• Home
  • »
  • News
  • »
  • sports
  • »
  • Team India 2023: ಈ ವರ್ಷ ಟೀಂ ಇಂಡಿಯಾ ಫುಲ್​ ಬ್ಯುಸಿ, ಯಾವಾಗ? ಯಾರ ಜೊತೆ ಪಂದ್ಯ? ಇಲ್ಲಿದೆ ಕಂಪ್ಲೀಟ್​ ಡಿಟೇಲ್ಸ್

Team India 2023: ಈ ವರ್ಷ ಟೀಂ ಇಂಡಿಯಾ ಫುಲ್​ ಬ್ಯುಸಿ, ಯಾವಾಗ? ಯಾರ ಜೊತೆ ಪಂದ್ಯ? ಇಲ್ಲಿದೆ ಕಂಪ್ಲೀಟ್​ ಡಿಟೇಲ್ಸ್

ಟೀಂ ಇಂಡಿಯಾ

ಟೀಂ ಇಂಡಿಯಾ

Team India 2023: ಭಾರತ ತಂಡವು 2023 ರಲ್ಲಿ ಶ್ರೀಲಂಕಾ ವಿರುದ್ಧ ಸ್ವದೇಶಿ ಸರಣಿಯೊಂದಿಗೆ ಪ್ರಾರಂಭಿಸಲಿದೆ. ಏತನ್ಮಧ್ಯೆ, ಎರಡೂ ತಂಡಗಳ ನಡುವೆ ಕ್ರಮವಾಗಿ ತಲಾ ಮೂರು ಪಂದ್ಯಗಳ ಟಿ20 ಮತ್ತು ಏಕದಿನ ಸರಣಿಗಳು ನಡೆಯಲಿವೆ.

  • Share this:

ಕಳೆದ ವರ್ಷ ಭಾರತಕ್ಕೆ ಸಿಹಿ-ಕಹಿ ನೆನಪುಗಳು ಎರಡೂ ಸಹ ಸಮಾನವಾಗಿ ದೊರಕಿದೆ. ಕಳೆದ ವರ್ಷ ಭಾರತ ತಂಡ (Team India) ಹಲವು ಬಲಿಷ್ಠ ತಂಡಗಳ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿತ್ತು. ಮತ್ತೊಂದೆಡೆ, ದೊಡ್ಡ ಟೂರ್ನಿಗಳಲ್ಲಿ ಅತ್ಯುತ್ತಮ ಪ್ರದರ್ಶನದ ಹೊರತಾಗಿಯೂ ಪ್ರಶಸ್ತಿ ಗೆಲ್ಲಲು ಬ್ಲೂ ಆರ್ಮಿ ಮತ್ತೊಮ್ಮೆ ವಿಫಲವಾಗಿದೆ. ಟೀಂ ಇಂಡಿಯಾ 2023ರಲ್ಲಿ ಈ ಇತಿಹಾಸವನ್ನು ಮುರಿಯಲು ಪ್ರಯತ್ನಿಸಲಿದೆ. 2022ರಲ್ಲಿ ಭಾರತ ತಂಡವು ಯಾವ ದೇಶಗಳ ವಿರುದ್ಧ ಎಷ್ಟು ಪಂದ್ಯಗಳನ್ನು ಆಡಬೇಕು ಎಂಬುದರ ಕುರಿತು ಇಲ್ಲಿದೆ ಸಂಪೂರ್ಣ ವಿವರ. ಭಾರತ ತಂಡವು 2023ರಲ್ಲಿ ಶ್ರೀಲಂಕಾ (IND vs SL) ವಿರುದ್ಧ ಸರಣಿಯೊಂದಿಗೆ ಪ್ರಾರಂಭಿಸಲಿದೆ. ಏತನ್ಮಧ್ಯೆ, ಎರಡೂ ತಂಡಗಳ ನಡುವೆ ಕ್ರಮವಾಗಿ ತಲಾ ಮೂರು ಪಂದ್ಯಗಳ ಟಿ20 ಮತ್ತು ಏಕದಿನ ಸರಣಿಗಳು ನಡೆಯಲಿವೆ.


2023ರ ಭಾರತ ತಂಡದ ಸಂಪೂರ್ಣ ವೇಳಾಪಟ್ಟಿ:


ಭಾರತ vs ಶ್ರೀಲಂಕಾ ಸರಣಿ:


ಮೊದಲ T20 ಪಂದ್ಯ - 3 ಜನವರಿ - ಮುಂಬೈ
ಎರಡನೇ T20 ಪಂದ್ಯ - 5 ಜನವರಿ - ಪುಣೆ
ಮೂರನೇ T20 ಪಂದ್ಯ - 7 ಜನವರಿ - ರಾಜ್ಕೋಟ್


ಮೊದಲ ODI - ಜನವರಿ 10 - ಗುವಾಹಟಿ
ಎರಡನೇ ODI - ಜನವರಿ 12 - ಕೋಲ್ಕತ್ತಾ
ಮೂರನೇ ODI - ಜನವರಿ 15 - ತಿರುವನಂತಪುರಂ


ಶ್ರೀಲಂಕಾದ ನಂತರ ಭಾರತ ತಂಡವು ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಭಾಗಿಯಾಗಲಿದೆ. ಈ ಸಮಯದಲ್ಲಿ ಎರಡು ತಂಡಗಳ ನಡುವೆ ಕ್ರಮವಾಗಿ ಮೂರು ಪಂದ್ಯಗಳ T20 ಮತ್ತು ODI ಸರಣಿಗಳು ನಡೆಯಲಿವೆ.


ಭಾರತ vs ನ್ಯೂಜಿಲೆಂಡ್ ಸರಣಿ:


ಮೊದಲ ODI - ಜನವರಿ 18 - ಹೈದರಾಬಾದ್
ಎರಡನೇ ODI - ಜನವರಿ 21 - ರಾಯಪುರ
ಮೂರನೇ ODI - ಜನವರಿ 24 - ಇಂದೋರ್


ಮೊದಲ T20 ಪಂದ್ಯ - 27 ಜನವರಿ - ರಾಂಚಿ
ಎರಡನೇ T20 ಪಂದ್ಯ - 29 ಜನವರಿ - ಲಕ್ನೋ
ಮೂರನೇ T20 ಪಂದ್ಯ - 1 ಫೆಬ್ರವರಿ - ಅಹಮದಾಬಾದ್


ನ್ಯೂಜಿಲೆಂಡ್ ಸರಣಿ ಬಳಿಕ ಭಾರತ ತಂಡ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಈ ವೇಳೆ ಉಭಯ ತಂಡಗಳ ನಡುವೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಹಾಗೂ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ.


ಇದನ್ನೂ ಓದಿ: Rishabh Pant: ಕಾರು ಓಡಿಸುವಾಗ ಕುಡಿದಿದ್ರಾ ಪಂತ್? ರಿಷಭ್ ಆ್ಯಕ್ಸಿಡೆಂಟ್‌ ಕೇಸ್‌ಗೆ ಬಿಗ್ ಟ್ವಿಸ್ಟ್​!


ಭಾರತ vs ಆಸ್ಟ್ರೇಲಿಯಾ ಸರಣಿ:


1 ನೇ ಟೆಸ್ಟ್ ಪಂದ್ಯ - 9-13 ಫೆಬ್ರವರಿ - ನಾಗ್ಪುರ
2 ನೇ ಟೆಸ್ಟ್ ಪಂದ್ಯ - 17-21 ಫೆಬ್ರವರಿ - ದೆಹಲಿ
3 ನೇ ಟೆಸ್ಟ್ ಪಂದ್ಯ - 1-5 ಮಾರ್ಚ್ - ಧರ್ಮಶಾಲಾ
4 ನೇ ಟೆಸ್ಟ್ ಪಂದ್ಯ - 9-13 ಮಾರ್ಚ್ - ಅಹಮದಾಬಾದ್


ಮೊದಲ ODI - ಮಾರ್ಚ್ 17 - ಮುಂಬೈ
ಎರಡನೇ ODI - ಮಾರ್ಚ್ 19 - ವಿಶಾಖಪಟ್ಟಣಂ
ಮೂರನೇ ODI - ಮಾರ್ಚ್ 22 - ಚೆನ್ನೈ


ಆಸ್ಟ್ರೇಲಿಯಾ ವಿರುದ್ಧದ ಸರಣಿ ಮುಗಿದ ಬಳಿಕ ಐಪಿಎಲ್ ಆರಂಭವಾಗಲಿದೆ. ಐಪಿಎಲ್ 2023ರ ವೇಳಾಪಟ್ಟಿಯನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಆದರೆ ಈ ಟೂರ್ನಿಯು ಎಪ್ರಿಲ್​ ಮತ್ತು ಮೇ ತಿಂಗಳಲ್ಲಿ ನಡೆಯಲಿದೆ.


ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್:


ಐಪಿಎಲ್ ಮುಗಿದ ನಂತರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯ ಜೂನ್‌ನಲ್ಲಿ ನಡೆಯಲಿದೆ. ಸದ್ಯ ಭಾರತ ತಂಡದ ಪ್ರದರ್ಶನ ನೋಡಿದರೆ ಭಾರತ ತಂಡ ಫೈನಲ್ ವರೆಗಿನ ಪಯಣವನ್ನು ಸುಲಭವಾಗಿ ನಿರ್ಧರಿಸುವ ನಿರೀಕ್ಷೆಯಿದೆ. ಪಾಯಿಂಟ್ ಪಟ್ಟಿಯಲ್ಲಿ ಭಾರತ ತಂಡವು ಪ್ರಸ್ತುತ ಆಸ್ಟ್ರೇಲಿಯಾ ನಂತರ ಎರಡನೇ ಸ್ಥಾನದಲ್ಲಿದೆ.


ಭಾರತ vs ವೆಸ್ಟ್ ಇಂಡೀಸ್:


ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯದ ನಂತರ, ಭಾರತ ತಂಡವು ಜುಲೈ/ಆಗಸ್ಟ್‌ನಲ್ಲಿ ವೆಸ್ಟ್ ಇಂಡೀಸ್‌ಗೆ ಪ್ರವಾಸ ಮಾಡಬೇಕಾಗಿದೆ. ಈ ಸಮಯದಲ್ಲಿ, ಎರಡು ಪಂದ್ಯಗಳ ಟೆಸ್ಟ್ ಸರಣಿ, ಮೂರು ODI ಮತ್ತು ಮೂರು T20 ಪಂದ್ಯಗಳು ಉಭಯ ತಂಡಗಳ ನಡುವೆ ನಡೆಯಲಿವೆ. ವೇಳಾಪಟ್ಟಿ ಪ್ರಕಟವಾಗಬೇಕಿದೆ.


ಏಷ್ಯಾ ಕಪ್ 2023:


ವೆಸ್ಟ್ ಇಂಡೀಸ್ ಪ್ರವಾಸದ ನಂತರ ಏಷ್ಯಾ ಕಪ್ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿದೆ. ನೆರೆಯ ಪಾಕಿಸ್ತಾನದಲ್ಲಿ ಪ್ರತಿಷ್ಠಿತ ಟೂರ್ನಿ ನಡೆಯಲಿದೆ. ಬಿಸಿಸಿಐ ಮತ್ತು ಪಿಸಿಬಿ ನಡುವಿನ ಪ್ರಸ್ತುತ ಪರಿಸ್ಥಿತಿಯನ್ನು ನೋಡಿದರೆ, ಸ್ಥಳದಲ್ಲಿ ಬದಲಾವಣೆ ಇರಬಹುದು.


ಭಾರತ vs ಆಸ್ಟ್ರೇಲಿಯಾ:


ODI ವಿಶ್ವಕಪ್‌ಗೆ ಮೊದಲು, ಆಸ್ಟ್ರೇಲಿಯಾ ತಂಡವು ಮತ್ತೊಮ್ಮೆ ಅಕ್ಟೋಬರ್‌ನಲ್ಲಿ ಭಾರತ ಪ್ರವಾಸ ಕೈಗೊಳ್ಳಲಿದೆ. ಇದೇ ವೇಳೆ ಉಭಯ ತಂಡಗಳ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ವೇಳಾಪಟ್ಟಿ ಇನ್ನೂ ಪ್ರಕಟವಾಗಿಲ್ಲ.


ಐಸಿಸಿ ವಿಶ್ವಕಪ್:


ಮೊದಲ ಬಾರಿಗೆ ಏಕಾಂಗಿಯಾಗಿ ಐಸಿಸಿ ವಿಶ್ವಕಪ್ ಆಯೋಜಿಸಲು ಭಾರತ ಸಿದ್ಧವಾಗಿದೆ. ಟೀಂಇಂಡಿಯಾ 1983 ಮತ್ತು 2011 ರಲ್ಲಿ ವಿಶ್ವಕಪ್ ಗೆದ್ದಿದೆ. ಅಲ್ಲದೇ ಈ ಬಾರಿ ತವರಿನಲ್ಲಿಯೇ ವಿಶ್ವಕಪ್​ ನಡೆಯುತ್ತಿರುವುದರಿಂದ ಭಾರ್ತಕ್ಕೆ ಮತ್ತೊಮ್ಮೆ ಕಪ್​ ಗೆಲ್ಲುವ ಸಾಧ್ಯತೆ ಹೆಚ್ಚಿದೆ.


ಭಾರತ vs ಆಸ್ಟ್ರೇಲಿಯಾ:


ವಿಶ್ವಕಪ್ ನಂತರ, ಆಸ್ಟ್ರೇಲಿಯಾ ತಂಡವು ಮತ್ತೊಮ್ಮೆ ನವೆಂಬರ್/ಡಿಸೆಂಬರ್‌ನಲ್ಲಿ ಭಾರತ ಪ್ರವಾಸ ಮಾಡಲಿದೆ. ಈ ವೇಳೆ ಉಭಯ ತಂಡಗಳ ನಡುವೆ ಐದು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಇದರ ವೇಳಾಪಟ್ಟಿ ಸಹ ರಿಲೀಸ್ ಆಗಿಲ್ಲ.


ಭಾರತ vs ದಕ್ಷಿಣ ಆಫ್ರಿಕಾ:


2023ರ ಕೊನೆಯ ತಿಂಗಳಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಬೇಕಿದೆ. ಆದರೆ ಈ ಸರಣಿಯ ಕುರಿತು ಸ್ಪಷ್ಟನೆ ದೊರಕಿಲ್ಲವಾಗಿದೆ.

Published by:shrikrishna bhat
First published: