• Home
  • »
  • News
  • »
  • sports
  • »
  • Hockey World Cup 2023: ಟೀಂ ಇಂಡಿಯಾ ವಿಶ್ವಕಪ್​ ಕನಸು ಭಗ್ನ, ಮೆಗಾ ಟೂರ್ನಿಯಿಂದ ಹೊರಬಿದ್ದ ಭಾರತ ತಂಡ

Hockey World Cup 2023: ಟೀಂ ಇಂಡಿಯಾ ವಿಶ್ವಕಪ್​ ಕನಸು ಭಗ್ನ, ಮೆಗಾ ಟೂರ್ನಿಯಿಂದ ಹೊರಬಿದ್ದ ಭಾರತ ತಂಡ

ಭಾರತಕ್ಕೆ ಸೋಲು

ಭಾರತಕ್ಕೆ ಸೋಲು

Hockey World Cup 2023: ಭಾರತ ತಂಡಕ್ಕೆ ನೇರವಾಗಿ ನಾಕೌಟ್ ತಲುಪುವ ಅವಕಾಶವಿತ್ತು. ಆದರೆ ನ್ಯೂಜಿಲ್ಯಾಂಡ್​ ವಿರುದ್ಧ ಸೋಲುವ ಮೂಲಕ ವಿಶ್ವಕಪ್​​ನಿಂದ ಭಾರತ ತಂಡ ಹೊರಬಿದ್ದಿದೆ.

  • Share this:

ಕಳಿಂಗ ಸ್ಟೇಡಿಯಂನಲ್ಲಿ ನಡೆದ ಹಾಕಿ ವಿಶ್ವಕಪ್ (Hockey World Cup 2023) ಕ್ರಾಸ್-ಓವರ್ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲ್ಯಾಂಡ್ (IND vs NZ)​ ವಿರುದ್ಧ ಸೋಲನ್ನಪ್ಪಿದೆ. ಇಡೀ ಪಂದ್ಯದಲ್ಲಿ ಟೀಂ ಇಂಡಿಯಾ (Team India) ಬಲಿಷ್ಠವಾಗಿ ಕಂಡುಬಂದರೂ ಕೊನೆಯಲ್ಲಿ ಕಿವೀಸ್ ಜಯಭೇರಿ ಬಾರಿಸಿತು. ಶೂಟೌಟ್ ನಲ್ಲಿ ನ್ಯೂಜಿಲೆಂಡ್ ತಂಡ 4-5 ಅಂತರದಲ್ಲಿ ಜಯ ಸಾಧಿಸಿತು. ಈ ಸೋಲಿನೊಂದಿಗೆ, ಭಾರತ ತಂಡ 2023 ರ ಹಾಕಿ ವಿಶ್ವಕಪ್‌ನಿಂದ (World Cup) ಹೊರಬಿದ್ದಿದೆ. ಈ ಮೂಲಕ ನ್ಯೂಜಿಲೆಂಡ್ ಕ್ವಾರ್ಟರ್ ಫೈನಲ್‌ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿದೆ. ಪಂದ್ಯ 3-3 ಗೋಲ್​ಗಳ ಮೂಲಕ ಡ್ರಾದಲ್ಲಿ ಅಂತ್ಯಗೊಂಡಿತು. ಬಳಿಕ ಪೆನಾಲ್ಟಿ ಶೂಟೌಟ್ ಮೂಲಕ ಫಲಿತಾಂಶ ಬರಬೇಕಿತ್ತು. ಭಾರತ ಹಾಕಿ ತಂಡ ಆರಂಭದಿಂದಲೂ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು, ಆದರೆ ಪಂದ್ಯ ಅಂತಿಮ ಹಂತ ತಲುಪುತ್ತಿದ್ದಂತೆ, ನ್ಯೂಜಿಲೆಂಡ್ ಕಂಬ್ಯಾಕ್​ ಮಾಡುವ ಮೂಲಕ ಜಯ ಸಾಧಿಸಿತು. ಇದರಿಂದಾಗಿ ಭಾರತದ ವಿಶ್ವಕಪ್ ಕನಸು ಮತ್ತೆ ಭಗ್ನವಾಗಿದೆ.


ವಿಶ್ವಕಪ್​ನಿಂದ ಭಾರತ ಹೊರಕ್ಕೆ:


ಇದಕ್ಕೂ ಮುನ್ನ ಭಾರತ ತನ್ನ ಕೊನೆಯ ಪಂದ್ಯದಲ್ಲಿ ಸ್ಪೇನ್ ತಂಡವನ್ನು ಸೋಲಿಸಿತ್ತು. ಈ ಕಾರಣದಿಂದಾಗಿ ಅವರು ಡಿ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿದ್ದರು. ಇಂಗ್ಲೆಂಡ್ ತಂಡ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಮೂಲಕ ನೇರ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿತು. ಕ್ರಾಸ್ ಓವರ್ ಪಂದ್ಯದ ಮೂಲಕವೇ ಭಾರತ ಕ್ವಾರ್ಟರ್ ಫೈನಲ್ ತಲುಪುವ ಹಾದಿಯನ್ನು ಹೊಂದಿತ್ತು.



ಆದರೆ ಭಾರತ ಹಾಕಿ ತಂಡ ಆರಂಭದಿಂದಲೂ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು, ಅದರೂ ಪಂದ್ಯ ಅಂತಿಮ ಹಂತ ತಲುಪುತ್ತಿದ್ದಂತೆ ನ್ಯೂಜಿಲೆಂಡ್ ಪುನರಾಗಮನ ಮಾಡುವ ಮೂಲಕ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಇದರಿಂದಾಗಿ ಪೆನಾಲ್ಟಿ ಶೂಟ್​ಔಟ್​ನಲ್ಲಿ ಕಿವೀಸ್​ ಭಾರತದ ವಿರುದ್ಧ 5-4ರ ಅಂತರದಿಂದ ಗೆಲುವು ದಾಖಲಿಸಿತು. ಹೀಗಾಗಿ ಟೀಂ ಇಂಡಿಯಾ ವಿಶ್ವಕಪ್​ ಮೆಗಾ ಟೂರ್ನಿಯಿಂದ ಹೊರಬಿದ್ದಿದೆ.


ಇದನ್ನೂ ಓದಿ: KL Rahul Athiya Shetty Wedding: ನಾಳೆಯೇ ರಾಹುಲ್-ಅಥಿಯಾ ಕಲ್ಯಾಣ, ಈ ಮೊದಲು ಯಾರ್ಯಾರ ಜೊತೆ ಡೇಟಿಂಗ್ ಮಾಡಿದ್ದರು ಸುನೀಲ್ ಶೆಟ್ಟಿ ಅಳಿಯ?


ಭಾರತ-ನ್ಯೂಜಿಲ್ಯಾಂಡ್​ ರೋಚಕ ಹಣಾಹಣಿ:


ಇನ್ನು, ಇಂದಿನ ಪಂದ್ಯದ ಕುರಿತು ಮಾತನಾಡುವುದಾದರೆ, ನ್ಯೂಜಿಲೆಂಡ್ ತಂಡ ಆರಂಭದಿಂದಲೂ ಉತ್ತಮ ಹಿಡಿತವನ್ನು ಕಾಯ್ದುಕೊಂಡಿತ್ತು. 2-2ರ ವರೆಗೂ ಎರಡೂ ತಂಡಗಳು ಶೂಟೌಟ್‌ನಲ್ಲಿ ಸಮಬಲದಲ್ಲಿ ಸಾಗಿದವು. ಇಲ್ಲಿಂದ ಭಾರತ ಒಂದು ಅಂಕವನ್ನು ಕಳೆದುಕೊಂಡಿತು. ಇದರ ಲಾಭವನ್ನು ಕಿವೀಸ್ ತಂಡ ಪಡೆದುಕೊಂಡಿತು. ಇಲ್ಲಿಂದ ಬಂದ ಭಾರತ ಹಾಕಿ ತಂಡ ಗೆಲುವಿನಿಂದ ದೂರವಾಯಿತು. ಆದರೆ ಕಿವೀಸ್ ತಂಡ ಎಲ್ಲಾ ಅವಕಾಶಗಳಲ್ಲಿ ಗೋಲು ಗಳಿಸುವುದರ ಮೂಲಕ ಗೆದ್ದು ಬೀಗಿತು. ನ್ಯೂಜಿಲೆಂಡ್‌ಗೆ ಹೆಚ್ಚುವರಿ ಅವಕಾಶವಿದ್ದರೂ, ಭಾರತವು ಶೂಟೌಟ್‌ನಲ್ಲಿ 4-4 ತಲುಪಿತು, ಆದರೆ ಈ ಒಂದು ಅವಕಾಶವನ್ನು ಕಳೆದುಕೊಂಡಿದ್ದರಿಂದ ಪ್ರವಾಸಿ ತಂಡವು ಶೂಟೌಟ್‌ನಲ್ಲಿ ಭಾರತವನ್ನು 5-4 ರಿಂದ ಸೋಲಿಸಿತು.

Published by:shrikrishna bhat
First published: