಿ ದಕ್ಷಿಣ ಆಫ್ರಿಕಾ ಶ್ರೀಲಂಕಾ ಮತ್ತು ಆಸೀಸ್ ವಿರುದ್ಧ ಸೋತಿತ್ತು. ಆ ಬಳಿಕ ಸೆಮೀಸ್‌ನಲ್ಲಿ ಕಠಿಣ ಎದುರಾಳಿ ಇಂಗ್ಲೆಂಡ್ ವಿರುದ್ಧ ಅಮೋಘ ಜಯ ಸಾಧಿಸಿ ಚೊಚ್ಚಲ ಬಾರಿಗೆ ಫೈನಲ್ ಪ್ರವೇಶಿಸಿತ್ತು. ಮೊದಲ ಸೆಮಿಫೈನಲ್‌ನಲ್ಲಿ ಭಾರತವನ್ನು ಸೋಲಿಸಿದ ಆಸೀಸ್ ಫೈನಲ್‌ಗೆ ಅರ್ಹತೆ ಗಳಿಸಿತು. ಇಂದು ಸಂಜೆ 6.30 ISTಕ್ಕೆ ಫೈನಲ್ ಫೈಟ್ ಆರಂಭವಾಗಲಿದೆ.
ಆಸೀಸ್ 7 ಬಾರಿ ಚಾಂಪಿಯನ್:
ಇಲ್ಲಿಯವರೆಗೆ ಮಹಿಳಾ ಟಿ20 ವಿಶ್ವಕಪ್ 9 ಬಾರಿ ನಡೆದಿದ್ದು, ಆ ಪೈಕಿ ಆಸ್ಟ್ರೇಲಿಯಾ 7 ಬಾರಿ ಚಾಂಪಿಯನ್ ಆಗಿದೆ. ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳು ಒಮ್ಮೆ ಪ್ರಶಸ್ತಿ ಗೆದ್ದಿವೆ. ಇದರಿಂದ ಟಿ20 ಮಾದರಿಯಲ್ಲಿ ಆಸ್ಟ್ರೇಲಿಯ ಹೇಗೆ ಪ್ರಾಬಲ್ಯ ಹೊಂದಿದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ಅಲಿಸ್ಸಾ ಹೀಲಿ, ಬೆತ್ ಮೂನಿ, ಪೆರ್ರಿ, ಗಾರ್ಡ್ ಕ್ನರ್, ಮೆಗ್ ಲ್ಯಾನಿಂಗ್ ಮತ್ತು ತಾಲಿಯಾ ಮೆಕ್‌ಗ್ರಾತ್ ಅವರ ಬ್ಯಾಟಿಂಗ್ ಭರ್ಜರಿಯಾಗಿದೆ. ಬೌಲಿಂಗ್‌ನಲ್ಲಿ ಮೇಗನ್ ಶುಟ್, ಬ್ರೌನ್ ಮತ್ತು ಜೊನಾಸೆನ್ ಬಲಿಷ್ಠರಾಗಿ ಗುರುತಿಸಿಕೊಂಡಿದ್ದಾರೆ. ಈ ಫೈನಲ್‌ನಲ್ಲಿಯೂ ಆಸೀಸ್ 8ನೇ ಬಾರಿ ವಿಶ್ವ ಚಾಂಪಿಯನ್ ಆಗುವ ಸಾಧ್ಯತೆ ಇದೆ.
Will South Africa's bowlers manage to contain Australia's destructive batting lineup in the #T20WorldCup Final? 🤔
Key match-ups ➡️ https://t.co/uo92pXRpca #TurnItUp | #AUSvSA pic.twitter.com/a7lTdYA91l
— ICC (@ICC) February 26, 2023
ಲೀಗ್ ಹಂತದಲ್ಲಿ ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಅನಿರೀಕ್ಷಿತವಾಗಿ ಸೋತಿತ್ತು. ಬಳಿಕ ಆಸೀಸ್ ಎದುರು ಸೋತಿತ್ತು. ಈ ಹಂತದಲ್ಲಿ ದಕ್ಷಿಣ ಆಫ್ರಿಕಾ ಫೈನಲ್ ತಲುಪುತ್ತದೆ ಎಂದು ಯಾರೂ ಭಾವಿಸಿರಲಿಲ್ಲ. ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ವಿರುದ್ಧ ಗೆದ್ದ ನಂತರ ಸಫಾರಿ ತಂಡ ನೆಟ್ ರನ್ ರೇಟ್ ಮೂಲಕ ಸೆಮೀಸ್ ತಲುಪಿದೆ. ಮತ್ತು ಸೆಮೀಸ್‌ನಲ್ಲಿ, ಇಸ್ಮಾಯಿಲ್ ಮತ್ತು ಅಯಾಬೊಂಗಾ ಖಾಖಾ ಅವರ ಬೌಲಿಂಗ್ ಪ್ರದರ್ಶನದೊಂದಿಗೆ ವೀರೋಚಿತ ಬ್ಯಾಟಿಂಗ್ ಸೇರಿಸುವ ಮೂಲಕ ಲಾರಾ, ಬ್ರಿಟ್ಸ್ ಮತ್ತು ಕ್ಯಾಪ್ ಇಂಗ್ಲೆಂಡ್ ವಿರುದ್ಧ ಸ್ಮರಣೀಯ ಗೆಲುವು ಪಡೆದರು.
ಇದನ್ನೂ ಓದಿ: Sarah Taylor: ಮಗುವಿನ ನಿರೀಕ್ಷೆಯಲ್ಲಿ ಲೆಸ್ಬಿಯನ್ ಕ್ರಿಕೆಟ್ ಆಟಗಾರ್ತಿ, ಇವ್ರು ಕೊಹ್ಲಿಗೂ ಪ್ರಪೋಸ್ ಮಾಡಿದ್ರು!
ತವರಿನ ಪ್ರೇಕ್ಷಕರ ಮುಂದೆ ಆಡುವುದು ದಕ್ಷಿಣ ಆಫ್ರಿಕಾಕ್ಕೆ ಪ್ಲಸ್ ಆಗಿದೆ. ಅಲ್ಲದೇ ಟಿ20 ಮಾದರಿಯಲ್ಲಿ ಆಸೀಸ್ ಪ್ರಾಬಲ್ಯದ ಮುಂದೆ ದಕ್ಷಿಣ ಆಫ್ರಿಕಾ ಗೆಲ್ಲುತ್ತದೆಯೇ ಎಂದು ನೋಡಬೇಕಿದೆ. ದಕ್ಷಿಣ ಆಫ್ರಿಕಾ ಪುರುಷರ ಕ್ರಿಕೆಟ್ ಆದರೆ ಮಹಿಳಾ ಕ್ರಿಕೆಟ್ ಇದುವರೆಗೂ ವಿಶ್ವಕಪ್ ಗೆದ್ದಿಲ್ಲ. ಫೈನಲ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಗೆದ್ದರೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಇತಿಹಾಸದಲ್ಲಿ ಅದೊಂದು ಸುವರ್ಣ ಅಧ್ಯಾಯವಾಗಲಿದೆ. ಈ ಪಂದ್ಯಕ್ಕೆ ಎರಡೂ ತಂಡಗಳು ಯಾವುದೇ ಬದಲಾವಣೆ ಇಲ್ಲದೆ ಕಣಕ್ಕೆ ಇಳಿಯುವ ಸಾಧ್ಯತೆ ಇದೆ.
ಉಭಯ ತಂಡಗಳ ಹೆಡ್ ಟು ಹೆಡ್:
ಈ ಎರಡು ತಂಡಗಳ ನಡುವೆ ಇದುವರೆಗೆ 5 ಅಂತಾರಾಷ್ಟ್ರೀಯ ಪಂದ್ಯಗಳು ನಡೆದಿವೆ. ಈ ಎಲ್ಲಾ ಐದು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಿದೆ. ಹೀಗಾಗಿ ಇಂದೂ ಸಹ ಆಸೀಸ್ ಗೆಲ್ಲುವ ಮೆಚ್ಚಿನ ತಂಡವಾಗಿದೆ.
AUS vs SA ಸಂಭಾವ್ಯ ಪ್ಲೇಯಿಂಗ್ 11:
ಆಸ್ಟ್ರೇಲಿಯಾ ಸಂಭಾವ್ಯ ಪ್ಲೇಯಿಂಗ್ 11: ಅಲಿಸ್ಸಾ ಹ್ಯಾಲಿ, ಬೆತ್ ಮೂನಿ, ಮೆಗ್ ಲ್ಯಾನಿಂಗ್ (ಕ್ಯಾಪ್ಟನ್), ಆಶ್ ಗಾರ್ಡ್ನರ್, ಎಲಿಸಾ ಪೆರ್ರಿ, ತಾಲಿಯಾ ಮೆಕ್‌ಗ್ರಾತ್, ಗ್ರೇಸ್ ಹ್ಯಾರಿಸ್, ಜಾರ್ಜಿಯಾ/ಅಲಾನಾ ಕಿಂಗ್, ಜೆಸ್ ಜೊನಾಸೆನ್, ಮೇಗನ್ ಷುಟ್, ಬ್ರೌನ್.
ದಕ್ಷಿಣ ಆಫ್ರಿಕಾ ಸಂಭಾವ್ಯ ಪ್ಲೇಯಿಂಗ್ 11: ಸುನೆ ಲೂಸ್ (ಕ್ಯಾಪ್ಟನ್), ಲಾರಾ ವೊಲ್ವರ್ಡ್, ಬ್ರಿಟ್ಸ್, ಕ್ಯಾಪ್, ಟ್ರಯಾನ್, ಬೋಶ್, ಡಿ ಕ್ಲರ್ಕ್, ಸಿನಾಲೋವಾ ಜಫ್ತಾ, ಶಬ್ನಿಮ್ ಇಸ್ಮಾಯಿಲ್, ಅಯಾಬೊಂಗಾ ಖಾಖಾ, ನಾನ್ ಕುಲೆಲೊಕ್ಕೊ ಮ್ಲಾಬಾ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ