ಐಸಿಸಿ ಟೆಸ್ಟ್​​ ರ್ಯಾಂಕಿಂಗ್​ ಪ್ರಕಟ; ಮೊದಲ ಸ್ಥಾನದಿಂದ ಕೆಳಗಿಳಿದ ಕೊಹ್ಲಿ

news18
Updated:August 13, 2018, 7:26 PM IST
ಐಸಿಸಿ ಟೆಸ್ಟ್​​ ರ್ಯಾಂಕಿಂಗ್​ ಪ್ರಕಟ; ಮೊದಲ ಸ್ಥಾನದಿಂದ ಕೆಳಗಿಳಿದ ಕೊಹ್ಲಿ
news18
Updated: August 13, 2018, 7:26 PM IST
ನ್ಯೂಸ್ 18 ಕನ್ನಡ

ಐಸಿಸಿ ತನ್ನ ನೂತನ ಟೆಸ್ಟ್ ರ್ಯಾಂಕಿಂಗ್ ಪಟ್ಟಿ ಬಿಡುಗಡೆಮಾಡಿದ್ದು ಬ್ಯಾಟಿಂಗ್​ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲ ಸ್ಥಾನದಿಂದ ಕೆಳಗಿಳಿದಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್​​ ಪಂದ್ಯದಲ್ಲಿ ಶತಕ ಸಿಡಿಸಿ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವ್ ಸ್ಮಿತ್ ಅವರನ್ನು ಹಿಂದಿಕ್ಕಿ ನಂಬರ್ 1 ಬ್ಯಾಟ್ಸ್​​​ಮನ್​ ಪಟ್ಟವನ್ನೇರಿದ್ದರು. ಆದರೆ ಲಂಡನ್​​ನ ಲಾರ್ಡ್ಸ್​​ನಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ ಪ್ರದರ್ಶನ ಕಳಪೆಯಾಗಿತ್ತು. ಈ ಮೂಲಕ ಅಗ್ರಸ್ಥಾನದಿಂದ 2ನೇ ಸ್ಥಾನಕ್ಕೆ ಕೊಹ್ಲಿ ಕುಸಿದಿದ್ದಾರೆ. ಮೊದಲನೇ ಸ್ಥಾನವನ್ನು ಮತ್ತೆ ಸ್ಟೀವ್ ಸ್ಮಿತ್ ಅವರೇ ಅಲಂಕರಿಸಿದ್ದಾರೆ. ಇನ್ನು 3ನೇ ಸ್ಥಾನದಲ್ಲಿ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಇದ್ದಾರೆ.

ಇನ್ನು ಬೌಲಿಂಗ್​ ರ್ಯಾಂಕಿಂಗ್ ಪಟ್ಟಿಯಲ್ಲಿ ಇಂಗ್ಲೆಂಡ್​ನ ಬೌಲಿಂಗ್ ಲೆಜೆಂಡ್ ಜೇಮ್ಸ್ ಆಂಡರ್ಸನ್ ಮೊದಲ ಸ್ಥಾನದಲ್ಲಿದ್ದಾರೆ. ಅಂತೆಯೆ ಭಾರತ ತಂಡದ ರವೀಂದ್ರ ಜಡೇಜಾ ಮೂರನೇ ಹಾಗೂ ಆರ್. ಅಶ್ವಿನ್ 5ನೇ ಸ್ಥಾನದಲ್ಲಿದ್ದಾರೆ.

 

First published:August 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...