ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ 19 ವರ್ಷದೊಳಗಿನವರ ಮಹಿಳಾ ಟಿ20 ವಿಶ್ವಕಪ್ನಲ್ಲಿ (WU19 T20 WC) ಭಾರತ ಮಹಿಳಾ ತಂಡ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದೆ. ಮಾರಕ ಬೌಲಿಂಗ್‌ನ ದಾಳಿಯಿಂದ ಫೈನಲ್‌ನಲ್ಲಿ ಟೀಂ ಇಂಡಿಯಾ (Team India) ಕೇವಲ 68 ರನ್‌ಗಳಿಗೆ ಇಂಗ್ಲೆಂಡ್ (IND vs ENG) ತಂಡವನ್ನು ಕಟ್ಟಿಹಾಕಿತು. ಇದಾದ ಬಳಿಕ ಬ್ಯಾಟಿಂಗ್ ಮಾಡಿದ ಭಾರತ ಮಹಿಳಾ ತಂಡ 14ನೇ ಓವರ್‌ನಲ್ಲಿ 3 ವಿಕೆಟ್ ನಷ್ಟಕ್ಕೆ 69 ರನ್ಗಳಿಸುವ ಮೂಲಕ ವಿಶ್ವಕಪ್ ಟ್ರೋಫಿ ಗೆದ್ದು ದಾಖಲೆ ನಿರ್ಮಿಸಿತು. ಟಾಸ್ ಸೋತ ಇಂಗ್ಲೆಂಡ್ ತಂಡ ಮೊದಲು ಭಾರತದ ವಿರುದ್ಧ ಬ್ಯಾಟಿಂಗ್ ಮಾಡಿತು. ಈ ವೇಳೆ ಭಾರತೀಯರ ಬೌಲಿಂಗ್ ದಾಳಿಗೆ ನಲುಗಿದ ಆಂಗ್ಲ ತಂಡ ಅಲ್ಪ ಮೊತ್ತಕ್ಕೆ ಕುಸಿಯಿತು. ಈ ಮೂಲಕ ಭಾರತ ನಿರಾಯಾಸವಾಗಿ ಪಂದ್ಯವನ್ನು ಗೆಲ್ಲುವ ಮೂಲಕ ವಿಶ್ವಕಪ್ಗೆ ಮುತ್ತಿಕ್ಕಿತು.
ಇತಿಹಾಸ ಸೃಷ್ಟಿಸಿದ ಟೀಂ ಇಂಡಿಯಾ:
ಐಸಿಸಿ ಆಯೋಜಿಸಿದ್ದ ಮೊದಲ ಐಸಿಸಿ ಅಂಡರ್-19 ಮಹಿಳಾ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಏಕಪಕ್ಷೀಯ ಜಯ ದಾಖಲಿಸಿದೆ. ಶೆಫಾಲಿ ವರ್ಮಾ ಅವರ ಭಾರತ ತಂಡ ಬಿರುಸಿನ ಆಟ ಪ್ರದರ್ಶಿಸಿ ಟ್ರೋಫಿ ಗೆಲ್ಲುವುದರೊಂದಿಗೆ ಇತಿಹಾಸದ ಪುಟಗಳಲ್ಲಿ ತನ್ನ ಹೆಸರನ್ನು ದಾಖಲಿಸಿದೆ. ಚೊಚ್ಚಲ ವಿಶ್ವಕಪ್ ಪ್ರಶಸ್ತಿ ಗೆದ್ದ ಸಾಧನೆ ಇದೀಗ ಈ ತಂಡದ ಹೆಸರಿನಲ್ಲಿದೆ.
𝗖.𝗛.𝗔.𝗠.𝗣.𝗜.𝗢.𝗡.𝗦! 🏆🎉
Meet the winners of the inaugural #U19T20WorldCup
INDIA 🇮🇳 #TeamIndia pic.twitter.com/ljtScy6MXb
— BCCI Women (@BCCIWomen) January 29, 2023
2007 ರಲ್ಲಿ, ಭಾರತ ತಂಡ ICC T20 ವಿಶ್ವಕಪ್‌ನ ಮೊದಲ ಆವೃತ್ತಿಯನ್ನು ಗೆದ್ದುಕೊಂಡಿತು. ತಂಡದ ನಾಯಕತ್ವ ಮಹೇಂದ್ರ ಸಿಂಗ್ ಧೋನಿ ಕೈಯಲ್ಲಿತ್ತು ಮತ್ತು ಯುವ ತಂಡದೊಂದಿಗೆ ಅವರು ದಕ್ಷಿಣ ಆಫ್ರಿಕಾದಲ್ಲಿ ನಡೆದ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿದರು. ದಕ್ಷಿಣ ಆಫ್ರಿಕಾದಲ್ಲಿ ನಡೆದ ಮೊದಲ ಐಸಿಸಿ ಅಂಡರ್-19 ಮಹಿಳಾ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಶಫಾಲಿ ವರ್ಮಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಸಾಲಿಗೆ ಸೇರಿದ್ದಾರೆ. ಇಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ತಂಡವನ್ನು ಸೋಲಿಸಿತು.
ಇದನ್ನೂ ಓದಿ: IND vs AUS 2023: ಗುಡ್ ನ್ಯೂಸ್ ಬೆನ್ನಲ್ಲೇ ಟೀಂ ಇಂಡಿಯಾಗೆ ಬ್ಯಾಡ್ ನ್ಯೂಸ್! ತಂಡಕ್ಕೆ ಸಂಜು ಇನ್, ಬುಮ್ರಾ ಔಟ್!
ಟೀಂ ಇಂಡಿಯಾ ಸಂಘಟಿತ ಹೋರಾಟ:
ಮೊದಲು ಬೌಲಿಂಗ್ನಲ್ಲಿ ಮಿಂಚಿದ ಭಾರತ ತಂಡದ ವನಿತೆಯರು, ಬಳಿಕ ಬ್ಯಾಟಿಂಗ್ನಲ್ಲೂ ಅಬ್ಬರಿಸಿದರು. ಭಾರತ ಮಹಿಳಾ ತಂಡದ ಪರ ಸಾಧು, ಅರ್ಚನಾ ದೇವಿ ಮತ್ತು ಪಾರ್ಶವಿ ಚೋಪ್ರಾ ತಲಾ 2 ವಿಕೆಟ್ ಪಡೆಯುವ ಮೂಲಕ ಇಂಗ್ಲೆಂಡ್ ಕುಸಿತಕ್ಕೆ ಕಾರಣರಾದರು. ಬಳಿಕ ಬ್ಯಾಟಿಂಗ್ನಲ್ಲಿ ಗೊಂಗಡಿ ತ್ರಿಶಾ 28 ಎಸೆತಗಳಲ್ಲಿ 3 ಬೌಂಡರಿ ಸಹಿತ 24 ರನ್ಗಳಿಸಿದರು, ಉಳಿದಂತೆ ಸೌಮ್ಯ ತಿವಾರಿ 37 ಎಸೆತಗಳಲ್ಲಿ 3 ಬೌಂಡರಿ ಸಹಾಯದಿಂದ 24 ರನ್, ನಾಯಕಿ ಶಫಾಲಿ ವರ್ಮಾ 11 ಎಸೆತಗಳಲ್ಲಿ 1 ಬೌಂಡರಿ 1 ಸಿಕ್ಸರ್ ನೆರವಿನಿಂದ 15 ರನ್ ಗಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖರಾದರು.
ಭಾರತ - ಇಂಗ್ಲೆಂಡ್ ಪ್ಲೇಯಿಂಗ್ 11:
ಭಾರತ ತಂಡ: ಶಫಾಲಿ ವರ್ಮಾ (ನಾಯಕಿ), ಶ್ವೇತಾ ಶೆರಾವತ್, ಸೌಮ್ಯ ತಿವಾರಿ, ತ್ರಿಶಾ, ರಿಚಾ ಘೋಷ್, ಬಸು, ಸಾಧು, ಕಶ್ಯಪ್, ಅರ್ಚನಾ ದೇವಿ, ಚೋಪ್ರಾ, ಸೋನಮ್ ಯಾದವ್.
ಇಂಗ್ಲೆಂಡ್ ತಂಡ: ಗ್ರೇಸ್ ಸ್ಕ್ರಿವೆನ್ಸ್ (ಕ್ಯಾಪ್ಟನ್), ಲಿಬರ್ಟಿ ಹೀಪ್, ಹಾಲೆಂಡ್, ಸೆರೀನ್ ಸ್ಮೆಲ್, ಕ್ರಿಸ್ ಪೊವೆಲ್, ರೈನ್ ಮ್ಯಾಕ್‌ಡೊನಾಲ್ಡ್, ಅಲೆಕ್ಸಾ, ಗ್ರೋವ್ಸ್, ಆಂಡರ್ಸನ್, ಸೋಫಿಯಾ ಸ್ಮೆಲ್, ಹನ್ನಾ ಬೇಕರ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ