ಕೆ ಎಲ್ ರಾಹುಲ್ ಫಾರ್ಮ್​​​ ಬಗ್ಗೆ ನನಗೇನು ಚಿಂತೆಯಿಲ್ಲ: ರಾಹುಲ್ ದ್ರಾವಿಡ್

ಕೆ ಎಲ್ ರಾಹುಲ್ ಫಾರ್ಮ್​​ ಬಗ್ಗೆ ನನಗೇನು ಚಿಂತೆಯಿಲ್ಲ. ಅವರು ತಮ್ಮ ಸಾಮರ್ಥ್ಯವನ್ನು ಈಗಾಗಲೇ ತೋರಿಸಿಕೊಟ್ಟಿದ್ದಾರೆ. ಮೂರು ಮಾದರಿಯ ಅಂತರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಶತಕ ಗಳಿಸುವುದು ಸುಲಭದ ಮಾತಲ್ಲ- ರಾಹುಲ್ ದ್ರಾವಿಡ್

Vinay Bhat | news18
Updated:May 2, 2019, 3:23 PM IST
ಕೆ ಎಲ್ ರಾಹುಲ್ ಫಾರ್ಮ್​​​ ಬಗ್ಗೆ ನನಗೇನು ಚಿಂತೆಯಿಲ್ಲ: ರಾಹುಲ್ ದ್ರಾವಿಡ್
ರಾಹುಲ್ ದ್ರಾವಿಡ್
  • News18
  • Last Updated: May 2, 2019, 3:23 PM IST
  • Share this:
ವಿವಾದ ಹಾಗೂ ಕಳಪೆ ಫಾರ್ಮ್​​ನಿಂದಾಗಿ ಟೀಂ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡಿರುವ ಕನ್ನಡಿಗ ಕೆ ಎಲ್ ರಾಹುಲ್ ಸದ್ಯ ಭಾರತ ಎ ತಂಡದ ಪರ ಆಡುತ್ತಿದ್ದಾರೆ. ಆದರೆ, ಅಲ್ಲಿಯು ರಾಹುಲ್ ಮತ್ತದೆ ಕಳಪೆ ಪ್ರದರ್ಶನ ಮುಂದುವರಿಸಿದ್ದಾರೆ. ಹೀಗಿರುವಾಗ ಭಾರತ ಎ ತಂಡದ ಕೋಚ್ ದಿ ವಾಲ್ ರಾಹುಲ್ ದ್ರಾವಿಡ್ ಅವರು ಕೆ ಎಲ್ ರಾಹುಲ್ ವಿಚಾರವಾಗಿ ಮಾತನಾಡಿದ್ದಾರೆ.

'ಕೆ ಎಲ್ ರಾಹುಲ್ ಫಾರ್ಮ್​​ ಬಗ್ಗೆ ನನಗೇನು ಚಿಂತೆಯಿಲ್ಲ. ಅವರು ತಮ್ಮ ಸಾಮರ್ಥ್ಯವನ್ನು ಈಗಾಗಲೇ ತೋರಿಸಿಕೊಟ್ಟಿದ್ದಾರೆ. ಏಕದಿನ, ಟಿ-20 ಹಾಗೂ ಟೆಸ್ಟ್​ ಕ್ರಿಕೆಟ್, ಈ ಮೂರು ಮಾದರಿಯ ಅಂತರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಶತಕ ಗಳಿಸುವುದು ಸುಲಭದ ಮಾತಲ್ಲ. ಆದರೆ, ರಾಹುಲ್ ಅದನ್ನು ಈಗಾಗಲೇ ಸಾಭೀತುಮಾಡಿದ್ದಾರೆ. ಅವರ ಫಾರ್ಮ್​​​ ಬಗ್ಗೆ ನನಗೆ ಯಾವುದೇ ಯೋಚನೆಯಿಲ್ಲ. ಆದಷ್ಟು ಬೇಗ ಅವರು ಲಯ  ಕಂಡುಕೊಳ್ಳುತ್ತಾರೆ' ಎಂದು ದ್ರಾವಿಡ್ ಹೇಳಿದ್ದಾರೆ.

ಇನ್ನು 2019ರ ವಿಶ್ವಕಪ್ ಬಗ್ಗೆ ಮಾತನಾಡಿದ ದ್ರಾವಿಡ್, 'ಟೀಂ ಇಂಡಿಯಾ ಈಗ ಭರ್ಜರಿ ಪ್ರದರ್ಶನ ತೋರುತ್ತಿದೆ. ಆಟಗಾರರು ಕೂಡ ಉತ್ತಮ ಫಾರ್ಮ್​​ನಲ್ಲಿದ್ದಾರೆ. ಇದೇ ಪ್ರದರ್ಶನ ಮೂಂದುವರಿದರೆ ಮಂಬರುವ ವಿಶ್ವಕಪ್​ನಲ್ಲಿ ಭಾರತ ಗೆಲ್ಲುವ ಎಲ್ಲ ಸಾಧ್ಯತೆಗಳಿವೆ' ಎಂದಿದ್ದಾರೆ. 'ಈಗಾಗಲೇ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯನ್ನು ತನ್ನದಾಗಿಸಿರುವ ಭಾರತ 2019ರ ಏಕದಿನ ವಿಶ್ವಕಪ್​​​​​​​​​​​ನಲ್ಲಿ ಗೆಲ್ಲುವ ನೆಚ್ಚಿನ ತಂಡವಾಗಿದೆ' ಎಂಡು ದ್ರಾವಿಡ್ ಹೇಳಿದ್ದಾರೆ.

First published: February 2, 2019, 11:07 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading