• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • Virat Kohli: ಕ್ರಿಕೆಟ್​ಗೆ ನಾನೇ ನಂಬರ್​ ಒನ್​, ನಾನ್​ ಆದ್ಮೇಲೆ ಕೊಹ್ಲಿ! ಪಾಕ್​ ಕ್ರಿಕೆಟಿಗನ ವಿವಾದಾತ್ಮಕ ಹೇಳಿಕೆ

Virat Kohli: ಕ್ರಿಕೆಟ್​ಗೆ ನಾನೇ ನಂಬರ್​ ಒನ್​, ನಾನ್​ ಆದ್ಮೇಲೆ ಕೊಹ್ಲಿ! ಪಾಕ್​ ಕ್ರಿಕೆಟಿಗನ ವಿವಾದಾತ್ಮಕ ಹೇಳಿಕೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Virat Kohli: ವಿರಾಟ್ ಕೊಹ್ಲಿ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 24000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಹಲವು ದಿಗ್ಗಜ ಬ್ಯಾಟ್ಸ್‌ಮನ್‌ಗಳ ದಾಖಲೆಯನ್ನೂ ಮುರಿದಿದ್ದಾರೆ.

  • Share this:

ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ (Virat Kohli) ವಿಶ್ವದ ಅತ್ಯುತ್ತಮ ಆಟಗಾರರ ಪಟ್ಟಿಯಲ್ಲಿ ನಿಸ್ಸಂದೇಹವಾಗಿ ಇರುತ್ತಾರೆ. ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 24000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಅಲ್ಲದೇ ಹಲವು ದಿಗ್ಗಜ ಬ್ಯಾಟ್ಸ್‌ಮನ್‌ಗಳ ದಾಖಲೆಯನ್ನೂ ಮುರಿದಿದ್ದಾರೆ. ಇದೆಲ್ಲದರ ನಡುವೆ ಪಾಕಿಸ್ತಾನದ (Pakistan) ಕ್ರಿಕೆಟಿಗರೊಬ್ಬರು ಏಕದಿನ ಕ್ರಿಕೆಟ್‌ನ (ODI Cricket) ನಂಬರ್ 1 ಆಟಗಾರ ಎಂದು ಸ್ವತಃ ತಾವೇ ಘೋಷಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿಗಿಂತ ನಾನೊಬ್ಬ ಉತ್ತಮ ಆಟಗಾರ ಎಂದೂ ಅವರು ಹೇಳಿದ್ದಾರೆ.


ನಾನು ವಿಶ್ವದ ನಂ.1 ಆಟಗಾರ:


ನಾದಿರ್ ಅಲಿ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಪಾಕಿಸ್ತಾನಿ ಕ್ರಿಕೆಟಿಗ ಖುರ್ರಂ ಮಂಜೂರ್, 'ನಾನು ನನ್ನನ್ನು ವಿರಾಟ್‌ನೊಂದಿಗೆ ಹೋಲಿಸುತ್ತಿಲ್ಲ. ಅವರು ಟಾಪ್ 10 ರೊಳಗೆ ಇದ್ದಾರೆ ಎಂಬುದು ವಾಸ್ತವ. ಆದರೆ ನಾನು ವಿಶ್ವದ ನಂ.1 ಆಟಗಾರ. ಕೊಹ್ಲಿ ನನ್ನ ಹಿಂದೆ ಬರುತ್ತಾರೆ. ನನ್ನ ಆಟದ ರೀತಿ ಅವರಿಗಿಂತ ತುಂಬಾ ಚೆನ್ನಾಗಿದೆ. ಅವರು 6 ಇನ್ನಿಂಗ್ಸ್‌ಗಳಲ್ಲಿ 1 ಶತಕ ಬಾರಿಸಿದ್ದಾರೆ. ಆದರೆ ನಾನು 5.68 ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದೇನೆ ಎಂದು ಹೇಳಿದ್ದಾರೆ.


ಅಲ್ಲದೇ ನಾನು ಲಿಸ್ಟ್ 'ಎ' ಕ್ರಿಕೆಟ್‌ನಲ್ಲಿ ಕಳೆದ 10 ವರ್ಷಗಳಲ್ಲಿ 53 ಸರಾಸರಿ ಬ್ಯಾಟಿಂಗ್ ಮಾಡಿದ್ದೆ​, ವಿಶ್ವದಲ್ಲಿ ನಾನು ಐದನೇ ಶ್ರೇಯಾಂಕದಲ್ಲಿದ್ದೇನೆ. ಕಳೆದ 48 ಇನ್ನಿಂಗ್ಸ್‌ಗಳಲ್ಲಿ 24 ಶತಕಗಳನ್ನು ಕೂಡ ಗಳಿಸಿದ್ದೇನೆ. ಆದರೆ ಇಷ್ಟೆಲ್ಲಾ ಆದರೂ ನನ್ನನ್ನು ಆಯ್ಕೆಗಾರರು ನಿರ್ಲಕ್ಷಿಸಿದ್ದಾರೆ. ಜೊತೆಗೆ ಇದಕ್ಕೆ ಸರಿಯಾದ ಕಾರಣವನ್ನು ಇಲ್ಲಿಯವರೆಗೆ ಯಾರೂ ತಿಳಿಸಿಲ್ಲ ಎಂದು ಹೇಳಿಕೊಂಡಿದ್ದಾರೆ.


ಇದನ್ನೂ ಓದಿ: Shubman Gill: ಕಿಂಗ್​ ಕೊಹ್ಲಿ ದಾಖಲೆ ಮುರಿದ ಶುಭ್​ಮನ್​ ಗಿಲ್, ಏಕದಿನ ಕ್ರಿಕೆಟ್​ನಲ್ಲಿ ಇತಿಹಾಸ ಸೃಷ್ಟಿಸಿದ ಯುವ ಆಟಗಾರ


ನಿಜವಾಗಿಯೂ ಕೊಹ್ಲಿಗಿಂತ ಮುಂದಿದ್ದಾರಾ ಪಾಕ್ ಆಟಗಾರ?:


ಆದರೆ, ವಾಸ್ತವಿಕ ಅಂಕಿಅಂಶಗಳನ್ನು ನೋಡಿದರೆ, ಮಂಜೂರ್ ಅವರ ಹೇಳಿಕೆಗಳು ಸರಿಯಾಗಿಲ್ಲ. ವಿರಾಟ್ ಕೊಹ್ಲಿ ಅವರಿಗಿಂತ ಹಲವು ಪಟ್ಟು ಮುಂದಿದ್ದಾರೆ. ಕೊಹ್ಲಿ 295 ಇನ್ನಿಂಗ್ಸ್‌ಗಳಲ್ಲಿ 50 ಶತಕಗಳೊಂದಿಗೆ 14251 ರನ್ ಗಳಿಸಿದ್ದಾರೆ, ಪ್ರತಿ 5.9 ಇನ್ನಿಂಗ್ಸ್‌ಗೆ ಒಂದು ಶತಕ ಸಿಡಿಸಿದ್ದಾರೆ. ಮತ್ತೊಂದೆಡೆ, ಲಿಸ್ಟ್ 'ಎ' ಕ್ರಿಕೆಟ್‌ನಲ್ಲಿ ಮಂಜೂರ್ 7992 ರನ್ ಗಳಿಸಿದ್ದಾರೆ. ಅವರು ಲಿಸ್ಟ್ 'ಎ' ಕ್ರಿಕೆಟ್‌ನಲ್ಲಿ 27 ಶತಕಗಳನ್ನು ಬಾರಿಸಿದ್ದಾರೆ.


ಟಿ20 ಸರಣಿಯಿಂದ ಕೊಹ್ಲಿ ಔಟ್: 


ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಟಿ20 ಸರಣಿ ಶುಕ್ರವಾರ, 27 ಜನವರಿಯಿಂದ ಆರಂಭವಾಗಲಿದೆ. ಸಾಮಾನ್ಯ ನಾಯಕ ರೋಹಿತ್ ಶರ್ಮಾ ಬದಲಿಗೆ ಹಾರ್ದಿಕ್ ಪಾಂಡ್ಯ ಭಾರತ ತಂಡದ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ.ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಆಡಿದ ಅನುಭವಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ಆಯ್ಕೆಗಾರರು ಟಿ20 ತಂಡದಲ್ಲಿ ಸ್ಥಾನ ನೀಡಿಲ್ಲ.
IND vs NZ ಟಿ20 ವೇಳಾಪಟ್ಟಿ:


1ನೇ T20: ಜನವರಿ 27 ಜಾರ್ಖಂಡ್ ಕ್ರಿಕೆಟ್ ಸಂಸ್ಥೆ (ರಾಂಚಿ)
2ನೇ T20: ಜನವರಿ 29 ಅಟಲ್ ಬಿಹಾರಿ ಬಾಜಪೇಯ್ ಏಕನಾ ಸ್ಟೇಡಿಯಂ (ಲಕ್ನೋ)
3ನೇ T20: 1 ಫೆಬ್ರವರಿ ನರೇಂದ್ರ ಮೋದಿ ಸ್ಟೇಡಿಯಂ ಅಹಮದಾಬಾದ್


ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ಸರಣಿಯ ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಚಾನೆಲ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಡಿಸ್ನಿ + ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಅನ್ನು ಸಹ ಆನಂದಿಸಬಹುದು. ಅಲ್ಲದೇ ಪಂದ್ಯವನ್ನು ಡಿಡಿ ಸ್ಪೋರ್ಟ್ಸ್​​ನಲ್ಲಿ ಉಚಿತವಾಗಿ ವೀಕ್ಷಿಸಬಹುದು.


ಕಿವೀಸ್​ ವಿರುದ್ಧ ಭಾರತ ತಂಡ:


ಹಾರ್ದಿಕ್ ಪಾಂಡ್ಯ (ನಾಯಕ) , ಸೂರ್ಯಕುಮಾರ್ ಯಾದವ್ (ಉಪನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ರಿತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ಪೃಥ್ವಿ ಶಾ, ರಾಹುಲ್ ತ್ರಿಪಾಠಿ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವಾಷಿಂಗ್ಟನ್ ಯಾ ಸುಂದರವ್, ಕುಲ್ದೀಪ್ ಯಾ ಸುಂದರವ್, ಯುಜ್ವೇಂದ್ರ ಚಾಹಲ್, ಅರ್ಶ್ದೀಪ್ ಸಿಂಗ್, ಉಮ್ರಾನ್ ಮಲಿಕ್, ಶಿವಂ ಮಾವಿ ಮತ್ತು ಮುಖೇಶ್ ಕುಮಾರ್.

Published by:shrikrishna bhat
First published: