ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ದೊಡ್ಡ ತಪ್ಪೊಂದನ್ನು ಮಾಡಿದೆ. ಐಸಿಸಿ ವೆಬ್ಸೈಟ್ನಲ್ಲಿನ ದೋಷವು ಆಸ್ಟ್ರೇಲಿಯಾ ತಂಡದ (Australia Team) ಓಟಕ್ಕೆ ಬ್ರೇಕ್ ಹಾಕಿತ್ತು. ಹೌದು, ಭಾರತವನ್ನು ಟೆಸ್ಟ್ನಲ್ಲಿ (Test Cricket) ಕ್ಷಣಮಾತ್ರದಲ್ಲಿ ವಿಶ್ವದ ನಂ.1 ಸ್ಥಾನಕ್ಕೆ ಏರಿಸಿತ್ತು. ಆಸ್ಟ್ರೇಲಿಯಾದ 126 ಅಂಕಗಳು ಇದ್ದರೂ ಸಹ ICCಯು ಟೀಂ ಇಂಡಿಯಾವನ್ನು ನಂಬರ್ 1 ತಂಡವನ್ನಾಗಿ ಮಾಡಿತ್ತು. ಇದರಿಂದಾಗಿ ಭಾರತವನ್ನು (Team india) ಹೊಸ ನಂಬರ್ 1 ತಂಡವಾಗಿತ್ತು. ಅದೇ ಸಮಯದಲ್ಲಿ, ಆಸ್ಟ್ರೇಲಿಯಾ 126 ಬದಲಿಗೆ 111 ಅಂಕಗಳಿಗೆ ಕುಸಿದಿತ್ತು. ಆದಾಗ್ಯೂ, ಸ್ವಲ್ಪ ಸಮಯದ ನಂತರ, ಐಸಿಸಿ ತನ್ನ ತಪ್ಪನ್ನು ಸರಿಪಡಿಸಿಕೊಂಡು ಆಸ್ಟ್ರೇಲಿಯಾವನ್ನು ಮತ್ತೊಮ್ಮೆ ನಂಬರ್ 1 ಎಂದು ವೆಬ್ಸೈಟ್ಲ್ಲಿ ಸರಿಪಡಿಸಿದೆ.
ಟೆಸ್ಟ್ನಲ್ಲಿ ಭಾರತ ನಂಬರ್ 1:
ಐಸಿಸಿ ಮಾಡಿದ ತಪ್ಪು ಭಾರತವನ್ನು ಒಂದು ಕ್ಷಣ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿಸಿತ್ತು. ಆದರೆ ತಪ್ಪನ್ನು ಸರಿಪಡಿಸಿದ ನಂತರ ಭಾರತ 2ನೇ ಸ್ಥಾನಕ್ಕೆ ಬಂದಿತು. ಆದಾಗ್ಯೂ, ಭಾರತವು ಸಹ ನಂಬರ್ 1 ಆಗಬಹುದು, ಆದರೆ ತವರಿನಲ್ಲಿ ಆಸ್ಟ್ರೇಲಿಯಾವನ್ನು 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸೋಲಿಸಬೇಕಾಗಿದೆ. ಫೆಬ್ರವರಿ 9 ರಿಂದ ಪ್ರಾರಂಭವಾಗುವ 4 ಪಂದ್ಯಗಳ ಟೆಸ್ಟ್ ಸರಣಿಯನ್ನು (ಬಾರ್ಡರ್ ಗವಾಸ್ಕರ್ ಟ್ರೋಫಿ) ಆಡಲು ಆಸ್ಟ್ರೇಲಿಯಾ ಭಾರತಕ್ಕೆ ಪ್ರವಾಸ ಮಾಡಲಿದೆ.
Like this tweet if you can see your team 😉#ICCRankings || #TeamIndia pic.twitter.com/rVBD2WXk6n
— Sir BoiesX 🕯 (@BoiesX45) January 17, 2023
ಭಾರತ ಟೆಸ್ಟ್ನಲ್ಲಿ ವಿಶ್ವದ ನಂಬರ್ 1 ಸ್ಥಾನವನ್ನು ಹೇಗೆ ತಲುಪಬಹುದು?
1. ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾ 126 ರೇಟಿಂಗ್ ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ.
2. ಭಾರತವು 115 ರೇಟಿಂಗ್ ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ ಮತ್ತು ಮೊದಲ ಸ್ಥಾನವನ್ನು ಪಡೆದುಕೊಳ್ಳಲು ಉತ್ತಮ ಅವಕಾಶವನ್ನು ಹೊಂದಿದೆ.
3. ಭಾರತವು ಆಸ್ಟ್ರೇಲಿಯಾವನ್ನು 2-0 ಅಥವಾ 3-1 ಅಂತರದಿಂದ ಸೋಲಿಸಿದರೆ, ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಭಾರತ ನಂಬರ್ 1 ಆಗಬಹುದು.
4. ಭಾರತಕ್ಕೆ 1-1 ಅಥವಾ 1-0 ಗೆಲುವಿನಿಂದ ಆಸ್ಟ್ರೇಲಿಯಾವನ್ನು ಹಿಂದಿಕ್ಕಲು ಸಾಧ್ಯವಾಗುವುದಿಲ್ಲ.
5. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ ಪಂದ್ಯಕ್ಕೆ ತಲುಪಲು ಭಾರತ ಆಸೀಸ್ ವಿರುದ್ಧ ಗೆಲ್ಲಲೇ ಬೇಕಾಗಿದೆ.
ಐಸಿಸಿ ಟೆಸ್ಟ್ ರ್ಯಾಂಕಿಂಗ್:
ಪ್ರಸ್ತುತ ಐಸಿಸಿ ಟೆಸ್ಟ್ ರ್ಯಾಂಕಿಂಗ್ ನೋಡುವುದಾದರೆ, ಆಸ್ಟ್ರೇಲಿಯಾ ತಂಡವು 126 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಬಳಿಕ ಭಾರತ ತಂಡ 115 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿ ಮತ್ತು ಇಂಗ್ಲೆಂಡ್ ತಂಡವು 107 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಉಳಿದಂತೆ 102 ಅಂಕಗಳೊಂದಿಗೆ ದಕ್ಷಿಣ ಆಫ್ರಿಕಾ 4ನೇ ಸ್ಥಾನ, 99 ಅಂಕಗಳೊಂದಿಗೆ ನ್ಯೂಜಿಲ್ಯಾಂಡ್ 5ನೇ ಸ್ಥಾನದಲ್ಲಿದೆ. ಬಳಿಕ ಕ್ರಮವಾಗಿ ಪಾಕಿಸ್ತಾನ, ಶ್ರೀಲಂಕಾ, ವೆಸ್ಟ್ ಇಂಡೀಸ್, ಬಾಂಗ್ಲಾದೇಶ ಮತ್ತು ಜಿಂಬಾಬ್ವೆ ತಂಡಗಳಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ