• Home
  • »
  • News
  • »
  • sports
  • »
  • T20 World Cup 2022: ಟಿ20 ವಿಶ್ವಕಪ್ ನಿಯಮದಲ್ಲಿ ಬದಲಾವಣೆ, ಸೆಮೀಸ್​ಗೂ ಮುನ್ನ ಐಸಿಸಿ ಮಹತ್ವದ ನಿರ್ಧಾರ

T20 World Cup 2022: ಟಿ20 ವಿಶ್ವಕಪ್ ನಿಯಮದಲ್ಲಿ ಬದಲಾವಣೆ, ಸೆಮೀಸ್​ಗೂ ಮುನ್ನ ಐಸಿಸಿ ಮಹತ್ವದ ನಿರ್ಧಾರ

ಐಸಿಸಿ

ಐಸಿಸಿ

T20 World Cup 2022: ಮಳೆಯಿಂದಾಗಿ ಮೆಗಾ ಟೂರ್ನಿಯ ಮಹತ್ವದ ಪಂದ್ಯಗಳಿಗೆ ಯಾವುದೇ ತೊಂದರೆ ಆಗಬಾರದು ಎಂಬ ಕಾರಣಕ್ಕಾಗಿ ಐಸಿಸಿ ಕೆಲ ನಿಯಮಗಳನ್ನು ತಿಳಿಸಿದೆ. ಅದರಂತೆ ಈ ಬಾರಿ ಟಿ20 ವಿಶ್ವಕಪ್​ನಲ್ಲಿನ ಸೆಮೀಸ್ ಮತ್ತು ಫೈನಲ್ ಮ್ಯಾಚ್​ಗಳಲ್ಲಿ ಮಳೆ ಬಂದಲ್ಲಿ ಪಂದ್ಯದ ರಿಸಲ್ಟ್ ಪಡೆಯುವ ನಿಯಮದಲ್ಲಿ ಬದಲಾವಣೆ ಮಾಡಿಕೊಂಡಿದೆ.

ಮುಂದೆ ಓದಿ ...
  • Share this:

ಟಿ20 ವಿಶ್ವಕಪ್‌ 2022  (T20 World Cup 2022) ಅಂತಿಮ ಹಂತಕ್ಕೆ ಬಂದು ತಲುಪಿದೆ. ನಾಳೆಯ ಭಾರತ ಮತ್ತು ಜಿಂಬಾಬ್ವೆ (IND vs ZIM) ವಿರುದ್ಧ ಪಂದ್ಯದ ಮೂಲ ಲೀಗ್​ ಸೂಪರ್​ 12 ಹಂತವು ಅಂತ್ಯವಾಗಲಿದೆ. ಬಳಿಕ ಸೆಮೀಸ್​ ಮತ್ತು ಫೈನಲ್​ ಪಂದ್ಯಗಳು ಮಾತ್ರ ಉಳಿಯಲಿದೆ. ಆದರೆ ಈ ಬಾರಿ ವಿಚಿತ್ರ ಎಂಬಂತೆ ಈವರೆಗೂ ಯಾವ ಯಾವ ತಂಡಗಳು ಸೆಮೀಸ್​ ಪ್ರವೇಶಿಸಲಿದೆ ಎಂಬುದರ ಕುರಿತು ಸ್ಪಷ್ಟ ಚಿತ್ರಣ ದೊರಕಿಲ್ಲ. ಆದರೆ ಗ್ರೂಪ್ 1ರಲ್ಲಿ ಈಗಾಗಲೇ ನ್ಯೂಜಿಲ್ಯಾಂಡ್ (New Zealand) ತಂಡ ಸೆಮೀಸ್​ಗೆ ತಲುಪಿದೆ. ಉಳಿದಂತೆ ಯಾವ ತಂಡ ಸಹ ಈವರೆಗೂ ಸ್ಪಷ್ಟವಾಗಿ ಸೆಮೀಸ್​ ಹಾದಿ ತುಳಿದಿಲ್ಲ. ಇದರ ನಡುವೆ ಈ ಬಾರಿ ಟಿ20 ವಿಶ್ವಕಪ್​ನಲ್ಲಿ ಬ್ಯಾಟ್​-ಬೌಲ್​ಗಳಿಗಿಂತ ಹೆಚ್ಚಾಗಿ ಮಳೆಯ ಆಟವೇ ಜೋರಾಗಿತ್ತು ಎಂದರೂ ತಪ್ಪಾಗಲಾರದು.


ಹೀಗಾಗಿ ಅನೇಕ ಪಂದ್ಯಗಳಿಗೆ ಸಮಸ್ಯೆ ಆಗಿತ್ತು. ಇದೇ ಕಾರಣಕ್ಕಾಗಿ ಐಸಿಸಿ (ICC) ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳಿಗೆ ಅನ್ವಯವಾಗುವಂತಾ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.


ಸೆಮೀಸ್​-ಫೈನಲ್ ಪಂದ್ಯಕ್ಕೆ ನಿಯಮ ಬದಲು:


ಹೌದು, ಮಳೆಯಿಂದಾಗಿ ಮೆಗಾ ಟೂರ್ನಿಯ ಮಹತ್ವದ ಪಂದ್ಯಗಳಿಗೆ ಯಾವುದೇ ತೊಂದರೆ ಆಗಬಾರದು ಎಂಬ ಕಾರಣಕ್ಕಾಗಿ ಐಸಿಸಿ ಕೆಲ ನಿಯಮಗಳನ್ನು ತಿಳಿಸಿದೆ. ಅದರಂತೆ ಈ ಬಾರಿ ಟಿ20 ವಿಶ್ವಕಪ್​ನಲ್ಲಿನ ಸೆಮೀಸ್ ಮತ್ತು ಫೈನಲ್ ಮ್ಯಾಚ್​ಗಳಲ್ಲಿ ಮಳೆ ಬಂದಲ್ಲಿ ಪಂದ್ಯದ ರಿಸಲ್ಟ್ ಪಡೆಯುವ ನಿಯಮದಲ್ಲಿ ಬದಲಾವಣೆ ಮಾಡಿಕೊಂಡಿದೆ. ಮಳೆಯಿಂದಾಗಿ ಪಂದ್ಯಕ್ಕೆ ಅಡ್ಡಿ ಆದಲ್ಲಿ ಫಲಿತಾಂಶಕ್ಕಾಗಿ ಎರಡು ತಂಡಗಳು ಕೂಡ ಕನಿಷ್ಠ 10 ಓವರ್‌ಗಳನ್ನು ಆಡಬೇಕು ಎಂದು ನಿಯಮದಲ್ಲಿ ಬದಲಾವಣೆ ಮಾಡಿದೆ. ಇದಕ್ಕೂ ಮೊದಲು ಲೀಗ್​ ಹಂತದಲ್ಲಿ ಈ ಓವರ್​ಗಳ ಸಂಖ್ಯೆ ಕೇವಲ 5 ಆಗಿತ್ತು.


ಇದನ್ನೂ ಓದಿ: T20 WC 2022 PAK vs SA: ಆಫ್ರಿಕಾ ವಿರುದ್ಧ ಪಾಕ್​ ತಂಡಕ್ಕೆ ಭರ್ಜರಿ ಜಯ, ಟೀಂ ಇಂಡಿಯಾಗೆ ಹೆಚ್ಚಿದ ಟೆನ್ಷನ್


ಮೀಸಲು ದಿನದ ಹೊಸ ನಿಯಮ:


ಒಂದು ವೇಳೆ ಮಳೆಯ ಕಾರಣ ಸಂಪೂರ್ಣ ದಿನವೇ ಹಾಳಾಯಿತು ಎಂದು ಆದಲ್ಲಿ ಆಗಲೂ ಸಹ ಐಸಿಸಿ ಇದಕ್ಕೆ ಪರಿಯಾಯ ನಿಯಮವನ್ನು ತಿಳಿಸಿದೆ. ಅದರಂತೆ ಮಳೆಯಿಂದ ಹಾಳಾದ ಸಂಪೂರ್ಣ ಪಂದ್ಯಕ್ಕೆ ಮೀಸಲು ದಿನ ಇಡುತ್ತಾರೆ. ಅದರಂತೆ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳಿಗೆ ಮೀಸಲು ದಿನಗಳಿದ್ದು, ಇದರ ಮೂಲಕ ಫಲಿತಾಂಶಕ್ಕಾಗಿ ನಿರೀಕ್ಷಿಸಲಾಗಿದೆ. ಇಲ್ಲಿಯೂ ಒಂದು ಪ್ರಮುಖ ಅಂಶವೇನೆಂದರೆ ಮೀಸಲು ದಿನ ಇಡುವ ಮುನ್ನ ಅಂದರೆ ಎರಡು ತಂಡಗಳು ಕನಿಷ್ಠ 10 ಓವರ್‌ಗಳ ಆಟವನ್ನು ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ ಮಾತ್ರ ಈ ನಿರ್ಧಾರ ಅನ್ವಯವಾಗುತ್ತದೆ.


ಇದನ್ನೂ ಓದಿ: HBD Virat Kohli: ಕೊಹ್ಲಿ ಕೈ ಮೇಲಿನ ಶಿವನ ಟ್ಯಾಟೂದ ನಿಜವಾದ ಅರ್ಥ ಏನು? ವಿರಾಟ್ ಪ್ರತಿ ಹಚ್ಚೆಯ ಹಿಂದಿದೆ ಇಂಟ್ರಸ್ಟಿಂಗ್​ ಕಹಾನಿ!


ಮುಗಿಯದ ಸೆಮೀಸ್ ಲೆಕ್ಕಾಚಾರ:


ಭಾರತ ಸೆಮಿಫೈನಲ್ ತಲುಪಬೇಕಾದರೆ ಜಿಂಬಾಬ್ವೆ ವಿರುದ್ಧದ ಅಂತಿಮ ಪಂದ್ಯದಲ್ಲಿ ಗೆಲ್ಲಲೇಬೇಕು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದರೆ ಎರಡನೇ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಸೆಮಿಫೈನಲ್ ತಲುಪಲಿದೆ, ಆದರೆ ಜಿಂಬಾಬ್ವೆ ಟೀಂ ಇಂಡಿಯಾವನ್ನು ಸೋಲಿಸಿದರೆ, ಭಾರತವು ಸೆಮಿಫೈನಲ್ ತಲುಪಲು ಬಾಂಗ್ಲಾದೇಶ ಪಾಕಿಸ್ತಾನ ಅಥವಾ ನೆದರ್ಲ್ಯಾಂಡ್ಸ್ ದಕ್ಷಿಣ ಆಫ್ರಿಕಾವನ್ನು ಸೋಲಿಸಬೇಕಾಗುತ್ತದೆ. ಅದರಂತೆ ಗ್ರೂಪ್ 1ರಲ್ಲಿ 3 ತಂಡಗಳು 7 ಅಂಕ ಹೊಂದಿದ್ದು, ಕಿವೀಸ್​ ಸೆಮೀಸ್​ ಪಕ್ಕಾ ಆಗಿದೆ. ಆದರೆ ಇಂಗ್ಲೆಂಡ್ ಇಂದು ಲಂಕಾ ವಿರುದ್ಧ ಗೆದ್ದರೆ ಮಾತ್ರ ಸೆಮೀಸ್​ ಹಂತಕ್ಕೆ ತಲುಪಲಿದೆ. ಇಲ್ಲವಾದಲ್ಲಿ ಗ್ರೂಪ್ 1ರಲ್ಲಿ ಕಿವೀಸ್ ಜೊತೆ ಆಸ್ಟ್ರೇಲಿಯಾ ತಂಡ ಸೆಮೀಸ್​ಗೆ ಹೋಗಲಿದೆ.

Published by:shrikrishna bhat
First published: