ಭಾರತ ಕ್ರಿಕೆಟ್ ತಂಡಕ್ಕೆ ಎರಡು ದಿನದಲ್ಲಿ ಎರಡು ಶುಭ ಸುದ್ದಿ ಕೇಳಿಬಂದಿದೆ. ಇಂದೋರ್ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ (IND vs NZ) ತಂಡವನ್ನು ಸೋಲಿಸುವ ಮೂಲಕ ಟೀಂ ಇಂಡಿಯಾ (Team India) ಏಕದಿನದಲ್ಲಿ ನಂಬರ್-1 ತಂಡವಾಯಿತು. ಮರುದಿನವೇ ಭಾರತಕ್ಕೆ ಮತ್ತೊಂದು ಒಳ್ಳೆಯ ಸುದ್ದಿ ಸಿಕ್ಕಂತಾಗಿದೆ. ಹೌದು, ವೇಗಿ ಮೊಹಮ್ಮದ್ ಸಿರಾಜ್ (Mohammed Siraj) ಏಕದಿನ ಕ್ರಿಕೆಟ್ನ ನಂಬರ್ 1 ಬೌಲರ್ ಆಗಿದ್ದಾರೆ. ಅವರು ನ್ಯೂಜಿಲೆಂಡ್ ವೇಗದ ಬೌಲರ್ ಟ್ರೆಂಟ್ ಬೌಲ್ಟ್ (Trent Boult ) ಅವರನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ್ದಾರೆ. ಅವರು ಮೊದಲ ಬಾರಿಗೆ ಏಕದಿನದ ನಂಬರ್-1 ಬೌಲರ್ ಆಗಿದ್ದಾರೆ.
ಅದ್ಭುತ ಬೌಲಿಂಗ್ ಮಾಡುತ್ತಿರುವ ಸಿರಾಜ್:
ಮೊಹಮ್ಮದ್ ಸಿರಾಜ್ ಕಳೆದ ಒಂದು ವರ್ಷದಿಂದ ಅದ್ಭುತ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದಾರೆ. 3 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಕಳೆದ ವರ್ಷ ಫೆಬ್ರವರಿಯಲ್ಲಿ ಅವರು ಭಾರತೀಯ ODI ತಂಡಕ್ಕೆ ಕಂಬ್ಯಾಕ್ ಮಾಡಿದರು. ಅಂದಿನಿಂದ ಅವರು ಉತ್ತಮವಾಗಿ ಬೌಲಿಂಗ್ ಮಾಡಿದ್ದಾರೆ. ಅಂದಿನಿಂದ ಇಂದಿನವರೆಗೆ 20 ಪಂದ್ಯಗಳಲ್ಲಿ 37 ವಿಕೆಟ್ ಪಡೆದಿದ್ದಾರೆ. ಈ ಮೂಲಕ ಅವರು 2022ರ ಐಸಿಸಿ ವರ್ಷದ ODI ತಂಡದಲ್ಲಿ ಸ್ಥಾನ ಪಡೆದರು. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹ ಅನುಭವಿ ಬ್ಯಾಟ್ಸ್ಮನ್ಗಳು ಈ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದರು.
🚨 There's a new World No.1 in town 🚨
India's pace sensation has climbed the summit of the @MRFWorldwide ICC Men's ODI Bowler Rankings 🔥
More 👇
— ICC (@ICC) January 25, 2023
ಇದನ್ನೂ ಓದಿ: ICC Mens ODI Team: ಐಸಿಸಿ ಏಕದಿನ ತಂಡದಲ್ಲಿ ಕೊಹ್ಲಿ-ರೋಹಿತ್ಗಿಲ್ಲ ಸ್ಥಾನ, ಪಾಕ್ ಆಟಗಾರನಿಗೆ ನಾಯಕನ ಪಟ್ಟ
ಶಮಿ ರ್ಯಾಂಕಿಂಗ್ನಲ್ಲಿಯೂ ಏರಿಕೆ:
ಮೊಹಮ್ಮದ್ ಸಿರಾಜ್ ಹೊರತಾಗಿ, ಮೊಹಮ್ಮದ್ ಶಮಿ ಕೂಡ ಬೌಲರ್ಗಳ ಇತ್ತೀಚಿನ ಏಕದಿನ ರ್ಯಾಂಕಿಂಗ್ನಲ್ಲಿ ಏರಿಕೆ ಕಂಡಿದ್ದಾರೆ. 11 ಸ್ಥಾನ ಮೇಲೇರಿ 32ನೇ ಸ್ಥಾನಕ್ಕೆ ತಲುಪಿದ್ದಾರೆ. ಅದೇ ಸಮಯದಲ್ಲಿ, ಶುಭಮನ್ ಗಿಲ್ ಬ್ಯಾಟ್ಸ್ಮನ್ಗಳ ಶ್ರೇಯಾಂಕದಲ್ಲಿ ಉತ್ತಮ ಏರಿಕೆ ಕಂಡಿದ್ದಾರೆ. 20 ಸ್ಥಾನ ಜಿಗಿದು ನೇರವಾಗಿ ಆರನೇ ಸ್ಥಾನಕ್ಕೆ ಬಂದಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ದ್ವಿಶತಕ ಹಾಗೂ ಶತಕ ಬಾರಿಸಿದ್ದರು. ವಿರಾಟ್ ಕೊಹ್ಲಿ ಒಂದು ಸ್ಥಾನ ಕುಸಿತಕಂಡಿದ್ದು 7ನೇ ಸ್ಥಾನದಲ್ಲಿದ್ದಾರೆ. ಭಾರತದ ನಾಯಕ ರೋಹಿತ್ ಶರ್ಮಾ ಒಂದು ಸ್ಥಾನ ಏರಿಕೆ ಆಗಿದ್ದು, 9ನೇ ಸ್ಥಾನಕ್ಕೆ ತಲುಪಿದ್ದಾರೆ.
ಐಸಿಸಿ ಏಕದಿನ ತಂಡದಿಂದ ಕೊಹ್ಲಿ-ರೋಹಿತ್ ಔಟ್:
ಇನ್ನು, ಐಸಿಸಿ ಏಕದಿನ 2022ರ ತಂಡವನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಪಾಕ್ ಆಟಗಾರ ಮೊಹಮ್ಮದ್ ಸಿರಾಜ್ ನಾಯಕರಾಗಿದ್ದಾರೆ. ಐಸಿಸಿ ಬಿಡುಗಡೆ ಮಾಡುವ ಏಕದಿನ ತಂಡದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಹೆಸರು ಕಾಣೆಯಾಗಿದ್ದು, ಅವರ ಅಭಿಮಾನಿಗಳಿಗೆ ಬೇಸರತರಿಸಿದೆ. ಆದರೆ ಭಾರತದ ಪರ ಶ್ರೇಯಸ್ ಅಯ್ಯರ್ ಹಾಗೂ ಮೊಹಮ್ಮದ್ ಸಿರಾಜ್ ಇಬ್ಬರು ಸ್ಥಾನ ಪಡೆದುಕೊಂಡಿದ್ದಾರೆ.
ಐಸಿಸಿ ODI ತಂಡ 2022: ಬಾಬರ್ ಆಝಮ್(ನಾಯಕ), ಟ್ರಾವಿಡ್ ಹೆಡ್, ಶಾಯ್ ಹೋಪ್, ಶ್ರೇಯಸ್ ಅಯ್ಯುರ್, ಟಾಮ್ ಲೇಥಮ್ (ವಿ.ಕೀ), ಸಿಕಂದರ್ ರಾಜಾ, ಮೆಹದಿ ಹಸನ್, ಅಲ್ಝಾರಿ ಜೋಸೆಫ್, ಮೊಹಮ್ಮದ್ ಸಿರಾಜ್, ಟ್ರೆಂಟ್ ಬೌಲ್ಟ್, ಆಡಂ ಝಾಫ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ