• Home
  • »
  • News
  • »
  • sports
  • »
  • T20 WC India vs Pakistan: ಭಾರತ-ಪಾಕಿಸ್ತಾನ ನಡುವಿನ ಪಂದ್ಯ ರದ್ದಾದರೆ ಯಾರಿಗೆ ಲಾಭ? ಯಾರಿಗೆ ನಷ್ಟ? ಇಲ್ಲಿದೆ ಮಾಹಿತಿ

T20 WC India vs Pakistan: ಭಾರತ-ಪಾಕಿಸ್ತಾನ ನಡುವಿನ ಪಂದ್ಯ ರದ್ದಾದರೆ ಯಾರಿಗೆ ಲಾಭ? ಯಾರಿಗೆ ನಷ್ಟ? ಇಲ್ಲಿದೆ ಮಾಹಿತಿ

IND vs PAK

IND vs PAK

T20 WC India vs Pakistan: ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ಮೆಲ್ಬೋರ್ನ್‌ನಲ್ಲಿ ಅಕ್ಟೋಬರ್ 23 ರಂದು ನಡೆಯಲಿದೆ. ಆದರೆ ಪಂದ್ಯದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಪಂದ್ಯಕ್ಕೆ ಯಾವುದೇ ಮೀಸಲು ದಿನವಿಲ್ಲ.

  • Share this:

ಭಾರತ ಮತ್ತು ಪಾಕಿಸ್ತಾನ (IND vs PAK) ಪಂದ್ಯದ ಬಗ್ಗೆ ಎಲ್ಲಾ ಅಭಿಮಾನಿಗಳ ಹೃದಯ ಬಡಿತ ಹೆಚ್ಚಾಗಿದೆ. ಅಕ್ಟೋಬರ್ 23ರಂದು ಟಿ20 ವಿಶ್ವಕಪ್ 2022 ರಲ್ಲಿ (T20 World Cup 2022) ನಡೆಯಲಿರುವ ಈ ದೊಡ್ಡ ಪಂದ್ಯದ ಬಗ್ಗೆ ವಾತಾವರಣವನ್ನು ಈಗಾಗಲೇ ರಚಿಸಲಾಗಿದೆ, ಆದರೆ ಹವಾಮಾನವು ಈ ಪಂದ್ಯಕ್ಕೆ ಅಡ್ಡಿ ಮಾಡಬಹುದು.  ಅಕ್ಟೋಬರ್ 23 ರಂದು ಮೆಲ್ಬೋರ್ನ್‌ನಲ್ಲಿ (Melbourne) ಸುಮಾರು 80 ಪ್ರತಿಶತದಷ್ಟು ಮಳೆಯಾಗುವ ಸಾಧ್ಯತೆಯಿದೆ. ಪಂದ್ಯಕ್ಕೆ ಯಾವುದೇ ಮೀಸಲು ದಿನವಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಪಂದ್ಯ ನಡೆಯದಿದ್ದರೆ, ಎರಡೂ ತಂಡಗಳು ತಲಾ ಒಂದು ಅಂಕ ಪಡೆಯುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಯಾರಿಗೆ ಯಾವ ರೀತಿಯಲ್ಲಿ ಲಾಭ ಎಂಬ ಪ್ರಶ್ನೆ ಮೂಡಿದೆ. ಸೂಪರ್-12ರಲ್ಲಿ ಭಾರತ ಮತ್ತು ಪಾಕಿಸ್ತಾನ ಗುಂಪಿನಲ್ಲಿ ದಕ್ಷಿಣ ಆಫ್ರಿಕಾ (South Africa) ಮತ್ತು ಬಾಂಗ್ಲಾದೇಶ (Bangladesh) ಕೂಡ ಸ್ಥಾನ ಪಡೆದಿರುವುದು ಗೊತ್ತೇ ಇದೆ. ಉಳಿದ 2 ತಂಡಗಳು ಮೊದಲ ಸುತ್ತಿನಲ್ಲಿ ಗುಂಪಿಗೆ ಪ್ರವೇಶಿಸಲಿವೆ.


ಟಿ20 ವಿಶ್ವಕಪ್​ನಲ್ಲಿ ಭಾರತ-ಪಾಕ್​:


ಸೂಪರ್-12ರಲ್ಲಿ ಭಾರತ ಮತ್ತು ಪಾಕಿಸ್ತಾನ 5-5 ಪಂದ್ಯಗಳನ್ನು ಆಡಬೇಕಿದೆ. ಇಂತಹ ಪರಿಸ್ಥಿತಿಯಲ್ಲಿ ಅವರ ಪಂದ್ಯ ರದ್ದಾದರೆ ಉಳಿದ 4 ಪಂದ್ಯಗಳು ಇಬ್ಬರಿಗೂ ಬಹುಮುಖ್ಯವಾಗಲಿದೆ. ಈ ಅವಧಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳು 3-3 ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದರೆ ಮತ್ತು ತಲಾ ಒಂದು ಪಂದ್ಯದಲ್ಲಿ ಸೋತರೆ, ಇಬ್ಬರೂ 7-7 ಅಂಕಗಳನ್ನು ಹೊಂದಿರುತ್ತಾರೆ. ಪಂದ್ಯ ಗೆದ್ದರೆ 2 ಅಂಕ ಸಿಗಲಿದೆ. ಮತ್ತೊಂದೆಡೆ, ದಕ್ಷಿಣ ಆಫ್ರಿಕಾ ತಂಡವು 5 ಪಂದ್ಯಗಳಲ್ಲಿ 4 ಅನ್ನು ಗೆಲ್ಲುವಲ್ಲಿ ಯಶಸ್ವಿಯಾದರೆ, ಅದು 8 ಅಂಕಗಳನ್ನು ಹೊಂದಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ಮತ್ತು ಪಾಕಿಸ್ತಾನದಲ್ಲಿ ಒಂದು ತಂಡ ಮಾತ್ರ ಸೆಮಿಫೈನಲ್‌ಗೆ ಹೋಗಲು ಸಾಧ್ಯವಾಗುತ್ತದೆ.


ಮಹತ್ವ ಪಡೆಯಲಿದೆ ರನ್ ರೇಟ್:


ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ರದ್ದಾಗಿದೆ ಎಂದರೆ ದುರ್ಬಲ ತಂಡದ ವಿರುದ್ಧ ದೊಡ್ಡ ಗೆಲುವು ಸಾಧಿಸುವ ತಂಡವು ಉತ್ತಮ ರನ್ ರೇಟ್‌ನ ಲಾಭವನ್ನು ಪಡೆಯುತ್ತದೆ. 2012ರ T20 ವಿಶ್ವಕಪ್‌ನಲ್ಲಿ, ಭಾರತ ತಂಡವು ಸೆಮಿಫೈನಲ್‌ನಿಂದ ಹೊರಗುಳಿದಿತ್ತು ಏಕೆಂದರೆ ಅದರ ರನ್ ರೇಟ್ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾಕ್ಕಿಂತ ಕಡಿಮೆಯಾಗಿತ್ತು. ಟಿ20 ವಿಶ್ವಕಪ್‌ನ ಇತಿಹಾಸವನ್ನು ಅವಲೋಕಿಸಿದರೆ, ಪಾಕಿಸ್ತಾನ ತಂಡವು 5 ಬಾರಿ ಸೆಮಿಫೈನಲ್ ಅಥವಾ ಆಚೆಗೆ ತಲುಪುವಲ್ಲಿ ಯಶಸ್ವಿಯಾಗಿದೆ.  ಮತ್ತೊಂದೆಡೆ ಭಾರತ ತಂಡಕ್ಕೆ ಈ ಸಾಧನೆ ಮಾಡಲು ಸಾಧ್ಯವಾಗಿದ್ದು ಕೇವಲ 3 ಬಾರಿ. ದಕ್ಷಿಣ ಆಫ್ರಿಕಾ ತಂಡ ಎರಡು ಬಾರಿ ಸೆಮಿಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ.


ಇದನ್ನೂ ಓದಿ: T20 WC IND vs PAK: ಟೀಂ ಇಂಡಿಯಾ ಬ್ಯಾಟ್ಸ್​ಮನ್​ಗೆ ಎಚ್ಚರಿಕೆ ನೀಡಿದ ಪಾಕ್​ ಬೌಲರ್​, ಮಾರಕ ಯಾರ್ಕರ್​ಗೆ ಆಸ್ಪತ್ರೆ ಸೇರಿದ ಅಫ್ಘಾನ್ ಬ್ಯಾಟರ್


ಟಿ20 ವಿಶ್ವಕಪ್‌ನ ದಾಖಲೆಯನ್ನು ನೋಡಿದರೆ ಇಲ್ಲಿಯವರೆಗೆ ಭಾರತ ಮತ್ತು ಪಾಕಿಸ್ತಾನ ನಡುವೆ 6 ಪಂದ್ಯಗಳು ನಡೆದಿವೆ. 5 ಪಂದ್ಯಗಳನ್ನು ಗೆಲ್ಲುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ. ಒಂದು ಪಂದ್ಯದಲ್ಲಿ ಪಾಕಿಸ್ತಾನ ಗೆದ್ದಿತ್ತು. ಒಟ್ಟಾರೆ ಟಿ20 ದಾಖಲೆ ನೋಡಿದರೆ ಭಾರತ 11 ಪಂದ್ಯಗಳಲ್ಲಿ 8ರಲ್ಲಿ ಗೆದ್ದಿದ್ದರೆ, 3ರಲ್ಲಿ ಸೋತಿದೆ.


ಟಿ20 ವಿಶ್ವಕಪ್​ಗೆ ಟೀಂ ಇಂಡಿಯಾ:


ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಮೊಹಮ್ಮದ್ ಶಮಿ, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.

Published by:shrikrishna bhat
First published: