ಭಾರತ-ಇಂಗ್ಲೆಂಡ್ 2ನೇ ಟೆಸ್ಟ್: ಭರ್ಜರಿ ಮುನ್ನಡೆ ಸಾಧಿಸಿದ ಆಂಗ್ಲರು

news18
Updated:August 12, 2018, 2:20 PM IST
ಭಾರತ-ಇಂಗ್ಲೆಂಡ್ 2ನೇ ಟೆಸ್ಟ್: ಭರ್ಜರಿ ಮುನ್ನಡೆ ಸಾಧಿಸಿದ ಆಂಗ್ಲರು
news18
Updated: August 12, 2018, 2:20 PM IST
ನ್ಯೂಸ್ 18 ಕನ್ನಡ

ಲಂಡನ್​ನ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಣ 2ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್​​ನಲ್ಲಿ ಭರ್ಜರಿ ಮುನ್ನಡೆ ಸಾಧಿಸಿದೆ.

ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್​​ನಲ್ಲಿ 107 ರನ್​ಗಳಿಗೆ ಆಲೌಟ್ ಆಯಿತು. ಇದಕ್ಕುತ್ತರವಾಗಿ  3ನೇ ದಿನದಾಟದಲ್ಲಿ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 6 ವಿಕೆಟ್ ನಷ್ಟಕ್ಕೆ 357 ರನ್ ಕಲೆಹಾಕಿದೆ. ಅಲ್ಲದೆ 250 ರನ್​ಗಳ ಭರ್ಜರಿ ಮುನ್ನಡೆ ಪಡೆದುಕೊಂಡಿದೆ. ಉತ್ತಮವಾಗೇ ಬ್ಯಾಟಿಂಗ್ ನಡೆಸಿದ್ದ ಇಂಗ್ಲೆಂಡ್ ಸೆಕೆಂಡ್ ಸೆಷನ್ ವೇಳೆಗೆ ಮೊಹಮ್ಮದ್ ಶಮಿ ದಾಳಿಗೆ ತತ್ತರಿಸಿ ಪ್ರಮುಖ 4 ವಿಕೆಟ್ ಕಳೆದುಕೊಂಡಿತು. ಆದರೆ 6ನೇ ವಿಕೆಟ್​​ಗೆ ಜೊತೆಯಾದ ವಿಕೆಟ್ ಕೀಪರ್ ಬ್ಯಾಟ್ಸ್​​ಮನ್​​​ ಜಾನಿ ಬೈರ್ಸ್ಟ್ರೋವ್ ಹಾಗೂ ಆಲ್ರೌಂಡರ್ ಕ್ರಿಸ್​​ ವೋಕ್ಸ್ ದಾಖಲೆಯ ಶತಕದ ಜೊತೆಯಾಟದ ಮೂಲಕ ತಂಡಕ್ಕೆ ಭಾರೀ ಮುನ್ನಡೆ ತಂದುಕೊಟ್ಟಿರು. ಕ್ರಿಸ್ ವೋಕ್ಸ್ ಅಜೇಯ ಹಾಗೂ ಚೊಚ್ಚಲ ಶತಕ ಸಿಡಿಸಿ ಮಿಂಚುವ ಮೂಲಕ ತಂಡಕ್ಕೆ ಭರ್ಜರಿ ಮುನ್ನಡೆ ತಂದುಕೊಟ್ಟರು. ಇನ್ನು ಕ್ರಿಸ್​ಗೆ ಸಾಥ್ ಕೊಟ್ಟ ಜಾನಿ ಬೈರ್ಸ್ಟ್ರೋವ್ ಶತಕದಂಚಿನಲ್ಲಿ ಎಡವಿದರು.

ಅಂತಿಮವಾಗಿ 3ನೇ ದಿನದಾಟಕ್ಕೆ ಇಂಗ್ಲೆಂಡ್ 6 ವಿಕೆಟ್ ನಷ್ಟಕ್ಕೆ 357 ರನ್ ಕಲೆಹಾಕಿದ್ದು 250 ರನ್​​ಗಳ ಭರ್ಜರಿ ಮುನ್ನಡೆ ಪಡೆದಿದೆ. ಕ್ರಿಸ್ ವೋಕ್ಸ್ 120 ಹಾಗೂ ಸ್ಯಾಮ್ ಕುರ್ರನ್ 22 ರನ್ ಬಾರಿಸಿ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
First published:August 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...