• Home
  • »
  • News
  • »
  • sports
  • »
  • Hockey World Cup 2023: ಹಾಕಿ ವಿಶ್ವಕಪ್‌ಗೆ ಸಾವಿರ ಕೋಟಿ ಸುರಿದ ಒಡಿಶಾ! ಸರಕಾರದ ನಿರ್ಧಾರಕ್ಕೆ ನಾಗರಿಕರ ಅಸಾಮಾಧಾನ

Hockey World Cup 2023: ಹಾಕಿ ವಿಶ್ವಕಪ್‌ಗೆ ಸಾವಿರ ಕೋಟಿ ಸುರಿದ ಒಡಿಶಾ! ಸರಕಾರದ ನಿರ್ಧಾರಕ್ಕೆ ನಾಗರಿಕರ ಅಸಾಮಾಧಾನ

ಹಾಕಿ ವಿಶ್ವಕಪ್

ಹಾಕಿ ವಿಶ್ವಕಪ್

Hockey World Cup 2023: ಇಂದಿನಿಂದ ಜನವರಿ 29ರ ವರೆಗೆ ನಡೆಯಲಿರುವ ಹಾಕಿ ವಿಶ್ವಕಪ್ (Hockey World Cup 2023) ಪಂದ್ಯಾಟಕ್ಕೆ ಒಡಿಶಾದ (Odisha ) ಭುವನೇಶ್ವರ ರಾಜಧಾನಿ ಸಿದ್ಧಗೊಂಡಿದೆ. ರೂರ್ಕೆಲಾ ನಗರದ ಬಿರ್ಸಾ ಮುಂಡಾ ಸ್ಟೇಡಿಯಂ ಹಾಕಿ ಪಂದ್ಯಾಟಕ್ಕಾಗಿ ಸಜ್ಜುಗೊಂಡಿದೆ.

  • Trending Desk
  • 4-MIN READ
  • Last Updated :
  • Share this:

ಇಂದಿನಿಂದ ಜನವರಿ 29ರ ವರೆಗೆ ನಡೆಯಲಿರುವ ಹಾಕಿ ವಿಶ್ವಕಪ್ (Hockey World Cup 2023) ಪಂದ್ಯಾಟಕ್ಕೆ ಒಡಿಶಾದ (Odisha ) ಭುವನೇಶ್ವರ ರಾಜಧಾನಿ ಸಿದ್ಧಗೊಂಡಿದೆ. ರೂರ್ಕೆಲಾ ನಗರದ ಬಿರ್ಸಾ ಮುಂಡಾ ಸ್ಟೇಡಿಯಂ ಹಾಕಿ ಪಂದ್ಯಾಟಕ್ಕಾಗಿ ಸಜ್ಜುಗೊಂಡಿದೆ. ಕ್ರೀಡಾಂಗಣವನ್ನು ಸಜ್ಜುಗೊಳಿಸುವ ಅಂತಿಮ ಹಂತದ ಕೆಲಸಗಳು ಭರದಿಂದ ಸಾಗುತ್ತಿವೆ. ಗೋಡೆಗಳಲ್ಲಿರುವ ತೇವದ ವಾಸನೆ, ರಾಚುತ್ತಿರುವ ಆಯಿಲ್ ಪೇಂಟ್‌ನ ಸುಗಂಧ, ಮಣ್ಣಿನ ಕೆಲಸಗಳಲ್ಲಿ ನಿರತರಾಗಿರುವ ಜಾರ್ಖಂಡ್, ಬಿಹಾರ ಮತ್ತು ಉತ್ತರ ಪ್ರದೇಶದಿಂದ (Uttar Pradesh) ಬಂದಿರುವ ಕಾರ್ಮಿಕರು ಹೀಗೆ ಕ್ರೀಡಾಂಗಣದ ಕೆಲಸಗಳು ಭರದಿಂದ ಸಾಗುತ್ತಿದೆ. ಬರೋಬ್ಬರಿ 15 ತಿಂಗಳಲ್ಲಿ ಹಾಕಿ ಕ್ರೀಡಾಂಗಣ ನಿರ್ಮಾಣಗೊಂಡಿದೆ ಎಂದರೆ ಕೆಲಸದ ಪರಿ ಎಷ್ಟು ವೇಗದ್ದಾಗಿರಬೇಡ ಎಂಬುದು ಆಶ್ಚರ್ಯಕರ ಸಂಗತಿಯಾಗಿದೆ. ಒಟ್ಟಿನಲ್ಲಿ ಒಡಿಶಾ ಹಾಕಿ ವಿಶ್ವಕಪ್‌ಗಾಗಿ ಸಂಪೂರ್ಣವಾಗಿ ಸಜ್ಜಾಗಿದೆ.


ಇಷ್ಟೊಂದು ಖರ್ಚುವೆಚ್ಚಗಳು ಸಮಂಜಸವೇ?


ಆದರೆ ನಾಗರಿಕರು ಸೇರಿದಂತೆ ಹೆಚ್ಚಿನವರು ಖರ್ಚುವೆಚ್ಚಗಳ ಕುರಿತು ತಗಾದೆ ತೆಗೆದಿದ್ದಾರೆ. ಮೂಲ ಸೌಲಭ್ಯಗಳ ಕೊರತೆ ಇರುವ ರೂರ್ಕೆಲಾದಲ್ಲಿ ಉನ್ನತ ಮಟ್ಟದ ಆಸ್ಪತ್ರೆಗಳಿಲ್ಲ. ಈ ಸಮಯದಲ್ಲಿ 20 ದಿನಗಳಿಗಾಗಿ ಇಂತಹ ಖರ್ಚುವೆಚ್ಚಗಳು ನ್ಯಾಯವೇ ಎಂಬುದಾಗಿ ಪ್ರಶ್ನಿಸಿದ್ದಾರೆ.


ಭರದಿಂದ ಆರಂಭಗೊಂಡ ಕ್ರೀಡಾಂಗಣದ ಕೆಲಸ


ಡಿಸೆಂಬರ್ 2021 ರಲ್ಲಿ ಕ್ರೀಡಾಂಗಣದ ಕಾರ್ಯಗಳು ಆರಂಭಗೊಂಡವು ಹಾಗೂ ಎಲ್ಲಾ ವಿಧದಲ್ಲಿಯೂ ದೇಶದ ಇತರ ಕ್ರೀಡಾಂಗಣಕ್ಕಿಂತ ಭಿನ್ನವಾಗಿ ರೂರ್ಕೆಲಾದ ಸ್ಟೇಡಿಯಮ್ ನಿರ್ಮಾಣಗೊಂಡಿದೆ. ವಿಶ್ವದ ಹಾಕಿ ಕ್ರೀಡಾಪಟುಗಳು ಒಬ್ಬೊಬ್ಬರಾಗಿ ಒಡಿಶಾಗೆ ಬರುತ್ತಿದ್ದು ತಮ್ಮ ತಮ್ಮ ಅಭ್ಯಾಸಗಳನ್ನು ನಡೆಸುತ್ತಿದ್ದಾರೆ. ಡಚ್ ಆಟಗಾರರು ಮೊದಲ ತರಬೇತಿ ಪಂದ್ಯಾಟವನ್ನು ಆಡಿದ ನಂತರ ತಮ್ಮ ಆಟದ ಅನುಭವವನ್ನು ಹಂಚಿಕೊಂಡಿದ್ದಾರೆ.


ಹೃದಯದ ಎಮೋಜಿಯನ್ನು ಹಂಚಿಕೊಳ್ಳುವ ಮೂಲಕ ಕ್ರೀಡಾಂಗಣವನ್ನು ಮೆಚ್ಚಿಕೊಂಡಿದ್ದಾರೆ. ಕಳೆದ ವಿಶ್ವಕಪ್‌ನ ಫೈನಲಿಸ್ಟ್‌ಗಳಾದ ನೆದರ್‌ಲ್ಯಾಂಡ್ಸ್ ಬುಧವಾರ ಬೆಳಿಗ್ಗೆ ಭುವನೇಶ್ವರದಿಂದ ರೂರ್ಕೆಲಾವನ್ನು ತಲುಪಲಿದೆ.


ಕೋವಿಡ್ ಆಸ್ಪತ್ರೆ ಇದೀಗ ಕ್ರೀಡಾಳುಗಳ ವಾಸ್ತವ್ಯ ಸ್ಥಳ


ಒಂದೆರಡು ವರ್ಷಗಳ ಹಿಂದೆ ಕೋವಿಡ್ ಆಸ್ಪತ್ರೆಯಾಗಿದ್ದ 200 ಕೋಣೆಗಳ ಹೋಟೆಲ್ ಹಾಗೂ ತರಬೇತಿ ಪಿಚ್ ಮುಖ್ಯ ಕ್ರೀಡಾಂಗಣದಿಂದ 200 ಮೀ ದೂರದಲ್ಲಿದೆ. ಬೃಹತ್ ಸಂಕೀರ್ಣಕ್ಕೆ ಹೋಗುವ ಮಾರ್ಗದಲ್ಲಿ, ಗೋಡೆಗಳು, ಪಾದಚಾರಿಗಳು ಮತ್ತು ಕಟ್ಟಡಗಳ ಮೇಲೆ ಹಾಕಿ ಆಟಗಾರರ ಭಿತ್ತಿಚಿತ್ರಗಳನ್ನು ಹಾಕಲಾಗಿದೆ.


ಬೀದಿಗಳ ಬದಿಗಳಲ್ಲಿ ಅಳವಡಿಸಿರುವ ದೀಪಾಲಂಕಾರಗಳು ಸಂಪೂರ್ಣ ಬೀದಿಯನ್ನೇ ಪ್ರಕಾಶಮಾನವಾಗಿಸಿದೆ ಮತ್ತು ವಿಶ್ವಕಪ್ ಟ್ರೋಫಿಯ ಪ್ರತಿಕೃತಿಯು 'ಹಾಕಿ ಚೌಕ್'ನಲ್ಲಿ ಸುಂದರವಾಗಿ ಕಾಣುತ್ತಿದೆ, ಎಲ್ಲಾ ಆಟಗಾರರನ್ನು ಬಿಂಬಿಸುವ ಫಲಕವನ್ನು ಬೀದಿ ಬದಿ ಹಾಕಲಾಗಿದೆ.


ಹಾಕಿ ಹಾಗೂ ಒಡಿಶಾ


ಹಾಕಿಯೊಂದಿಗೆ ಒಡಿಶಾದ ಬಾಂಧವ್ಯ ಹಲವು ದಶಕಗಳಷ್ಟು ಹಿಂದಿನದಾಗಿದೆ. ರೂರ್ಕೆಲಾದಲ್ಲೇ 61 ಹಾಕಿ ಆಟಗಾರರಿದ್ದಾರೆ. ಪ್ರಸ್ತುತ ಪುರುಷ ಮತ್ತು ಮಹಿಳಾ ರಾಷ್ಟ್ರೀಯ ತಂಡವು ಜಿಲ್ಲೆಯ ಮೂವರು ಆಟಗಾರರನ್ನು ಹೊಂದಿದೆ ಅವರಲ್ಲಿ ಅಮಿತ್ ರೋಹಿದಾಸ್, ನಿಲಂ ಕ್ಸೆಸ್ ಮತ್ತು ದೀಪ್ ಗ್ರೇಸ್ ಎಕ್ಕಾ ಪ್ರಮುಖರು.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮಹಿಳಾ ಹಾಕಿ ತಂಡವನ್ನು ಮುನ್ನಡೆಸಿದ್ದ ರಾಣಿ ರಾಂಪಾಲ್ ಮುಖ್ಯಮಂತ್ರಿಗಳು ನೀಡಿದ್ದ ಬೆಂಬಲವನ್ನು ಕೊಂಡಾಡಿದ್ದು, "ನವೀನ್ ಪಟ್ನಾಯಕ್ ಜಿ ಅವರ ಬೆಂಬಲ ಮತ್ತು ಮಾರ್ಗದರ್ಶನವಿಲ್ಲದೆ ಟೋಕಿಯೊ ಒಲಿಂಪಿಕ್ಸ್‌ಗೆ ನಮ್ಮ ಪ್ರಯಾಣವು ಸಾಧ್ಯವಾಗುತ್ತಿರಲಿಲ್ಲ. ನಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಧನ್ಯವಾದಗಳು” ಎಂದು ಟ್ವೀಟ್ ಮಾಡಿದ್ದಾರೆ.


ಹಾಕಿ ಇತಿಹಾಸ


ಈ ಪ್ರದೇಶವು 1980 ರ ದಶಕದ ಉತ್ತರಾರ್ಧದಲ್ಲಿ ಪ್ರಾರಂಭವಾದ ಖಾಸಿ ಕಪ್ ಎಂಬ ಪಂದ್ಯಾವಳಿಗೆ ಹೆಸರುವಾಸಿಯಾಗಿದೆ ಹಾಗೂ ಈ ಸ್ಪರ್ಧೆಗಳಲ್ಲಿ ಹಳ್ಳಿಗಳು ಭಾಗವಹಿಸುತ್ತವೆ. ಒಡಿಶಾ ಸರ್ಕಾರವು 1985 ರಲ್ಲಿ ರೂರ್ಕೆಲಾ ಬಳಿ ಸರ್ಕಾರಿ-ಪನ್ಪೋಶ್ ಕ್ರೀಡಾ ಹಾಸ್ಟೆಲ್ ಅನ್ನು ಸ್ಥಾಪಿಸಿತು ಮತ್ತು ಏಳು ವರ್ಷಗಳ ನಂತರ, ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು SAIL ಸುಂದರ್‌ಗಢ್ ಮತ್ತು ರೂರ್ಕೆಲಾದಲ್ಲಿ ಹಾಕಿ ಅಕಾಡೆಮಿಗಳನ್ನು ಸ್ಥಾಪಿಸಿದವು.


ಲಾಜರಸ್ ಬಾರ್ಲಾ, ದಿಲೀಪ್ ಟಿರ್ಕಿ, ಪ್ರಬೋಧ್ ಟಿರ್ಕಿ, ವಿಲಿಯಂ ಕ್ಸಾಲ್ಕೊ...ಟೋಕಿಯೊ ಒಲಿಂಪಿಯನ್‌ಗಳಾದ ಡೀಪ್ ಗ್ರೇಸ್ ಎಕ್ಕಾ, ಬೀರೇಂದ್ರ ಲಾಕ್ರಾ ಮತ್ತು ಅಮಿತ್ ರೋಹಿದಾಸ್ - ಇದೀಗ ಭಾರತದ 18 ಸದಸ್ಯರ ತಂಡದ ಉಪನಾಯಕರಾಗಿದ್ದಾರೆ, ಈ ಪ್ರದೇಶದ ಮತ್ತೊಬ್ಬ ಆಟಗಾರ – ನಿಲಂ ಕ್ಸೆಸ್.


ಹಾಕಿ ಕಮ್ಸ್ ಹೋಮ್ ಸ್ಲೋಗನ್


ರಾಜ್ಯ ಸರ್ಕಾರದ ಸಾಮಾಜಿಕ ಮಾಧ್ಯಮ ಚಾನೆಲ್‌ಗಳಲ್ಲಿ, ‘ಹಾಕಿ ಕಮ್ಸ್ ಹೋಮ್’ ಎಂಬ ಹ್ಯಾಶ್‌ಟ್ಯಾಗ್ ಅನ್ನು ಆಗಾಗ್ಗೆ ಬಳಸಲಾಗುತ್ತಿದೆ. ಇದು ಇಂಗ್ಲೆಂಡ್‌ನ ಫುಟ್ಬಾಲ್ ಕಮ್ಸ್ ಹೋಮ್ ಪದಕ್ಕೆ ಸಮಾನವಾಗಿದೆ. ಆದರೆ ಇನ್ನೊಂದೆಡೆ ಈ ಬಾರಿ ಹಾಕಿ ಕಪ್ ನಮ್ಮದು ಎಂಬ ಭಾವನೆಯನ್ನು ಈ ಬರಹ ಸಂಕೇತಿಸುತ್ತದೆ.


ಇದನ್ನೂ ಓದಿ: Rishabh Pant: ಡೆಲ್ಲಿ ಕ್ಯಾಪಿಟಲ್ಸ್​ ನಾಯಕರಾಗ್ತಾರಾ ಭಾರತೀಯ​ ಪ್ಲೇಯರ್? ರೇಸ್​ನಲ್ಲಿ ಯಾರೆಲ್ಲಾ ಇದ್ದಾರೆ ನೋಡಿ


2019 ರ ನವೆಂಬರ್‌ನಲ್ಲಿ ಇಂಟರ್ನ್ಯಾಷನಲ್ ಹಾಕಿ ಫೆಡರೇಶನ್ (FIH), ಸತತವಾಗಿ ಎರಡನೇ ಬಾರಿಗೆ ತನ್ನ ಪ್ರಮುಖ ಈವೆಂಟ್ ಅನ್ನು ಆಯೋಜಿಸಲು ಒಡಿಶಾವನ್ನು ಸ್ಥಳವಾಗಿ ಆಯ್ಕೆ ಮಾಡಿದಾಗ, 2018 ರಲ್ಲಿ ಇದ್ದಕ್ಕಿದ್ದಂತೆ ಭುವನೇಶ್ವರ್ ಏಕೈಕ ಆತಿಥೇಯ ನಗರ ಎಂದು ಭಾವಿಸಲಾಯಿತು.


ಚರ್ಚಗೆ ಗ್ರಾಸವಾಗಿರುವ ಭರ್ಜರಿ ಖರ್ಚುವೆಚ್ಚಗಳು


ಹಾಕಿ ಕ್ರೀಡಾಂಗಣ ನಿರ್ಮಿಸಲು ಒಡಿಶಾ ಸರಕಾರ ಹೆಚ್ಚಿನ ಖರ್ಚುವೆಚ್ಚಗಳನ್ನು ಮಾಡಿದೆ. ಇತ್ತೀಚೆಗಷ್ಟೇ ಒಡಿಶಾದ ಕ್ರೀಡಾ ಮತ್ತು ಯುವಜನ ಸೇವಾ ಸಚಿವ ತುಷಾರಕಾಂತಿ ಬೆಹೆರಾ ಅವರು ವಿಧಾನಸಭೆಯಲ್ಲಿ 2022-2023ರ ರಾಜ್ಯ ಬಜೆಟ್‌ನಲ್ಲಿ ರೂರ್ಕೆಲಾದಲ್ಲಿ ಕ್ರೀಡಾಂಗಣ ನಿರ್ಮಾಣ, ಭುವನೇಶ್ವರದ ಕಳಿಂಗ ಕ್ರೀಡಾಂಗಣದ ಮೇಲ್ದರ್ಜೆಗೇರಿಸುವಿಕೆ ಮತ್ತು ಸುಂದರೀಕರಣಕ್ಕಾಗಿ 1,098.4 ಕೋಟಿ ರೂ ಅನುಮೋದನೆಯನ್ನು ಶಾಸನ ಸಭೆಯಲ್ಲಿ ಮಂಡಿಸಿದ್ದರು. ವರದಿಗಳ ಪ್ರಕಾರ ಭುವನೇಶ್ವರದಲ್ಲಿ ನಡೆದ ಹಿಂದಿನ ವಿಶ್ವಕಪ್‌ಗೆ 66.98 ಕೋಟಿ ರೂ ಖರ್ಚಾಗಿದೆ ಎಂದು ಅಂದಾಜಿಸಲಾಗಿದೆ.


ಇದು ಅತ್ಯಂತ ದೊಡ್ಡ, ಮತ್ತು ಅತ್ಯಂತ ದುಬಾರಿ, ಹಾಕಿ ವಿಶ್ವಕಪ್‌ಗಳಲ್ಲಿ ಒಂದಾಗಿದೆ ಮತ್ತು ಒಡಿಶಾ ಬೀರಿರುವ ಪ್ರಭಾವವು ಭಾರತೀಯ ನೆಲದಲ್ಲಿ ಮಾತ್ರವಲ್ಲದೆ ವಿಶ್ವ ಹಾಕಿಯಲ್ಲಿ ಕೂಡ ಹೆಚ್ಚಿನ ಗಮನ ಕೇಂದ್ರೀಕರಿಸಲು ಸಹಕಾರಿಯಾಗಿದೆ. ಆದರೂ ಹಾಕಿಗಾಗಿ ಸರಕಾರ ಮಾಡುತ್ತಿರುವ ಖರ್ಚು ಇಲ್ಲಿನ ನಾಗರಿಕರ ಅಸಮಾಧಾನಕ್ಕೆ ಕಾರಣವಾಗಿದೆ.


ನಾಗರಿಕರ ಅಸಮಾಧಾನ


ಹಾಕಿ ಜನಪ್ರಿಯ ಆಟವಾಗಿದೆ ಆದರೆ ಇದರ ಅಗತ್ಯ ಒಟ್ಟು ಜನಸಂಖ್ಯೆಯಲ್ಲಿ 10% ಮಾತ್ರ ಎಂಬುದಾಗಿ ರೂರ್ಕೆಲಾ ನಿವಾಸಿ ಪ್ರಮೋದ್ ಭಾಗ್ ಅಭಿಪ್ರಾಯವಾಗಿದೆ. ವಿಶ್ವಕಪ್‌ 20 ದಿನಗಳಲ್ಲಿ ಮುಕ್ತಾಯಗೊಳ್ಳುತ್ತದೆ ನಂತರ ಇದೆಲ್ಲಾ ಖರ್ಚುವೆಚ್ಚಗಳು ಯಾರಿಗಾಗಿ ಎಂಬುದು ಅವರ ಪ್ರಶ್ನೆಯಾಗಿದೆ. ಕ್ರೀಡಾಂಗಣಕ್ಕೆ ನೂರಾರು ಕೋಟಿ ಖರ್ಚುಮಾಡುವ ಬದಲು ಆಸ್ಪತ್ರೆ ನಿರ್ಮಿಸಿದ್ದರೆ ಇನ್ನಷ್ಟು ಜನರಿಗೆ ಅನುಕೂಲವಾಗುತ್ತಿತ್ತು. ಇದೀಗ, ನಾವು ಉನ್ನತ ಆಸ್ಪತ್ರೆಗಾಗಿ ಭುವನೇಶ್ವರಕ್ಕೆ ಹೋಗಬೇಕಾಗಿದೆ ಎಂಬುದು ಪ್ರಮೋದ್ ಅನಿಸಿಕೆಯಾಗಿದೆ.


ವಿಶ್ವಕಪ್‌ಗೆ ಎದುರು ನೋಡುತ್ತಿರುವ ಒಡಿಶಾ


ವಿಶ್ವಕಪ್ ಸಮೀಪಿಸುತ್ತಿರುವಾಗ ಇದು ಜ್ವಲಂತ ಸಮಸ್ಯೆಯಾಗಿ ಮಾರ್ಪಟ್ಟಿದೆ. ಟೂರ್ನಮೆಂಟ್‌ಗೆ ಒಡಿಶಾದ ಮುಖ್ಯಮಂತ್ರಿ ಪಟ್ನಾಯಕ್ ರಾಜ್ಯದ ಎಲ್ಲಾ ಮುಖ್ಯಮಂತ್ರಿಗಳನ್ನು ಆಹ್ವಾನಿಸಿದ್ದಾರೆ. ಪಂದ್ಯಾಟಕ್ಕಾಗಿ ಅಂತಿಮ ಕ್ಷಣದ ಸಿದ್ಧತೆಗಳು ಇನ್ನೂ ನಡೆಯುತ್ತಲೇ ಇದೆ. ಕ್ರೀಡಾಂಗಣದ ಹೊರಗೆ ಉದ್ದನೆಯ ಸರತಿ ಸಾಲುಗಳು ಹೀಗೆ ಒಡಿಶಾ ವಿಶ್ವಕಪ್ ಹಾಕಿಗಾಗಿ ಎದುರು ನೋಡುತ್ತಿದೆ


ಹಣವನ್ನು ಹೇಗೆ ವಿನಿಯೋಗಿಸಲಾಗಿದೆ


ಬಜೆಟ್‌ನಲ್ಲಿ ಒಟ್ಟು ವೆಚ್ಚ: 1,098.4 ಕೋಟಿ ರೂ ಆಗಿದೆ. ಇನ್ನು, ರೂ 875.78 ಕೋಟಿ ಅಷ್ಟು ರೂರ್ಕೆಲಾದಲ್ಲಿ ಬಿರ್ಸಾ ಮುಂಡಾ ಸ್ಟೇಡಿಯಂ ನಿರ್ಮಾಣ ಮತ್ತು ಭುವನೇಶ್ವರದ ಕಳಿಂಗ ಸ್ಟೇಡಿಯಂಗೆ ವಿನಿಯೋಗಿಸಿದ ವೆಚ್ಚವಾಗಿದೆ. 84 ಕೋಟಿ ರೂ ಅನ್ನು ವಸತಿ ಕಟ್ಟಡಗಳಿಗೆ ಅಂದಾಜು ಬಜೆಟ್ ಆಗಿದೆ. ರೂ 75 ಕೋಟಿ ಸ್ಥಳ ನಿರ್ವಹಣೆ, ಸಾರಿಗೆ, ವಸತಿ, ಬ್ರ್ಯಾಂಡಿಂಗ್, ಪ್ರಚಾರ ಇತ್ಯಾದಿಗಳಿಗೆ ವಿನಿಯೋಗಿಸಿದ ಮೊತ್ತವಾಗಿದೆ. ರೂ 17.5 ಕೋಟಿ ರೂರ್ಕೆಲಾ ಮತ್ತು ಭುವನೇಶ್ವರದ ಕ್ರೀಡಾಂಗಣಗಳಲ್ಲಿ ಹೊಸ ಕೃತಕ ಟರ್ಫ್‌ಗಳಿಗಾಗಿ ಖರ್ಚು ಮಾಡಿದ ಮೊತ್ತವಾಗಿದೆ.


ಹಳ್ಳಿಗಳಾದ್ಯಂತ ವಿಶ್ವಕಪ್‌ ಪ್ರಚಾರ


ವಿಶ್ವಕಪ್‌ಗೆ ಮುನ್ನ, ವಿಶ್ವಕಪ್‌ನ ಕೀರ್ತಿಯನ್ನು ಗ್ರಾಮ ಮಟ್ಟಕ್ಕೆ ಕೊಂಡೊಯ್ಯಲು ರಾಜ್ಯ ಸರ್ಕಾರವು ವಿಸ್ತೃತ ಯೋಜನೆಗಳನ್ನು ರೂಪಿಸಿದೆ. ಕಟಕ್‌ನ ಬಾರಾಬತಿ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಮತ್ತು ಕೆ-ಪಾಪ್ ಬ್ಯಾಂಡ್ ಬ್ಲ್ಯಾಕ್‌ಸ್ವಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಇದಕ್ಕಾಗಿ ಎಲ್ಲಾ 6,798 ಗ್ರಾಮ ಪಂಚಾಯಿತಿಗಳಲ್ಲಿ ಪ್ರೊಜೆಕ್ಟರ್ ಮತ್ತು ಪರದೆಗಳನ್ನು ಸ್ಥಾಪಿಸುವ ಕಾರ್ಯವನ್ನು ಪಂಚಾಯತ್ ರಾಜ್ ಇಲಾಖೆಗೆ ವಹಿಸಲಾಗಿತ್ತು.


ಗ್ರಾಮ ಪಂಚಾಯಿತಿ, ಪಂಚಾಯಿತಿ ಸಮಿತಿ, ಜಿಲ್ಲಾ ಪರಿಷತ್‌ ಕಚೇರಿಗಳ ಹೊರ ಗೋಡೆಗಳ ಮೇಲೆ ವಿಶ್ವಕಪ್‌ನ ಜಾಹೀರಾತು ಫ್ಲೆಕ್ಸ್‌ ಬ್ಯಾನರ್‌ಗಳನ್ನು ಅಳವಡಿಸಲಾಗಿದೆ. ಪಂದ್ಯಗಳ ಸಮಯದಲ್ಲಿ ರಾಜ್ಯಾದ್ಯಂತ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ದೊಡ್ಡ ಎಲ್‌ಸಿಡಿ ಪರದೆಗಳನ್ನು ಸ್ಥಾಪಿಸಲು ಯೋಜಿಸಲಾಗಿದೆ ಇದರೊಂದಿಗೆ ರೂರ್ಕೆಲಾ, ಭುವನೇಶ್ವರ ಮತ್ತು ಕಟಕ್‌ನಲ್ಲಿರುವ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಿಂದ ವಾಕಥಾನ್‌ಗಳನ್ನು ಆಯೋಜಿಸಿವೆ. 

Published by:shrikrishna bhat
First published: