News18 India World Cup 2019

ದೈವ ಮಹಿಮೆಯಾ? ಈ ಸ್ಟೇಡಿಯಮ್​ನಲ್ಲಿ ಗುಡಿ ಕಟ್ಟಿದ ನಂತರ ಭಾರತಕ್ಕೆ ಆಗೇ ಇಲ್ಲವಂತೆ ಸೋಲು

ಹೈದರಾಬಾದ್​ನ ಉಪ್ಪಲದ ಸ್ಟೇಡಿಯಮ್​ನಲ್ಲಿ 2011ಕ್ಕಿಂತ ಮುಂಚೆ ಭಾರತ ಯಾವ ಪಂದ್ಯವನ್ನೂ ಗೆದ್ದದ್ದಿಲ್ಲ. 2011ರ ನಂತರ ಯಾವ ಪಂದ್ಯವನ್ನೂ ಸೋತದ್ದಿಲ್ಲ.

Vijayasarthy SN
Updated:October 12, 2018, 8:32 PM IST
ದೈವ ಮಹಿಮೆಯಾ? ಈ ಸ್ಟೇಡಿಯಮ್​ನಲ್ಲಿ ಗುಡಿ ಕಟ್ಟಿದ ನಂತರ ಭಾರತಕ್ಕೆ ಆಗೇ ಇಲ್ಲವಂತೆ ಸೋಲು
ಚಿತ್ರಕೃಪೆ: ವಿಕಿಪಿಡಿಯಾ
Vijayasarthy SN
Updated: October 12, 2018, 8:32 PM IST
- ನ್ಯೂಸ್18 ಕನ್ನಡ

ಹೈದರಾಬಾದ್(ಅ. 12): ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯ ನಡೆಯುತ್ತಿರುವ ಹೈದರಾಬಾದ್​ನ ಉಪ್ಪಲದ ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ಭಾರತ ಕ್ರಿಕೆಟ್ ತಂಡ 2011ರಿಂದ ಯಾವುದೇ ಪಂದ್ಯ ಸೋತಿಲ್ಲವಂತೆ. 2011ಕ್ಕಿಂತ ಮುಂಚೆ ಇಲ್ಲಿ ನಡೆದ ಯಾವ ಪಂದ್ಯದಲ್ಲೂ ಭಾರತ ಗೆದ್ದಿದ್ದೇ ಇಲ್ಲವಂತೆ. ಈ ಅಂಕಿ ಅಂಶ ಅಕ್ಷರಶಃ ನಿಜ.

ಈ ಕ್ರೀಡಾಂಗಣದಲ್ಲಿ ಭಾರತಕ್ಕೆ ಗೆಲುವು ಯಾಕೆ ಸಿಗುತ್ತಿಲ್ಲ ಎಂಬ ಪ್ರಶ್ನೆಗೆ ಕೆಲ ವರ್ಗದ ಜನರು ಉತ್ತರ ಹುಡುಕಲು ಹೊರಟಾಗ ಗೊತ್ತಾಗಿದ್ದೇ ವಾಸ್ತು ದೋಷದ ವಿಚಾರ. ಸ್ಟೇಡಿಯಮ್​ನ್ನು ವಾಸ್ತುಪ್ರಕಾರವಾಗಿ ಕಟ್ಟಿಲ್ಲವೆಂದು ತಜ್ಞರು ತೀರ್ಮಾನಿಸಿದರು. ಗಣಪತಿಯು ವಾಸ್ತುಶಾಸ್ತ್ರದ ದೇವರಾದ್ದರಿಂದ ವಾಸ್ತು ದೋಷ ನಿವಾರಣೆಗೆ ಗಣಪತಿಯ ಗುಡಿ ಕಟ್ಟಲು ನಿರ್ಧರಿಸಲಾಯಿತು. 2011ರಲ್ಲಿ ಗುಡಿ ಕೂಡ ನಿರ್ಮಾಣವಾಯಿತು. ಅಲ್ಲಿಂದೀಚೆ ಭಾರತ ತಂಡ ಇಲ್ಲಿ ಸೋತೇ ಇಲ್ಲ ಎಂದು ಹೇಳುತ್ತಾರೆ ಈ ಗುಡಿಯ ಅರ್ಚಕ ಹನುಮಂತ್ ಶರ್ಮ.

ನೂತನವಾಗಿ ನಿರ್ಮಾಣವಾಗಿರುವ ಉಪ್ಪಲದ ಸ್ಟೇಡಿಯಮ್​ನಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯ ನಡೆದದ್ದು 2005ರಲ್ಲಿ. ಆ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 5 ವಿಕೆಟ್​ಗಳಿಂದ ಸೋಲನುಭವಿಸಿತ್ತು. 2007, 2009ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ 2 ಏಕದಿನ ಕ್ರಿಕೆಟ್ ಪಂದ್ಯಗಳಲ್ಲೂ ಭಾರತ ಪರಾಭವಗೊಂಡಿತ್ತು. 2010ರಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡು ಭಾರತಕ್ಕೆ ಗೆಲುವು ಕಾಣಸಿಗಲಿಲ್ಲ.

2011ರಲ್ಲಿ ಗುಡಿ ನಿರ್ಮಾಣವಾದ ನಂತರ ಭಾರತ ಇಲ್ಲಿ ಸೋತೇ ಇಲ್ಲ. 2012, 2013 ಮತ್ತು 2017ರಲ್ಲಿ ನ್ಯೂಜಿಲೆಂಡ್, ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶ ತಂಡಗಳ ವಿರುದ್ಧದ ಟೆಸ್ಟ್ ಪಂದ್ಯಗಳಲ್ಲಿ ಭಾರತ ಬೃಹತ್ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದೆ. ಇಂಗ್ಲೆಂಡ್ ಮತ್ತು ಶ್ರೀಲಂಕಾ ವಿರುದ್ಧ ನಡೆದ ಎರಡೂ ಏಕದಿನ ಪಂದ್ಯಗಳನ್ನೂ ಭಾರತ ಸುಲಭವಾಗಿಯೇ ಗೆದ್ದಿದೆ. 2017ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಒಂದು ಟಿ20 ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತ್ತು. ಒಟ್ಟಿನಲ್ಲಿ 2011ರ ನಂತರ ಭಾರತವು ಇಲ್ಲಿ ಸೋಲಿಲ್ಲದ ಸರದಾರನಾಗಿರುವುದಂತೂ ನಿಜವೇ. ಆ ವರ್ಷ ಸ್ಟೇಡಿಯಮ್​ನಲ್ಲಿ ಗುಡಿ ಕಟ್ಟಿದ್ದು, ಆ ನಂತರ ಭಾರತ ಸತತ ವಿಜಯ ಪತಾಕೆ ಹಾರಿಸುತ್ತಿರುವುದು ಕೇವಲ ಕಾಕತಾಳೀಯವೋ ಗೊತ್ತಿಲ್ಲ.

ಇವತ್ತಿನಿಂದ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತವೇ ಗೆಲ್ಲುತ್ತದೆ ಎಂದು ಗಣಪತಿ ಗುಡಿಯ ಪೂಜಾರಿ ಬಹಳ ಆತ್ಮವಿಶ್ವಾಸಪೂರ್ವಕವಾಗಿ ಹೇಳುತ್ತಾರೆ. ವಿಂಡೀಸ್ ಆಡುವ ರೀತಿ ನೋಡಿದರೆ ಪೂಜಾರಿ ಭವಿಷ್ಯ ನಿಜವಾದರೂ ಆಗಬಹುದು.
Loading...

First published:October 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...