ICC Rankings: ನೂತನ ಟೆಸ್ಟ್, ODI​ ರ‍್ಯಾಂಕಿಂಗ್ ಪ್ರಕಟ, ಒಂದು ಸ್ಥಾನ ಕುಸಿತ ಕಂಡ ಬುಮ್ರಾ

ಐಸಿಸಿ (ICC) ಟೆಸ್ಟ್ ಮತ್ತು ODI ರ‍್ಯಾಂಕಿಂಗ್ (Test and ODI rankings) ಅನೇಕ ಬದಲಾವಣೆಗಳಾಗಿವೆ. ಏಕದಿನ ಪಟ್ಟಿಯಲ್ಲಿ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ  (Virat Kohli) ತಮ್ಮ ಮೊದಲಿನ ಸ್ಥಾನದಲ್ಲಿಯೇ ಮುಂದುವರೆದಿದ್ದಾರೆ.

ಬೂಮ್ರಾ

ಬೂಮ್ರಾ

  • Share this:
ಐಸಿಸಿ (ICC) ಟೆಸ್ಟ್ ಮತ್ತು ODI ರ‍್ಯಾಂಕಿಂಗ್ (Test and ODI rankings) ಅನೇಕ ಬದಲಾವಣೆಗಳಾಗಿವೆ. ಏಕದಿನ ಪಟ್ಟಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಆಜಮ್ ಅಗ್ರಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ  (Virat Kohli) ತಮ್ಮ ಮೊದಲಿನ ಸ್ಥಾನದಲ್ಲಿಯೇ ಮುಂದುವರೆದಿದ್ದಾರೆ. ಅದರಂತೆ ಏಕದಿನ ಬೌಲಿಂಗ್​ ನಲ್ಲಿ ಕಿವೀಸ್​ ನ ಟ್ರೆಂಟ್​ ಬೋಲ್ಟ್ ಮೊದಲ ಸ್ಥಾನವನ್ನು ಉಳಿಸಿಕೊಂಡಿದ್ದು, ಟೆಸ್ಟ್ ಶ್ರೇಯಾಂಕದಲ್ಲಿ ಪ್ಯಾಟ್ ಕಮಿನ್ಸ್ ಸಹ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಅಗ್ರಸ್ಥಾನ ಉಳಿಸಿಕೊಂಡ ಪಾಕ್ ನಾಯಕ:

ಏಕದಿನ ಸರಣಿಯಿಂದ ಹೊರಗುಳಿದಿದ್ದ ಆಸ್ಟ್ರೆಲಿಯಾ ತಂಡದ ನಾಯಕ ಆರೋನ್ ಫಿಂಚ್ ಮೂರು ಸ್ಥಾನಕ್ಕೆ ಕುಸಿದು 10ನೇ ಕ್ರಮಾಂಕಕ್ಕೆ ತಲುಪಿದ್ದಾರೆ. ಅಲ್ಲದೆ ಪಾಕ್ ಕ್ರಿಕೆಟ್ ತಂಡದ ನಾಯಕ ಬಾಬರ್ ಆಜಂ ಅಗ್ರಸ್ಥಾನದಲ್ಲಿದ್ದರೆ. ಪಾಕ್ ಎಡಗೈ ಬ್ಯಾಟ್ಸ್‌ಮನ್ ಇಮಾಮ್ ಉಲ್‌ಹಕ್‌ ಮೂರನೇ ಸ್ಥಾನಕ್ಕೆ ಏರಿಕೆಗೊಂಡಿದ್ದಾರೆ.

ಐಸಿಸಿ ಏಕದಿನ ಬ್ಯಾಟಿಂಗ್ ಶ್ರೇಯಾಂಕ:

1. ಬಾಬರ್ ಅಜಂ (891 ರೇಟಿಂಗ್)
2. ವಿರಾಟ್ ಕೊಹ್ಲಿ (811 ರೇಟಿಂಗ್)
3. ಇಮಾಮ್ ಉಲ್ ಹಕ್ (795 ರೇಟಿಂಗ್)
4. ರೋಹಿತ್ ಶರ್ಮಾ (791 ರೇಟಿಂಗ್)
5. ಕ್ವಿಂಟನ್ ಡಿಕಾಕ್ (789 ರೇಟಿಂಗ್)
6. ರೋಸ್ ಟೇಲರ್ (794 ರೇಟಿಂಗ್)
7. ಜಾನಿ ಬೇರ್​ಸ್ಟೌ (775 ರೇಟಿಂಗ್)
8. ರೈಸ್ ವಾನ್ ದೀರ್ ದುಸೇನ್ (769 ರೇಟಿಂಗ್)
9. ಡೇವಿಡ್ ವಾರ್ನರ್ (750 ರೇಟಿಂಗ್)
10. ಅರೋನ್ ಪಿಂಚ್ (745 ರೇಟಿಂಗ್)

ಇದನ್ನೂ ಓದಿ: ICC Rankings: ನೂತನ ಟೆಸ್ಟ್, ODI​ ರ‍್ಯಾಂಕಿಂಗ್ ಪ್ರಕಟ, ಒಂದು ಸ್ಥಾನ ಕುಸಿತ ಕಂಡ ರೋಹಿತ್, ವಿರಾಟ್

ಭಾರತೀಯ ಬ್ಯಾಟ್ಸ್​ಮೆನ್​ ಸ್ಥಾನ:

ಕಳೆದ ಬಾರಿಯಂತೆ ಈ ಬಾರಿಯೂ ಕೇವಲ ಇಬ್ಬರು ಭಾರತೀಯ ಬ್ಯಾಟರ್​ಗಳು ಸ್ಥಾನ ಪಡೆದಿದ್ದು, 2ನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಮತ್ತು 4ನೇ ಸ್ಥಾನದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ 4 ನೇ ಸ್ಥಾನದಲ್ಲಿ ಇದ್ದು, ಕಳೆದ ಬಾರಿಯ ಸ್ಥಾನವನ್ನು ಉಳಿಸಕೊಂಡಿದ್ದಾರೆ.

ಐಸಿಸಿ ಏಕದಿನ ಬೌಲಿಂಗ್ ಶ್ರೇಯಾಂಕ:

1. ಟ್ರೆಂಟ್ ಬೌಲ್ಟ್ (726 ರೇಟಿಂಗ್)
2. ಕ್ರಿಸ್ ವೋಕ್ಸ್ (700 ರೇಟಿಂಗ್)
3. ಜೋಸ್ ಹೈಸಲ್​ವುಡ್ (698 ರೇಟಿಂಗ್)
4. ಹೆನ್ರಿ (683 ರೇಟಿಂಗ್)
5. ಮುಜೇಬ್ ಉರ್ ರೆಹಮಾನ್ (681 ರೇಟಿಂಗ್)
6. ಜಸ್ಪ್ರಿತ್ ಬೂಮ್ರಾ (679 ರೇಟಿಂಗ್)
7. ಶಾಹಿನ್ ಅಫ್ರಿದಿ (671 ರೇಟಿಂಗ್)
8. ಮೆಹಿದೈ ಹಸನ್ (661 ರೇಟಿಂಗ್)
9. ಶಕೀಬ್ ಅಲ್ ಹಸನ್ (657 ರೇಟಿಂಗ್)
10. ರಶೀಧ್ ಖಾನ್ (650 ರೇಟಿಂಗ್)


ಟಾಪ್ 10 ಪಟ್ಟಿಯಲ್ಲಿ ಏಕಮಾತ್ರ ಭಾರತೀಯ ಆಟಗಾರ:

ಐಸಿಸಿ ಏಕದಿನ ಬೌಲಿಂಗ್ ಶ್ರೇಯಾಂಕದಲ್ಲಿ ಏಕಮಾತ್ರ ಟೀಂ ಇಂಡಿಯಾದ ಬೌಲರ್ ಸ್ಥಾನ ಪಡೆದಿದ್ದು, 6ನೇ ಸ್ಥಾನದಲ್ಲಿ ಜಸ್ಪ್ರಿತ್ ಬೂಮ್ರಾ ಕಾಣಿಸಿಕೊಂಡಿದ್ದಾರೆ. ಕಳೆದ ಬಾರಿಗಿಂತ 1 ಸ್ಥಾನ ಕುಸಿತಕಂಡಿದ್ದಾರೆ.

ಇದನ್ನೂ ಓದಿ: ICC T20 Rankings: ಐಸಿಸಿ ಟಿ20 ರ‍್ಯಾಂಕಿಂಗ್​ ಪಟ್ಟಿ ಪ್ರಕಟ: ಕೊಹ್ಲಿ ಜಿಗಿತ, ಕೆಎಲ್ ರಾಹುಲ್ ಕುಸಿತ..!

ಐಸಿಸಿ ಟೆಸ್ಟ್ ಬೌಲಿಂಗ್ ಶ್ರೇಯಾಂಕ:

1. ಪಾಟ್ ಕಮಿನ್ಸ್ (901 ರೇಟಿಂಗ್)
2. ಆರ್​. ಅಶ್ವೀನ್ (850 ರೇಟಿಂಗ್)
3. ಜಸ್ಪ್ರಿತ್ ಬೂಮ್ರಾ (830 ರೇಟಿಂಗ್)
4. ಕಿಗಾಸೋ ರಬಾಡಾ (827 ರೇಟಿಂಗ್)
5. ಶಾಹಿನ್ ಅಪ್ರೀಧಿ (827 ರೇಟಿಂಗ್)
6. ಕೈಲಿ ಜೆಮಿಸನ್ (820 ರೇಟಿಂಗ್)
7. ಟಿಮ್ ಸೌಥಿ (790 ರೇಟಿಂಗ್)
8. ನೇಲ್ ವಾಗ್ನರ್ (777 ರೇಟಿಂಗ್)
9. ಜೇಮ್ಸ್ ಆಡ್ರಸನ್ (765 ರೇಟಿಂಗ್)
10. ಜೋಸ್ ಹೈಸಲ್​ವುಡ್ (752 ರೇಟಿಂಗ್)

ಟಾಪ್ 5ರಲ್ಲಿ ಭಾರತೀಯರು:

ಐಸಿಸಿ ಟೆಸ್ಟ್ ಬೌಲಿಂಗ್ ಶ್ರೇಯಾಂಕದಲ್ಲಿ ಟಾಪ್ 5 ಸ್ಥಾನದಲ್ಲಿ ಭಾರತೀಯ ಬೌಲರ್​ಗಳಿದ್ದಾರೆ. 2ನೇ ಸ್ಥಾನ ಮತ್ತು 5ನೇ ಸ್ಥಾನವನ್ನು ಕ್ರಮವಾಗಿ ಅಶ್ವೀನ್ ಮತ್ತು ಬೂಮ್ರಾ ಕಾಯ್ದುಕೊಂಡಿದ್ದಾರೆ.

Published by:shrikrishna bhat
First published: