• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • Women's T20 World Cup 2023: ಇಂದಿನಿಂದ ಮಹಿಳಾ ಟಿ20 ವಿಶ್ವಕಪ್​ ಆರಂಭ, ಟೀಂ ಇಂಡಿಯಾ ಮೊದಲ ಪಂದ್ಯ ಯಾವಾಗ? ಇಲ್ಲಿದೆ ವಿವರ

Women's T20 World Cup 2023: ಇಂದಿನಿಂದ ಮಹಿಳಾ ಟಿ20 ವಿಶ್ವಕಪ್​ ಆರಂಭ, ಟೀಂ ಇಂಡಿಯಾ ಮೊದಲ ಪಂದ್ಯ ಯಾವಾಗ? ಇಲ್ಲಿದೆ ವಿವರ

ಮಹಿಳಾ ವಿಶ್ವಕಪ್ 2023

ಮಹಿಳಾ ವಿಶ್ವಕಪ್ 2023

Women's T20 World Cup 2023: ಮಹಿಳೆಯರ T20 ವಿಶ್ವಕಪ್ ಇಂದಿನಿಂದ ದಕ್ಷಿಣ ಆಫ್ರಿಕಾದಲ್ಲಿ ಪ್ರಾರಂಭವಾಗಲಿದೆ. 10 ತಂಡಗಳ ನಡುವೆ ಒಟ್ಟು 23 ಪಂದ್ಯಗಳು ನಡೆಯಲಿದೆ. ಇದೇ ಫೆ.12ರಂದು ಭಾರತ ಮೊದಲ ಪಂದ್ಯ ಆಡಲಿದೆ.

  • Share this:

ಮಹಿಳೆಯರ ಟಿ20 ವಿಶ್ವಕಪ್ (Women's T20 World Cup 2023) ಇಂದಿನಿಂದ ದಕ್ಷಿಣ ಆಫ್ರಿಕಾದಲ್ಲಿ (South Africa) ಪ್ರಾರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಶ್ರೀಲಂಕಾ (SA vs SL) ವಿರುದ್ಧ ಕೇಪ್‌ಟೌನ್‌ನಲ್ಲಿ ಸೆಣಸಲಿದೆ. ಇದು ಟೂರ್ನಿಯ 8ನೇ ಸೀಸನ್ ಆಗಿದೆ. 17 ದಿನಗಳ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಒಟ್ಟು 10 ತಂಡಗಳು ಭಾಗವಹಿಸುತ್ತಿವೆ. ಇವರ ನಡುವೆ ಒಟ್ಟು 23 ಪಂದ್ಯಗಳು ನಡೆಯಲಿವೆ. ಆಸ್ಟ್ರೇಲಿಯಾ (Australia) ಹಾಲಿ ಚಾಂಪಿಯನ್ ಆಗಿದೆ. ಅವರು 2020ರಲ್ಲಿ ತಮ್ಮ ತವರು ಪಂದ್ಯಾವಳಿಯಲ್ಲಿ ಭಾರತವನ್ನು ಸೋಲಿಸುವ ಮೂಲಕ ಪ್ರಶಸ್ತಿಯನ್ನು ಗೆದ್ದರು. ಹಾಗಿದ್ದರೆ ಸರಣಿಯ ವೇಳಾಪಟ್ಟಿ, ಬಾರತದ ಮೊದಲ ಪಂದ್ಯ ಯಾವಾಗ ಎಂಬ ಮಾಹಿತಿ ಇಲ್ಲಿದೆ ನೋಡಿ.


ವಿಶೇಷವಾಗಿದೆ ಈ ಬಾರಿ ವಿಶ್ವಕಪ್:


ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ, ಫೀಲ್ಡ್ ಅಂಪೈರ್‌ನಿಂದ ಮ್ಯಾಚ್ ಆಫೀಸರ್‌ವರೆಗೆ ಮಹಿಳೆಯರು ಪ್ರತಿಯೊಂದು ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ 19 ವರ್ಷದೊಳಗಿನವರ ಮಹಿಳಾ ಟಿ20 ವಿಶ್ವಕಪ್ ದಕ್ಷಿಣ ಆಫ್ರಿಕಾದಲ್ಲಿ ನಡೆದಿತ್ತು. ಭಾರತ ಚೊಚ್ಚಲ ಬಾರಿ ವಿಶ್ವಕಪ್​ ಗೆದ್ದಿದೆ. ಮಹಿಳಾ ಟಿ20 ವಿಶ್ವಕಪ್‌ನ ಬಹುತೇಕ ಪಂದ್ಯಗಳು, ಸೆಮಿಫೈನಲ್ ಮತ್ತು ಫೈನಲ್ ಎರಡೂ ಕೇಪ್ ಟೌನ್‌ನಲ್ಲಿ ನಡೆಯಲಿವೆ. ಇದಲ್ಲದೇ ಕೆಲವು ಪಂದ್ಯಗಳು ಪಾರ್ಲ್‌ನ ಬೋಲ್ಯಾಂಡ್ ಪಾರ್ಕ್‌ನಲ್ಲಿ ಮತ್ತು 5 ಪಂದ್ಯಗಳು ಪೋರ್ಟ್ ಎಲಿಜಬೆತ್‌ನ (ಎಬೆರೆಹಾ) ಸೇಂಟ್ ಜಾರ್ಜ್ ಪಾರ್ಕ್‌ನಲ್ಲಿ ನಡೆಯಲಿವೆ.


ಭಾರತ ಪಂದ್ಯ ಯಾವಾಗ?:


ಹರ್ಮನ್‌ಪ್ರೀತ್ ನಾಯಕತ್ವದಲ್ಲಿ ಭಾರತ ಕ್ರಿಕೆಟ್ ತಂಡ ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಫೆಬ್ರವರಿ 12 ರಂದು ಕೇಪ್ ಟೌನ್‌ನಲ್ಲಿ ಆಡಲಿದೆ. ಇದಲ್ಲದೇ ಫೆ.15ರಂದು ವೆಸ್ಟ್ ಇಂಡೀಸ್ ವಿರುದ್ಧ ಇದೇ ಮೈದಾನದಲ್ಲಿ ಮತ್ತೊಂದು ಪಂದ್ಯ ನಡೆಯಲಿದೆ. ಮತ್ತೊಂದೆಡೆ, ಫೆಬ್ರವರಿ 18 ಮತ್ತು 20 ರಂದು ಪೋರ್ಟ್ ಎಲಿಜಬೆತ್‌ನಲ್ಲಿ ಇಂಗ್ಲೆಂಡ್ ಮತ್ತು ಐರ್ಲೆಂಡ್ ಮುಖಾಮುಖಿಯಾಗಲಿದೆ.


ಇದನ್ನೂ ಓದಿ: Ravindra Jadeja: ಬಾಲ್‌ ಟ್ಯಾಂಪರಿಂಗ್‌ ಮಾಡಿದ್ರಾ ಜಡೇಜಾ? ಐಸಿಸಿಯಿಂದ ಬ್ಯಾನ್ ಆಗ್ತಾರಾ ಜಡ್ಡು-ಸಿರಾಜ್​?


10 ತಂಡಗಳನ್ನು 2 ಗುಂಪು:


ಒಟ್ಟು 10 ತಂಡಗಳು ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಲಿವೆ. A ಗುಂಪಿನಲ್ಲಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಶ್ರೀಲಂಕಾ, ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ಸೇರಿವೆ. ಅದೇ ಸಮಯದಲ್ಲಿ, B ಗುಂಪಿನಲ್ಲಿ ಇಂಗ್ಲೆಂಡ್, ಭಾರತ, ಪಾಕಿಸ್ತಾನ, ವೆಸ್ಟ್ ಇಂಡೀಸ್ ಮತ್ತು ಐರ್ಲೆಂಡ್ ತಂಡಗಳಿವೆ. ಪ್ರತಿ ತಂಡವು ತನ್ನ ಗುಂಪಿನ ಇತರ 4 ತಂಡಗಳ ವಿರುದ್ಧ ತಲಾ ಒಂದು ಪಂದ್ಯವನ್ನು ಆಡುತ್ತದೆ. ಪ್ರತಿ ಗುಂಪಿನಿಂದ ಅಗ್ರ 2 ತಂಡಗಳು ಫೆಬ್ರವರಿ 23 ಮತ್ತು 24 ರಂದು ಸೆಮಿಫೈನಲ್ ಪ್ರವೇಶಿಸಲಿವೆ. ಟಿ20 ವಿಶ್ವಕಪ್‌ನ ಫೈನಲ್ ಪಂದ್ಯ ಫೆಬ್ರವರಿ 26 ರಂದು ನಡೆಯಲಿದೆ. ಪ್ರಶಸ್ತಿ ಪಂದ್ಯಕ್ಕೆ ಒಂದು ದಿನದ ಮೀಸಲು ದಿನವನ್ನೂ ಇಡಲಾಗಿದೆ.
ಭಾರತ ಸೇಮಿಸ್​ ಫಿಕ್ಸ್:


ಆತಿಥೇಯರಾಗಿರುವುದರಿಂದ, ದಕ್ಷಿಣ ಆಫ್ರಿಕಾವು ಮಹಿಳೆಯರ T20 ವಿಶ್ವಕಪ್‌ಗೆ ನೇರವಾಗಿ ಅರ್ಹತೆ ಪಡೆಯಿತು. ಜೊತೆಗೆ 30 ನವೆಂಬರ್ 2021ರ ಶ್ರೇಯಾಂಕದ ಪ್ರಕಾರ ಟಾಪ್ 7 ತಂಡಗಳಿಗೆ ಸೇರಿಕೊಂಡಿದೆ. ಉಳಿದ ಎರಡು ಸ್ಥಾನಗಳಿಗಾಗಿ 37 ದೇಶಗಳ ನಡುವೆ ಅರ್ಹತಾ ಪಂದ್ಯಗಳನ್ನು ಆಡಲಾಯಿತು, ಬಾಂಗ್ಲಾದೇಶ ಮತ್ತು ಐರ್ಲೆಂಡ್ ಮುಖ್ಯ ಸುತ್ತಿಗೆ ಪ್ರವೇಶಿಸಿದವು. ಭಾರತ ತಂಡದ ಇತ್ತೀಚಿನ ಫಾರ್ಮ್ ಅನ್ನು ನೋಡಿದರೆ ಸೆಮಿಫೈನಲ್ ತಲುಪುವ ನಿರೀಕ್ಷೆಯಿದೆ. ಭಾರತದ ಗುಂಪಿನಲ್ಲಿ ಇಂಗ್ಲೆಂಡ್ ಮಾತ್ರ ಬಲಿಷ್ಠವಾಗಿದೆ. ಪಾಕಿಸ್ತಾನದ ಉಳಿದ ಭಾಗಗಳಲ್ಲಿ ಭಾರತ ತಂಡವು ವೆಸ್ಟ್ ಇಂಡೀಸ್ ಅನ್ನು ಸೋಲಿಸುವ ಶಕ್ತಿ ಹೊಂದಿದೆ.


ಆಸ್ಟ್ರೇಲಿಯಾದ ಪ್ರಬಲ ಸ್ಪರ್ಧಿ:


ಆಸ್ಟ್ರೇಲಿಯಾ ಮಹಿಳಾ ಟಿ20 ವಿಶ್ವಕಪ್ ಅನ್ನು ಅತಿ ಹೆಚ್ಚು ಬಾರಿ ಗೆದ್ದಿದೆ. ಆಸ್ಟ್ರೇಲಿಯಾ 5 ಬಾರಿ ಚಾಂಪಿಯನ್ ಆಗಿದೆ. 2009 ರಲ್ಲಿ ಇಂಗ್ಲೆಂಡ್ ಮತ್ತು 2016 ರಲ್ಲಿ ವೆಸ್ಟ್ ಇಂಡೀಸ್ ಚಾಂಪಿಯನ್ ಆದವು. ಭಾರತ ಇದುವರೆಗೆ ಆಡಿದ 7 ಟಿ20 ವಿಶ್ವಕಪ್‌ಗಳಲ್ಲಿ 3 ಬಾರಿ ಸೆಮಿಫೈನಲ್‌ಗೆ ಮತ್ತು ಒಮ್ಮೆ ಫೈನಲ್‌ಗೆ ಪ್ರವೇಶಿಸಿದೆ. 2020ರ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಫೈನಲ್ ಪಂದ್ಯ ಆಡಿದೆ. 2012, 2014 ಮತ್ತು 2016ರಲ್ಲಿ ಭಾರತ ಗುಂಪು ಹಂತದಲ್ಲಿಯೇ ಹೊರಬಿದ್ದಿತ್ತು.

Published by:shrikrishna bhat
First published: