ICC Rankings: ನೂತನ ಟೆಸ್ಟ್, ODI​ ರ‍್ಯಾಂಕಿಂಗ್ ಪ್ರಕಟ, ಒಂದು ಸ್ಥಾನ ಕುಸಿತ ಕಂಡ ರೋಹಿತ್, ವಿರಾಟ್

ಐಸಿಸಿ (ICC) ಟೆಸ್ಟ್ ಮತ್ತು ODI ರ‍್ಯಾಂಕಿಂಗ್ (Test and ODI rankings) ಅನೇಕ ಬದಲಾವಣೆಗಳಾಗಿವೆ. ಹೌದು, ಈ ಬಾರಿ ಉಸ್ಮಾನ್ ಖವಾಜಾ ಉತ್ತಮ ಬ್ಯಾಟಿಂಗ್​ ಮಾಡಿರುವ ಹಿನ್ನಲೆ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ (Rohit Sharma) ಮತ್ತು ರನ್​ ಮಶೀನ್ ವಿರಾಟ್ ಕೊಹ್ಲಿ (Virat Kohli) ಅವರನ್ನು ಹಿಂದಿಕ್ಕಿದ್ದಾರೆ.

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ

  • Share this:
ಇಂದು ಬಿಡುಗಡೆ ಮಾಡಿದ ಐಸಿಸಿ (ICC) ಟೆಸ್ಟ್ ಮತ್ತು ODI ರ‍್ಯಾಂಕಿಂಗ್ (Test and ODI rankings) ಅನೇಕ ಬದಲಾವಣೆಗಳಾಗಿವೆ. ಹೌದು, ಈ ಬಾರಿ ಉಸ್ಮಾನ್ ಖವಾಜಾ ಉತ್ತಮ ಬ್ಯಾಟಿಂಗ್​ ಮಾಡಿರುವ ಹಿನ್ನಲೆ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ (Rohit Sharma) ಮತ್ತು ರನ್​ ಮಶೀನ್ ವಿರಾಟ್ ಕೊಹ್ಲಿ (Virat Kohli) ಅವರನ್ನು ಹಿಂದಿಕ್ಕಿದ್ದಾರೆ. ಅಲ್ಲದೇ ವಿರಾಟ್ ಕೊಹ್ಲಿ ಟೆಸ್ಟ್ ರ‍್ಯಾಂಕಿಂಗ್ ನಲ್ಲಿ ಅಗ್ರ 10 ರಿಂದ ಮತ್ತಷ್ಟು ಕುಸಿತ ಕಂಡಿದ್ದಾರೆ. ಸದ್ಯ ವಿರಾಟ್ ಕೊಹ್ಲಿ 9ನೇ ಸ್ಥಾನದಿಂದ 10ನೇ ಸ್ಥಾನಕ್ಕೆ ಕುಸಿದಿದ್ದಾರೆ. ರೋಹಿತ್ ಶರ್ಮಾ ಕೂಡ ಒಂದು ಸ್ಥಾನ ಕುಸಿದು 8ನೇ ಸ್ಥಾನಕ್ಕೆ ತಲುಪಿದರೆ, ಉಸ್ಮಾನ್ ಖವಾಜಾ 757 ರೇಟಿಂಗ್ ಅಂಕಗಳೊಂದಿಗೆ 7ನೇ ಸ್ಥಾನ ಪಡೆದಿದ್ದಾರೆ.

ಅಗ್ರಸ್ಥಾನ ಕಾಯ್ದುಕೊಂಡ ಜಡ್ಡು:

ಐಸಿಸಿ ಟೆಸ್ಟ್ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ರವೀಂದ್ರ ಜಡೇಜಾ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಸದ್ಯ ಆರ್.ಅಶ್ವಿನ್ ಎರಡನೇ ಸ್ಥಾನದಲ್ಲಿದ್ದಾರೆ.  ಜೋಸನ್ ಹೋಲ್ಡರ್ ಅವರನ್ನು ಹಿಂದಿಕ್ಕಿದ ಜಡ್ಡು ಮತ್ತು ಅಶ್ವೀನ್ ಕ್ರಮವಾಗಿ 1 ಮತ್ತು 2ನೇ ಸ್ಥಾನದಲ್ಲಿ ಬಧ್ರವಾಗಿ ಇದ್ದಾರೆ.

ಐಸಿಸಿ ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕ:

1. ಮಾರ್ನುಸ್ (892 ರೇಟಿಂಗ್)
2. ಸ್ಟೀವ್ ಸ್ಮಿತ್ (845 ರೇಟಿಂಗ್)
3. ಕೇವ್ ವಿಲಿಯಂಸನ್ (844 ರೇಟಿಂಗ್)
4. ಜೋ ರೂಟ್ (843 ರೇಟಿಂಗ್)
5. ಬಾಬರ್ ಅಜಂ (815 ರೇಟಿಂಗ್)
6. ದಿಮುಥ್ ಕರುಣರತ್ನೆ (781 ರೇಟಿಂಗ್)
7. ಉಸ್ಮಾನ್ ಖ್ವಾಜಾ (757 ರೇಟಿಂಗ್)
8. ರೋಹಿತ್ ಶರ್ಮಾ (754 ರೇಟಿಂಗ್)
9. ಟ್ರಾವಿಸ್ ಹೆಡ್ (744 ರೇಟಿಂಗ್)
10. ವಿರಾಟ್ ಕೊಹ್ಲಿ (742 ರೇಟಿಂಗ್)

ಇದನ್ನೂ ಓದಿ: ICC Test Ranking: ನೂತನ ಟೆಸ್ಟ್​ ರ‍್ಯಾಂಕಿಂಗ್ ಪ್ರಕಟ‌, ಟಾಪ್ ಲಿಸ್ಟ್​ನಲ್ಲಿ ಟೀಂ ಇಂಡಿಯಾ ವೇಗಿ

ದಿಢೀರ್ ಕುಸಿತ ಕಂಡ ಭಾರತೀಯರು:

ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಭಾರತೀಯರು ದಿಢೀರ್ ಕುಸಿತ ಕಂಡಿದ್ದಾರೆ. ವಿರಾಟ್ ಕೊಹ್ಲಿ 9ನೇ ಸ್ಥಾನದಿಂದ 10ನೇ ಸ್ಥಾನಕ್ಕೆ ಕುಸಿದಿದ್ದಾರೆ. ರೋಹಿತ್ ಶರ್ಮಾ ಕೂಡ ಒಂದು ಸ್ಥಾನ ಕುಸಿದು 8ನೇ ಸ್ಥಾನಕ್ಕೆ ತಲುಪಿದ್ದಾರೆ.

ಐಸಿಸಿ ಟೆಸ್ಟ್  ಬೌಲಿಂಗ್ ಶ್ರೇಯಾಂಕ:

1. ಪಾಟ್ ಕಮಿನ್ಸ್ (901 ರೇಟಿಂಗ್)
2. ಆರ್​. ಅಶ್ವೀನ್ (850 ರೇಟಿಂಗ್)
3. ಕಿಗಾಸೋ ರಬಾಡಾ (835 ರೇಟಿಂಗ್)
4. ಜಸ್ಪ್ರಿತ್ ಬೂಮ್ರಾ (830 ರೇಟಿಂಗ್)
5. ಶಾಹಿನ್ ಅಪ್ರೀಧಿ (827 ರೇಟಿಂಗ್)
6. ಕೈಲಿ ಜೆಮಿಸನ್ (820 ರೇಟಿಂಗ್)
7. ಟಿಮ್ ಸೌಥಿ (790 ರೇಟಿಂಗ್)
8. ನೇಲ್ ವಾಗ್ನರ್ (777 ರೇಟಿಂಗ್)
9. ಜೇಮ್ಸ್ ಆಡ್ರಸನ್ (765 ರೇಟಿಂಗ್)
10. ಜೋಸ್ ಹೈಸಲ್​ವುಡ್ (752 ರೇಟಿಂಗ್)

ಟಾಪ್ 5ರಲ್ಲಿ ಭಾರತೀಯರು:

ಐಸಿಸಿ ಟೆಸ್ಟ್ ಬೌಲಿಂಗ್ ಶ್ರೇಯಾಂಕದಲ್ಲಿ ಟಾಪ್ 5 ಸ್ಥಾನದಲ್ಲಿ ಭಾರತೀಯ ಬೌಲರ್​ಗಳಿದ್ದಾರೆ. 2ನೇ ಸ್ಥಾನ ಮತ್ತು 5ನೇ ಸ್ಥಾನವನ್ನು ಕ್ರಮವಾಗಿ ಅಶ್ವೀನ್ ಮತ್ತು ಬೂಮ್ರಾ ಕಾಯ್ದುಕೊಂಡಿದ್ದಾರೆ.

ಐಸಿಸಿ  ಏಕದಿನ ಬ್ಯಾಟಿಂಗ್ ಶ್ರೇಯಾಂಕ:

1. ಬಾಬರ್ ಅಜಂ (872 ರೇಟಿಂಗ್)
2. ವಿರಾಟ್ ಕೊಹ್ಲಿ (811 ರೇಟಿಂಗ್)
3. ರೋಸ್ ಟೇಲರ್ (794 ರೇಟಿಂಗ್)
4. ರೋಹಿತ್ ಶರ್ಮಾ (791 ರೇಟಿಂಗ್)
5. ಕ್ವಿಂಟನ್ ಡಿಕಾಕ್ (789 ರೇಟಿಂಗ್)
6. ಜಾನಿ ಬೇರ್​ಸ್ಟೌ (775 ರೇಟಿಂಗ್)
7. ಅರೋನ್ ಪಿಂಚ್ (771 ರೇಟಿಂಗ್)
8. ರೈಸ್ ವಾನ್ ದೀರ್ ದುಸೇನ್ (769 ರೇಟಿಂಗ್)
9. ಡೇವಿಡ್ ವಾರ್ನರ್ (758 ರೇಟಿಂಗ್)
10. ಇಮಾಮ್ ಉಲ್ ಹಕ್ (746 ರೇಟಿಂಗ್)

ಇದನ್ನೂ ಓದಿ: ICC T20 Ranking: ಐಸಿಸಿ T-20 ರ‍್ಯಾಂಕಿಂಗ್​​ನಲ್ಲಿ ಟಾಪ್ 10ನಿಂದ ಹೊರ ಬಿದ್ದ ಕೊಹ್ಲಿ & ರೋಹಿತ್

ಒಂದು ಸ್ಥಾನ ಏರಿದ ಟೀಂ ಇಂಡಿಯಾ ನಾಯಕ:

ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ 5ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಏರಿಕೆ ಕಂಡರೆ, ವಿರಾಟ್ ಕೊಹ್ಲಿ 2ನೇ ಸ್ಥಾನದಲ್ಲಿ ಉಳಿದುಕೊಂಡಿದ್ದಾರೆ.

ಐಸಿಸಿ  ಏಕದಿನ ಬೌಲಿಂಗ್ ಶ್ರೇಯಾಂಕ:

1. ಟ್ರೆಂಟ್ ಬೌಲ್ಟ್ (733 ರೇಟಿಂಗ್)
2. ಜೋಸ್ ಹೈಸಲ್​ವುಡ್ (705 ರೇಟಿಂಗ್)
3. ಕ್ರಿಸ್ ವೋಕ್ಸ್ (700 ರೇಟಿಂಗ್)
4. ಹೆನ್ರಿ (687 ರೇಟಿಂಗ್)
5. ಮುಜೇಬ್ ಉರ್ ರೆಹಮಾನ್ (681 ರೇಟಿಂಗ್)
6. ಜಸ್ಪ್ರಿತ್ ಬೂಮ್ರಾ (679 ರೇಟಿಂಗ್)
7. ಮೆಹಿದೈ ಹಸನ್ (661 ರೇಟಿಂಗ್)
8. ಶಕೀಬ್ ಅಲ್ ಹಸನ್ (657 ರೇಟಿಂಗ್)
9. ರಶೀಧ್ ಖಾನ್ (650 ರೇಟಿಂಗ್)
10. ಆಡಂ ಜಾಂಪಾ (650 ರೇಟಿಂಗ್)

ಟಾಪ್ 10 ಪಟ್ಟಿಯಲ್ಲಿ ಏಕಮಾತ್ರ ಭಾರತೀಯ ಆಟಗಾರ:

ಐಸಿಸಿ ಏಕದಿನ ಬೌಲಿಂಗ್ ಶ್ರೇಯಾಂಕದಲ್ಲಿ ಏಕಮಾತ್ರ ಟೀಂ ಇಂಡಿಯಾದ ಬೌಲರ್ ಸ್ಥಾನ ಪಡೆದಿದ್ದು, 5ನೇ ಸ್ಥಾನದಲ್ಲಿ ಜಸ್ಪ್ರಿತ್ ಬೂಮ್ರಾ ಕಾಣಿಸಿಕೊಂಡಿದ್ದಾರೆ.
Published by:shrikrishna bhat
First published: