• Home
  • »
  • News
  • »
  • sports
  • »
  • T20 World Cup 2022: ಟೀಂ ಇಂಡಿಯಾನ ಸೋಲಿಸಿದ್ರೆ ಜಿಂಬಾಬ್ವೆ ಯುವಕನ ಮದುವೆ ಆಗ್ತೀನಿ! ಎಲ್ರದ್ದೂ ಆಯ್ತು ಈಗ ಪಾಕ್​ ನಟಿಯ ಸರದಿ

T20 World Cup 2022: ಟೀಂ ಇಂಡಿಯಾನ ಸೋಲಿಸಿದ್ರೆ ಜಿಂಬಾಬ್ವೆ ಯುವಕನ ಮದುವೆ ಆಗ್ತೀನಿ! ಎಲ್ರದ್ದೂ ಆಯ್ತು ಈಗ ಪಾಕ್​ ನಟಿಯ ಸರದಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

T20 World Cup 2022: ಭಾರತ ಮತ್ತು ಜಿಂಬಾಬ್ವೆ ಕ್ರಿಕೆಟ್ ತಂಡಗಳು ಭಾನುವಾರ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಟಿ20 ವಿಶ್ವಕಪ್‌ನಲ್ಲಿ ಮುಖಾಮುಖಿಯಾಗಲಿವೆ. ಭಾರತ ತಂಡ ಸೆಮೀಸ್​ ತಲುಪಬೇಕಾದರೆ ಈ ಪಂದ್ಯವನ್ನು ಗೆಲ್ಲಲೇ ಬೇಕಿದೆ. ಆದರೆ ಇದರ ನಡುವೆ ಪಾಕಿಸ್ತಾನಿ ನಟಿಯ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಮುಂದೆ ಓದಿ ...
  • Share this:

ಟಿ20 ವಿಶ್ವಕಪ್ (T20 World Cup 2022) ಸೂಪರ್ 12 ರ 42 ನೇ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡವು ಜಿಂಬಾಬ್ವೆ (IND vs ZIM) ವಿರುದ್ಧ ಸೆಣಸಲಿದೆ. ಈ ಪಂದ್ಯವು ಭಾನುವಾರ (ನವೆಂಬರ್ 6) ಮೆಲ್ಬೋರ್ನ್ (Melbourne) ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ಟೀಂ ಇಂಡಿಯಾ (Team India) ಗುರುವಾರ ಮೆಲ್ಬೋರ್ನ್ ತಲುಪಿದೆ. ರೋಹಿತ್ ಶರ್ಮಾ ಮತ್ತು ಕಂಪನಿ ಶುಕ್ರವಾರ ಅಭ್ಯಾಸಕ್ಕಾಗಿ ಮೈದಾನಕ್ಕಿಳಿದಿದ್ದು, ಭರ್ಜರಿ ಅಭ್ಯಾಸದಲ್ಲಿ ತೊಡಗಿಕೊಂಡಿದೆ. ಭಾರತ ಮತ್ತು ಜಿಂಬಾಬ್ವೆ ನಡುವಿನ ಪಂದ್ಯದ ಕುರಿತು ಪಾಕಿಸ್ತಾನಿ ನಟಿ ಸೆಹರ್ ಶಿನ್ವಾರಿ (Sehar Shinwari) ಅವರು ಮಾಡಿದ ಟ್ವೀಟ್ ಸಾಮಾಜಿಕ ಮಾಧ್ಯಮದಲ್ಲಿ ತೀವ್ರವಾಗಿ ವೈರಲ್ ಆಗುತ್ತಿದೆ.


ಜಿಂಬಾಬ್ವೆ ಯುವಕನನ್ನು ವಿವಾಹವಾಗುತ್ತೇನೆ:


ಸೆಹರ್ ಶಿನ್ವಾರಿ ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಬರೆದುಕೊಂಡಿದ್ದು, 'ಮುಂದಿನ ಪಂದ್ಯದಲ್ಲಿ ಜಿಂಬಾಬ್ವೆ ತಂಡ ಭಾರತವನ್ನು ಅದ್ಭುತವಾಗಿ ಸೋಲಿಸಿದರೆ ನಾನು ಜಿಂಬಾಬ್ವೆ ಹುಡುಗನನ್ನು ಮದುವೆಯಾಗುತ್ತೇನೆ‘ ಎಂದು ನಟಿ ಬರೆದುಕೊಂಡಿದ್ದಾರೆ. ಸದ್ಯ ಈ ಟ್ವೀಟ್ ಸಖತ್ ವೈರಲ್ ಆಗುತ್ತಿದೆ.



ಭಾರತ ತಂಡ 4 ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದಿದೆ. ಟೀಂ ಇಂಡಿಯಾ 6 ಅಂಕಗಳನ್ನು ಹೊಂದಿದ್ದು, ಗ್ರೂಪ್ 2ರ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಭಾರತ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿದರೆ, ಎರಡನೇ ಪಂದ್ಯದಲ್ಲಿ ನೆದರ್ಲೆಂಡ್ಸ್ ಅನ್ನು ಸೋಲಿಸಿತು. ಮೂರನೇ ಪಂದ್ಯದಲ್ಲಿ ಭಾರತವನ್ನು ದಕ್ಷಿಣ ಆಫ್ರಿಕಾ ಸೋಲಿಸಿದರೆ, ನಾಲ್ಕನೇ ಪಂದ್ಯದಲ್ಲಿ ಭಾರತ ಬಾಂಗ್ಲಾದೇಶವನ್ನು ಸೋಲಿಸಿ ಸೆಮಿಫೈನಲ್‌ನ ಹೊಸ್ತಿಲನ್ನು ತಲುಪಿದೆ.


ಇದನ್ನೂ ಓದಿ: Virat Kohli: ಕೊಹ್ಲಿ ಫೇಕ್ ಫೀಲ್ಡಿಂಗ್ ಕುರಿತು ಎಚ್ಚರಿಕೆ ನೀಡಿದ ಬಿಸಿಬಿ, ಸೋಲಿನ ಹತಾಶೆಯಲಿದೆಯಾ ಬಾಂಗ್ಲಾ ಟೀಂ?


ಸೆಮೀಸ್ ರೇಸ್​ನಲ್ಲಿ ಪಾಕ್:


ಮತ್ತೊಂದೆಡೆ, ಪಾಕಿಸ್ತಾನ ತಂಡ ಪ್ರಸಕ್ತ ವಿಶ್ವಕಪ್‌ನಲ್ಲಿ ಎರಡು ಗೆಲುವುಗಳೊಂದಿಗೆ ಸೆಮಿಫೈನಲ್‌ ರೇಸ್​ನಲ್ಲಿ ಜೀವಂತವಾಗಿದೆ. ಪಾಕಿಸ್ತಾನ ನಾಲ್ಕು ಅಂಕಗಳನ್ನು ಹೊಂದಿದ್ದು, ಗ್ರೂಪ್ 2ರ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ತಲುಪಿದೆ. ಜಿಂಬಾಬ್ವೆ ತಂಡ ಸೂಪರ್ 12ರಲ್ಲಿ ಪಾಕಿಸ್ತಾನವನ್ನು ಸೋಲಿಸಿತು. ಇಂತಹ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾ ಅಂತಿಮ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಗೆಲ್ಲಲೇ ಬೇಕಾಗಿದೆ.


ಭಾರತಕ್ಕೆ ಮಾಡು ಇಲ್ಲವೇ ಮಡಿ:


ಈ ಅಂಕಪಟ್ಟಿ ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವನ್ನಾಗಿ ಮಾಡುತ್ತದೆ. ಜಿಂಬಾಬ್ವೆ ವಿರುದ್ಧದ ಗೆಲುವಿನೊಂದಿಗೆ ಟೀಂ ಇಂಡಿಯಾ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಉಳಿಯಬಹುದು, ಇಲ್ಲದಿದ್ದರೆ ಅವರು ಸೆಮಿಫೈನಲ್‌ಗೆ ಮುನ್ನಡೆಯಲು ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾವನ್ನು ಅವಲಂಬಿಸಬೇಕಾಗಬಹುದು.


ಇದನ್ನೂ ಓದಿ: Kantara: ರಿಷಬ್ ಶೆಟ್ಟಿ ಭೇಟಿಯಾದ ಎಬಿಡಿ, ಕಾಂತಾರ ಸಿನಿಮಾದ ಡೈಲಾಗ್ ಹೊಡೆದ RCB ಪ್ಲೇಯರ್


ಒಂದು ವೇಳೆ ದಕ್ಷಿಣ ಆಫ್ರಿಕಾ ನೆದರ್ಲೆಂಡ್ಸ್ ತಂಡವನ್ನು ಸೋಲಿಸಿದರೆ, ಭಾರತವು ಜಿಂಬಾಬ್ವೆ ವಿರುದ್ಧ ಸೋತರೆ ಮತ್ತು ಪಾಕಿಸ್ತಾನವು ಬಾಂಗ್ಲಾದೇಶವನ್ನು ಸೋಲಿಸಿದರೆ, ದಕ್ಷಿಣ ಆಫ್ರಿಕಾ 7 ಅಂಕಗಳನ್ನು ಹೊಂದಿರುತ್ತದೆ. ಭಾರತ-ಪಾಕಿಸ್ತಾನ ತಲಾ 6 ಅಂಕಗಳನ್ನು ಹೊಂದಿರುತ್ತದೆ. ಪ್ರಸ್ತುತ, ಪಾಯಿಂಟ್ ಪಟ್ಟಿಯಲ್ಲಿ ಭಾರತಕ್ಕಿಂತ ಪಾಕಿಸ್ತಾನದ ನಿವ್ವಳ ರನ್ ರೇಟ್ ಹೆಚ್ಚಾಗಿದೆ. ಇನ್ನುಳಿದ ಪಂದ್ಯದಲ್ಲಿ ಭಾರತ ಸೋತರೆ ಮತ್ತು ಪಾಕಿಸ್ತಾನ ಬಾಂಗ್ಲಾದೇಶವನ್ನು ಸೋಲಿಸಿದರೆ, ಪಾಕಿಸ್ತಾನದ ನೆಟ್ ರನ್ ರೇಟ್ ಇನ್ನೂ ಉತ್ತಮವಾಗಿರುತ್ತದೆ, ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ತಂಡಗಳು ಗುಂಪು-2 ರಿಂದ ಸೆಮಿಫೈನಲ್ ತಲುಪುತ್ತವೆ.

Published by:shrikrishna bhat
First published: