ಪಾಕಿಸ್ತಾನವನ್ನು ಬಗ್ಗುಬಡಿದ ಭಾರತ ಹಾಕಿ ತಂಡ: ಕ್ರಿಕೆಟ್​ ಸೋಲಿಗೆ ರಿವೇಂಜ್​ ತೀರಿಸಿಕೊಂಡ ನಮ್ಮ ಆಟಗಾರರು!

ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಇಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಿತು. ರೌಂಡ್ ರಾಬಿನ್ ಮೂರನೇ ಪಂದ್ಯದಲ್ಲಿ ಪಾಕ್​ ವಿರುದ್ಧ ಗೆದ್ದು ಹಾಲಿ ಚಾಂಪಿಯನ್​ ಭಾರತ ತನ್ನ ಸೆಮಿಫೈನಲ್(Semi-Final​) ಹಾದಿಯನ್ನು ಸುಗಮ ಮಾಡಿಕೊಂಡಿದೆ.

ಭಾರತ ಹಾಕಿ ತಂಡದ ಆಟಗಾರರು

ಭಾರತ ಹಾಕಿ ತಂಡದ ಆಟಗಾರರು

  • Share this:
India beat Pakistan Asian champions trophy 2021: ವರ್ಲ್ಡ್​ಕಪ್(World cup)​ ಕ್ರಿಕೆಟ್(Cricket)​ನಲ್ಲಿ ಭಾರತ(India), ಪಾಕಿಸ್ತಾನ(Pakistan) ವಿರುದ್ಧ ಸೋಲನುಭವಿಸುತ್ತು. ಆದರೆ, ಅದಕ್ಕೆ ಇಂದು ಭಾರತೀಯ ಹಾಕಿ ತಂಡ(Indian Hockey Team) ರಿವೇಂಜ್​ ತಿರಿಸಿಕೊಂಡಿದೆ. ಹೌದು, ಏಷ್ಯನ್ ಚಾಂಪಿಯನ್ಸ್ ಟ್ರೋಫಿ(Asian Champions Trophy) ಹಾಕಿ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಬಗ್ಗುಬಡಿದಿದೆ. ಆರಂಭದ ಎರಡು ಪಂದ್ಯಗಳಲ್ಲಿ ಏಳುಬೀಳು ಕಂಡಿರುವ ಭಾರತ ತಂಡ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಇಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಿತು. ರೌಂಡ್ ರಾಬಿನ್ ಮೂರನೇ ಪಂದ್ಯದಲ್ಲಿ ಪಾಕ್​ ವಿರುದ್ಧ ಗೆದ್ದು ಹಾಲಿ ಚಾಂಪಿಯನ್​ ಭಾರತ ತನ್ನ ಸೆಮಿಫೈನಲ್(Semi-Final​) ಹಾದಿಯನ್ನು ಸುಗಮ ಮಾಡಿಕೊಂಡಿದೆ. ಕ್ರಿಕೆಟ್​ನಲ್ಲಿ ಕಳೆದುಕೊಂಡಿದ್ದ ಗೆಲುವಿನ ಖುಷಿಯನ್ನು ಇಂದು ಭಾರತೀಯ ಪುರುಷರ ಹಾಕಿ ತಂಡ ಮರಳಿ ತಂದುಕೊಟ್ಟಿದೆ. ಪಾಕಿಸ್ತಾನ ಪುರುಷ ಹಾಕಿ ತಂಡದ ಎದುರು ಸೆಣೆಸಾಡಿ 3-1 ಅಂತರದಿಂದ ದಿಗ್ವಿಜಯ ಸಾಧಿಸಿದೆ.  ಮೊದಲ ಪಂದ್ಯವನ್ನು ಕೊರಿಯಾ ಜೊತೆ 2–2ರಲ್ಲಿ ಡ್ರಾ ಮಾಡಿಕೊಂಡ ಭಾರತ ಎರಡನೇ ಪಂದ್ಯದಲ್ಲಿ ಪುಟಿದೆದ್ದು ಬಾಂಗ್ಲಾದೇಶವನ್ನು 9–0ಯಿಂದ ಮಣಿಸಿತ್ತು. ಇದೀಗ ಪಾಕಿಸ್ತಾನ ಎದುರು ಗೆಲುವು ಸಾಧಿಸಿದೆ.  ಈ ಗೆಲುವನ್ನು ಇಡೀ ಭಾರತವೇ ಸಂಭ್ರಮಿಸುತ್ತಿವೆ. 

3-1 ಅಂತರದಿಂದ ಪಾಕ್​ ಮಣಿಸಿದ ಭಾರತ!

ಢಾಕಾದಲ್ಲಿ ಇಂದು ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಣಾಹಣಿಯಲ್ಲಿ ಹರ್ಮನ್‌ಪ್ರೀತ್ ಸಿಂಗ್ ಮತ್ತು ಆಕಾಶದೀಪ್ ಸಿಂಗ್ ಅವರು ಗೋಲುಗಳ ಸಹಾಯದಿಂದ ಭಾರತ ಪುರುಷರ ಹಾಕಿ ತಂಡ ಗೆದ್ದು ಬೀಗಿದೆ. ಪಂದ್ಯದ ಮಧ್ಯಂತರ ಸಮಯದಲ್ಲಿ ಪಾಕಿಸ್ತಾನ ಆಕ್ರಮಣಕಾರಿ ಆಟ ಪ್ರದರ್ಶನ ಮಾಡಿತು. ಆದರೆ, ನಮ್ಮ ಭಾರತೀಯ ಆಟಗಾರರು ಪಾಕ್​ ಆಟಗಾರರಿಗೆ ಸರಿಯಾಗಿ ಮಣ್ಣು ಮುಕ್ಕಿಸಿ ಗೆಲುವಿನ ನಗೆ ಬೀರಿದ್ದಾರೆ. ಭಾರತದ ಪರ ಹರ್ಮನ್​ಪ್ರೀತ್​​ ಮೊದಲ ಗೋಲ್​ ಗಳಿಗೆ ಅಂಕಪಟ್ಟಿ ತೆರೆದರು.  ಇದಾದ ಬಳಿಕ ಆಕಾಶ್​ ದೀಪ್​ ಮತ್ತೊಂದು ಗೋಲ್​ ಗಳಿಸಿ ಭಾರತದ ಅಂಕ ಹೆಚ್ಚಿಸಿದರು. ಹೀಗಿರುವಾಗ ಪಾಕಿಸ್ತಾನ ಒಂದು ಗೋಲ್​ಗಳಿಸುವಲ್ಲಿ ಯಶಸ್ವಿಯಾಯ್ತು. ಕೊನೆಯ ಹಂತದಲ್ಲಿ ಮತ್ತೆ ಹರ್ಮನ್​ಪ್ರೀತ್​ ಮತ್ತೊಂದು ಗೋಲ್​ಗಳಿಸಿ ಭಾರತಕ್ಕೆ ಜಯ ತಂದುಕೊಟ್ಟಿದ್ದಾರೆ.

ಇದನ್ನು ಓದಿ : ಟೀಮ್ ಇಂಡಿಯಾಗೆ ಸೇರಿ ವರ್ಷದಲ್ಲೇ ಊರಲ್ಲಿ ಕ್ರಿಕೆಟ್ ಗ್ರೌಂಡ್ ಕಟ್ಟಲು ಹೊರಟ ಬೌಲರ್

ಬಾಂಗ್ಲಾ ವಿರುದ್ಧ ಗುಡುಗಿದ್ದ ಭಾರತೀಯರು!

ಹ್ಯಾಟ್ರಿಕ್ ಫೀಲ್ಡ್‌ಗೋಲುಗಳನ್ನು ಗಳಿಸಿರುವ ದಿಲ್‌ಪ್ರೀತ್‌ ಸಿಂಗ್ ಮತ್ತು ಎರಡು ಗೋಲು ಗಳಿಸಿದ್ದ ಜರ್ಮನ್‌ಪ್ರೀತ್‌ ಸಿಂಗ್‌ ಬಾಂಗ್ಲಾ ಎದುರಿನ ಪಂದ್ಯದಲ್ಲಿ ಮಿಂಚಿದ್ದರು. ಈ ಪಂದ್ಯದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶಗಳಲ್ಲಿ ನೇರವಾಗಿ ಫ್ಲಿಕ್‌ ಮಾಡಲು ಮುಂದಾಗದೆ ವಿಭಿನ್ನ ಮಾರ್ಗವನ್ನು ತುಳಿಯಲು ಗ್ರಹಾಂ ರೀಡ್ ತರಬೇತಿ ನೀಡಿರುವ ಭಾರತ ತಂಡ ಮುಂದಾಗಿತ್ತು. ಉಪನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ವರುಣ್ ಕುಮಾರ್ ಅವರು ಈ ಪ್ರಯೋಗವನ್ನು ಯಶಸ್ವಿಗೊಳಿಸಿದ್ದರು. ಹರ್ಮನ್‌ಪ್ರೀತ್ ನೇತೃತ್ವದ ರಕ್ಷಣಾ ವಿಭಾಗ ಮತ್ತು ನಾಯಕ ಮನ್‌ಪ್ರೀತ್ ಸಿಂಗ್ ಮುಂದಾಳತ್ವದವರು ಮಿಡ್‌ಫೀಲ್ಡ್ ವಿಭಾಗ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಸಂಪೂರ್ಣ ಆಧಿಪತ್ಯ ಸ್ಥಾಪಿಸಲು ನೆರವಾಗಿದ್ದರು.

ಇದನ್ನು ಓದಿ : ಕೊಹ್ಲಿ ವಿವಾದ ವಿಚಾರ: ಗವಾಸ್ಕರ್ ಸಲಹೆ; ಕೊನೆಗೂ ಮೌನಮುರಿದ ಸೌರವ್ ಗಂಗೂಲಿ

ಕಳೆದ ಬಾರಿ ಪ್ರಶಸ್ತಿ ಹಂಚಿಕೊಂಡಿದ್ದ ಭಾರತ-ಪಾಕ್​!


ಕಳೆದ ಬಾರಿ ಪಾಕಿಸ್ತಾನ ತಂಡ ಭಾರತದ ಜೊತೆ ಪ್ರಶಸ್ತಿ ಹಂಚಿಕೊಂಡಿತ್ತು. ಆ ಟೂರ್ನಿಯ ಲೀಗ್ ಹಂತದ ಪಂದ್ಯ, ಭಾರತ ಮತ್ತು ಪಾಕಿಸ್ತಾನ ತಂಡಗಳ ಕೊನೆಯ ಮುಖಾಮುಖಿಯಾಗಿತ್ತು. ಆ ಪಂದ್ಯದಲ್ಲಿ ಭಾರತ 3–1ರಲ್ಲಿ ಜಯ ಗಳಿಸಿತ್ತು. ಮಳೆಯಿಂದಾಗಿ ಫೈನಲ್ ಪಂದ್ಯ ನಡೆದಿರಲಿಲ್ಲ. ಆದರೆ ಇಂದು ನಡೆದ ಪಂದ್ಯದಲ್ಲಿ ಭಾರತ ತಂಡದ ಆಟಗಾರರು ಪಾಕಿಸ್ತಾನ ಆಟಗಾರರಿಗೆ ಬಿಗ್​ ಶಾಕ್​ ನೀಡಿದ್ದಾರೆ. ಕ್ರಿಕೆಟ್​ನಲ್ಲಿ ಗೆದ್ದು ಬೀಗುತ್ತಿದ್ದ ಪಾಕಿಸ್ತಾನಕ್ಕೆ, ಭಾರತ ಪುರುಷರ ಹಾಕಿ ತಂಡ ಸರಿಯಾದ ಪಾಠ ಕಲಿಸಿದೆ.


Published by:Vasudeva M
First published: