ICC Cricket Schedule: 2027ರ ವರೆಗಿನ ಕ್ರಿಕೆಟ್ ವೇಳಾಪಟ್ಟಿ ಪ್ರಕಟ, ಹೇಗಿದೆ ಟೀಂ ಇಂಡಿಯಾ ಶೆಡ್ಯೂಲ್​? ಇಲ್ಲಿದೆ ಸಂಪೂರ್ಣ ವಿವರ

ಐಸಿಸಿ ತನ್ನ ಮುಂಬರುವ ಪುರುಷರ ಕ್ರಿಕೆಟ್​ ಟೂರ್ನಿಗಳ ಸಂಪೂರ್ಣ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರ ಪ್ರಕಾರ 2022ರಿಂದ 2027ರ ವರೆಗಿನ ಸಂಪೂರ್ಣ ವೇಳಾಪಟ್ಟಿಯನ್ನು ರಿಲೀಸ್​ ಮಾಡಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) 2027ರವರೆಗಿನ ಪುರುಷರ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಹೌದು, ಒಟ್ಟು 5 ವರ್ಷಗಳ ಅಂದರೆ ಮುಂಬರುವ 2027ರ ವರೆಗಿನ ಐಸಿಸಿ ಟೂರ್ನಿಗಳ ವೇಳಾಪಟ್ಟಿಯನ್ನು ಇಂದು ಐಸಿಸಿ ಬಿಡುಗಡೆ ಮಾಡಿದೆ. ಅದರ ಭಾಗವಾಗಿ ಟೀಂ ಇಂಡಿಯಾಗೆ (Team India) ಬಿಡುವಿಲ್ಲದ ವೇಳಾಪಟ್ಟಿ ಪ್ರಕಟವಾದಂತಾಗಿದೆ. ಅಲ್ಲದೇ ನೂತನ ವೇಳಾಪಟ್ಟಿಯ ಭಾಗವಾಗಿ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ (Border-Gavaskar Trophy) ಸಹ ಘೋಷಣೆಯಾಗಿದ್ದು, ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 5 ಪಂದ್ಯಗಳ ಟೆಸ್ಟ್ ಪಂದ್ಯವೂ ಒಳಗೊಂಡಿದೆ. ಉಳಿದಂತೆ ಒಟ್ಟು 5 ವರ್ಷದಲ್ಲಿ ಅಂದರೆ 2023ರಿಂದ 2027ರ ವರೆಗೆ ಒಟ್ಟು 12 ದೇಶಗಳ ತಂಡಗಳು ದ್ವಿಪಕ್ಷೀಯ ಸರಣಿಗಳಲ್ಲಿ ಮುಖಾಮುಖಿಯಾಗಲಿದೆ. ಜೊತೆಗೆ ಒಟ್ಟು ಪಂದ್ಯಗಳ ಸಂಖ್ಯೆಯಲ್ಲಿಯೂ ಏರಿಕೆ ಕಂಡಿದ್ದು, ಬರೋಬ್ಬರಿ 777 ಅಂತರಾಷ್ಟ್ರೀಯ ಪಂದ್ಯಗಳು ಐಸಿಸಿ ನೇತೃತ್ವದಲ್ಲಿ ನಡೆಯಲಿದೆ.

ಐಸಿಸಿ ಬಿಡುಗಡೆ ಮಾಡಿರುವ ಸಂಪೂರ್ಣ ವೇಳಾಪಟ್ಟಿ:

ಐಸಿಸಿ 2023 ರಿಂದ 2027 ರವರೆಗೆ ಮುಂದಿನ ನಾಲ್ಕು ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಕಾರ್ಯಕ್ರಮವನ್ನು ಪ್ರಕಟಿಸಿದೆ. ಎಫ್‌ಟಿಪಿಯಲ್ಲಿ ಐಸಿಸಿ ನೀಡಿರುವ ಮಾಹಿತಿ ಪ್ರಕಾರ 12 ಸದಸ್ಯ ರಾಷ್ಟ್ರಗಳು ನಾಲ್ಕು ವರ್ಷಗಳಲ್ಲಿ ಒಟ್ಟು 777 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲಿವೆ. ಇದರಲ್ಲಿ 173 ಟೆಸ್ಟ್‌ಗಳು, 281 ODIಗಳು ಮತ್ತು 323 T20ಐಗಳು ಸೇರಿವೆ. ಪ್ರಸ್ತುತ, ವೃತ್ತಿಪರ T20 ಲೀಗ್‌ಗಳ ಹೆಚ್ಚುತ್ತಿರುವ ಪ್ರಭಾವದ ಹೊರತಾಗಿಯೂ, ICC ಅಂತಾರಾಷ್ಟ್ರೀಯ ಪಂದ್ಯಗಳ ಮೇಲೆ ಕೇಂದ್ರೀಕರಿಸಿದೆ.





30 ವರ್ಷಗಳ ನಂತರ ಬಾರ್ಡರ್-ಗವಾಸ್ಕರ್ ಟ್ರೋಫಿ 5 ಪಂದ್ಯ:

ಈ ನಾಲ್ಕು ವರ್ಷಗಳಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು 2 ಬಾರಿ ಆಯೋಜಿಸಲಾಗಿದೆ. ಉಭಯ ತಂಡಗಳ ನಡುವಿನ ಈ ಸರಣಿಯಲ್ಲಿ ಈಗ ಐದು ಟೆಸ್ಟ್ ಪಂದ್ಯಗಳು ನಡೆಯಲಿವೆ. ಈ ಹಿಂದೆ, ಕಳೆದ 30 ವರ್ಷಗಳಲ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ 4 ಟೆಸ್ಟ್ ಪಂದ್ಯಗಳನ್ನು ಆಡಲಾಗಿತ್ತು. ಉಭಯ ತಂಡಗಳ ನಡುವಿನ 5 ಟೆಸ್ಟ್ ಪಂದ್ಯಗಳ ಕೊನೆಯ ಸರಣಿಯು 1992 ರಲ್ಲಿ ನಡೆದಿತ್ತು.

ಟೀಂ ಇಂಡಿಯಾವು 2023 ರಿಂದ ಫೆಬ್ರವರಿ 2027 ರವರೆಗೆ 44 ಟೆಸ್ಟ್, 63 ಏಕದಿನ ಮತ್ತು 76 T20 ಪಂದ್ಯಗಳನ್ನು ಆಡಲಿದೆ. ಆದರೆ 2024ರಲ್ಲಿ ಯಾವುದೇ ಸರಣಿಯನ್ನು ದೇಶದ ವಿರುದ್ಧ ಆಡುವುದಿಲ್ಲ.

ಇದನ್ನೂ ಓದಿ: IND vs PAK: ಭಾರತ- ಪಾಕಿಸ್ತಾನಕ್ಕೆ ಪಂದ್ಯಕ್ಕೆ ದಿನಗಣನೆ, ಟಿಕೆಟ್​ ಬೆಲೆ ನೋಡಿ ಶಾಕ್ ಆದ ಕ್ರಿಕೆಟ್​ ಫ್ಯಾನ್ಸ್!

ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪಂದ್ಯಗಳು:

2023 ಮತ್ತು 2025 ರ ನಡುವೆ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸರಣಿಗಾಗಿ ನ್ಯೂಜಿಲೆಂಡ್, ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ಭಾರತಕ್ಕೆ ಪ್ರವಾಸ ಕೈಗೊಳ್ಳಲಿದೆ. ಟೀಂ ಇಂಡಿಯಾ ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ.

2025 ರಿಂದ 2027 ರ ಟೆಸ್ಟ್ ಚಾಂಪಿಯನ್‌ಶಿಪ್‌ಗಾಗಿ ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ಭಾರತಕ್ಕೆ ಬರಲಿವೆ. ಇಂಗ್ಲೆಂಡ್, ಶ್ರೀಲಂಕಾ ಮತ್ತು ನ್ಯೂಜಿಲೆಂಡ್‌ನಲ್ಲಿರುವಾಗ ಭಾರತ ತಂಡವು ಆತಿಥೇಯ ತಂಡದೊಂದಿಗೆ ಎರಡು ಪಂದ್ಯ ಆಡಲಿದೆ.

ಇದನ್ನೂ ಓದಿ: IND vs ZIM: ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟ RCB ಆಟಗಾರ, ಜಿಂಬಾಬ್ವೆ ಸರಣಿಯಿಂದ ಸುಂದರ್​ ಔಟ್​

ಎರಡು ವಿಶ್ವಕಪ್‌ ಟೂರ್ನಿಗಳು:

ಹೌದು, ಈ ವರ್ಷದ ಆಸ್ಟ್ರೇಲಿಯಾದ ಆತಿಥ್ಯದಲ್ಲಿನ ಟಿ20 ವಿಶ್ವಕಪ್ ಹೊರತಾಗಿ ಮುಂಬರುವ ವೆಸ್ಟ್ ಇಂಡೀಸ್ ಮತ್ತು ಯುಎಸ್ಎ 2024 ರ T20 ವಿಶ್ವಕಪ್ ಅನ್ನು ಸಹ ಇದರಲ್ಲಿ ಒಳಗೊಂಡಿದೆ.  2025 ರ ಚಾಂಪಿಯನ್ಸ್ ಟ್ರೋಫಿಯನ್ನು ಪಾಕಿಸ್ತಾನ ನಡೆಸಲಿದೆ. ಉಳಿದಂತೆ ಭಾರತ ಮತ್ತು ಶ್ರೀಲಂಕಾ 2026 ರ ICC T20 ವಿಶ್ವಕಪ್‌ ನಡೆಸಲಿದೆ. ಅಂತಿಮವಾಗಿ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ 2027ರಲ್ಲಿ ಏಕದಿನ ವಿಶ್ವಕಪ್‌ಗೆ ಆತಿಥ್ಯ ವಹಿಸಲಿವೆ. ಒಟ್ಟಾರೆಯಾಗಿ ಬಿಡುವಿಲ್ಲದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
Published by:shrikrishna bhat
First published: