ಜಾಹೀರಾತು ಲೋಕದಲ್ಲಿ ವಿರಾಟ್ ಸಾಮ್ರಾಟ: ಒಂದು ಇನ್​​ಸ್ಟಾಗ್ರಾಂ ಪೋಸ್ಟ್​​ಗೆ ಕೊಹ್ಲಿ ಸಂಭಾವನೆ ಎಷ್ಟು..?

news18
Updated:July 25, 2018, 6:24 PM IST
ಜಾಹೀರಾತು ಲೋಕದಲ್ಲಿ ವಿರಾಟ್ ಸಾಮ್ರಾಟ: ಒಂದು ಇನ್​​ಸ್ಟಾಗ್ರಾಂ ಪೋಸ್ಟ್​​ಗೆ ಕೊಹ್ಲಿ ಸಂಭಾವನೆ ಎಷ್ಟು..?
news18
Updated: July 25, 2018, 6:24 PM IST
ಸಾಗರ್​ ಕನ್ನೆಮನೆ, ನ್ಯೂಸ್ 18 ಕನ್ನಡ

ಟೀಮ್ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಮತ್ತೆ ಸುದ್ದಿಯಾಗಿದ್ದಾರೆ. ಆದರೆ ಈ ಬಾರಿ ಆನ್​ಫೀಲ್ಡ್​ನಲ್ಲಿ ಅಲ್ಲ. ಬದಲಾಗಿ ಆಫ್​ ದಿ ಫೀಲ್ಡ್​ನಲ್ಲಿ. ಕ್ರಿಕೆಟ್ ಲೋಕದಲ್ಲಿ ಅನೇಕ ದಾಖಲೆ ಬರೆದಿರುವ ಕೊಹ್ಲಿ ಇದೀಗ, ಜಾಹೀರಾತು ಲೋಕದಲ್ಲಿ ಸಾಮ್ರಾಟನಾಗಿ ಗುರುತಿಸಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ವಿಶ್ವದ ಬಹುತೇಕ ಕ್ರೀಡಾಪಟುಗಳಿಗೆ ಜಾಹೀರಾತು ಲೋಕದ ಮೂಲಕ ಸವಾಲಾಗಿ ನಿಂತಿದ್ದಾರೆ. ಎಂಡೋರ್ಸ್‌ಮೆಂಟ್‌ಗಳಿಂದ ನೂರಾರು ಕೋಟಿ ರೂಪಾಯಿ ಆದಾಯ ಗಳಿಸುವ ಕೊಹ್ಲಿ ಅವರು ತಮ್ಮ ಇನ್‌ಸ್ಟಾಗ್ರಾಂ ಮೂಲಕವೂ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ. ಟ್ವಿಟರ್‌ನಲ್ಲಿ 2.58 ಕೋಟಿ ಹಿಂಬಾಲಕರನ್ನು ಹೊಂದಿರುವ ಕೊಹ್ಲಿ, ಇನ್​ಸ್ಟಾಗ್ರಾಂನಲ್ಲೂ 2.32 ಕೋಟಿ ಫಾಲೋವರ್ಸ್​​​ ಹೊಂದಿದ್ದಾರೆ. ಇದೀಗ ಈ ಜನಪ್ರಿಯತೆಯೇ ಕೊಹ್ಲಿ ಅವರಿಗೆ ಆದಾಯದ ಮೂಲವಾಗಿ ಪರಿಣಮಿಸಿದೆ. ಕೊಹ್ಲಿ ಅವರು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಜಾಹೀರಾತು ಅಥವಾ ಬ್ರ್ಯಾಂಡ್ ಪ್ರಮೋಶನ್‌ಗೆ ಕಂಪೆನಿಗಳು ಪ್ರತಿ ಪೋಸ್ಟ್‌ಗೆ ಬರೋಬ್ಬರಿ 82.45 ಲಕ್ಷ ರೂಪಾಯಿ ನೀಡಬೇಕು. ಹೀಗೆ ಇನ್‌ಸ್ಟಾಗ್ರಾಂನಲ್ಲಿ ಪ್ರತಿ ಪೋಸ್ಟ್‌ಗೆ ಗರಿಷ್ಠ ಆದಾಯ ಪಡೆಯುತ್ತಿರುವ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ವಿಶ್ವದಲ್ಲಿ 17ನೇ ಸ್ಥಾನದಲ್ಲಿದ್ದಾರೆ. ಅಲ್ಲದೆ ಭಾರತದ ನಂಬರ್​​ 1 ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

 

ಮೊದಲ ಮೂರು ಸ್ಥಾನದಲ್ಲಿ ಫುಟ್ಬಾಲ್​ ಲೋಕದ ಸೂಪರ್ ಸ್ಟಾರ್​ಗಳಾದ ಪೋರ್ಚುಗಲ್​​ನ ಕ್ರಿಸ್ಟಿಯಾನೊ ರೊನಾಲ್ಡೊ, ಬ್ರೆಜಿಲ್​ನ ನೇಮರ್ ಹಾಗೂ ಅರ್ಜೆಂಟೀನಾದ ಮೆಸ್ಸಿ ಆವರಿಸಿದ್ದಾರೆ. ರೊನಾಲ್ಡೊ ಒಂದು ಪೋಸ್ಟ್​ಗೆ ಬರೋಬ್ಬರಿ 5 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಗಳಿಸುತ್ತಿದ್ದಾರೆ.

 👫


A post shared by Virat Kohli (@virat.kohli) on
First published:July 25, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ