ICC T20 WC 2022 IND vs PAK: ಭಾರತ-ಪಾಕ್​ ಪಂದ್ಯ, ತಿಂಗಳ ಮುಂಚೆಯೇ ಟಿಕೆಟ್​ಗಳು ಸೋಲ್ಡ್ ಔಟ್

ICC T20 WC 2022 IND vs PAK: ಟಿ20 ವಿಶ್ವಕಪ್​ 2022ರಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯವು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದ್ದು, ಟಿಕೆಟ್​ಗಳು ಈಗಾಗಲೇ ಸೋಲ್ಡ್ ಔಟ್​ ಆಗಿದೆ.

IND vs PAK

IND vs PAK

  • Share this:
ಐಸಿಸಿ ಪುರುಷರ T20 ವಿಶ್ವಕಪ್ 2022 (ICC T20 WC 2022 ) ಅಕ್ಟೋಬರ್ 16 ರಿಂದ ಪ್ರಾರಂಭವಾಗುತ್ತದೆ. ಆದರೆ, ಸೂಪರ್ 12 ಸುತ್ತಿನ ಪಂದ್ಯಗಳು ಅಕ್ಟೋಬರ್ 22ರಿಂದ ಆರಂಭವಾಗಲಿವೆ. ಸೂಪರ್ 12ರ ಮೊದಲ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಮರುದಿನ ಟೂರ್ನಿಯ ಮೆಗಾ ಫೈಟ್​ ನಡೆಯಲಿದೆ. ಭಾರತ ಮತ್ತು ಪಾಕಿಸ್ತಾನ (IND vs PAK) ತಂಡಗಳು ಟಿ20 ವಿಶ್ವಕಪ್​ 2022ರ ಮೊದಲ ಪಂದ್ಯದಲ್ಲಿ ಮುಖಾಮುಖಿ ಆಗುತ್ತಿದ್ದು, ಈಗಾಗಲೇ ಏಷ್ಯಾ ಕಪ್​ 2022ರ (Asia Cup 2022) ಸೂಪರ್ 4 ಹಂತದಲ್ಲಿ ಪಾಕ್ ಎದುರು ಸೋತಿರುವ ಟೀಂ ಇಂಡಿಯಾ (Team India) ಸೇಡು ತೀರಿಸಿಕೊಳ್ಳಲು ಸಿದ್ಧವಾಗಿರುವುದರಿಂದ ಪಂದ್ಯದ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ಈ ಪಂದ್ಯವು  ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದ್ದು, ಟಿಕೆಟ್​ಗಳು ಈಗಾಗಲೇ ಸೋಲ್ಡ್ ಔಟ್​ ಆಗಿದೆ.

ತಿಂಗಳು ಮೊದಲೇ ಟಿಕೆಟ್​ ಮಾರಾಟ:

ಟಿ20 ವಿಶ್ವಕಪ್​ನ ರಣ ರೋಚಕ ಹೈವೋಲ್ಟೇಜ್​ ಪಂದ್ಯವಾದ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯವು ಅಕ್ಟೋಬರ್ 23 ರಂದು ನಡೆಯಲಿದೆ. ಈ ಪಂದ್ಯದ ಎಲ್ಲಾ ಟಿಕೆಟ್‌ಗಳು ಬಿಡುಗಡೆ ಆದ ಕೆಲವೇ ಕ್ಷಣಗಳಲ್ಲಿ ಮಾರಾಟವಾಗಿದೆ. ಅಕ್ಟೋಬರ್ 23 ರಂದು ಮೆಲ್ಬೋರ್ನ್‌ನಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ಪಂದ್ಯದ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿವೆ ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ.

ಈ ಪಂದ್ಯಕ್ಕೆ ಬಿಡುಗಡೆಯಾದ ಹೆಚ್ಚುವರಿ ಟಿಕೆಟ್‌ಗಳು ಕೆಲವೇ ನಿಮಿಷಗಳಲ್ಲಿ ಮಾರಾಟವಾಗಿವೆ ಎಂದು ಐಸಿಸಿ ತಿಳಿಸಿದೆ. ಐಸಿಸಿ ಪ್ರಕಾರ, 'ಈ ಪಂದ್ಯಕ್ಕಾಗಿ ಹೆಚ್ಚುವರಿ ಸ್ಟ್ಯಾಂಡಿಂಗ್ ರೂಮ್ ಟಿಕೆಟ್‌ಗಳನ್ನು ನೀಡಲಾಯಿತು, ಅವು ಕೂಡ ನಿರ್ಗಮಿಸಿದ ಕೆಲವೇ ನಿಮಿಷಗಳಲ್ಲಿ ಮಾರಾಟವಾಗಿವೆ.ಈ ಅಂಶವೇ ಹೇಳುತ್ತಿದೆ ಈ ಪಂದ್ಯದ ಮೇಲೆ ಅದೆಷ್ಟು ನಿರೀಕ್ಷೆಗಳಿವೆ ಎಂದು.

ಇದನ್ನೂ ಓದಿ: Dinesh Karthik: ಆಸ್ಟ್ರೇಲಿಯಾ ಕೇವಲ RCB ಆಟಗಾರರನ್ನು ಆಯ್ಕೆ ಮಾಡಿದೆ, ಆಸೀಸ್​ ಕಾಲೆಳೆದ ಡಿಕೆ

3ನೇ ಬಾರಿ ಇಂಡೋ-ಪಾಕ್​ ಕದನ:

ಈ ಬಾರಿ ಕ್ರಿಕೆಟ್​ ಅಭಿಮಾನಿಗಳಿಗೆ ಭರ್ಜರಿ ಹಬ್ಬವಿದ್ದಂತೆ. ಏಕೆಂದರೆ ಈಗಾಗಲೇ ಭಾರತ ಮತ್ತು ಪಾಕಿಸ್ತಾನ ತಂಡಗಳು ಏಷ್ಯಾ ಕಪ್​ 2022ರಲ್ಲಿ 2 ಬಾರಿ ಮುಖಾಮುಖಿ ಆಗಿವೆ. ಇದೀಗ ಮತ್ತೆ ಐಸಿಸಿ ಟಿ20 ವಿಶ್ವಕಪ್​ 2022ರಲ್ಲಿ ಉಭಯ ತಂಡಗಳು ಸೆಣಸಲಿದ್ದು, ಸೂಪರ್​ 4 ಹಂತದಲ್ಲಿನ ಸೋಲಿಗೆ ಭಾರತ ತಂಡ ಯಾವ ರೀತಿ ಉತ್ತರ ನೀಡಲಿದೆ ಎಂದು ಅಭಿಮಾನಿಗಳು ಕಾತುರರಾಗಿದ್ದಾರೆ.

ಟಿ20 ವಿಶ್ವಕಪ್ ಟೀಂ ಇಂಡಿಯಾ ವೇಳಾಪಟ್ಟಿ:

ಭಾರತ vs ಪಾಕಿಸ್ತಾನ – ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂ: ಅಕ್ಟೋಬರ್ 23
ಭಾರತ vs ಅರ್ಹತಾ ಸುತ್ತಿನ A ಗ್ರೂಪ್​ನ ರನ್ನರ್​ ಅಪ್ – ಸಿಡ್ನಿ ಕ್ರಿಕೆಟ್ ಸ್ಟೇಡಿಯಂ: ಅಕ್ಟೋಬರ್ 27
ಭಾರತ vs ದಕ್ಷಿಣ ಆಫ್ರಿಕಾ – ಪರ್ತ್ ಸ್ಟೇಡಿಯಂ: ಅಕ್ಟೋಬರ್ 30
ಭಾರತ vs ಬಾಂಗ್ಲಾದೇಶ -ಅಡಿಲೇಡ್ ಓವಲ್: ನವೆಂಬರ್ 2
ಭಾರತ vs ಅರ್ಹತಾ ಸುತ್ತಿನ B ಗ್ರೂಪ್​ನ ​ವಿನ್ನರ್: ನವೆಂಬರ್ 6

ಇದನ್ನೂ ಓದಿ: Asad Rauf Dies: ಹೃದಯಾಘಾತದಿಂದ ಮಾಜಿ ಅಂಪೈರ್ ನಿಧನ, ಕಂಬನಿ ಮಿಡಿದ ಕ್ರಿಕೆಟ್ ಲೋಕ

2022ರ ಟಿ20 ವಿಶ್ವಕಪ್‌ಗೆ ಭಾರತ ತಂಡ:



ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (WK), ದಿನೇಶ್ ಕಾರ್ತಿಕ್ (WK), ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಹಾಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ ಹರ್ಷಲ್ ಪಟೇಲ್ ಮತ್ತು ಅರ್ಷದೀಪ್ ಸಿಂಗ್.
ಸ್ಟ್ಯಾಂಡ್‌ಬೈಸ್: ಮೊಹಮ್ಮದ್ ಶಮಿ, ದೀಪಕ್ ಚಹಾರ್, ಶ್ರೇಯಸ್ ಅಯ್ಯರ್ ಮತ್ತು ರವಿ ಬಿಷ್ಣೋಯ್.
Published by:shrikrishna bhat
First published: