ನೂತನ ಟೆಸ್ಟ್ ರ‍್ಯಾಂಕಿಂಗ್; ಟಾಪ್ 10 ಆಟಗಾರರಿಗೂ ನಂ. 1 ಪಟ್ಟ ಕೊಟ್ಟ ಐಸಿಸಿ

news18
Updated:August 15, 2018, 4:56 PM IST
ನೂತನ ಟೆಸ್ಟ್ ರ‍್ಯಾಂಕಿಂಗ್; ಟಾಪ್ 10 ಆಟಗಾರರಿಗೂ ನಂ. 1 ಪಟ್ಟ ಕೊಟ್ಟ ಐಸಿಸಿ
news18
Updated: August 15, 2018, 4:56 PM IST
ನ್ಯೂಸ್ 18 ಕನ್ನಡ

ಮೊನ್ನೆಯಷ್ಟೆ ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ತನ್ನ ನೂತನ ಟೆಸ್ಟ್ ರ‍್ಯಾಂಕಿಂಗ್ ಪಟ್ಟಿ ಬಿಡುಗಡೆಮಾಡಿತ್ತು. ಇದರಲ್ಲಿ ಕೊಹ್ಲಿ ಮೊದಲ ಸ್ಥಾನದಿಂದ ಕೆಳಗಿಳಿದು ದ್ವಿತೀಯ ಸ್ಥಾನದಲ್ಲಿದ್ದ ಸ್ಟೀವ್ ಸ್ಮಿತ್ ನಂಬರ್ 1 ಪಟ್ಟವನ್ನೇರಿದ್ದರು. ಆದರೆ ಟ್ವಿಟರ್​ನಲ್ಲಿ ಐಸಿಸಿ ನೂತನ ಶ್ರೇಯಾಂಕ ಪಟ್ಟಿ ಬಿಡಿಗಡೆಮಾಡಿದ್ದು, ಇದರಲ್ಲಿ ಎಲ್ಲಾ ಆಟಗಾರರಿಗೂ ನಂಬರ್ 1 ಬ್ಯಾಟ್ಸ್​​ಮನ್​​​​ ಸ್ಥಾನ ನೀಡಲಾಗಿದೆ. ಅಷ್ಟಕ್ಕೂ ಐಸಿಸಿ ಈ ರೀತಿ ಪೋಸ್ಟ್ ಹಾಕಲು ಕಾರಣವಿದೆ.

ಅಮೆರಿಕಾದ ಖ್ಯಾತ ರ‍್ಯಾಪರ್ ಕೇನ್ ವೆಸ್ಟ್ ಅವರು ಟ್ವಿಟರ್​​ನಲ್ಲಿ 'ಯಾರು ಇನ್ನೊಬ್ಬರಿಗಿಂತ ದೊಡ್ಡವರಲ್ಲ' ಎಂದು ಟ್ವೀಟ್ ಮಾಡಿದ್ದರು.

 


Loading...ಇದಕ್ಕೆ ಪ್ರತ್ಯುತ್ತರವಾಗಿ ಐಸಿಸಿ ಟ್ವೀಟ್ ಮಾಡಿದ್ದು, ನೀವು ಹೇಳಿದ ರೀತಿಯಲ್ಲೆ ಟೆಸ್ಟ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಎಲ್ಲರಿಗೂ ನಂಬರ್ 1 ಸ್ಥಾನ ನೀಡಲಾಗಿದೆ ಎಂದಿದ್ದು, ಪಟ್ಟಿಯಲ್ಲಿನ ಟಾಪ್ 10 ಆಟಗಾರರ ಹೆಸರಿಗೆಲ್ಲಾ ನಂಬರ್ 1 ಸ್ಥಾನ ನೀಡಿದೆ. ಈ ಫೋಟೋವನ್ನು ಐಸಿಸಿ ತನ್ನ ಟ್ವಿಟರ್​​ನಲ್ಲಿ ಹಂಚಿಕೊಂಡು ಹಾಸ್ಯವಾಗಿ ಟ್ವೀಟ್ ಮಾಡಿದೆ.

 

First published:August 15, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ