• Home
  • »
  • News
  • »
  • sports
  • »
  • Hockey World Cup 2023: ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಶುಭಾರಂಭ, ಸ್ಪೇನ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

Hockey World Cup 2023: ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಶುಭಾರಂಭ, ಸ್ಪೇನ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

ಭಾರತ ತಂಡಕ್ಕೆ ಜಯ

ಭಾರತ ತಂಡಕ್ಕೆ ಜಯ

Hockey World Cup 2023: ಪ್ರಶಸ್ತಿಗಾಗಿ ಪ್ರಬಲ ಸ್ಪರ್ಧಿಗಳಲ್ಲಿ ಒಂದಾದ ಭಾರತ, 15 ನೇ ಎಫ್‌ಐಎಚ್ ವಿಶ್ವಕಪ್ ಪುರುಷರ ಹಾಕಿ ಪಂದ್ಯಾವಳಿಯಲ್ಲಿ ಭರ್ಜರಿ ಗೆಲುವುನೊಮದಿಗೆ ಶುಭಾರಂಭ ಮಾಡಿದೆ.

  • Share this:

ಲ15ನೇ ಎಫ್‌ಐಎಚ್ ವಿಶ್ವಕಪ್ (Hockey World Cup 2023) ಪುರುಷರ ಹಾಕಿ ಟೂರ್ನಿಯ ಪೂಲ್ ಡಿ ಪಂದ್ಯದಲ್ಲಿ ಸ್ಪೇನ್ ತಂಡವನ್ನು 2-0 ಗೋಲುಗಳಿಂದ ಸೋಲಿಸುವ ಮೂಲಕ ಪ್ರಶಸ್ತಿಗಾಗಿ ಪ್ರಬಲ ಸ್ಪರ್ಧಿಗಳಲ್ಲಿ ಒಂದಾದ ಭಾರತ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ವಿಶ್ವದ ಅತಿ ದೊಡ್ಡ ಹಾಕಿ ಕ್ರೀಡಾಂಗಣ ಎಂದು ಹೇಳಲಾಗುವ ಬಿರ್ಸಾ ಮುಂಡಾ ಕ್ರೀಡಾಂಗಣದಲ್ಲಿ 20000ಕ್ಕೂ ಹೆಚ್ಚು ಪ್ರೇಕ್ಷಕರ ಸಮ್ಮುಖದಲ್ಲಿ ನಡೆದ ಪಂದ್ಯದಲ್ಲಿ ಅಮಿತ್ ರೋಹಿದಾಸ್ 12ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನಲ್ಲಿ ಭಾರತಕ್ಕೆ ಮೊದಲ ಗೋಲು ತಂದಿತ್ತರು. 26ನೇ ನಿಮಿಷದಲ್ಲಿ ಹಾರ್ದಿಕ್ ಸಿಂಗ್ ಎರಡನೇ ಗೋಲು ದಾಖಲಿಸಿದರು. ಈ ಮೂಲಕ ಭಾರತ ತಂಡ ಸ್ಪೇನ್​ ವಿರುದ್ದ 2-0 ಅಂತರದಿಂದ ಗೆಲುವು ಸಾಧಿಸಿದೆ.


ಭಾರತಕ್ಕೆ ಶುಭಾರಂಭ:


ಪಂದ್ಯದ ಆರಂಭದಿಂದಲೂ ಭಾರತ ಮೇಲುಗೈ ಸಾಧಿಸಿತು. ಚೆಂಡನ್ನು ತನ್ನ ಹಿಡಿತದಲ್ಲಿ ದೀರ್ಘಕಾಲ ಇಟ್ಟುಕೊಂಡು ಎದುರಾಳಿಯ ಮೇಲೆ ಒತ್ತಡವನ್ನು ಹೆಚ್ಚಿಸಿತು.  ರೋಹಿದಾಸ್ ಮೊದಲ ಕ್ವಾರ್ಟರ್‌ನಲ್ಲಿ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿ ಭಾರತದ ಗೋಲಿನ ಖಾತೆ ತೆರೆದರು. ಎರಡನೇ ಕ್ವಾರ್ಟರ್ ನಲ್ಲಿ ಹಾರ್ದಿಕ್ ಫೀಲ್ಡ್ ಗೋಲ್ ಮೂಲಕ ಭಾರತದ ಮುನ್ನಡೆ ಹೆಚ್ಚಿಸಿದರು. ಕೊನೆಯ ಎರಡು ಕ್ವಾರ್ಟರ್‌ಗಳಲ್ಲಿ ಸ್ಪೇನ್ ಗೋಲು ಗಳಿಸುವ ಯತ್ನವನ್ನು ಭಾರತೀಯ ರಕ್ಷಣಾ ಪಡೆ ವಿಫಲಗೊಳಿಸಿತು.ವಿರಾಮದ ನಂತರ ಎರಡೂ ತಂಡಗಳು ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಭಾರತ ಮುಂದಿನ ಪಂದ್ಯದಲ್ಲಿ ಜನವರಿ 15 ರಂದು ಇದೇ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ಆಡಬೇಕಿದೆ. ಕೊನೆಯ ಲೀಗ್ ಪಂದ್ಯ ಜನವರಿ 19 ರಂದು ಭುವನೇಶ್ವರದಲ್ಲಿ ವೇಲ್ಸ್ ವಿರುದ್ಧ ನಡೆಯಲಿದೆ.


ಎ ಗುಂಪಿನ ಪಂದ್ಯಾಟದ ಫಲಿತಾಂಶ:


ಇನ್ನು, A ಗುಂಪಿನಲ್ಲೂ ಎರಡು ಪಂದ್ಯಗಳು ನಡೆದಿವೆ. ಮೊದಲ ಪಂದ್ಯದಲ್ಲಿ ಅರ್ಜೆಂಟೀನಾ 1-0 ಗೋಲುಗಳ ಅಂತರದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಜಯ ಸಾಧಿಸಿತ್ತು. ಕ್ಯಾಸೆಲ್ಲಾ ಅರ್ಜೆಂಟೀನಾ ಪರ (42ನೇ ನಿಮಿಷದಲ್ಲಿ) ಗೋಲು ಗಳಿಸಿ ತಂಡಕ್ಕೆ ಜಯ ತಂದುಕೊಟ್ಟರು. ಬಳಿಕ ಇದೇ ಗುಂಪಿನಲ್ಲಿ ನಡೆದ ಇನ್ನೊಂದು ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಫ್ರಾನ್ಸ್ ತಂಡವನ್ನು 8-0 ಗೋಲುಗಳಿಂದ ಮಣಿಸಿತು. ಆಸ್ಟ್ರೇಲಿಯಾ ಪರವಾಗಿ ಜೆರೆಮಿ (26, 28, 38ನೇ ನಿಮಿಷದಲ್ಲಿ) ಮತ್ತು ಕ್ರೇಗ್ ಟಾಮ್ (8, 31, 44ನೇ ನಿಮಿಷದಲ್ಲಿ) ತಲಾ ಮೂರು ಗೋಲು ಗಳಿಸಿ ಹ್ಯಾಟ್ರಿಕ್ ಸಾಧನೆ ಮಾಡಿದರು. ಫ್ಲೈನ್ ​​(26ನೇ ನಿಮಿಷದಲ್ಲಿ) ಮತ್ತು ಟಾಮ್ (53ನೇ ನಿಮಿಷದಲ್ಲಿ) ತಲಾ ಒಂದು ಗೋಲು ಗಳಿಸಿದರು.


ಚರ್ಚಗೆ ಗ್ರಾಸವಾಗಿರುವ ಭರ್ಜರಿ ಖರ್ಚುವೆಚ್ಚಗಳು:


ಹಾಕಿ ಕ್ರೀಡಾಂಗಣ ನಿರ್ಮಿಸಲು ಒಡಿಶಾ ಸರಕಾರ ಹೆಚ್ಚಿನ ಖರ್ಚುವೆಚ್ಚಗಳನ್ನು ಮಾಡಿದೆ. ಇತ್ತೀಚೆಗಷ್ಟೇ ಒಡಿಶಾದ ಕ್ರೀಡಾ ಮತ್ತು ಯುವಜನ ಸೇವಾ ಸಚಿವ ತುಷಾರಕಾಂತಿ ಬೆಹೆರಾ ಅವರು ವಿಧಾನಸಭೆಯಲ್ಲಿ 2022-2023ರ ರಾಜ್ಯ ಬಜೆಟ್‌ನಲ್ಲಿ ರೂರ್ಕೆಲಾದಲ್ಲಿ ಕ್ರೀಡಾಂಗಣ ನಿರ್ಮಾಣ, ಭುವನೇಶ್ವರದ ಕಳಿಂಗ ಕ್ರೀಡಾಂಗಣದ ಮೇಲ್ದರ್ಜೆಗೇರಿಸುವಿಕೆ ಮತ್ತು ಸುಂದರೀಕರಣಕ್ಕಾಗಿ 1,098.4 ಕೋಟಿ ರೂ ಅನುಮೋದನೆಯನ್ನು ಶಾಸನ ಸಭೆಯಲ್ಲಿ ಮಂಡಿಸಿದ್ದರು. ವರದಿಗಳ ಪ್ರಕಾರ ಭುವನೇಶ್ವರದಲ್ಲಿ ನಡೆದ ಹಿಂದಿನ ವಿಶ್ವಕಪ್‌ಗೆ 66.98 ಕೋಟಿ ರೂ ಖರ್ಚಾಗಿದೆ ಎಂದು ಅಂದಾಜಿಸಲಾಗಿದೆ.


ಇದು ಅತ್ಯಂತ ದೊಡ್ಡ, ಮತ್ತು ಅತ್ಯಂತ ದುಬಾರಿ, ಹಾಕಿ ವಿಶ್ವಕಪ್‌ಗಳಲ್ಲಿ ಒಂದಾಗಿದೆ ಮತ್ತು ಒಡಿಶಾ ಬೀರಿರುವ ಪ್ರಭಾವವು ಭಾರತೀಯ ನೆಲದಲ್ಲಿ ಮಾತ್ರವಲ್ಲದೆ ವಿಶ್ವ ಹಾಕಿಯಲ್ಲಿ ಕೂಡ ಹೆಚ್ಚಿನ ಗಮನ ಕೇಂದ್ರೀಕರಿಸಲು ಸಹಕಾರಿಯಾಗಿದೆ. ಆದರೂ ಹಾಕಿಗಾಗಿ ಸರಕಾರ ಮಾಡುತ್ತಿರುವ ಖರ್ಚು ಇಲ್ಲಿನ ನಾಗರಿಕರ ಅಸಮಾಧಾನಕ್ಕೆ ಕಾರಣವಾಗಿದೆ.

Published by:shrikrishna bhat
First published: