ಕೆಪಿಎಲ್ 2018: ಮೈಸೂರಿಗೆ ಸೋಲುಣಿಸಿದ ಹುಬ್ಳಿ ಟೈಗರ್ಸ್​​

news18
Updated:August 26, 2018, 9:59 PM IST
ಕೆಪಿಎಲ್ 2018: ಮೈಸೂರಿಗೆ ಸೋಲುಣಿಸಿದ ಹುಬ್ಳಿ ಟೈಗರ್ಸ್​​
news18
Updated: August 26, 2018, 9:59 PM IST
ನ್ಯೂಸ್ 18 ಕನ್ನಡ

ಮೈಸೂರು (ಆ. 26): ಇಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆದ ಕೆಪಿಎಲ್​ನ ಇಂದಿನ ಪಂದ್ಯದಲ್ಲಿ ಮೈಸೂರು ವಾರಿಯರ್ಸ್​ ವಿರುದ್ಧ ಹುಬ್ಳಿ ಟೈಗರ್ಸ್​ ತಂಡ 3 ರನ್​ಗಳ ರೋಚಕ ಜಯ ಸಾಧಿಸಿತು.

ಟಾಸ್ ಗೆದ್ದ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಹುಬ್ಳಿ ತಂಡ ಮೊಹಮ್ಮದ್ ತಾಹ ಅವರ ಭರ್ಜರಿ 68 ಹಾಗೂ ನಾಯಕ ವಿನ್ ಕುಮಾರ್ ಅವರ ಅಜೇಯ 30 ರನ್​ಗಳ ನೆರವಿನಿಂದ ನಿಗದಿತ 20 ಓವರ್​​ನಲ್ಲಿ 182 ರನ್​​ಗಳ ಟಾರ್ಗೆಟ್ ನೀಡಿತು. ಈ ಗುರಿ ಬೆನ್ನಟ್ಟಿದ ಮೈಸೂರು ಉತ್ತಮ ಆರಂಭ ಪಡೆದುಕೊಂಡಿತಾದರು 10 ಓವರ್​​ಗಳ ಬಳಿಕ ದಿಡೀರ್ ಕುಸಿತ ಕಂಡಿತು. ಶೋಯಬ್ 58 ರನ್​ಗಳ ಏಕಾಂಗಿ ಹೋರಾಟ ನಡೆಸಿದರಾದರು ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರು. ಅಂತಿಮವಾಗಿ 20 ಓವರ್​​ಗೆ 9 ವಿಕೆಟ್ ಕಳೆದುಕೊಂಡು 179 ರನ್​​ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಸ್ಪೋಟಕ ಬ್ಯಾಟಿಂಗ್ ನಡೆಸಿದ ತಾಹ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
First published:August 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ