ಸರಣಿಗೂ ಮೊದಲೇ ಟೀಮ್ ಇಂಡಿಯಾಗೆ ಆಘಾತ..!: ಮೊದಲ ಟೆಸ್ಟ್​ನಿಂದ ಹೊರಗುಳಿಯಲಿದ್ದಾರಾ ಗಬ್ಬರ್ ಸಿಂಗ್..?


Updated:December 29, 2017, 2:39 PM IST
ಸರಣಿಗೂ ಮೊದಲೇ ಟೀಮ್ ಇಂಡಿಯಾಗೆ ಆಘಾತ..!: ಮೊದಲ ಟೆಸ್ಟ್​ನಿಂದ ಹೊರಗುಳಿಯಲಿದ್ದಾರಾ ಗಬ್ಬರ್ ಸಿಂಗ್..?
ಶಿಖರ್ ಧವನ್ ( Getty images )

Updated: December 29, 2017, 2:39 PM IST
-ಸಾಗರ್ ಕನ್ನೆಮನೆ, ನ್ಯೂಸ್ 18 ಕನ್ನಡ

ಕಳೆದೆರಡು ವರ್ಷದಿಂದ ಟೀಮ್ ಇಂಡಿಯಾ ಭರ್ಜರಿ ಫಾರ್ಮ್​ನಲ್ಲಿದೆ. ಅಲ್ಲದೇ ಟೆಸ್ಟ್ ರ್ಯಾಂಕಿಂಗ್ನಲ್ಲಿ ನಂ.1 ತಂಡವೂ ಹೌದು. ಸದ್ಯ ಹೊಸ ವರ್ಷದಲ್ಲಿ ಮೊದಲ ಟೆಸ್ಟ್ ಸರಣಿಯನ್ನಾಡಲು ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸ ಬೆಳೆಸಿದ್ದು, ಸೌತ್ ಆಫ್ರಿಕಾಗೆ ತೆರಳಿರುವ ಕೊಹ್ಲಿ ಪಡೆ, ಸರಣಿ ಗೆದ್ದು ಇತಿಹಾಸ ನಿರ್ಮಿಸುವ ವಿಶ್ವಾಸದಲ್ಲಿದೆ.

ಅಲ್ಲಿ 3 ಟೆಸ್ಟ್ ಪಂದ್ಯಗಳ ಸರಣಿಯನ್ನಾಡಲಿದೆ. ಆದರೆ, ದಕ್ಷಿಣ ಆಫ್ರಿಕಾ ಸವಾಲನ್ನು ಸ್ವೀಕರಿಸುವ ಮೊದಲೇ ಟೀಮ್ ಇಂಡಿಯಾಕ್ಕೆ ಆಘಾತ ಎದುರಾಗಿದೆ. ಬಲಿಷ್ಠ ಹರಿಣಗಳನ್ನು ಅವರ ನಾಡಲ್ಲೇ ಮಣಿಸುವುದು ಅಂದ್ರೆ ಸುಲಭದ ಮಾತಲ್ಲ. ಇಷ್ಟಿದ್ದರೂ ಭರವಸೆಯೊಂದಿಗೆ ದಕ್ಷಿಣ ಆಫ್ರಿಕಾಕ್ಕೆ ತೆರಳಿರುವ ನೀಡಿದ್ದ ಟೀಮ್ ಇಂಡಿಯಾಗೆ ಆರಂಭದಲ್ಲೇ ದೊಡ್ಡ ಹೊಡೆತ ಬಿದ್ದಿದ್ದು, ಮೊದಲ ಟೆಸ್ಟ್​ಗೂ ಮೊದಲೇ ಆರಂಭಿಕ ಆಟಗಾರ ಶಿಖರ್ ಧವನ್ ಗಾಯಾಳುವಾಗಿದ್ದಾರೆ.

ಮದುವೆಯಾದ ಬಳಿಕ ನಾಯಕ ವಿರಾಟ್ ಕೊಹ್ಲಿಗೆ ಇದು ಮೊದಲ ಟೆಸ್ಟ್ ಸರಣಿ. ಅಲ್ಲದೇ, ಟೀಮ್ ಇಂಡಿಯಾ ಆಟಗಾರರಿಗೂ ಇದು ವರ್ಷದ ಮೊದಲ ಸರಣಿ. ಆದರೆ ಇದೀಗ, ಧವನ್ ಗಾಐಆಳುವಾಗಿರುವುದರಿಂದ ಕೊಹ್ಲಿ ಪಡೆಗೆ ಹೊಸ ತಲೆನೋವು ಶುರುವಾಗಿದೆ. ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳುವುದಕ್ಕೂ ಮೊದಲು ಟೀಮ್ ಉಳಿದುಕೊಂಡಿರುವ ಹೋಟೆಲ್​ಗೆ ಆಗಮಿಸಿದ ಧವನ್ ತಮ್ಮ ಎಡ ಮೊಣಕಾಲಿಗೆ ಬ್ಯಾಂಡೇಜ್ ಕಟ್ಟಿಕೊಂಡು ಆಗಮಿಸಿದ್ದರು. ಫಿಸಿಯೋ ಪ್ಯಾಟ್ರಿಕ್ ಜತೆಗೂಡಿ ಆಗಮಿಸಿದ್ದು ಬಳಿಕ ಎಂಆರ್​ಐ ಸ್ಕ್ಯಾನ್ ಕೂಡಾ ಮಾಡಿಸಿದ್ದಾರೆ. ಇದನ್ನು ಗಮನಿಸಿದರೆ ಧವನ್ ಟೈಮ್ ಸರಿಯಿಲ್ಲ ಎಂಬಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ಜನವರಿ 5 ರಂದು ಭಾರತ-ದಕ್ಷಿಣ ಆಫ್ರಿಕಾ ತಂಡಗಳು ಮೊದಲ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗ್ತಿವೆ. ಆದರೆ ಈ ಪಂದ್ಯದಲ್ಲಿ ಶಿಖರ್ ಧವನ್ ಕಣಕ್ಕಿಳಿಯುವುದು ಬಹುತೇಕ ಅನುಮಾನ ಮೂಡಿಸಿದೆ. ಹೀಗಾಗಿ ಅವರ ಬದಲಿಗೆ ಕನ್ನಡಿಗ ಕೆ.ಎಲ್ ರಾಹುಲ್ ಮುರಳಿ ವಿಜಯ್ ಜೊತೆಗೂಡಿ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಹೆಚ್ಚಿದೆ. ಲಂಕಾ ವಿರುದ್ಧ ಚುಟುಕು ಕ್ರಿಕೆಟ್​ನಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ರಾಹುಲ್ , ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಕ್ರಿಕೆಟ್​ನಲ್ಲಿ ಅಬ್ಬರಿಸಲು ತಯಾರಾಗಿದ್ದಾರೆ.

ಒಟ್ಟಿನಲ್ಲಿ ಭರ್ಜರಿ ಫಾರ್ಮ್​ನಲ್ಲಿದ್ದ ಧವನ್ ಗಾಯದಿಂದಾಗಿ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದ್ದು. ಪಂದ್ಯ ಆರಂಭಕ್ಕೂ ಮೊದಲು ಚೇತರಿಸಿಕೊಂಡರೆ, ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗ್ತಿದೆ.
First published:December 29, 2017
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...