ಕೆಪಿಎಲ್ 2018: ಟೈಗರ್ಸ್​​​ಗೆ ಶರಣಾದ ಲಯನ್ಸ್​​

news18
Updated:August 19, 2018, 10:42 PM IST
ಕೆಪಿಎಲ್ 2018: ಟೈಗರ್ಸ್​​​ಗೆ ಶರಣಾದ ಲಯನ್ಸ್​​
news18
Updated: August 19, 2018, 10:42 PM IST
ನ್ಯೂಸ್ 18 ಕನ್ನಡ

ಹುಬ್ಬಳ್ಳಿ (ಆ. 19): ಹುಬ್ಬಳ್ಳಿಯ ಸ್ಟೇಟ್ ಕ್ರಿಕೆಟ್ ಮೈದಾನದಲ್ಲಿ ನಡೆದ ಕೆಪಿಎಲ್​​ನ 4ನೇ ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್ ವಿರುದ್ಧ ಹುಬ್ಬಳ್ಳಿ ಟೈಗರ್ಸ್​ ತಂಡ 25 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಹುಬ್ಬಳ್ಳಿ​ ನೀಡಿದ್ದ 161 ರನ್​​ಗಳ ಟಾರ್ಗೆಟ್ ಬೆನ್ನಟ್ಟಿದ ಶಿವಮೊಗ್ಗ 20 ಓವರ್​ನಲ್ಲಿ 9 ವಿಕೆಟ್ ಕಳೆದುಕೊಂಡು 135 ರನ್​​ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಗೊಂಡಿತು.

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಹುಬ್ಬಳ್ಳಿ ಟೈಗರ್ಸ್​​ಗೆ ಉತ್ತಮ ಆರಂಭ ಸಿಗಲಿಲ್ಲ. 68 ರನ್ ಆಗುವ ಹೊತ್ತಿಗೆ ತನ್ನ ಪ್ರಮುಖ 4 ವಿಕೆಟ್ ಕಳೆದುಕೊಂಡಿತು. ಬಳಿಕ 5ನೇ ವಿಕೆಟ್​ಗೆ ಜೊತೆಯಾದ ಪ್ರವೀಣ್ ಹಾಗೂ ನಾಯಕ ವಿನಯ್ ಕುಮಾರ್ 46 ರನ್​ಗಳ ಕಾಣಿಕೆ ನೀಡಿದರು. 35 ರನ್​ಗಳಿಸಿರುವಾಗ ವಿನಯ್ ಕುಮಾರ್ ಔಟ್ ಆದರೆ, ಬಿರುಸಿನ ಬ್ಯಾಟಿಂಗ್ ನಡೆಸಿದ ಪ್ರವೀಣ್ 43 ರನ್ ಬಾರಿಸಿ ಕೊನೆಯ ಓವರ್​​ನಲ್ಲಿ ಔಟ್ ಆದರು. ಅಂತಿಮವಾಗಿ ಟೈಗರ್ಸ್​​ 20 ಓವರ್​ನಲ್ಲಿ 7 ವಿಕೆಟ್ ಕಳೆದುಕೊಂಡು 160 ರನ್​ ಕಲೆಹಾಕಿತು. ಶಿವಮೊಗ್ಗ ಪರ ಆದಿತ್ಯ, ಹೊಹ್ಸಳ, ಪೃಥ್ವಿ ತಲಾ 2 ವಿಕೆಟ್ ಪಡೆದರು.

ಇತ್ತ 161 ರನ್​ಗಳ ಗುರಿ ಬೆನ್ನಟ್ಟಿದ ಶಿವಮೊಗ್ಗಕ್ಕೆ ಉತ್ತಮ ಆರಂಭ ದೊರಕಿತಾದರು ಬಳಿಕ ದಿಢೀರ್ ಕುಸಿತ ಕಂಡಿತು. ರಾಂಗ್​ಸೆನ್ ಜೊನಥನ್ 29 ಹಾಗೂ ಪೃಥ್ವಿ 25 ರನ್​ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್​ಮನ್​ಗಳು ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲಿಲ್ಲ. ಈ ಮೂಲಕ ಶಿವಮೊಗ್ಗ 20 ಓವರ್​​ನಲ್ಲಿ 9 ವಿಕೆಟ್ ಕಳೆದುಕೊಂಡು 135 ರನ್​​ಗೆ ಗಳಿಸಿ ಸೋಲುಂಡಿದೆ. ಹುಬ್ಬಳ್ಳಿ ಪರ ಕ್ರಾಂತಿ ಕುಮಾರ್, ದರ್ಶನ್, ಮಹೇಶ್ ತಲಾ 2 ವಿಕೆಟ್ ಪಡೆದು ಮಿಂಚಿದರು.
First published:August 19, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ