• Home
  • »
  • News
  • »
  • sports
  • »
  • World Cup 2023: ರೋಹಿತ್ ಶರ್ಮಾ ಜೊತೆ ಈ ಯುವ ಆಟಗಾರ ಓಪನಿಂಗ್​ಗೆ​ ಬರಬೇಕಂತೆ, ಆಮೇಲೆ ನಡೆಯೋದು ಇತಿಹಾಸ ಎಂದ ಬ್ರೆಟ್​ ಲೀ!

World Cup 2023: ರೋಹಿತ್ ಶರ್ಮಾ ಜೊತೆ ಈ ಯುವ ಆಟಗಾರ ಓಪನಿಂಗ್​ಗೆ​ ಬರಬೇಕಂತೆ, ಆಮೇಲೆ ನಡೆಯೋದು ಇತಿಹಾಸ ಎಂದ ಬ್ರೆಟ್​ ಲೀ!

ರೋಹಿತ್​ ಶರ್ಮಾ

ರೋಹಿತ್​ ಶರ್ಮಾ

ಈ ಬಾರಿ ವಿಶ್ವಕಪ್ ಅನ್ನು ಆಯೋಜಿಸಲಿರುವ ಭಾರತೀಯ ತಂಡಕ್ಕೆ ತುಂಬಾನೇ ಮುಖ್ಯವಾದದ್ದಾಗಿರುತ್ತದೆ ಅಂತ ಹೇಳಬಹುದು. ಕಳೆದ ಮೂರು ಏಕದಿನ ಪಂದ್ಯಗಳ ವಿಶ್ವಕಪ್ ಗಳ ವಿಷಯಕ್ಕೆ ಬಂದಾಗ, ಆತಿಥೇಯ ತಂಡವು ಪ್ರತಿ ಸಂದರ್ಭದಲ್ಲೂ ಅದನ್ನು ಗೆದ್ದಿದೆ.

  • Share this:

ಇನ್ನೂ 2023 ರ ಐಸಿಸಿ ಕ್ರಿಕೆಟ್ ವಿಶ್ವಕಪ್ (ICC Cricket World Cup) ಗೆ ತುಂಬಾನೇ ಸಮಯವಿದೆ, ಆದರೆ ಈ ವಿಶ್ವಕಪ್ ನಲ್ಲಿ ಆಡಲಿರುವ ದೇಶಗಳು ತಮ್ಮ ಟೀಮ್ ನ ಸಮೀಕರಣವನ್ನು ಸೂಕ್ತವಾಗಿ ಸೆಟ್ ಮಾಡಿಕೊಳ್ಳಲು ತೆರೆಮರೆಯಲ್ಲಿ ಈಗಿನಿಂದಲೇ ತಯಾರಿ ನಡೆಸಿದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಈ ಬಾರಿ ವಿಶ್ವಕಪ್ ಅನ್ನು ಆಯೋಜಿಸಲಿರುವ ಭಾರತೀ (Team India) ಯ ತಂಡಕ್ಕೆ ತುಂಬಾನೇ ಮುಖ್ಯವಾದದ್ದಾಗಿರುತ್ತದೆ ಅಂತ ಹೇಳಬಹುದು. ಕಳೆದ ಮೂರು ಏಕದಿನ ಪಂದ್ಯಗಳ ವಿಶ್ವಕಪ್ ಗಳ ವಿಷಯಕ್ಕೆ ಬಂದಾಗ, ಆತಿಥೇಯ ತಂಡವು ಪ್ರತಿ ಸಂದರ್ಭದಲ್ಲೂ ಅದನ್ನು ಗೆದ್ದಿದೆ.


2011 ರಲ್ಲಿ ಭಾರತ, 2015 ರಲ್ಲಿ ಆಸ್ಟ್ರೇಲಿಯಾ ಮತ್ತು 2019 ರಲ್ಲಿ ಇಂಗ್ಲೆಂಡ್ ಗೆದ್ದಿರುವುದು ನಮಗೆ ಗೊತ್ತೇ ಇದೆ. ಮುಂದಿನ ವರ್ಷ ಸಹ ಈ ಪ್ರವೃತ್ತಿಯನ್ನು ಮುಂದುವರಿಸಿಕೊಂಡು ಹೋಗಲು ಮತ್ತು ಅಂತಿಮವಾಗಿ ಐಸಿಸಿ ಪ್ರಶಸ್ತಿಗಾಗಿ ತಮ್ಮ ಕಾಯುವಿಕೆಯನ್ನು ಕೊನೆಗೊಳಿಸಲು ಟೀಮ್ ಇಂಡಿಯಾದ ಮೇಲೆ ಒತ್ತಡವಂತೂ ಇದ್ದೇ ಇರುತ್ತದೆ.


ರೋಹಿತ್​ ಶರ್ಮಾ ಬಗ್ಗೆ ಬ್ರೆಟ್​ ಲೀ ಹೇಳಿದ್ದೇನು?


ಕಳೆದ ಒಂದು ವರ್ಷದಲ್ಲಿ ಟೀಮ್ ಇಂಡಿಯಾದಲ್ಲಿ ಅನೇಕ ರೀತಿಯ ಬದಲಾವಣೆಗಳನ್ನು ಟ್ರೈ ಮಾಡಿದ್ದಾರೆ. ಇದರ ಜೊತೆಗೆ ತಂಡಕ್ಕೆ ಗಾಯದ ಆತಂಕಗಳು ಮತ್ತು ತಮ್ಮ ಫಾರ್ಮ್ ಅನ್ನು ಕಂಡುಕೊಳ್ಳಲು ಹೆಣಗಾಡುತ್ತಿರುವ ರೋಹಿತ್ ಶರ್ಮಾರಂತಹ ಅಗ್ರ ಆಟಗಾರರು ದೊಡ್ಡ ಸವಾಲುಗಳಾಗಿವೆ. ಸ್ಥಾಪಿತ ಆಟಗಾರರು ತಂಡಕ್ಕೆ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳಲು ಒತ್ತಡದಲ್ಲಿದ್ದಾರೆ, ವಿಶೇಷವಾಗಿ ಭರವಸೆಯ ಯುವಕರು ತಮ್ಮ ಹಿಂದೆ ಪ್ರಭಾವಶಾಲಿ ಪ್ರದರ್ಶನಗಳ ಸರಮಾಲೆಯೊಂದಿಗೆ ಬಾಗಿಲು ತಟ್ಟುತ್ತಿದ್ದಾರೆ.


ಇದನ್ನೂ ಓದಿ: ಆರ್​​ಸಿಬಿ ತಂಡಕ್ಕೆ ಆರಂಭಿಕರ ಸಮಸ್ಯೆ; ಈ ಮೂರು ಕಾಂಬಿನೇಷನ್ನಲ್ಲಿ ಯಾವುದು ಬೆಟರ್?


ದೊಡ್ಡ ಹೆಸರುಗಳ ವಿಷಯಕ್ಕೆ ಬಂದಾಗ, ಕೆ.ಎಲ್.ರಾಹುಲ್ ಅಂತಹ ಬ್ಯಾಟರ್ ಗಳ ಸ್ಥಾನವು ಭಾರತೀಯ ತಂಡದಲ್ಲಿ ಪರಿಶೀಲನೆಗೆ ಒಳಪಟ್ಟಿದೆ ಎಂದು ತೋರುತ್ತದೆ. ಭಾರತದ ಆರಂಭಿಕ ಆಟಗಾರ ತನ್ನ ರನ್ ಗಳ ಕೊರತೆಯಿಂದಾಗಿ ಈ ಪಟ್ಟಿಯಲ್ಲಿದ್ದಾರೆ ಮತ್ತು ಶುಭ್ಮನ್ ಗಿಲ್ ಮತ್ತು ಇಶಾನ್ ಕಿಶನ್ ಅವರಂತಹ ಯುವ ಆಟಗಾರರ ಬಗ್ಗೆ ಚರ್ಚೆಗಳು ಹೆಚ್ಚಾಗಿವೆ.


ರೋಹಿತ್ ಜೊತೆ ಓಪನ್ ಮಾಡೋ ಆ ಆಟಗಾರ ಯಾರಿರಬಹುದು?


ರೋಹಿತ್ ಶರ್ಮಾ ತಂಡದಲ್ಲಿ ಆಡುವುದು ಖಚಿತವಾಗಿರುವುದರಿಂದ, ಅವರೊಡನೆ ಯಾರು ಓಪನ್ ಮಾಡಬೇಕು ಅಂತ ಒಂದು ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಎರಡು ಮುಖ್ಯವಾದ ಆಯ್ಕೆಗಳು ಸ್ಪಷ್ಟವಾಗಿ ರಾಹುಲ್ ಮತ್ತು ಧವನ್ ಆಗಿದ್ದಾರೆ, ಆದರೆ ಇಶಾನ್ ಇತ್ತೀಚೆಗೆ ಅದ್ಭುತ ದ್ವಿಶತಕವನ್ನು ಗಳಿಸಿರುವುದರಿಂದ ಆಯ್ಕೆದಾರರು ಅವರನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಖಂಡಿತವಾಗಿಯೂ ಇನ್ಮುಂದೆ ಈ ಸಮೀಕರಣ ಇನ್ನಷ್ಟು ಬದಲಾಗಬಹುದು, ಆದರೆ ಇಶಾನ್ ಹೀಗೆ ರನ್ ಗಳ ಸುರಿಮಳೆ ಸುರಿಸುತ್ತಾ ಹೋದರೆ ರಾಹುಲ್ ಮತ್ತು ಧವನ್ ಅವರಿಗೆ ಸುಲಭದ ದಾರಿಯಂತೂ ಆಗುವುದೇ ಇಲ್ಲ.


ಭಾರತದ ಪರ ಯಾರು ಓಪನಿಂಗ್ ಮಾಡಬಹುದು?


ವಾಸ್ತವವಾಗಿ, ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಬ್ರೆಟ್ ಲೀ ಅವರು ಇಶಾನ್ 10 ತಿಂಗಳ ನಂತರ ವಿಶ್ವಕಪ್ ಶುರುವಾದಾಗ ಭಾರತದ ಮೊದಲ ಆಯ್ಕೆಯ ಓಪನರ್ ಆಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.


"ಇವರ ಇತ್ತೀಚಿನ ಮಾರಕ ದ್ವಿಶತಕದೊಂದಿಗೆ, ಇಶಾನ್ 2023 ರಲ್ಲಿ ತವರಿನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ನಲ್ಲಿ ಭಾರತದ ಪರ ಓಪನಿಂಗ್ ಮಾಡಲು ಎಲ್ಲಾ ರೀತಿಯ ಹಕ್ಕನ್ನು ಹೊಂದಿದ್ದಾರೆ. ಇದು ಸಂಭವಿಸುತ್ತದೆಯೋ? ಇಲ್ಲವೋ ನನಗೆ ಗೊತ್ತಿಲ್ಲ. ಈ ವ್ಯಕ್ತಿ ಏಕದಿನ ಇತಿಹಾಸದಲ್ಲಿ ಅತ್ಯಂತ ವೇಗವಾಗಿ 200 ರನ್ ಗಳಿಸಿದರು. ಆದರೆ ಅವರು ತಮ್ಮ ಫಾರ್ಮ್ ಅನ್ನು ಹೀಗೆಯೇ ಉಳಿಸಿಕೊಂಡು ಫಿಟ್ ಆಗಿ ಉಳಿದರೆ, ಅವರು ವಿಶ್ವಕಪ್ ನಲ್ಲಿ ಭಾರತದ ಪರ ಖಚಿತವಾಗಿ ಓಪನಿಂಗ್ ಬ್ಯಾಟರ್ ಆಗುತ್ತಾರೆ" ಎಂದು ಲೀ ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್ ನಲ್ಲಿ ಹೇಳಿದ್ದಾರೆ.


ಕಿಶನ್ ಗೆ ಬ್ರೆಟ್ ಲೀ ನೀಡಿದ ಸಲಹೆ ಏನು?


"ಈಗಾಗಲೇ ನೀವು ಸಾಧಿಸಿದ ಮೈಲಿಗಲ್ಲು ಎಂದರೆ ದ್ವಿಶತಕದ ಬಗ್ಗೆ ಮರೆತುಬಿಡಿ. ಸಾಧಿಸಲು ಇನ್ನೂ ತುಂಬಾನೇ ಇದೆ. ಫಿಟ್ ಆಗಿದ್ದು, ಹೀಗೆ ಪಂದ್ಯದಿಂದ ಪಂದ್ಯಕ್ಕೆ ಉತ್ತಮ ಆಟವನ್ನು ಪ್ರದರ್ಶಿಸುತ್ತಾ ರನ್ ಗಳನ್ನು ಹೊಡೆಯುವುದರ ಬಗ್ಗೆ ಅಷ್ಟೇ ಇಶಾನ್ ಅವರು ಯೋಚಿಸಬೇಕು" ಎಂದು ಹೇಳಿದರು.


ಇದನ್ನೂ ಓದಿ: ಈ ಸ್ಟಾರ್​ ಕ್ರಿಕೆಟಿಗರ ಪ್ರೀತಿಗೆ ಐಪಿಎಲ್​ ಕಾರಣವಂತೆ, ತಾಜ್​ಮಹಲ್​ ಎದುರು ಪ್ರಪೋಸ್​ ಮಾಡಿದ RCB ಆಟಗಾರ


ಕೇವಲ 126 ಎಸೆತಗಳಲ್ಲಿ ಐತಿಹಾಸಿಕ ದ್ವಿಶತಕ ಸಿಡಿಸಿದ ಇಶಾನ್, ಕ್ರಿಸ್ ಗೇಲ್ ಅವರನ್ನು ಹಿಂದಿಕ್ಕಿ ಸಾರ್ವಕಾಲಿಕ ವೇಗದ ಏಕದಿನ ದ್ವಿಶತಕವನ್ನು ದಾಖಲಿಸಿದರು. ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್ ಮತ್ತು ರೋಹಿತ್ ಅವರನ್ನು ಒಳಗೊಂಡ ಶ್ರೇಷ್ಠ ಪಟ್ಟಿಗೆ ಇಶಾನ್ ಸಹ ಸೇರಿಕೊಂಡರು.

Published by:ವಾಸುದೇವ್ ಎಂ
First published: