ಈ ವರ್ಷ 2023ರಲ್ಲಿ ಭಾರತದಲ್ಲಿ FIH ಪುರುಷರ ಹಾಕಿ ವಿಶ್ವಕಪ್ (Hockey World Cup 2023) ನಡೆಯಲಿದೆ. ಭುವನೇಶ್ವರದ ಅತ್ಯಾಧುನಿಕ ಕಳಿಂಗ ಹಾಕಿ ಕ್ರೀಡಾಂಗಣ ಮತ್ತು ರೂರ್ಕೆಲಾದ ಬಿರ್ಸಾ ಮುಂಡಾ ಕ್ರೀಡಾಂಗಣದಲ್ಲಿ 4 ಹೊಸ ಪಿಚ್ಗಳಲ್ಲಿ ಪಂದ್ಯಗಳು ನಡೆಯಲಿದೆ. ಈ ಎರಡೂ ಸ್ಥಳಗಳಲ್ಲಿ ಜನವರಿ 13 ರಿಂದ 29ರ ವರೆಗೆ ವಿಶ್ವಕಪ್ ನಡೆಯಲಿದೆ. ಕಳಿಂಗ ಸ್ಟೇಡಿಯಂನಲ್ಲಿನ ಮುಖ್ಯ ಪಿಚ್ ಮತ್ತು ಅಭ್ಯಾಸ ಪಿಚ್ ಎರಡನ್ನೂ ಹೊಸದಾಗಿ ಹಾಕಲಾಗಿದೆ, ಆದರೆ ಬಿರ್ಸಾ ಮುಂಡಾ ಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯ ಹಾಕಿ ಕೌನ್ಸಿಲ್ (FIH) ಪ್ರಮಾಣೀಕರಿಸಿದ ಹೊಸ ಪಿಚ್ಗಳಲ್ಲಿ ಪಂದ್ಯಗಳನ್ನು ಆಡಲಾಗುತ್ತದೆ. ಹಲವು ಐತಿಹಾಸಿಕ ಹಾಕಿ ಪಂದ್ಯಗಳಿಗೆ ಸಾಕ್ಷಿಯಾಗಿರುವ ಬಿರ್ಸಾ ಮುಂಡಾ ಹಾಕಿ (Hockey )ಸ್ಟೇಡಿಯಂ ರೂರ್ಕೆಲಾ ಮತ್ತು ಕಳಿಂಗಾ ಹಾಕಿ ಸ್ಟೇಡಿಯಂ ಭುವನೇಶ್ವರದಲ್ಲಿ ಹೊಸದಾಗಿ ಹಾಕಲಾದ ಪಿಚ್ಗಳಲ್ಲಿ ಪಂದ್ಯಗಳು ನಡೆಯಲಿವೆ ಎಂದು ಹಾಕಿ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ.
ಹಾಕಿ ವಿಶ್ವಕಪ್ನಲ್ಲಿ 16 ತಂಡಗಳು:
ಆತಿಥೇಯ ಭಾರತ ಸೇರಿದಂತೆ ವಿಶ್ವದ ಅಗ್ರ 16 ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲಿವೆ. ಈ 16 ತಂಡಗಳನ್ನು 4 ತಂಡಗಳಾಗಿ ವಿಂಗಡಿಸಲಾಗಿದೆ. ಭಾರತ ತಂಡ ಡಿ ಪೂಲ್ನಲ್ಲಿದ್ದು ಅಲ್ಲಿ ಇಂಗ್ಲೆಂಡ್, ಸ್ಪೇನ್ ಮತ್ತು ವೇಲ್ಸ್ ತಂಡವನ್ನು ಎದುರಿಸಲಿದೆ. ಪ್ರತಿ ಪೂಲ್ನಿಂದ ಅಗ್ರ ತಂಡವು ನೇರವಾಗಿ ಕ್ವಾರ್ಟರ್-ಫೈನಲ್ಗೆ ಪ್ರವೇಶಿಸುತ್ತದೆ ಮತ್ತು ಎಲ್ಲಾ ನಾಲ್ಕು ಪೂಲ್ಗಳ 8 ತಂಡಗಳು ಕೊನೆಯ 8ಕ್ಕೆ ಪ್ರವೇಶಿಸಲು ಕ್ರಾಸ್-ಓವರ್ ಪಂದ್ಯಗಳನ್ನು ಆಡುತ್ತವೆ.
ಅರ್ಜೆಂಟೀನಾ, ಆಸ್ಟ್ರೇಲಿಯಾ, ಫ್ರಾನ್ಸ್ ಮತ್ತು ದಕ್ಷಿಣ ಆಫ್ರಿಕಾ ಪೂಲ್ A, ಬೆಲ್ಜಿಯಂ, ಜರ್ಮನಿ, ಕೊರಿಯಾ ಮತ್ತು ಜಪಾನ್ ಪೂಲ್ B ಮತ್ತು ನೆದರ್ಲ್ಯಾಂಡ್ಸ್, ಮಲೇಷ್ಯಾ, ನ್ಯೂಜಿಲೆಂಡ್ ಮತ್ತು ಚಿಲಿ ಪೂಲ್ C ಯಲ್ಲಿವೆ. ಭುವನೇಶ್ವರ್ ಕ್ರಾಸ್ ಓವರ್, ಕ್ವಾರ್ಟರ್ ಫೈನಲ್, ಸೆಮಿಫೈನಲ್ ಮತ್ತು ಫೈನಲ್ ಸೇರಿದಂತೆ ಒಟ್ಟು 24 ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ರೂರ್ಕೆಲಾದಲ್ಲಿ 20 ಪಂದ್ಯಗಳು ನಡೆಯಲಿವೆ. ಇವುಗಳಲ್ಲಿ ಜನವರಿ 13 ಮತ್ತು 16 ರಂದು ನಡೆಯಲಿರುವ ಭಾರತದ ಮೊದಲ ಎರಡು ಲೀಗ್ ಪಂದ್ಯಗಳು ಸೇರಿವೆ.
ಭಾರತ ತಂಡದ ವೇಳಾಪಟ್ಟಿ:
ಈ ಬಾರಿಯ ವಿಶ್ವಕಪ್ನಲ್ಲಿ ಭಾರತ ತಂಡವು ಪೂಲ್ ಡಿ ಯಲ್ಲಿ ಸ್ಥಾನ ಪಡೆದಿದೆ.
ಜನವರಿ 13: ಭಾರತ vs ಸ್ಪೇನ್ (ರಾತ್ರಿ 7 ಗಂಟೆಗೆ ಭಾರತೀಯ ಕಾಲಮಾನ)
ಜನವರಿ 15: ಭಾರತ vs ಇಂಗ್ಲೆಂಡ್ (ರಾತ್ರಿ 7 ಗಂಟೆಗೆ ಭಾರತೀಯ ಕಾಲಮಾನ)
ಜನವರಿ 19: ಭಾರತ vs ವೇಲ್ಸ್ (ಸಂಜೆ 7 ಗಂಟೆಗೆ ಭಾರತೀಯ ಕಾಲಮಾನ)
ಹಾಕಿ ವಿಶ್ವಕಪ್ನಲ್ಲಿ ಭಾರತ ತಂಡವು 3 ಬಾರಿ ಪದಕ ಗೆದ್ದುಕೊಂಡಿದೆ. 1971ರಲ್ಲಿ ಕಂಚಿನ ಪದಕ, 1973ರಲ್ಲಿ ಬೆಳ್ಳಿ ಮತ್ತು 1975ರಲ್ಲಿ ಜರ್ಮನಿಯಲ್ಲಿ ನಡೆದ ವಿಶ್ವಕಪ್ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
ಇದನ್ನೂ ಓದಿ: IND vs PAK 2023: ಈ ವರ್ಷ 3 ಬಾರಿ ಮುಖಾಮುಖಿ ಆಗಲಿದೆ ಭಾರತ-ಪಾಕಿಸ್ತಾನ, ಬದ್ಧವೈರಿಗಳ ಸೆಣಸಾಟಕ್ಕೆ ಡೇಟ್ ಫಿಕ್ಸ್!
ಭಾರತ ಹಾಕಿ ತಂಡ:
ಗೋಲ್ ಕೀಪರ್ಗಳು: ಕೃಷ್ಣ ಬಹದ್ದೂರ್ ಪಾಠಕ್, ಪಿಆರ್ ಶ್ರೀಜೇಶ್
ರಕ್ಷಣಾತ್ಮಕ ಆಟಗಾರರು: ಜರ್ಮನ್ಪ್ರೀತ್ ಸಿಂಗ್, ಸುರೇಂದರ್ ಕುಮಾರ್, ಹರ್ಮನ್ಪ್ರೀತ್ ಸಿಂಗ್ (ನಾಯಕ), ವರುಣ್ ಕುಮಾರ್, ಅಮಿತ್ ರೋಹಿದಾಸ್ (ಉಪ ನಾಯಕ), ನಿಲಮ್ ಸಂಜೀಪ್
ಮಿಡ್ಫೀಲ್ಡರ್ಗಳು: ಮನಪ್ರೀತ್ ಸಿಂಗ್, ಹಾರ್ದಿಕ್ ಸಿಂಗ್, ನೀಲಕಂಠ ಶರ್ಮ, ಶಂಶೇರ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ಆಕಾಶದೀಪ್ ಸಿಂಗ್
ಮುನ್ಪಡೆ ಆಟಗಾರರು: ಮನದೀಪ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಅಭಿಷೇಕ್, ಸುಖಜೀತ್ ಸಿಂಗ್
ಪರ್ಯಾಯ ಆಟಗಾರರು: ರಾಜಕುಮಾರ್ ಪಾಲ್, ಜುಗರಾಜ್ ಸಿಂಗ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ