• Home
  • »
  • News
  • »
  • sports
  • »
  • T20 World Cup 2022: ಟಿ20 ವಿಶ್ವಕಪ್ ಬಹುಮಾನದ ಮೊತ್ತ ಘೋಷಣೆ, ಚಾಂಪಿಯನ್​ ತಂಡಕ್ಕೆ ಇಷ್ಟು ಕೋಟಿ ಸಿಗುತ್ತೆ!

T20 World Cup 2022: ಟಿ20 ವಿಶ್ವಕಪ್ ಬಹುಮಾನದ ಮೊತ್ತ ಘೋಷಣೆ, ಚಾಂಪಿಯನ್​ ತಂಡಕ್ಕೆ ಇಷ್ಟು ಕೋಟಿ ಸಿಗುತ್ತೆ!

ಟಿ20 ವಿಶ್ವಕಪ್​ 2022

ಟಿ20 ವಿಶ್ವಕಪ್​ 2022

T20 World Cup 2022: ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ T20 ವಿಶ್ವಕಪ್‌ನ ಬಹುಮಾನದ ಹಣವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪ್ರಕಟಿಸಿದೆ. ಒಟ್ಟು ಬಹುಮಾನದ ಮೊತ್ತ 45 ಕೋಟಿ ರೂ. ಚಾಂಪಿಯನ್, ರನ್ನರ್ ಅಪ್ ಹೊರತುಪಡಿಸಿ ಸೆಮಿಫೈನಲ್ ಆಡುವ ತಂಡಗಳಿಗೆ ಎಷ್ಟು ಹಣ ನೀಡಲಾಗುತ್ತದೆ ಎಂಬ ವಿವರ ಇಲ್ಲಿದೆ ನೋಡಿ.

ಮುಂದೆ ಓದಿ ...
  • Share this:

ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ (Australia) ನಡೆಯಲಿರುವ ಟಿ20 ವಿಶ್ವಕಪ್ ಗೆ (T20 World Cup 2022) ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ಈಗಾಗಲೇ ತಂಡಗಳು ವಿಶ್ವಕಪ್​ಗಾಗಿ ಭರ್ಜರಿ ತಯಾರಿಯಲ್ಲಿದ್ದು, ಎಲ್ಲಾ ತಂಡಗಳು ತಮ್ಮ ಆಟಗಾರರ ಪಟ್ಟಿಯನ್ನೂ ಈಗಾಗಲೇ ಬಿಡುಗಡೆ ಮಾಡಿದೆ. ಇದರ ನಡುವೆ ಐಸಿಸಿ ಸಹ ಟಿ20 ವಿಶ್ವಕಪ್​ನ ಸಂಪೂರ್ಣ ವೇಳಾಪಟ್ಟಿಯನ್ನು ರಿಲೀಸ್​ ಮಾಡಿದೆ. ಆದರೆ ಇದೀಗ ಐಸಿಸಿ (ICC) ಟಿ20 ವಿಶ್ವಕಪ್​ನ ಬಹುಮಾನದ ಮೊತ್ತವನ್ನು ತಿಳಿಸಿದ್ದು, ಸೆಮಿಫೈನಲ್​, ಫೈನಲ್​ ಮತ್ತು ಚಾಂಪಿಯನ್​ ತಂಡಗಳಿಗೆ ಎಷ್ಟು ಮೊತ್ತದ ಹಣ (Prize Money) ದೊರಕಲಿದೆ ಎಂಬ ಕುತೂಹಲಕ್ಕೆ ಕೊನೆಗೂ ತೆರೆ ಎಳೆದಿದೆ. ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಶುಕ್ರವಾರ ಹೇಳಿಕೆ ನೀಡುವ ಮೂಲಕ ಈ ಮಾಹಿತಿ ಬಹಿರಂಗಪಡಿಸಿದೆ.


ಟಿ20 ವಿಶ್ವಕಪ್​ ಬುಮಾನದ ಮೊತ್ತ ಎಷ್ಟು?:


ನವೆಂಬರ್ 13 ರಂದು ಮೆಲ್ಬೋರ್ನ್‌ನಲ್ಲಿ ನಡೆಯುವ ಐಸಿಸಿ ಟಿ 20 ವಿಶ್ವಕಪ್‌ನ ಫೈನಲ್‌ನಲ್ಲಿ ಗೆಲ್ಲುವ ತಂಡವು US $ 1.6 ಮಿಲಿಯನ್ ಬಹುಮಾನವನ್ನು ಪಡೆಯುತ್ತದೆ. ಅಂದರೆ 13 ಕೋಟಿ ರೂಪಾಯಿ ಬಹುಮಾನ ಸಿಗಲಿದೆ. ಅದೇ ಸಮಯದಲ್ಲಿ ರನ್ನರ್ ಅಪ್ ತಂಡಕ್ಕೆ 8 ಲಕ್ಷ ಅಮೆರಿಕನ್ ಡಾಲರ್ ಅಂದರೆ ಸುಮಾರು ಆರೂವರೆ ಕೋಟಿ ರೂಪಾಯಿ ಬಹುಮಾನ ಸಿಗಲಿದೆ. ಟಿ20 ವಿಶ್ವಕಪ್‌ನ ಒಟ್ಟು ಬಹುಮಾನದ ಮೊತ್ತ 5.6 ಮಿಲಿಯನ್ ಅಮೆರಿಕನ್ ಡಾಲರ್ ಅಂದರೆ 45 ಕೋಟಿ.



ಈ ಬಾರಿ ಒಟ್ಟು 16 ತಂಡಗಳು ವಿಶ್ವಕಪ್‌ನಲ್ಲಿ ಭಾಗವಹಿಸುತ್ತಿವೆ.  8 ತಂಡಗಳು ಅಕ್ಟೋಬರ್ 16 ರಿಂದ 21 ರವರೆಗೆ ಅರ್ಹತಾ ಪಂದ್ಯಗಳನ್ನು ಆಡಲಿದ್ದು, ಅದರಲ್ಲಿ ಅಗ್ರ 4 ತಂಡಗಳು ಅಗ್ರ 8 ತಂಡಗಳೊಂದಿಗೆ ನೇರವಾಗಿ ಸೂಪರ್ 12 ರಲ್ಲಿ ಅರ್ಹತೆ ಪಡೆಯುತ್ತವೆ.


ಇದನ್ನೂ ಓದಿ: IND vs SA: ಮತ್ತೊಂದು ದಾಖಲೆ ಬರೆದ ರೋಹಿತ್​, ಈ ಬಾರಿ ಧೋನಿಯನ್ನೇ ಹಿಂದಿಕ್ಕಿದ ಹಿಟ್​ಮ್ಯಾನ್


ಯಾವ ತಂಡಕ್ಕೆ ಎಷ್ಟು ಮೊತ್ತದ ಹಣ?:


ಐಸಿಸಿ ಪ್ರಕಾರ, ಸೆಮಿಫೈನಲ್‌ನಲ್ಲಿ ಸೋತ ತಂಡವು ಒಟ್ಟು ಬಹುಮಾನದ ಮೊತ್ತದಲ್ಲಿ $ 4 ಲಕ್ಷ (3.26 ಕೋಟಿ ರೂ.) ಪಡೆಯುತ್ತದೆ. ಅದೇ ಸಮಯದಲ್ಲಿ, ಸೂಪರ್ 12 ರ ಸುತ್ತಿನಿಂದ ಹೊರಗುಳಿದ 8 ತಂಡಗಳಲ್ಲಿ, ಪ್ರತಿ ತಂಡವು 70 ಸಾವಿರ ಯುಎಸ್ ಡಾಲರ್ (57 ಲಕ್ಷ) ಬಹುಮಾನವಾಗಿ ಪಡೆಯುತ್ತದೆ. ಕಳೆದ ವರ್ಷದ ಐಸಿಸಿ ಟಿ20 ವಿಶ್ವಕಪ್‌ನಂತೆಯೇ ಸೂಪರ್-12 ಸುತ್ತಿನ ಮೂವತ್ತು ಪಂದ್ಯಗಳ ಪ್ರತಿ ಗೆಲುವಿಗೆ 40 ಸಾವಿರ ಅಮೆರಿಕನ್ ಡಾಲರ್‌ಗಳನ್ನು ತಂಡ ಪಡೆಯಲಿದೆ.


ಅದೇ ರೀತಿ ಸೂಪರ್ 12 ಹಂತಕ್ಕೆ ಪ್ರವೇಶಿಸಲು ಆಡುವ  ಈ ತಂಡಗಳ ನಡುವಿನ ಪಂದ್ಯಗಳ ಮೊದಲ ಸುತ್ತಿನಲ್ಲಿ ಗೆದ್ದರೆ ತಂಡಕ್ಕೆ 40 ಸಾವಿರ ಅಮೆರಿಕನ್ ಡಾಲರ್ (32 ಲಕ್ಷ ರೂಪಾಯಿ) ಸಿಗಲಿದೆ. ಮೊದಲ ಸುತ್ತಿನಲ್ಲಿ ಎಲಿಮಿನೇಟ್ ಆಗುವ ನಾಲ್ಕು ತಂಡಗಳಿಗೆ ತಲಾ 40 ಸಾವಿರ ಡಾಲರ್‌ಗಳನ್ನು ಬಹುಮಾನವಾಗಿ ಪಡೆಯುತ್ತಾರೆ.


ಇದನ್ನೂ ಓದಿ: IND vs SA: ದಕ್ಷಿಣ ಆಫ್ರಿಕಾ ಸರಣಿಗೆ ಬುಮ್ರಾ ಬದಲಿಗೆ ಮತ್ತೊಬ್ಬ ಸ್ಟಾರ್ ಬೌಲರ್​ ಆಯ್ಕೆ ಮಾಡಿದ ಬಿಸಿಸಿಐ


ಟಿ20 ವಿಶ್ವಕಪ್​ನಲ್ಲಿ ಭಾಗವಹಿಸುತ್ತಿರುವ ತಂಡಗಳು:


ಸೂಪರ್-12 ಸುತ್ತಿನಲ್ಲಿ ನೇರವಾಗಿ ಅರ್ಹತೆ ಪಡೆದ ತಂಡಗಳು: ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ.


ಇತರ ಎಂಟು ತಂಡಗಳು: ನಮೀಬಿಯಾ, ಶ್ರೀಲಂಕಾ, ನೆದರ್ಲ್ಯಾಂಡ್ಸ್, ಯುಎಇ, ವೆಸ್ಟ್ ಇಂಡೀಸ್, ಸ್ಕಾಟ್ಲೆಂಡ್, ಐರ್ಲೆಂಡ್, ಜಿಂಬಾಬ್ವೆ.

Published by:shrikrishna bhat
First published: