ಸೋಲಿನೊಂದಿಗೆ ಕ್ರಿಕೆಟ್ ಜೀವನ ಅಂತ್ಯಗೊಳಿಸಿದ ರಂಗನಾ ಹೆರಾತ್..!

ಶ್ರೀಲಂಕಾದ ಲೆಜೆಂಡ್ರಿ ಸ್ಪಿನ್ನರ್ ರಂಗನಾ ಹೆರಾತ್ ಅವರು ಸೋಲಿನೊಂದಿಗೆ ತಮ್ಮ ಕ್ರಿಕೆಟ್​ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ. ಶ್ರೀಲಂಕಾ ಕ್ರಿಕೆಟ್ ತಂಡದ ಆಧಾರ ಸ್ತಂಭವಾಗಿದ್ದ 40 ವರ್ಷ ಪ್ರಾಯದ ಹೆರಾತ್ ಅವರು 1999ರಲ್ಲಿ ಟೆಸ್ಟ್​​​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು | Herath Ends Career As Eighth Highest Test Wicket-Taker

ರಂಗನ ಹೆರಾತ್

ರಂಗನ ಹೆರಾತ್

  • News18
  • Last Updated :
  • Share this:
ನ್ಯೂಸ್ 18 ಕನ್ನಡ

ಗಾಲೆ: ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಗಾಲೆ ಟೆಸ್ಟ್​​ ಪಂದ್ಯದ ಮೂಲಕ ಶ್ರೀಲಂಕಾದ ಸ್ಪಿನ್ನರ್ ರಂಗನಾ ಹೆರಾತ್ ಅವರು ಸೋಲಿನೊಂದಿಗೆ ಕ್ರಿಕೆಟ್​ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ.

ಗೆಲುವಿಗಾಗಿ 462 ರನ್​ಗಳ ಗುರಿ ಬೆನ್ನತ್ತಿದ ಶ್ರೀಲಂಕಾ ಪಂದ್ಯದ 4ನೇ ದಿನವೇ 250 ರನ್​ಗೆ ಆಲೌಟ್ ಆಗುವ ಮೂಲಕ 211 ರನ್​ಗಳ ಭಾರೀ ಅಂತರದ ಸೋಲುಕಂಡಿತು. ಇಂಗ್ಲೆಂಡ್​ನ ಸ್ಪಿನ್ ಮಾಂತ್ರಿಕ ಮೊಯಿನ್ ಅಲಿ(71/4) ಹಾಗೂ ಜಾಕ್​ ಲೀಚ್ (60/3) ಅವರ ಮಾರಕ ಬೌಲಿಂಗ್ ದಾಳಿಗೆ ಎಡವಿದ ಆತಿಥೇಯರು ಮೊದಲ ಟೆಸ್ಟ್​ನಲ್ಲಿ ಸೋಲುಂಡಿತು. ಇದರೊಂದಿಗೆ 3 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಇಂಗ್ಲೆಂಡ್ 1-0 ಮುನ್ನಡೆ ಸಾಧಿಸಿದೆ. ಜೊತೆಗೆ ಗಾಲೆಯಲ್ಲಿ ಇಂಗ್ಲೆಂಡ್​ಗೆ ಒಲಿದ ಮೊದಲ ಟೆಸ್ಟ್​ ಗೆಲುಲು ಇದಾಯಿತು.

ಇದನ್ನೂ ಓದಿ: ಟಿ-20 ವಿಶ್ವಕಪ್​​​ನಲ್ಲಿ ಭಾರತ ಭರ್ಜರಿ ಶುಭಾರಂಭ

ರಂಗನಾ ಹೆರಾತ್​ಗೆ ನೋವಿನ ವಿದಾಯ:

ಶ್ರೀಲಂಕಾದ ಲೆಜೆಂಡ್ರಿ ಸ್ಪಿನ್ನರ್ ರಂಗನಾ ಹೆರಾತ್ ಅವರು ಸೋಲಿನೊಂದಿಗೆ ತಮ್ಮ ಕ್ರಿಕೆಟ್​ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ. ಶ್ರೀಲಂಕಾ ಕ್ರಿಕೆಟ್ ತಂಡದ ಆಧಾರ ಸ್ತಂಭವಾಗಿದ್ದ 40 ವರ್ಷ ಪ್ರಾಯದ ಹೆರಾತ್ ಅವರು 1999ರಲ್ಲಿ ಟೆಸ್ಟ್​​​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಆದರೆ, 1999 ರಿಂದ 2010ರ ತನಕ ಇವರಿಗೆ ಆಡಲು ಅವಕಾಶ ಸಿಕ್ಕಿದ್ದು ಕಮ್ಮಿ. ಶ್ರೀಲಂಕಾದ ದಂತಕತೆ ಮುತ್ತಯ್ಯ ಮುರಳೀಧರನ್ ತಂಡದ ಪ್ರಮುಖ ಬೌಲರ್ ಆಗಿದ್ದ ಕಾರಣ ಇವರಿಗೆ ಅಷ್ಟೊಂದು ಅವಕಾಶ ಸಿಕ್ಕಿಲ್ಲ. ಹೀಗಾಗಿ ಮುರಳೀಧರನ್ ಟೆಸ್ಟ್​ ಕ್ರಿಕೆಟ್​​​ಗೆ ವಿದಾಯ ಘೋಷಿಸುವ ವರೆಗೆ ಹೆರಾತ್ ಕೇವಲ 22 ಟೆಸ್ಟ್​ ಪಂದ್ಯವನ್ನಾಡಿದ್ದರಷ್ಟೆ.

ಇದನ್ನೂ ಓದಿ: 11 ವರ್ಷದ ಬಳಿಕ ಐಪಿಎಲ್​ನಲ್ಲಿ ಬದಲಾವಣೆ: ಎಲ್ಲಿ ನಡೆಯಲಿದೆ ಕ್ರಿಕೆಟ್ ಹಬ್ಬ?2016ರಲ್ಲಿ ಸೀಮಿತ ಓವರ್ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದ ಹೆರಾತ್ ಅವರು 71 ಪಂದ್ಯಗಳನ್ನು ಆಡಿ 74 ವಿಕೆಟ್ ಕಬಳಿಸಿದ್ದರು. ಟೆಸ್ಟ್​​ನಲ್ಲಿ ಆಡಿರುವ 93 ಪಂದ್ಯಗಳಲ್ಲಿ 433 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಇದರಲ್ಲಿ 127 ರನ್​​ ನೀಡಿ 9 ವಿಕೆಟ್ ಕಿತ್ತಿರುವುದು ಇವರ ಶ್ರೇಷ್ಠ ಸಾಧನೆಯಾಗಿದೆ. 10 ವಿಕೆಟ್ ಒಟ್ಟು 9 ಬಾರಿ ಪಡೆದಿದ್ದರೆ, 5 ವಿಕೆಟ್ ಅನ್ನು 34 ಸಲ ಕಬಳಿಸಿದ್ದಾರೆ. ಈ ಮೂಲಕ ಗರಿಷ್ಠ ವಿಕೆಟ್ ಪಡೆದ ಬೌಲರ್​ಗಳ ಸಾಲಿನಲ್ಲಿ ಹೆರಾತ್ 4ನೇ ಸ್ಥಾನ ಪಡೆದಿಕೊಂಡಿದ್ದಾರೆ. ಅಲ್ಲದೆ ಟೆಸ್ಟ್​ನಲ್ಲಿ ಗರಿಷ್ಠ ವಿಕೆಟ್ ಕಿತ್ತ ಎಡಗೈ ಸ್ಪಿನ್ನರ್ ಎಂಬ ಹೆಗ್ಗಳಿಕೆಗೂ ರಂಗನಾ ಹೆರಾತ್ ಪಾತ್ರರಾಗಿದ್ದಾರೆ.
First published: