20 ವರ್ಷದ ರಿಷಭ್ ಪಂತ್ ಭಾರತದ 291ನೇ ಟೆಸ್ಟ್ ಆಟಗಾರನಾಗಿ ಪದಾರ್ಪಣೆ

news18
Updated:August 18, 2018, 4:49 PM IST
20 ವರ್ಷದ ರಿಷಭ್ ಪಂತ್ ಭಾರತದ 291ನೇ ಟೆಸ್ಟ್ ಆಟಗಾರನಾಗಿ ಪದಾರ್ಪಣೆ
news18
Updated: August 18, 2018, 4:49 PM IST
ನ್ಯೂಸ್ 18 ಕನ್ನಡ

ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್​ಗೆ ಭಾರತದಲ್ಲಿ ರಿಷಭ್ ಪಂತ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಈ ಮೂಲಕ ಭಾರತದ 291ನೇ ಟೆಸ್ಟ್ ಆಟಗಾರನಾಗಿ, 20 ವರ್ಷ ಪ್ರಾಯದ ರಿಷಭ್ ಪಂತ್ ಟೆಸ್ಟ್​​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದಾರೆ.

ಇಂಗ್ಲೆಂಡ್ ವಿರುದ್ಧ 5 ಟೆಸ್ಟ್ ಪಂದ್ಯಗಳ ಸರಣಿಗೆ 18 ಜನರ ಭಾರತ ತಂಡವನ್ನು ಈ ಹಿಂದೆ ಪ್ರಕಟಿಸಲಾಗಿತ್ತು. ಇದರಲ್ಲಿ ರಿಷಭ್ ಪಂತ್ ಹಾಗೂ ಶಾರ್ದೂಲ್ ಥಾಕೂರ್ ಅವರು ಇದೇ ಮೊದಲ ಬಾರಿ ಟೆಸ್ಟ್​ ಕ್ರಿಕೆಟ್​ಗೆ ಕಾಲಿಡಲು ಸಜ್ಜಾಗಿದ್ದರು. ಥಾಕೂರ್​ಗೆ ಇನ್ನೂ ಅವಕಾಶ ಸಿಕ್ಕಿಲ್ಲವಾದರು ಪಂತ್​ ಮೂರನೇ ಟೆಸ್ಟ್​ಗೆ ಆಯ್ಕೆ ಆಗುವ ಮೂಲಕ ತಮ್ಮ ಅಂತರಾಷ್ಟ್ರೀಯಾ ಟೆಸ್ಟ್​ ಕ್ರಿಕೆಟ್ ಜೀವನವನ್ನು ಆರಂಭಿಸಿದ್ದಾರೆ. ರಿಷಭ್ ಪಂತ್​​ ತಂಡದಲ್ಲಿ ಸ್ಥಾನ ಪಡೆದಿದ್ದು ಅದೃಷ್ಟ ಎಂದೇ ಹೇಳಬಹುದು. ಧೋನಿ ನಿವೃತ್ತಿ ಬಳಿಕ ಭಾರತ ತಂಡದ ಟೆಸ್ಟ್​ ಕ್ರಿಕೆಟ್​ನ ಖಾಯಂ ಕೀಪರ್​​ ಆಗಿ ವೃದ್ದಿಮಾನ್ ಸಾಹ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಆದರೆ ಇಂಗ್ಲೆಂಡ್ ಟೆಸ್ಟ್​ಗೂ ಮುನ್ನ ಇಂಜುರಿಗೆ ತುತ್ತಾದ ಕಾರಣ ಸಾಹ ಬದಲು ವಿಕೆಟ್ ಕೀಪರ್​ ಆಗಿ ದಿನೇಶ್ ಕಾರ್ತಿಕ್​ಗೆ ಸ್ಥಾನ ನೀಡಲಾಯಿತು. ಜೊತೆಗೆ ಸೆಕಂಡ್ ಕೀಪರ್ ಆಗಿ ರಿಷಭ್ ಪಂತ್ ಅವರನ್ನೂ ಆಯ್ಕೆ ಮಾಡಲಾಯಿತು. ಆದರೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸದ ಕಾರ್ತಿಕ್ ಮೊದಲ ಎರಡೂ ಟೆಸ್ಟ್​​ನಲ್ಲಿ ಕೀಪಿಂಗ್ ಹಾಗೂ ಬ್ಯಾಟಿಂಗ್​​ನಲ್ಲಿ ಸಂಪೂರ್ಣ ವಿಫಲರಾದರು. ಹೀಗಾಗೆ ಮೂರನೇ ಟೆಸ್ಟ್​ಗೆ ಕಾರ್ತಿಕ್ ಬದಲು ರಿಷಭ್ ಪಂತ್​ಗೆ ಸ್ಥಾನ ನೀಡಲಾಗಿದ್ದು, ಪಂತ್ ಮೇಲೆ ಟೀಂ ಇಂಡಿಯಾ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದೆ.

ಕಳೆದ 2 ತಿಂಗಳಲ್ಲಿ ಪಂತ್ ಅವರ ಬ್ಯಾಟಿಂಗ್ ವೈಖರಿ ನೋಡುವುದಾದರೆ ಒಟ್ಟು 684 ರನ್ ಕಲೆಹಾಕಿದ್ದು, 173.60 ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿದ್ದಾರೆ. ಇದರಲ್ಲಿ 5 ಅರ್ಧಶತಕ ಬಾರಿಸಿದ್ದು, ಐಪಿಎಲ್​​ನಲ್ಲಿ 1 ಶತಕ ಕೂಡ ಸಿಡಿಸಿದ್ದಾರೆ. ಇಷ್ಟೇ ಅಲ್ಲದೆ ಭಾರತ ಎ ಹಾಗೂ ಇಂಗ್ಲೆಂಡ್ ಎ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಪಂತ್ ಎರಡು ಅರ್ಧಶತಕ ಬಾರಿಸಿದ್ದು, ಪಂತ್ ಆಯ್ಕೆಗೆ ಇದೂ ಸಹಾಯವಾಯಿತು. ಇನ್ನು ಪ್ರಥಮ ದರ್ಜೆ ಕ್ರಿಕೆಟ್​​ನಲ್ಲಿ ಪಂತ್ ಅವರು ಒಟ್ಟು 22 ಪಂದ್ಯಗಳನ್ನಾಡಿದ್ದು, 1625 ರನ್ ಕಲೆಹಾಕಿದ್ದಾರೆ. ಇದರಲ್ಲಿ 4 ಶತಕ ಬಾರಿಸಿದ್ದು, 6 ಅರ್ಧಶತಕ ಇವರ ಖಾತೆಯಲ್ಲಿದೆ. ಕೀಪಿಂಗ್​ನಲ್ಲಿ 63 ಕ್ಯಾಚ್ ಹಾಗೂ 7 ಸ್ಟಂಪ್ ಮಾಡಿದ್ದಾರೆ. ಅಂತೆಯೆ ಪಂತ್ ಅವರ ಗರಿಷ್ಠ ಸ್ಕೋರ್ 308 ರನ್ ಆಗಿದೆ.ಸದ್ಯ ರಿಷಭ್ ಪಂತ್ ಅವರು ಇಂಗ್ಲೆಂಡ್ ವಿರುದ್ಧ 3ನೇ ಟೆಸ್ಟ್​ ಮೂಲಕ ಟೀಂ ಇಂಡಿಯಾ ಕ್ಯಾಪ್ ತೊಟ್ಟಿದ್ದು, ತಮ್ಮ ಆಯ್ಕೆಯನ್ನು ಸಮರ್ಥಿಸಕೊಳ್ಳುತ್ತಾರ ಎಂಬುದು ನೋಡಬೇಕಿದೆ.
First published:August 18, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...