ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2021-23 ಫೈನಲ್‌ನ (ICC World Test Championship 2023) ದಿನಾಂಕ ಮತ್ತು ಸ್ಥಳವನ್ನು ತಿಳಿಸಿದೆ. WTC ಫೈನಲ್ ಲಂಡನ್ ಓವಲ್‌ನಲ್ಲಿ (The Oval ) ನಡೆಯಲಿದೆ. ಈ ಪಂದ್ಯವು ಓವಲ್‌ನಲ್ಲಿ ಜೂನ್ 7 ರಿಂದ 11ರ ವರೆಗೆ ನಡೆಯಲಿದ್ದು, ಒಂದು ದಿನವನ್ನು ಮೀಸಲು ದಿನವಾಗಿ ಇರಿಸಲಾಗಿದೆ. ಈ ಮೀಸಲು ದಿನ ಜೂನ್ 12 ಎಂದು ನಿಗಧಿಪಡಿಸಲಾಗಿದೆ. ಈ ವಿಚಾರವನ್ನು ಐಸಿಸಿ (ICC) ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳ ಮೂಲಕ ಘೋಷಣೆ ಮಾಡಿದೆ. ಈ ವರ್ಷದ ಕೊನೆಯಲ್ಲಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್‌ನ (WTC 2023) ದಿನಾಂಕಗಳನ್ನು ಬಹಿರಂಗಪಡಿಸಲಾಗಿದೆ ಎಂದು ಜಾಗತಿಕ ಕ್ರಿಕೆಟ್ ಸಂಸ್ಥೆ ಟ್ವಿಟರ್‌ನಲ್ಲಿ ಬರೆದುಕೊಂಡಿದೆ.
ಜೂನ್ನಲ್ಲಿ WTC 2023 ಫೈನಲ್:
ಬಹುನಿರೀಕ್ಷಿತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2021-23 ಫೈನಲ್‌ನ ದಿನಾಂಕ ಮತ್ತು ಆಟ ನಡೆಯಲಿರುವ ಸ್ಥಳದ ಬಗ್ಗೆ ಐಸಿಸಿ ಬಹಿರಂಗಪಡೆಸಿದೆ. ಈ ಟೆಸ್ಟ್ ವಿಶ್ವಕಪ್ ಪಂದ್ಯವು ಲಂಡನ್ನ ಓವೆಲ್ನಲ್ಲಿ ಜೂನ್ 7ರಿಂದ 11ರ ವರೆಗೆ ನಡೆಯಲಿದೆ. ಇದರೊಂದಿಗೆ ಪಂದ್ಯಕ್ಕೆ ಮಳೆ ಅಥವಾ ಯಾವುದೇ ರೀತಿಯ ಅಡ್ಡಿಯಾದ್ದಲ್ಲಿ ಒಂದು ದಿನ (ಜೂನ್ 12) ಮೀಸಲು ದಿನವನ್ನು ಇರಿಸಲಾಗಿದೆ. ಈಗಾಗಲೇ ಆಸ್ಟ್ರೇಲಿಯಾ ತಂಡ WTC 2023ರ ಫೈನಲ್ ಹಂತಕ್ಕೆ ತಲುಪಿದೆ. ಆದರೆ ಉಳಿದ ಒಂದು ಸ್ಥಾನಕ್ಕೆ ಭಾರತ, ದಕ್ಷಿಣ ಆಪ್ರಿಕಾ ಮತ್ತು ಶ್ರೀಲಂಕಾ ತಂಡಗಳು ಸೆಣಸಾಡುತ್ತಿವೆ.
Mark your calendars 🗓
The dates for the ICC World Test Championship Final later this year have been revealed 🤩#WTC23https://t.co/gOJcoWVc58
— ICC (@ICC) February 8, 2023
ಈಗಾಗಲೇ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ನ ಫೈನಲ್‌ಗೆ ಆಸ್ಟ್ರೇಲಿಯಾ ತಂಡ 75.56 ಅಂಕಗಳೊಂದಿಗೆ ಅಗ್ರ ತಂಡವಾಗಿ ಎಂಟ್ರಿಕೊಟ್ಟಿದೆ. ಉಳಿದಂತೆ ಭಾರತವು 58.93 ರ ಅಂಕದೊಂದಿಗೆ 2ನೇ ಸ್ಥಾನದಲ್ಲಿದೆ. ಉಳಿದಂತೆ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿರುವ ಶ್ರೀಲಂಕಾ (53.33%) ಮತ್ತು ದಕ್ಷಿಣ ಆಫ್ರಿಕಾ (48.72%) ಸಹ ಇದ್ದು, ಈ ತಂಡಗಳೂ ಸಹ ಡಬ್ಲೂಟಿಸಿ ರೇಸ್ನಲ್ಲಿದೆ.
ಇದನ್ನೂ ಓದಿ: IND vs AUS Test: ಆಸೀಸ್ ವಿರುದ್ಧ ಸರಣಿ ಸೋತರೂ ಭಾರತಕ್ಕಿದೆ WTC ಚಾನ್ಸ್! ಆದ್ರೆ ಇದರಲ್ಲಿದೆ ಬಿಗ್ ಟ್ವಿಸ್ಟ್
ಅದರ ಭಾಗವಾಗಿ ಇದೀಗ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು 4 ಟೆಸ್ಟ್ ಪಂದ್ಯ, ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಲಾ 2 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಈ ಸರಣಿ ಬಳಿಕ ಫೈನಲ್ ತಂಡಗಳು ನಿರ್ಧಾರವಾಗಲಿದೆ.
ಹೊಸ ಇತಿಹಾಸವನ್ನು ರಚಿಸುವ ನಿರೀಕ್ಷೆಯಿದೆ:
ಪ್ಯಾಟ್ ಕಮ್ಮಿನ್ಸ್, ಆಸ್ಟ್ರೇಲಿಯಾ: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಡುವ ನಿರೀಕ್ಷೆಯು ಕಳೆದ ಎರಡು ವರ್ಷಗಳಿಂದ ನಮಗೆ ದೊಡ್ಡ ಪ್ರೇರಣೆಯಾಗಿದೆ. ಈಗ ಆ ಅವಕಾಶ ದೊರಕುವ ಸನಿಹದಲ್ಲಿದ್ದೇವೆ ಎಂದಿದ್ದಾರೆ.
ರೋಹಿತ್ ಶರ್ಮಾ, ಭಾರತ: ಇತ್ತೀಚೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಹಲವು ನಾಟಕೀಯ ಕ್ಷಣಗಳು ನಡೆದಿವೆ ಮತ್ತು ನಿಸ್ಸಂದೇಹವಾಗಿ ಇನ್ನಷ್ಟು ನಡೆಯಲಿವೆ. ಫೈನಲ್‌ನಲ್ಲಿ ನಮ್ಮ ಸ್ಥಾನವನ್ನು ಕಾಯ್ದಿರಿಸುವ ನಿರೀಕ್ಷೆಯಿಂದ ನಾನು ಉತ್ಸುಕನಾಗಿದ್ದೇನೆ ಮತ್ತು ಹೊಸ ಇತಿಹಾಸವನ್ನು ರಚಿಸುವ ನಿರೀಕ್ಷೆಯಿದೆ ಎಂದಿದ್ದಾರೆ.
ದಿಮುತ್ ಕರುಣಾರತ್ನೆ, ಶ್ರೀಲಂಕಾ: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಪ್ರವೇಶಿಸಲು ಶ್ರೀಲಂಕಾಗೆ ಇನ್ನೂ ಉತ್ತಮ ಅವಕಾಶವಿದೆ. ನಾವು ಅಗ್ರ ಸ್ಪರ್ಧಿಗಳ ನಡುವೆ ಉತ್ತಮ ಸಾಧನೆ ಮಾಡಿದ್ದೇವೆ ಮತ್ತು ಮುಂಬರುವ ನ್ಯೂಜಿಲೆಂಡ್ ಪ್ರವಾಸದಲ್ಲಿ ನಾವು ಉತ್ತಮ ಪ್ರದರ್ಶನ ನೀಡಿದರೆ ಫೈನಲ್‌ಗೆ ಪ್ರವೇಶಿಸುವ ನಮ್ಮ ಅವಕಾಶಗಳು ಹೆಚ್ಚಿನ ಸಾಧ್ಯತೆಯನ್ನು ತೋರುತ್ತವೆ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ