ರವಿ ಶಾಸ್ತ್ರಿ ಏನು ಸಾಧನೆ ಮಾಡಿದ್ದಾರೆ?: ಕೋಚ್ ವಿರುದ್ಧ ಗುಡುಗಿದ ಗಂಭೀರ್

ಇಂಗ್ಲೆಂಡ್​​ನಲ್ಲಿ ಭಾರತ 1-4 ರಿಂದ ಸರಣಿ ಸೋತಿತ್ತು. ಇಲ್ಲಾದರು 4-1ರ ಅಂತರದಿಂದ ಭಾರತ ಸರಣಿ ಗೆದ್ದಿದ್ದರು ಪ್ರಸ್ತುತ ಭಾರತ ತಂಡವನ್ನು ಬಲಿಷ್ಠ ಅಥವಾ ಬೆಸ್ಟ್​ ತಂಡ ಎಂದು ಹೇಳಲು ಅಸಾಧ್ಯ- ಗೌತಮ್ ಗಂಭೀರ್

Vinay Bhat | news18
Updated:December 15, 2018, 11:58 AM IST
ರವಿ ಶಾಸ್ತ್ರಿ ಏನು ಸಾಧನೆ ಮಾಡಿದ್ದಾರೆ?: ಕೋಚ್ ವಿರುದ್ಧ ಗುಡುಗಿದ ಗಂಭೀರ್
Pic: Twitter
  • News18
  • Last Updated: December 15, 2018, 11:58 AM IST
  • Share this:
ನವ ದೆಹಲಿ: ನಿವೃತ್ತಿ ಬಳಿಕ ಒಂದಲ್ಲಾ ಇಂದು ಹೇಳಿಕೆಯಿಂದಲೆ ಸುದ್ದಿಯಾಗುತ್ತಿರುವ ಗೌತಮ್ ಗಂಭೀರ್ ಅವರು ಸದ್ಯ ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ವಿಚಾರವಾಗಿ ಮಾತನಾಡಿದ್ದು, ಶಾಸ್ತ್ರಿ ತಮ್ಮ ವೃತ್ತಿಜೀವನದಲ್ಲಿ ಏನು ಸಾಧನೆ ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ರವಿ ಶಾಸ್ತ್ರಿ ಇಂಗ್ಲೆಂಡ್ ಪ್ರವಾಸದ ವೇಳೆ ‘ಕಳೆದ 15-20 ವರ್ಷಗಳಲ್ಲಿ ಟೀಂ ಇಂಡಿಯಾದ ಬಲಿಷ್ಠ ವಿದೇಶಿ ತಂಡ ಇದಾಗಿದೆ’ ಎಂದು ಹೇಳಿದ್ದರು. ಅಲ್ಲದೆ ಇದೇ ಹೇಳಿಕೆಯನ್ನು ಶಾಸ್ತ್ರಿ ಅವರು ಆಸ್ಟ್ರೇಲಿಯಾ ಪ್ರವಾಸದ ವೇಳೆಯು ಪುನರುಚ್ಚಿರಿಸಿದ್ದರು. ಇದನ್ನೆಲ್ಲಾ ಕಂಡು ಗಂಭೀರ್ ಶಾಸ್ತ್ರಿ ವಿರುದ್ಧ ಗುಡುಗಿದ್ದಾರೆ.

ಇದನ್ನೂ ಓದಿ: 2ನೇ ಟೆಸ್ಟ್​: ಆಸ್ಟ್ರೇಲಿಯಾ 326 ಆಲೌಟ್: ಭಾರತದ 2 ವಿಕೆಟ್ ಪತನ

ಏನು ಗೆಲ್ಲದೆ ಇದ್ದವರು, ಸಾಧನೆ ಮಾಡದೆ ಇದ್ದವರು ಇಂತಹ ಮಾತನ್ನು ಹೇಳಲು ಸಾಧ್ಯ. ಆಸ್ಟ್ರೇಲಿಯಾದಲ್ಲಿ ವಿಶ್ವ ಚಾಂಪಿಯನ್ ಶಿಪ್ ಗೆದ್ದಿದ್ದು ಬಿಟ್ಟರೆ ಶಾಸ್ತ್ರಿ ಮಾಡಿರುವ ಸಾಧನೆ ನನಗಂತು ತಿಳಿದಿಲ್ಲ ಎಂದು ಗಂಭೀರ್ ಹೇಳಿದ್ದಾರೆ. ಇನ್ನು ಇಂಗ್ಲೆಂಡ್​​ನಲ್ಲಿ ಭಾರತ 1-4 ರಿಂದ ಸರಣಿ ಸೋತಿತ್ತು. ಇಲ್ಲಾದರು 4-1ರ ಅಂತರದಿಂದ ಭಾರತ ಸರಣಿ ಗೆದ್ದಿದ್ದರು ಪ್ರಸ್ತುತ ಭಾರತ ತಂಡವನ್ನು ಬಲಿಷ್ಠ ಅಥವಾ ಬೆಸ್ಟ್​ ತಂಡ ಎಂದು ಹೇಳಲು ಅಸಾಧ್ಯ ಎಂದಿದ್ದಾರೆ.

ಇದನ್ನೂ ಓದಿ: ಗಂಗೂಲಿ ಅಲ್ಲ, ಧೋನಿ-ಕೊಹ್ಲಿಯು ಅಲ್ಲ: ಭಾರತದ ಬೆಸ್ಟ್​​ ಕ್ಯಾಪ್ಟನ್ ಪ್ರಶ್ನೆಗೆ 'ಗಂಭೀರ್' ಏನಂದ್ರು..?

First published:December 15, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ