ವಿಚಿತ್ರ ರೀತಿಯ ಬೌಲಿಂಗ್: ಶ್ರೀಲಂಕಾ ಆಟಗಾರನನ್ನು ಕ್ರಿಕೆಟ್​​ನಿಂದಲೆ ಕಿತ್ತೆಸೆದ ಐಸಿಸಿ

25 ವರ್ಷ ಪ್ರಾಯದ ದನಂಜಯ್ ಅವರು ಆಡಿದ್ದು ಕೇವಲ 5 ಟೆಸ್ಟ್​ ಪಂದ್ಯವನ್ನಷ್ಟೆ. ಈ ವರ್ಷದ ಆರಂಭದಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು

Vinay Bhat | news18
Updated:December 11, 2018, 3:07 PM IST
ವಿಚಿತ್ರ ರೀತಿಯ ಬೌಲಿಂಗ್: ಶ್ರೀಲಂಕಾ ಆಟಗಾರನನ್ನು ಕ್ರಿಕೆಟ್​​ನಿಂದಲೆ ಕಿತ್ತೆಸೆದ ಐಸಿಸಿ
ಅಖಿಲಾ ಧನಂಜಯ್ ಬೌಲಿಂಗ್ ಶೈಲಿ
  • News18
  • Last Updated: December 11, 2018, 3:07 PM IST
  • Share this:
ಶ್ರೀಲಂಕಾ ಕ್ರಿಕೆಟ್ ತಂಡದ ಆಫ್​​- ಸ್ಪಿನ್ನರ್ ಅಖಿಲಾ ಧನಂಜಯ್ ಅವರನ್ನು ಅಂತರಾಷ್ಟ್ರೀಯ ಕ್ರಿಕೆಟ್​​ನಿಂದ ಅಮಾನತು ಮಾಡಲಾಗಿದೆ.

ಈ ಬಗ್ಗೆ ಐಸಿಸಿ ಅಧಿಕೃತವಾಗಿ ತಿಳಿಸಿದ್ದು, 'ಶ್ರೀಲಂಕಾ ಕ್ರಿಕೆಟ್ ತಂಡದ ಆಟಗಾರ ಅಖಿಲಾ ಧನಂಜಯ್ ಅವರು ಬೌಲಿಂಗ್ ಮಾಡುವ ಶೈಲಿ ಶಂಕಾಸ್ಪದವಾಗಿದೆ. ಹೀಗಾಗಿ ಈಗಿನಿಂದಲೆ ಅವರನ್ನು ಅಂತರಾಷ್ಟ್ರೀಯ ಕ್ರಿಕೆಟ್​​ನಿಂದ ಅಮಾನತು ಮಾಡಲಾಗುತ್ತಿದೆ' ಎಂದು ತಿಳಿಸಿದೆ.

 ಇತ್ತೀಚೆಗಷ್ಟೆ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದ ವೇಳೆ ಧನಂಜಯ್ ಅವರು ಬೌಲಿಂಗ್ ಮಾಡುವ ಶೈಲಿಯನ್ನು ಪ್ರಶ್ನಿಸಲಾಗಿತ್ತು. ಬಳಿಕ ಬೌಲಿಂಗ್ ಶೈಲಿಯ ಸ್ವಯಂ ಮೌಲ್ಯಮಾಪನ ಮಾಡಲು ಅದೇಶಿಸಲಾಗಿತ್ತು. ಆದರೆ, ಈ ವೇಳೆ ಅವರ ಎಸೆತಗಳು 15 ಡಿಗ್ರಿ ಪ್ರಮಾಣವನ್ನು ಮೀರಿದ್ದು ಕಂಡುಬಂದಿದೆ. ಸದ್ಯ ಧನಂಜಯ್ ಅವರು ಕೇವಲ ದೇಶೀಯ ಕ್ರಿಕೆಟ್​​ನಲ್ಲಿ ಆಡಬಹುದಾಗಿದೆ, ಅದು ಕೂಡ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಒಪ್ಪಿಗೆ ಪಡೆದು.

ಇದನ್ನೂ ಓದಿ: ಐಪಿಎಲ್ ಇತಿಹಾಸದಲ್ಲಿ ನಾಯಕನಾಗಿ ಮೆರೆದ ಆಟಗಾರರಿವರು..!

25 ವರ್ಷ ಪ್ರಾಯದ ಧನಂಜಯ್ ಅವರು ಆಡಿದ್ದು ಕೇವಲ 5 ಟೆಸ್ಟ್​ ಪಂದ್ಯವನ್ನಷ್ಟೆ. ಈ ವರ್ಷದ ಆರಂಭದಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಧನಂಜಯ್ ಅವರು ತನ್ನ ಬೌಲಿಂಗ್ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡ ಬಳಿಕ ಹೊಸ ಮೌಲ್ಯಮಾಪನಕ್ಕೆ ಅರ್ಜಿಸಲ್ಲಿಸಬಹುದು.
First published:December 11, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading